X

ಕಾಂಗ್ರೆಸ್- ಬಿಜೆಪಿಗೆ ಬಿಗ್ ಶಾಕ್ !! ರಾಜ್ಯದಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಯಾರೊಂದಿಗೆ ಗೊತ್ತೇ ?!

ವಾಸ್ತವವಾಗಿ ರಾಜಕೀಯದಲ್ಲಿ ಇದಃಮಿತ್ಥಂ ಎಂದು ಹೇಳಲು ಸಾಧ್ಯವೇ ಇಲ್ಲ ಬಿಡಿ! ಯಾರು ಯಾವಾಗ ಹೇಗೆ ತಿರುಗಿ ಬೀಳುತ್ತಾರೋ, ಯಾವ ಪಕ್ಷ ಗೆಲ್ಲುತ್ತದೆಯೋ, ಯಾವ ಪಕ್ಷಕ್ಕೆ ಜನ ಮತ ನೀಡುತ್ತಾರೋ, ಅಧಿಕಾರ ಹಿಡಿಯಲು ಏನೇನು ಹುನ್ನಾರಗಳು ನಡೆಯುತ್ತವೆಯೋ!! ಅಬ್ಬಾ! ರಾಜಕೀಯವೆಂದರೆ ಚದುರಂಗದಾಟ!! ಆದರೆ, ಇವತ್ತು ಸಮಾಜವನ್ನು ನಿಯಂತ್ರಿಸುತ್ತಿರುವುದೂ ಕೂಡ ಇದೇ ರಾಜಕೀಯ ಎಂದರೆ ತಪ್ಪಾಗಲಾರದು!

ರಾಜ್ಯದಲ್ಲಿ ಪ್ರಾರಂಭವಾಗಿದೆ ಚುನಾವಣಾ ಶಕೆ!!

ಹಾ! ಕರ್ನಾಟಕದಲ್ಲಿ ಮುಂಬರುವ ಚುನಾವಣೆಗೆ ಈಗಾಗಲೇ ಎಲ್ಲಾ ತಯಾರಿಗಳೂ ನಡೆಯುತ್ತಿದೆ! ಪ್ರತಿ ದಿನವೂ ರಾಜಕೀಯ ರಂಗದಿಂದ ಸಾರ್ವಜನಿಕರಿಗೊಂದು ಹೊಸ ಹೊಸ ವಿದ್ಯಮಾನಗಳು! ಜೊತೆಗೆ, ಚುನಾವಣೆ ಹತ್ತಿರ ಬಂದಿರುವಂತೆ ಕೆಲ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಿದೆ! ಗೆಲ್ಲುವುದು ಸೋಲುವುದು ಬೇರೆ ಚಿಂತೆ! ಆದರೆ, ಮತಗಳನ್ನಂತೂ ಒಡೆಯುವ ಹುನ್ನಾರವೊಂದು ಸದ್ದಿಲ್ಲದಾಎ ಸಾಗಿದೆ! ದಿನ ಬೆಳಗಾಗುವುದರೊಳಗೆ ಹೊಸ ಪಕ್ಷಗಳು ಹುಟ್ಟಿಕೊಂಡಿವೆ. ಇನ್ನು ಕೆಲ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ! ಅಂತಹ ಪಕ್ಷಗಳಲ್ಲಿ ಜೆಡಿಎಸ್ ಕೂಡಾ ಒಂದು!!

ಹಾ! ಆದರೆ, ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ಯಾರ ಜೊತೆಗೆ ಗೊತ್ತಾ!?

ಮೊದಲನೆಯದಾಗಿ, ಜೆಡಿಎಸ್ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ನಿಗುರಿಬಿಡುತ್ತದೆ! ಕಾರ್ಯಕರ್ತರೆಲ್ಲ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಾ ಹೂ ಎಂದು ಒಮ್ಮೆ ದಾಂಧಲೆ ಎಬ್ಬಿಸಿ, ಕುಮಾರಣ್ಣನ ಪರ್ವ ಎಂದು ಇದ್ದಕ್ಕಿದ್ದಂತೆ ಪ್ರಚಾರಕ್ಕಿಳಿದು ಬಿಡುತ್ತಾರೆ! ಸಾಮಾಜಿಕ ಜಾಲತಾಣಗಳಲ್ಲೆಲ್ಲ ಇದ್ದಕ್ಕಿದ್ದ ಹಾಗೆ ಕುಮಾರಸ್ವಾಮಿ ಮತ್ತು ದೇವೇ ಗೌಡರು ರಾರಾಜಿಸಿ ಬಿಡುತ್ತಾರೆ! ಅಷ್ಟೇ! ಚುನಾವಣೆ ಮುಗಿಯಿತೋ, ಅಲ್ಲಿಗೆಲ್ಲ ಬಂದ್!!

