X

ಬ್ರೇಕಿಂಗ್: ಮೈಸೂರು ಒಡೆಯರ್ ಗೆ ಆಫರ್ ಕೊಟ್ಟ ಚಾಣಕ್ಯ!! ಬಿಜೆಪಿ ಟಿಕೆಟ್ ನಿಮಗಾಗಿ ರೆಡಿ!

ಬಿಡಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಚಾಣಾಕ್ಷತೆ ಯಾರಿಗೂ ಅರ್ಥವಾಗಲ್ಲ. ಅವರ ಚುನಾವಣಾ ಸ್ಟಾಟರ್ಜಿ ಅರ್ಥವಾಗೋದೇ ಚುನಾವಣೆಯ ಫಲಿತಾಂಶದ ದಿನ. ಭಾರತೀಯ ಜನತಾ ಪಕ್ಷ ಕ್ಕೆ ಭರ್ಜರಿ ಜಯ ಲಭಿಸುವಾಗಲೇ ಶಾ ಸ್ಟಾಟರ್ಜಿ ಅರ್ಥವಾಗೋದು.ಈಗ ಚಾಣಾಕ್ಯ ಧೃಷ್ಟಿ ಇಟ್ಟಿರುವುದು ಕರ್ನಾಟಕ ದ ಮೇಲೆ.

ಎಸ್… ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಧೃಷ್ಟಿ ನೆಟ್ಟಿರುವು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಕಣಕ್ಕೆ. ೧೫೦ ಸ್ಥಾನಗಹಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಜಿದ್ದಿಗೆ ಬಿದ್ದು ಹೋರಾಡುತ್ತಿದ್ದಾರೆ ಅಮಿತ್ ಶಾ. ರಾಷ್ಟ್ರ ದಲ್ಲಿ ಕಾಂಗ್ರೆಸ್ ಅಡಳಿತ ಇರುವ ಏಕೈಕ ರಾಜ್ಯ ಕರ್ನಾಟಕ. ಹೀಗಾಗಿ ಈ ರಾಜ್ಯದ ಅಧಿಕಾರದ ಗದ್ದುಗೆಯನ್ನು ಏರಲೇ ಬೇಕು ಎಂಬ ಹಠಕ್ಕೆ ಬಿದ್ದು ಹೋರಾಡುತ್ತಿದ್ದಾರೆ. ಈ ಮೂಲಕ ಭಾರತೀಯ ಜನತಾ ಪಕ್ಷದ ಕಾಂಗ್ರೆಸ್ ಮುಕ್ತ ಭಾರತ ಕನಸು ನನಸು ಮಾಡಬೇಕೆಂದು ಶಾ ಪ್ಲಾನ್…

ಮೈಸೂರಿಗೆ ಕಾಲಿಟ್ಟ ಚಾಣಾಕ್ಯ…!

ಭಾರತೀಯ ಜನತಾ ಪಕ್ಷದ ಚುನಾವಣಾ ಚಾಣಾಕ್ಯ ಅಮಿತ್ ಶಾ ಮೈಸೂರಿಗೆ ಆಗಮಿಸಿದ್ದಾರೆ. ಹೇಳಿ ಕೇಳಿ ಮೈಸೂರು ಅಂದರೆ ಅದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ. ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬುಡವನ್ನೇ ಛಿದ್ರ ಮಾಡುವ ಪ್ಲಾನ್ ಚಾಣಾಕ್ಯ ರದ್ದು. ಸದ್ಯ ವರುಣಾ ಕ್ಷೇತ್ರವೋ ಅಥವಾ ಚಾಮುಂಡೇಶ್ವರಿ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಮುಂದಾದ ಶಾ ಸಿದ್ದರಾಮಯ್ಯನವರು ನಿಂತರೂ ಅವರನ್ನು ಸೋಲಿಸಿಯೇ ಸಿದ್ದ ಎಂದು ಕಂಕಣ ತೊಟ್ಟಿದ್ದಾರೆ.

ರಾಜಮಾತೆಗೆ ನಮೋ ಎಂದ ಶಾರಿಂದ ಬಿಗ್ ಆಫರ್..!

ಇಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೈಸೂರಿಗೆ ಆಗಮಿಸಿದ್ದು ಇಂದು ವಿಶ್ವ ಪ್ರಸಿದ್ಧ ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ. ಮೈಸೂರು ಅರಮನೆಗೆ ಭೇಟಿ ನೀಡಿದ ಅಮಿತ್ ಶಾ ಒಂದು ಗಂಟೆಗೂ ಅಧಿಕ ಕಾಲ ರಾಜ ಮಾತೆ ಪ್ರಮೋದಾ ದೇವಿ ಹಾಗೂ ರಾಜ ಯಧುವೀರ್ ದತ್ತ ಒಡೆಯರ್ ಜೊತೆ ಮಾತುಕತೆಯನ್ನು ನಡೆಸಿದ್ದಾರೆ.

ಈ ವೇಳೆ ಮೈಸೂರಿನ ಒಂದು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಆಫರ್ ನೀಡಿದ್ದಾರೆ. ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ನಮ್ಮಲ್ಲಿ ತುಂಬಾ ಮಂದಿ ಅಭ್ಯರ್ಥಿ ಗಳು ಇದ್ದಾರೆ. ಆದರೆ ನೀವು ಸ್ಪರ್ಧಿಸುವುದಾದರೆ ನಿಮಗೆ ಅವಕಾಶವನ್ನು ನೀಡುತ್ತೇವೆ. ನಿಮಗೆ ಆಸಕ್ತಿ ಇಲ್ಲದಿದ್ದರೂ ನಿಮ್ಮ ಕುಟುಂಬದ ಯಾರಿಗಾದರು ಟಿಕೆಟ್ ನೀಡಲು ನಾವು ಸಿದ್ದರಿದ್ದೇವೆ ಎಂದು ಶಾ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಧ್ವನಿ ಗೂಡಿಸಿದ ಮೈಸೂರು ಅರಮನೆಯ ಒಡೆಯ ಯದುವೀರ ದತ್ತ ಒಡೆಯರ್ ರಾಜಕೀಯದಲ್ಲಿ ತನಗೆ ಆಸಕ್ತಿ ಇದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ವಿಚಾರ ಚಿಂತಿಸಬೆಕಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ರಾಜ ಮಾತೆ ಪ್ರಮೋದಾ ದೇವಿ ಭಾರತೀಯ ಜನತಾ ಪಕ್ಷ ಕ್ಕೆ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಪ್ರಮೋದಾ ದೇವಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಡಿತ್ತು. ನಂತರ ರಾಜ್ಯಸಭ ಚುನಾವಣೆಯಲ್ಲಿ ಕೂಡಾ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಸ್ವತಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಮೈಸೂರು ಅರಮನೆಗೆ ಆಗಮಿಸಿದ್ದು ಈ ಆಫರ್ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಶಸ್ತ್ರ ಸಜ್ಜಿತರಾದ ಅಮಿತ್ ಶಾ ಹಾಗೂ ತಂಡ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ತವರಿಗೇ ಕೈ ಹಾಕಿದ್ದು ನಾಡದೊರೆಗೆ ಭಾರೀ ಆಘಾತವಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿ ಗಳು ಸೋಲುವ ಮುನ್ಸೂಚನೆ ಎಂದೂ ಹೇಳಲಾಗುತ್ತಿದೆ.

 

-ಸುನಿಲ್ ಪಣಪಿಲ

Editor Postcard Kannada:
Related Post