X

ಅಜಂತಾ ಎಲ್ಲೋರಾದಂತಹ 17 ಗುಹೆಗಳ ರಹಸ್ಯ ಬಯಲು!! “ದಂಡಿನ್ ರ ವಿಸ್ತೃತಚರಿತೆ” ಯಲ್ಲಿ ಅಡಗಿದೆ ಆ ರಹಸ್ಯ ಮಾಹಿತಿ!!

ಕಲೆಯ ಪ್ರಭೇದಗಳಾದ ಶಿಲ್ಪ, ಕೆತ್ತನೆ ಹಾಗೂ ವರ್ಣಲೇಪನ ಇವುಗಳ ಕೇಂದ್ರವೆನಿಸಿರುವ ಅಜಂತಾ ಎಲ್ಲೋರಾ ಗುಹೆಗಳು ಭಾರತೀಯ ಪರಮೋತ್ಕೃಷ್ಟ ಕಲಾ ನೈಪುಣ್ಯದ ಚಿರಂತನಕ್ಕೆ ಸಾಕ್ಷಿಯಾಗಿರುವುದಂತೂ ಅಕ್ಷರಶಃ ನಿಜ!! ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳಿರುವ ಅಜಂತಾ ಎಲ್ಲೋರಾ ಗುಹೆಗಳ ಶಿಲ್ಪಶಾಸ್ತ್ರವು ಭಾರತೀಯ ಶೈಲಿಯ ಮಹಾನ್ ದ್ಯೋತಕವಾಗಿದೆ!! ಇಲ್ಲಿನ ವಾಸ್ತುಕಲೆ, ಶಿಲ್ಪಕಲೆಗಳನ್ನು ಗಮನಿಸಿದಾಗ ಇದನ್ನು ಮನುಷ್ಯರು ಕಟ್ಟೋಕೆ ಸಾಧ್ಯವೇ ಇಲ್ಲ, ಇದು ಅನ್ಯಗ್ರಹ ಜೀವಿಗಳೇ ಕಟ್ಟಿರಬೇಕು ಎನ್ನುವುದನ್ನು ಡಿಸ್ಕವರಿ ಚಾನೆಲ್ ನಂತಹ ಅಂತರಾಷ್ಟ್ರೀಯ ಮಾಧ್ಯಮಗಳೂ ಅಣಕಿಸಿವೆ ಕೂಡ!!

ಅಜಂತಾ ಎಲ್ಲೋರಾ ಗುಹೆಗಳ ಕಂಬಗಳ ಮೈಮಾಟ, ಅಲಂಕಾರ ಪದ್ಧತಿ, ಮೂರ್ತಿಗಳ ಮೈಕಟ್ಟು, ಪ್ರಮಾಣ, ಅಲಂಕಾರ ಕಲೆಗಳು ಮನ ಮುಟ್ಟುವಂತಿವೆ!! ಅಷ್ಟೇ ಅಲ್ಲದೇ ಶಿಲ್ಪಿಗಳು ಮತ್ತು ಕಲಾಕಾರರು ದಕ್ಷತೆಯಿಂದ ಕೆಲಸ ಮಾಡಿ ಮೂರ್ತಿಗಳಲ್ಲಿ, ವರ್ಣಚಿತ್ರಗಳಲ್ಲಿ ಜೀವಕಳೆ ತುಂಬಿರುವಂತೆ ಮಾಡಿದ್ದಾರೆ!! ಆದರೆ ಬೆಟ್ಟ ಗುಡ್ಡಗಳ ನಡುವೆ ಕಟ್ಟಿರುವ ಈ ಅದ್ಭುತ ಶಿಲ್ಪಕಲೆಗಳನ್ನು ಕಟ್ಟಿದವರು ಯಾರು? ಅದನ್ನು ಹೇಗೆ ಕಟ್ಟಲಾಯಿತು ಎನ್ನುವುದು ಮಾತ್ರ ರಹಸ್ಯವಾಗಿಯೇ ಉಳಿದಿದೆ!! ಹಾಗಾದರೆ ಇದರ ರಹಸ್ಯವಾದರೂ ಏನು ಗೊತ್ತೇ??