ಇಷ್ಟು ದಿನವೂ ಹೀಗೆ ಇದ್ದ ಜೆಡಿಎಸ್ ಮೊನ್ನೆ ಮೈಸೂರಿನಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮೇಯರ್ ಚುನಾವಣೆಯಲ್ಲಿ ಭಾಗ್ಯವತಿಯನ್ನು ಗೆಲ್ಲಿಸಿದ್ದು ಕಾಂಗ್ರೆಸ್ ಗೆ ತೀರಾ ಮುಖಭಂಗಾವಾಗಿ ಹೋಗಿತ್ತು ! ಅದಲ್ಲದೇ, ರಾಜ್ಯದಲ್ಲಿಯೂ ಸಹ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಯಾಗುತ್ತದೆಂಬ ಸುದ್ದಿ ಹರಡಿತ್ತು, ಆದರೆ, ಜೆಡಿಎಸ್ ನ ಮನವೊಲಿಸಲು ಸಕಲ ತಯಾರಿ ನಡೆಸಿದ್ದ ಕಾಂಗ್ರೆಸ್ ಸಭೆ ಕೂಡಾ ನಡೆಸಿತ್ತಷ್ಟೇ!! ಆದರೀಗ ಜೆಡಿಎಸ್ ನ ದೇವೇ ಗೌಡರ ನಡೆಗೆ ಇಡೀ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಆಘಾತಕ್ಕೊಳಗಾಗಿದೆ! ಯಾಕೆ ಗೊತ್ತಾ!?

ಮತ್ತದೇ ಪಗಡೆಯಾಟ! ದಿಕ್ಕು ಬದಲಿಸಿದ ಜೆಡಿಎಸ್!!

ಇಷ್ಟು ದಿನ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಿದ್ದ ಜೆಡಿಎಸ್, ಸಾಧ್ಯವಾದರೆ ಬಿಜೆಎಪಿಯ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿತು! ಕೊನೆಗೆ ಮತ್ತೆ ತನ್ನ ವರಸೆ ಬದಲಿಸಿತು. ಆದರೀಗ, ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜೆಡಿಎಸ್ ಕೂಡಾ ಮೈತ್ರಿಗೆ ಮುಂದಾಗಿದೆ! ಯಾರ ಜೊತೆಗೆ ಗೊತ್ತಾ?! ರಾಷ್ಟ್ರೀಯ ಪಕ್ಷವಾದ ಬಿಎಸ್ಪಿ ಜೊತೆಗೆ!!

ಹಾ! ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಪ್ರಾದೇಶಿಕ ಪಕ್ಷಗಳ ಜೊತರ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದರೆ ಪ್ರಾದೇಶಿಕ ಪಕ್ಷಗಳು ಅಧಿಕಾರವನ್ನು ಹಿಡಿಯಲು ಸುಲಭವಾಗುತ್ತದೆ. ಇದೇ ಹಾದಿಯಲ್ಲಿ ಮುಂದುವರೆದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಬಹುದು ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ!

ಮಂಡ್ಯದ ಪಾಂಡವಪುರದ ಬೆಟ್ಟಹಳ್ಳಿ ಗ್ರಾಪಂ ಮತ್ತು ಲಕ್ಷ್ಮೀ ಸಾಗರ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಸಿ ಎಸ್ ಪುಟ್ಟರಾಜು, ” ಮೈತ್ರಿ ವಿಷಯವಾಗಿ ರಾಜ್ಯದಲ್ಲಿ ಈಗಾಗಲೇ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಬೇಕೆಂಬ ಪರ್ವ ಶುರುವಾಗಿದೆ! ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ! ಈ ಬಾರಿ ಚುನಾವಣೆಯಲ್ಲಿ ಕೂಡ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಪಕ್ಷದ ಹಿರಿಯ ನಾಯಕರುಗಳು ಚರ್ಚೆ ನಡೆಸುವ ಸಾಧ್ಯತೆ ಇದೆ.. ಸೂರ್ಯ ಹೇಗೆ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ, ಮುಂದೆ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಅಷ್ಟೇ ಸತ್ಯ!” ಎಂದಿದ್ದಾರೆ!! ಅಬ್ಬೋ!!

ಏನ್ ಮಾತು! ಏನು ವಿಶ್ವಾಸ! ಎಂತಹ ನಡೆ!

