X

ಶಾಕಿಂಗ್! ರಾಜ್ಯದ ರೈತರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆಶಿ..! ರೈತರ ವಿಚಾರದಲ್ಲಿ ಉಲ್ಟಾ ಹೊಡಿಯುತ್ತಾ ಮೈತ್ರಿ ಸರಕಾರ.?

ರೈತರ ಹೆಸರಿನಲ್ಲೇ ಅಧಿಕಾರ ಹಿಡಿದು, ರೈತರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯ ಮೇಲೆ ಭರವಸೆ ನೀಡಿಕೊಂಡು ರಾಜ್ಯದ ಜನರನ್ನು ಮೂರ್ಖರನ್ನಾಗಿಸುತ್ತಿರುವ ಕರ್ನಾಟಕ ರಾಜ್ಯದ ಮೈತ್ರಿ ಸರಕಾರ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ತನ್ನ ಅಸಲಿ ಮುಖವನ್ನು ಪ್ರದರ್ಶಿಸಿದೆ. ಯಾಕೆಂದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮೂಲೆಗುಂಪಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ ಅಧಿಕಾರದ ಆಸೆಯಿಂದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿತ್ತು. ಯಾಕೆಂದರೆ ಈ ಎರಡೂ ಪಕ್ಷಗಳು ತಾವು ರೈತರ ಪರ ಎಂದು ಬೊಬ್ಬೆ ಹೊಡೆದಿದ್ದೇ ಹೊಡೆದಿದ್ದು. ಆದರೆ ಇದೀಗ ಅಧಿಕಾರವೂ ಕೈಯಲ್ಲಿದೆ, ಬೇಡಿಕೆಯೂ ನೂರಾರಿದೆ, ಆದರೆ ತಾವು ಯಾರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದರೋ ಅವರನ್ನೇ ಮರೆತು ಎಚ್ಚರಿಕೆ ನೀಡುವ ಮಟ್ಟಕ್ಕೆ ಬಂದಿದ್ದಾರೆ ಎಂದರೆ ಅದ್ಯಾವ ರೀತಿಯಲ್ಲಿ ಅಹಂಕಾರ ತಲೆಗೇರಿರಬಹುದು ಎಂಬುದು ಅರಿವಾಗುತ್ತದೆ.!

ಈಗಾಗಲೇ ರೈತರ ಪರ ಎಂದು ಹೇಳಿಕೊಂಡು ಸರಕಾರ ರಚಿಸಿದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದೀಗ ಉಲ್ಟಾ ಹೊಡೆದಿದ್ದಾರೆ. ಯಾಕೆಂದರೆ ಅಧಿಕಾರ ವಹಿಸಿಕೊಂಡ ೨೪ ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡ ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿಯಾಗಿ ಇಪ್ಪತ್ತು ದಿನ ಕಳೆದರೂ ಸಾಲ ಮನ್ನಾ ವಿಚಾರದಲ್ಲಿ ಉಡಾಫೆ ತೋರುತ್ತಲೇ ಬಂದಿದ್ದಾರೆ. ಅಧಿಕಾರದ ಅಮಲಿನಲ್ಲಿರುವ ಕುಮಾರಸ್ವಾಮಿ ಸರಕಾರ ಇದೀಗ ತಮ್ಮ ಸಚಿವರ ನಾಲಿಗೆ ಹರಿಯ ಬಿಟ್ಟಿದ್ದಾರೆ.!

ಸರಕಾರದ ವತಿಯಿಂದ ಪ್ರೋತ್ಸಾಹ ಧನ ನೀಡುವುದಿಲ್ಲ..!

ಇತ್ತ ರೈತರು ತಾವು ಕೃಷಿಗೆ ಮಾಡಿದ ಸಾಲಮನ್ನಾ ಮಾಡಬೇಕಾಗಿ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದರೆ, ರಾಜ್ಯ ಸರಕಾರ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಯಾಕೆಂದರೆ ಇದೀಗ ರಾಜ್ಯ ಸರಕಾರದ ಜನಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನೀಡಿರುವ ಎಚ್ಚರಿಕೆಗೆ ರಾಜ್ಯದ ರೈತರು ತಬ್ಬಿಬ್ಬಾಗಿದ್ದಾರೆ. ಯಾಕೆಂದರೆ ರೈತರು ಸರಕಾರದ ಮೇಲೆ ಸಾಲಮನ್ನಾ ಮಾಡುವ ವಿಚಾರವಾಗಿ ಒತ್ತಡ ಹೇರುವ ಪ್ರಯತ್ನ ಮಾಡಿದರೆ ಯಾವುದೇ ಕಾರಣಕ್ಕೂ ಸರಕಾರ ಪ್ರೋತ್ಸಾಹ ಧನ ನೀಡುವುದಿಲ್ಲ ಎಂದು ಖಡಕ್ ಹೇಳಿಕೊಂಡಿದ್ದಾರೆ. ಯಾಕೆಂದರೆ ರೈತರು ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರಕಾರಕ್ಕೆ ಬೆದರಿಕೆಯೊಡ್ಡುತ್ತಿದ್ದಾರೆ. ಆದರೆ ನಮ್ಮ ಸರಕಾರ ಇದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇತ್ತ ಕೃಷಿ ಸಾಲ ಪಡೆದ ರೈತರು ಡಿಕೆಶಿ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.!

ಪ್ರಕೃತಿ ವಿಕೋಪದಂತಹ ಘಟನೆಗಳು ಸಂಭವಿಸಿದಾಗ ಕೃಷಿಗೆ ಹಾನಿ ಉಂಟಾದರೆ ಅದಕ್ಕೆ ಸರಕಾರ ಕಾರಣವಲ್ಲ, ಮಾನವ ನಿರ್ಮಿತ ಅವಘಡಗಳಲ್ಲ. ಆದ್ದರಿಂದ ಇಂತಹ ವಿಚಾರವನ್ನು ಮುಂದಿಟ್ಟುಕೊಂಡು ಸರಕಾರ ಮೇಲೆ ಒತ್ತಡ ಹೇರಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಕೆಶಿ ಅಹಂಕಾರದಿಂದ ಹೇಳಿಕೆ ನೀಡಿದ್ದಾರೆ.!

ಅಧಿಕಾರ ಹಿಡಿಯುವುದಕ್ಕೂ ಮುನ್ನ ರೈತರ ಪರವಾಗಿ ನಮ್ಮ ಸರಕಾರ ಎಂದು ಹೋದಲ್ಲೆಲ್ಲಾ ಹೇಳಿಕೊಂಡು ತಿರುಗುತ್ತಿದ್ದ ಮುಖಂಡರು ಇದೀಗ ಸರಕಾರ ರಚನೆಯಾಗುತ್ತಿದ್ದಂತೆ ರೈತರ ವಿಚಾರದಲ್ಲಿ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದಾರೆ. ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಕೂಡ ಸಾಲಮನ್ನಾ ಮಾಡುವುದಾಗಿ ಖಾಲಿ ಬಾಯಿ ಮಾತಿಗೆ ಹೇಳಿಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರದ ಸಚಿವರು ಉಡಾಫೆಯ ಹೇಳಿಕೆ ನೀಡಿ ತಮ್ಮ ಜವಾಬ್ದಾರಿಯನ್ನೇ ಮರೆತಿರುವುದು ಖಚಿತ..!

–ಅರ್ಜುನ್

Editor Postcard Kannada:
Related Post