ಕ್ರಿ.ಶ.460 ಕಾಲದಲ್ಲಿ ಒಬ್ಬ ಚಾಣಾಕ್ಷ ಹಾಗು ಬಲಿಷ್ಟ ರಾಜನೊಬ್ಬ ಭಾರತದಲ್ಲಿ ಆಡಳಿತ ನಡೆಸಿದ್ದ. ಆತನ ಹೆಸರೇ ರಾಜಾ ಹರಿಸೇನ!! ಆತ ತನ್ನ ಅತಿ ದೊಡ್ಡ ರಾಜ್ಯವನ್ನು 17 ವರ್ಷಗಳ ಕಾಲ ಆಡಳಿತ ನಡೆಸಿದ್ದನ್ನಲ್ಲದೇ, ತನ್ನ 17 ವರ್ಷಗಳ ಆಡಳಿತದ ಅವಧಿಯಲ್ಲಿ ಕೇವಲ ಮಿಲಿಟರಿ ಸಾಮರ್ಥ್ಯವನ್ನಷ್ಟೇ ಹೆಚ್ಚಿಸಿದ್ದಲ್ಲದೆ ಭರತಖಂಡದ ಮೇಲೆ ದಾಳಿಯೆರಗಲು ಬಂದ ಅಧರ್ಮಿಗಳನ್ನು  ಹಿಮ್ಮೆಟ್ಟಿಸಿ ಭಾರತಮಾತೆಯ ಗೌರವವನ್ನೂ ಕಾಪಾಡಿದ್ದಂತ ಶ್ರೇಷ್ಠ ರಾಜ!!

ಈತ ಕೇವಲ ಸಮರ್ಥ ರಾಜನಷ್ಟೇ ಅಲ್ಲ!! ಬದಲಾಗಿ ಆತ ಶಿಲ್ಪಕಲೆಯಲ್ಲಿಯೂ ಮೇಧಾವಿಯಾಗಿದ್ದಂತಹ ವ್ಯಕ್ತಿ!! ತನ್ನ ಅಧಿಕಾರಾವಧಿಯಲ್ಲಿ ಕಲೆ ಹಾಗು ವಾಸ್ತುಶಿಲ್ಪಕ್ಕೆ ಹೆಚ್ಚು ಒತ್ತು ನೀಡಿದ್ದನಲ್ಲದೇ ಸರ್ವ ಧರ್ಮ ಸಹಿಷ್ಣುವಾಗಿದ್ದ. ಅಷ್ಟೇ ಅಲ್ಲದೇ, ತನ್ನ ರಾಜ್ಯದಲ್ಲಿ ಎಲ್ಲಾ ಧರ್ಮೀಯರನ್ನೂ ಸಮಾನವಾಗಿ ನೋಡಿಕೊಂಡು ಹಿಂದೂ ಧರ್ಮದ ಪುನರುಜ್ಜೀವಕನಾಗಿ ಆಡಳಿತ ನಡೆಸಿದ್ದನಲ್ಲದೇ ಸಮರ್ಥವಾಗಿ 17 ವರ್ಷಗಳ ಕಾಲ ಆಡಳಿತ ನಡೆಸಿದ್ದ. ಇನ್ನು ಹರಿಸೇನನ ಮರಣದ ನಂತರ ಆತನ ಮಗ ಶ್ರವಣಸೇನ ಕೇವಲ 2 ವರ್ಷ ರಾಜ್ಯಭಾರ ನಡೆಸಿದ ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಆದರೆ ಇಲ್ಲಿಗೆ ರಾಜ ಹರಿಸೇನನ ಕಥೆ ಮುಕ್ತಾಯವಾಯಿತು ಎಂದರೆ ಅದು ನಿಮ್ಮ ತಪ್ಪು ಗ್ರಹಿಕೆ!!

