X

ಬಿಗ್ ಪೊಲಿಟಿಕಲ್ ನ್ಯೂಸ್! ಹೊರಬಿತ್ತು ರಾಜ್ಯಪಾಲರ ಆದೇಶ..! ಯಾರ ಮಡಿಲಿಗೆ ಬಿತ್ತು ಸರ್ಕಾರ..!

ಛಾತಕ ಪಕ್ಷಿಗಳಂತೆ ಕಾಯುತ್ತಿದ್ದ ರಾಜ್ಯ ರಾಜಕೀಯ ಸ್ಪೋಟಕ ನ್ಯೂಸ್ ಕೊನೆಗೂ ಹೊರ ಬಿದ್ದಿದೆ. ನಿನ್ನೆಯಿಂದಲೂ ಗರಿಗೆದರಿದ್ದ ರಾಜಕೀಯ ಬೆಳವಣಿಗೆಗಳು ಇಂದು ಅಂತ್ಯವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದ ಸರ್ಕಾರ ಆಯ್ಕೆ ಕಗ್ಗಂಟು ವಿಚಾರ ರಾಜ್ಯಪಾಲರ ಅಂಗಳ ತಲುಪಿದ್ದು, ಇದೀಗ ಮಹತ್ವದ ಆದೇಶವನ್ನು ರಾಜ್ಯಪಾಲರು ಆದೇಶಿಸಿದ್ದಾರೆ.

ರಾಜ್ಯಪಾಲರ ಗ್ರೀನ್ ಸಿಗ್ನಲ್..!

ನಿರೀಕ್ಷಿತ ಬೆಳವಣಿಗೆಯಂತೆ ರಾಜ್ಯಪಾಲ ವಜುಬಾಯಿ ರೂಡಾವಾಲಾ ಅವರು ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷಕ್ಕೆ ಸಹಜವಾಗಿಯೇ ಈ ಆಫರ್ ಬಂದಿದೆ. ಹೀಗಾಗಿ ನಾಳೆಯೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿದ ಮಾಜಿ ಸಚಿವ ಹಾಗೂ ಶಾಸಕ ಸುರೇಶ್ ಕುಮಾರ್ ನಾಳೆ ಮುಖ್ಯಮಂತ್ರಿ ಯಾಗಿ ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ . ಹಾಗೂ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನತೆ ಆಗಮಿಸಬೇಕು ಎಂದು ಹೇಳಿದ್ದಾರೆ.

ಮೊದಲು ರಾಜ್ಯ ಸರ್ಕಾರದ ಶಿಷ್ಟಾಚಾರ ಇಲಾಖೆಗೆ ಕರೆ ಮಾಡಿ ಶಿಷ್ಟಾಚಾರ ಪಾಲನೆಯ ವಿಚಾರವನ್ನು ತಿಳಿದುಕೊಂಡ ನಂತರ ರಾಜಭವನದ ಅಧಿಕಾರಿಗಳಿಗೆ ಕರೆ ಮಾಡಿ ಪ್ರಮಾಣ ವಚನದ ಬಗ್ಗೆ ಸಿದ್ದತೆ ನಡೆಸುವಂತೆ ಸೂಚಿಸಲಾಗಿತ್ತು.! ಪ್ರಮಾಣ ವಚನದ ಸ್ಥಳ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಕೂಡಲೇ ವರದಿ ನೀಡುವಂತೆ ರಾಜಭವನದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ನಂತರ ಮಹತ್ವದ ಆದೇಶವನ್ನು ರಾಜ್ಯಪಾಲರು ನೀಡಿದ್ದಾರೆ.

ರಾಜಭವನದಲ್ಲೇ ಯಡಿಯೂರಪ್ಪ ಪ್ರಮಾಣ ವಚನ..!