ಜೆಡಿಎಸ್ ನ ಸದ್ಯದ ಆರೋಪವೊಂದೇ! ರಾಷ್ಟ್ರೀಯ ಪಕ್ಷಗಳು ಜನರ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲವೆಂಬುದೊಂದೆ! ಆದರೆ, ಜೆಡಿಎಸ್ ಏನಾದರೂ ಸ್ವಲ್ಪವಾದರೂ ಆಡಳಿತಕ್ಕೆ ಯೋಗ್ಯವಾಗಿದ್ದಿದ್ದರೆ ಕೇವಲ ಪ್ರಾದೇಶಿಕ ಪಕ್ಷವಾಗಿ ಮಾತ್ರವೇ ಉಳಿಯುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ!! ದೇವೇ ಗೌಡರು ಪ್ರಧಾನಿಯಾದಾಗಲೇ ಜೆಡಿಎಸ್ ನನ್ನು ರಾಷ್ಟ್ರೀಯ ಪಕ್ಷವನ್ನಾಗಿ ಮಾಡಲು ಅವಕಾಶ ಸಿಕ್ಕಿತ್ತಲ್ಲವಾ?! ಆದರೆ ಜನ ಮೂಸಿಯೂ ನೋಡದ ಕಾರಣ ಕೇವಲ ಕರ್ನಾಟಕಕ್ಕೇ ಸೀಮಿತವಾಗಿದ್ದು ಜೆಡಿಎಸ್ ಪಕ್ಷ!!

ಇನ್ನೂ ಗೊಂದಲದಲ್ಲಿಯೇ ಇದೆ ಮಂಡ್ಯ ಸಂಸದರ ಮಾತು!!

ಜೆಡಿಎಸ್ ದೊಂದು ಬಹುದೊಡ್ಡ ಸಮಸ್ಯೆ ಏನೆಂದರೆ ಸಿದ್ಧಾಂತಗಳೇ ಇಲ್ಲದ ವೈಯುಕ್ತಿಕ ನಿರ್ಧಾರಗಳ ಅಡಳಿತ!! ಅತ್ತವದೇವೇ ಗೌಡರು ಮಾಯಾವತಿ ಎಂದರೆ ಇತ್ತ ಕುಮಾರಣ್ಣ ನೋ ಮೈತ್ರಿ ಎಂಬ ಹೇಳಿಕೆ ಕೊಡುತ್ತಾರೆ! ಅತ್ತ ದಾಯಾದಿಗಳಾದ ರೇವಣ್ಣ ಇನ್ನೊಂದು ಹೇಳಿಕೆ ಕೊಡುತ್ತಾರೆ! ಕೊನೆಗೆ ಸೋತು ಸುಣ್ಣವಾಗೋದು ಪಾಪ! ನಂಬಿಕೊಂಡ ಕಾರ್ಯಕರ್ತರು. ಅಕಸ್ಮಾತ್ ಏನಾದರೂ ಮಂಡ್ಯ ಸಂಸದರು ಹೇಳಿರುವ ಮಾತು ನಿಜವಾದರೆ, ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬುದು ಬಹುತೇಕರ ಅಂಬೋಣವಾದರೂ, ಕುಮಾರಸ್ವಾಮಿ ಯಾವ ರೀತಿಯ ನಿರ್ಧಾರೆ ತೆಗೆದುಕೊಳ್ಳಬಹುದು ಎಂಬುದರ ಮೇಲೆ ಜೆಡಿಎಸ್ ನ ಭವಿಷ್ಯ ನಿರ್ಧಾರವಾಗಲಿದೆ!

ಅಷ್ಟಕ್ಕೂ ಬಿಎಸ್ ಪಿ ಹೆಸರಿಗಷ್ಟೇ ರಾಷ್ಟ್ರೀಯ ಪಕ್ಷ!!

ಉತ್ತರ ಪ್ರದೇಶದಲ್ಲೀಗ ಬಿಎಸ್ಪಿಯ ಯುಗ ಬಹುತೇಕ ಮುಗಿದಿದೆ! ಅದಲ್ಲದೇ ,ರಾಷ್ಟ್ರೀಯ ಪಕ್ಷ ಎಂದೆನಿಸಿಕೊಂಡ ಬಿಎಸ್ಪಿ ಮುಂಚೆ ಇಂದಲೂ ಯಾವ ಸ್ವಾಗತಾರ್ಹವಾದ ಅಧಿಕಾರವನ್ನು ನೀಡಿಲ್ಲ. ಅದಲ್ಲದೇ, ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಬಿಎಸ್ ಪಿಯ ಅಸ್ತಿತ್ವವೇ ಇಲ್ಲದಿರುವಾಗ, ಪ್ರಾದೇಶಿಕ ಪಕ್ಷಗಳು ಇಂತಹ ಪಕ್ದ ಜೊತೆ ಮೈತ್ರಿ ಮಾಡಿಕೊಂಡರೆ ಮತಗಳು ಭಾಗವಾಗಬಹುದೇ ಹೊರತು, ಅಧಿಕಾರವಂತೂ ಅಲ್ಲ. ಏನಾದರಾಗಲಿ.. ಇಷ್ಟು ದಿನ ಗಳಿಗೆಗೊಂದು ಮಾತನಾಡುತ್ತಿರುವ ಜೆಡಿಎಸ್ ಮುಖಂಡರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬುದನ್ನು ಚುನಾವಣೆಯ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ನೋಡಬೇಕಾಗಿದೆಯಷ್ಟೆ!

 

Source : Original link

– ಪೃಥು ಅಗ್ನಿಹೋತ್ರಿ

Editor Postcard Kannada:
Related Post