ಯಾಕೆಂದರೆ, ಹರಿಸೇನ ಭಾರತ ಕಂಡಂತಹ ಶ್ರೇಷ್ಟ ರಾಜನಾಗಿದ್ದನಲ್ಲದೇ ಭರತಖಂಡವನ್ನಾಳಿದ, ಇತಿಹಾಸ ಮರೆಯದಂತಹ ಆಡಳಿತವನ್ನು ನೀಡಿದಂತಹ ಒರ್ವ ಶ್ರೇಷ್ಠ ವ್ಯಕ್ತಿ!! ಭಾರತ ಕಂಡ ಅಜಂತಾದಂತಹ ಅನೇಕ ಗುಹೆಗಳು, ಶಿಲ್ಪಕಲೆಗಳು, ವಾಸ್ತುಶಿಲ್ಪಗಳು ಭಾರತದ ಕಾಲಖಂಡದಲ್ಲಿ ಕಂಡುಬಂದದ್ದು ರಾಜಾ ಹರಿಸೇನನ ಆಡಳಿತಾವಧಿಯಲ್ಲೇ. ಆತನ ಆಡಳಿತದಲ್ಲಿ ಬೌದ್ಧ ಕಲೆಗೆ ಆತ ಹೆಚ್ಚು ಒತ್ತು ನೀಡಿದ್ದ, ಆತ ನಿರ್ಮಿಸಿದ್ದ ಅಜಂತಾ ಗುಹೆಗಳು, ಅಲ್ಲಿನ ಮಂದಿರಗಳು, ವಾಸ್ತುಶಿಲ್ಪಕಲೆ ಈಗಲೂ ಇತಿಹಾಸಕಾರರಿಗೆ, ವಿಜ್ಞಾನಕ್ಕೆ ಸವಾಲಾಗಿ ನಿಂತಿವೆ.

ಸುಮಾರು 2200 ವರ್ಷಗಳಷ್ಟು ಹಳೆಯದೆಂದು ನಂಬಲಾದ ಅಜಂತಾವನ್ನು ರಾಜ ಹರಿಸೇನನು ವೆಂಕಟ ಎಂಬ ರಾಜನ ಮೂಲಕ ಕಟ್ಟಿಸಿದ್ದಂತೆ. ಇತಿಹಾಸಕಾರರು ಹೇಳುವ ಪ್ರಕಾರ ಹರಿಸೇನ ನಿರ್ಮಿಸಿದ್ದ 17 ಗುಹಾಂತರಗಳೂ ಅದ್ಭುತವಂತೆ ಹಾಗು ಅವುಗಳಲ್ಲಿನ 16 ನೆಯ ಗುಹಾಂತರವಂತೂ ಅತ್ಯದ್ಭುತವೆಂದು ಇತಿಹಾಸಕಾರರು ಹರಿಸೇನನ ಶಿಲ್ಪಕಲೆಯನ್ನು ಹಾಡಿ ಹೊಗಳಿದ್ದಾರೆ!!

ಕೇವಲ ಎರಡು ದಶಕಗಳ ಅಂತರದಲ್ಲೇ (ಹರಿಸೇನ ಅಧಿಕಾರಕ್ಕೆ ಬಂದದ್ದು ಕ್ರಿ.ಶ.460 ಹಾಗು ಅಚಾನಕ್ಕಾಗಿ ಮರಣ ಹೊಂದಿದ್ದು ಕ್ರಿ.ಶ 477 ರ ಡಿಸೆಂಬರ್ 31 ರಂದು) ರಾಜ ಹರಿಸೇನ ಹಾಗು ಆತನ ಮಂತ್ರಿಗಳು ಸೇರಿ ಈಗಿರುವ 30 ಗುಹೆಗಳ ಪೈಕಿ 25 ಗುಹಾಂತರಗಳನ್ನ ನಿರ್ಮಿಸಿದ್ದರಂತೆ. ಈ ಮಾಹಿತಿಯನ್ನಾಧರಿಸಿ ಹೇಳಬೇಕೆಂದರೆ ಅಜಂತಾ ಗುಹೆಗಳ 2/3ಡಿಜ ಭಾಗವನ್ನು ಹರಿಸೇನನೇ ಕ್ರಿಶ.460 ಹಾಗು 480 ರ ನಡುವೆ ನಿರ್ಮಿಸಿದ ಎಂದು ಭಾವಿಸಬಹುದು.