ಈ ಮಧ್ಯೆ ನಾಳೆ ರಾಜಭವನದಲ್ಲೇ ಯಡಿಯೂರಪ್ಪ ಪ್ರಮಾಣ ವಚನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಬೆಂಗಳೂರಿನ ಕಂಠೀರವ ಸ್ಟೇಡಿಯಂನ್ನು ಪ್ರಮಾಣ ವಚನ ಸ್ಥಳ ಎಂದು ನಿಗಧಿ ಪಡಿಸಲಾಗಿತ್ತಾದರೂ ನಂತರ ರಾಜಭವನವನ್ನೇ ಅಂತಿಮಗೊಳಿಸಲಾಯಿತು. ಈ ಮೊದಲು ಸಂಪೂರ್ಣ ಸಚಿವ ಸಂಪುಟ ಬಿಎಸ್ ಯಡಿಯೂರಪ್ಪನವರೊಂದಿಗೆ ಪ್ರಮಾಣ ವಚನ ಮಾಡುವುದಾಗಿ ನಿರ್ಧರಿಸಿತ್ತಾದರೂ ನಂತರ ಬದಲಾದ ರಾಜಕೀಯ ಚಿತ್ರಣದಲ್ಲಿ ಭಾರತೀಯ ಜನತಾ ಪಕ್ಷದ ಲೆಕ್ಕಾಚಾರವನ್ನು ತಿರುಚಲಾಗಿತ್ತು.

ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದ ಕಾರಣ ಉಳಿದ ಯಾವ ಶಾಸಕರೂ ಸದ್ಯಕ್ಕೆ ಪ್ರಮಾಣ ವಚನವನ್ನು ಸ್ವೀಕರಿಸುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದಲ್ಲಿ ಮೇ 27 ತಾರೀಕಿನಂದು ಉಳಿದ ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಅದಕ್ಕೂ ಮುನ್ನ ಶಾಸಕರು ಸರ್ಕಾರ ರಚಿಸುವಷ್ಟು ಶಾಸಕರ ಸಂಖ್ಯೆಯನ್ನು ಅಂದರೆ ಸರ್ಕಾರದ ಬಹುಮತವನ್ನು ಸಾಭೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಇದನ್ನು ಸಮರ್ಪಕವಾಗಿ ದಾಟಿದ್ದೇ ಆಗಿದ್ದಲ್ಲಿ ಭಾರತೀಯ ಜನತಾ ಪಕ್ಷ 5 ವರ್ಷಗಳ ಕಲ ತನ್ನ ಅಧಿಕಾರವನ್ನು ಸಧೃಢವಾಗಿ ಮುಂದುವರೆಸಲಿದೆ. ಅಪ್ಪಿ ತಪ್ಪಿ ಭಾರತೀಯ ಜನತಾ ಪಕ್ಷದ ಲೆಕ್ಕಾಚಾರ ಉಲ್ಟಾ ಆದರೆ ಮತ್ತೆ ಸರ್ಕಾರ ಕೈ ತಪ್ಪುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.

ಈ ಮಧ್ಯೆ ಕಾಂಗ್ರೆಸ್ ಶಾಸಕರ ಶಾಸಕಾಂಗ ಪಕ್ಷದ ಸಭೆಯು ಇನ್ನೂ ಒಂದು ಹಂತಕ್ಕೆ ಬಾರದೇ ಇದ್ದಿದ್ದು ಸಭೆಗಳ ಮೇಲೆ ಸಭೆಗಳು ನಡೆಯುತ್ತಿದೆ. ಕೊನೇ ಘಳಿಗೆಯಲ್ಲಿಯಾದರೂ ನಾವು ಅಧಿಕಾರವನ್ನು ಹಿಡಿಯುತ್ತೇವೆ ಹಂಬಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ತಾನು ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂಬ ಆಸೆಯಲ್ಲಿ ಪರಮೇಶ್ವರ್ ಕೂಡಾ ಇದ್ದಾರೆ.

ಆದರೆ ವಿರೋಧ ಪಕ್ಷದ ಈ ಎಲ್ಲಾ ಕನಸನ್ನು ಭಗ್ನಗೊಳಿಸಿರುವ ಭಾರತೀಯ ಜನತಾ ಪಕ್ಷ ನಾಳೆಯೇ ಪ್ರಮಾಣ ವಚನ ನಡೆಸಿ ಸರ್ಕಾರ ನಡೆಸಲು ಮುಂದಾಗಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಿದೆ.

-ಸುನಿಲ್ ಪಣಪಿಲ

Editor Postcard Kannada:
Related Post