ಬೌದ್ಧ ಸಂಸ್ಕೃತಿಯ ಪ್ರಕಾರ, ಬೌದ್ಧ ಮುನಿಗಳು ತಪಸ್ಸಿಗಾಗಿ ಆಯ್ದುಕೊಳ್ಳುತ್ತಿದ್ದ ಜಾಗವೇ ಗುಹೆಗಳಾದ್ದರಿಂದ ಹಾಗು ಚೈತ್ಯ, ವಿಹಾರಗಳನ್ನೇ ಅವರು ಧ್ಯಾನಕ್ಕಾಗಿ ಬಳಸುತ್ತಿದ್ದರಿಂದ ಹರಿಸೇನ ಅಜಂತಾ ಗುಹೆಗಳನ್ನು ನಿರ್ಮಿಸಿದ ಎಂದು ಇತಿಹಾಸಕಾರರು ಹೇಳುತ್ತಾರೆ. ಅದ್ಭುತ ಶಿಲ್ಪಕಲೆಯ ಗುಹೆಗಳ ನಿರ್ಮಾಣದ ನಂತರ ಆತ ಅಲ್ಲಿನ ಗೋಡೆಗಳಿಗೆ ಫ್ರೆಸ್ಕೋ ಪೇಂಟಿಂಗ್ ಮಾಡಿಸಿಟ್ಟನಂತೆ, ಆ ಗುಹೆಗಳಲ್ಲಿನ ಪೇಂಟಿಂಗ್ ಗಳು ಈಗಲೂ ಸುರಕ್ಷಿತವಾಗಿದ್ದು, ಅದನ್ನು ಈಗಲೂ ಅಲ್ಲಿ ನೋಡಬಹುದಾಗಿದೆ.

 

ಆದರೆ ಭಾರತದ ಇತಿಹಾಸದ ಗರ್ಭದಲ್ಲಿ ಹೇಗೆ ಅನ್ಯ ರಾಜರುಗಳು ಮರೆಯಾಗಿ ಹೋದರೋ ಅದೇ ರೀತಿಯಲ್ಲಿ ರಾಜ ಹರಿಸೇನನ ಇತಿಹಾಸವೂ ಮರೆಯಾಗಿ ಹೋಗಿದೆ. ಭಾರತದಲ್ಲಿ ಕೆಲವೇ ಬೆರಳೆಣಿಕೆಯಷ್ಟು ಜನ ಹರಿಸೇನನ್ನು ಗುರುತಿಸುತ್ತಿದ್ದಾರಲ್ಲದೇ ಇತಿಹಾಸಕಾರರು ಕೂಡ ರಾಜ ಹರಿಸೇನನ ಮೇಲೆ ಬೆಳಕು ಚೆಲ್ಲುವ ಬದಲು ಅಜಂತಾ ಗುಹೆಗಳನ್ನು ವೆಂಕಟ ಹಾಗು ಶಾತವಾಹನರು ನಿರ್ಮಿಸಿದ್ದರು ಎಂಬ ಸುಳ್ಳು ಇತಿಹಾಸವನ್ನೇ ನಮಗೆ ಬೋಧಿಸುತ್ತಾ ಬಂದಿದ್ದಾರೆ.

ಹೌದು… ರಾಜ ವೆಂಕಟ ಈ ಗುಹೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆದರೆ ಆತನ ಹಿಂದಿದ್ದ ರಾಜ ಹರಿಸೇನನನ್ನ ಮಾತ್ರ ಇತಿಹಾಸಕಾರರು ತಿಳಿಸುವ ಗೋಜಿಗೇ ಹೋಗಲೇ ಇಲ್ಲ!! ಆದರೆ, ಭಾರತದ ಇತಿಹಾಸ ಕಂಡ ಗುಪ್ತರ ಹಾಗೆಯೇ ರಾಜ ಹರಿಸೇನ ಕೂಡ ಈ ದೇಶದಲ್ಲಿ ಅದ್ಭುತವಾದ ಆಡಳಿತ ನೀಡಿ ಹೋಗಿದ್ದ ರಾಜನಾಗಿದ್ದ. ಆತನ ಸಾಮ್ರಾಜ್ಯ ಪೂರ್ವದ ಸಮುದ್ರದಿಂದ ದಕ್ಷಿಣದ ಭಾರತದವರೆಗೆ ಹರಡಿಕೊಂಡಿತ್ತು. ಹಾಗು ಆತನ ಸೇನೆಯ ಪರಾಕ್ರಮ ಮಾತ್ರ ಅತ್ಯಧ್ಬುತವಾಗಿತ್ತು.

ಒಂದರ ಹಿಂದೆ ಒಂದರಂತೆ ಗುಹಾಂತರಗಳನ್ನು ನಿರ್ಮಿಸಿದ ರಾಜಾ ಹರಿಸೇನ ಹಾಗು ಆತನ ಮಂತ್ರಿ ವರಾಹದೇವವನ್ನು ಮರೆಯೋಕೆ ಸಾಧ್ಯವೇ ಇಲ್ಲ!! ಆತನ ಇತಿಹಾಸದ  ಗತವೈಭವವನ್ನು ಹಾಗು ಹರಿಸೇನನ ಮರಣಾನಂತರ ಹೇಗೆ ಆತನ ವಂಶ ಛಿದ್ರ ಛಿದ್ರವಾಗಿ ಅಳಿದುಹೋಯಿತು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ “ದಂಡಿನ್ ರ ವಿಸೃತಚರಿತ” ವನ್ನೊಮ್ಮೆ ಓದಲೇಬೇಕು.

1500 ವರ್ಷಗಳ ಹಿಂದೆ ಗುಹೆಗಳಲ್ಲಿ ಮಾಡಿದ ಪೇಂಟಿಂಗ್ ಗಳು, ಶಿಲ್ಪಕಲೆಗಳು ಈಗಲೂ ಹಾಗೆಯೇ ಇದೆ ಎಂದರೆ ಆತನ ಕಲಾ ಪ್ರೇಮಕ್ಕೆ ಹ್ಯಾಟ್ಸ್ ಆಪ್ ಹೇಳಲೇ ಬೇಕು!! ಆದರೆ ಇತಿಹಾಸಕಾರರು ಮಾತ್ರ ಈತನನ್ನು ಇತಿಹಾಸದ ಪುಟಗಳಲ್ಲಿ ಮರೆಮಾಚಿ, ಅಜಂತಾ ಎಲ್ಲೋರಾದಂತಹ ಅದೆಷ್ಟೋ ಗುಹೆಗಳು ಈತ ಇಂದು ನಮಗೆ ನೀಡಿದಂತಹ ಅತ್ಯದ್ಭುತ ಕೊಡುಗೆಯಾಗಿರುವುದಂತೂ ಅಕ್ಷರಶಃ ನಿಜ!!

ಮೂಲ:http://www.sanskritimagazine.com/history/king-harisena-mastermind-behind-ajanta/

ಅಲೋಖಾ

 

Editor Postcard Kannada:
Related Post