X

ಹೊಸ ಸಚಿವರಿಗೆ ಶಾಕ್ ನೀಡಿದ ಗೂಂಡೂರಾವ್! ಎಲ್ಲಾ ಸಚಿವರು ರಾಜೀನಾಮೆ ನೀಡಬೇಕು ಎಂದ ಕಾಂಗ್ರೆಸ್ ನಾಯಕ! “ಕೈ”ಕಮಾಂಡ್ ಹೊಸ ಫಾರ್ಮುಲಾ ಏನು ಗೊತ್ತಾ..?

ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ಏರಲು ಬಿಡಬಾರದು, ಈ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಬಾರದು ಎಂಬ ಉದ್ಧೇಶಕ್ಕಾಗಿ ತೃತೀಯ ಸ್ಥಾನಕ್ಕೆ ಇಳಿದಿದ್ದ ಜನತಾ ದಳ ನಾಯಕ ಹೆಚ್.ಡಿ.ಕುಮಾರ ಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿ ಬಿಜೆಪಿಯನ್ನು ದೂರವಿಟ್ಟಿತ್ತು ಕಾಂಗ್ರೆಸ್ ಪಕ್ಷ.ಆದರೆ ಜನತಾ ದಳದೊಂದಿಗೆ ಮಾಡಿಕೊಂಡ ಮೈತ್ರಿ ಇದೀಗ ಕಾಂಗ್ರೆಸ್ ಪಕ್ಷಕ್ಕೇ ಮುಳುವಾಗಿದೆ. ತೆಪ್ಪಗೆ ಕುಂತಿದ್ರೆ ಇಷ್ಟೊತ್ತಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಹಾಯಾಗಿರುತ್ತಿತ್ತೋ ಏನೋ. ಆದರೆ ಜೆಡಿಎಸ್ ಮೈತ್ರಿಯ ಸಹವಾಸದಿಂದ ಇದೀಗ ಅಧಿಕಾರವನ್ನು ಕಳೆದುಕೊಳ್ಳುವ ಭಯದಿಂದ ಇನ್ನೇನೋ ತಂತ್ರಕ್ಕೆ ಮುಂದಾಗಿದೆ.

ಮುಖ್ಯಮಂತ್ರಿಯನ್ನಾಗಿ ಜನತಾ ದಳದ ನಾಯಕ ಕುಮಾರ ಸ್ವಾಮಿಯನ್ನು ಆಯ್ಕೆ ಮಾಡಿದಾಗ ಎಲ್ಲೂ ಅಷ್ಟೊಂದು ಭಿನ್ನರಾಗ ಶುರುವಾಗಿದ್ದಿಲ್ಲ. ಆದರೆ ಉಪಮುಖ್ಯಮಂತ್ರಿಯನ್ನಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಆಗಿ ಯಾವಾಗ ಆಯ್ಕೆಯಾದರೋ ಅಂದಿನಿಂದ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತೀಯರು ಮೆಲ್ಲನೆ ಏಳಲು ಆರಂಭಿಸಿದರು. ನಂತರ ಸಚಿವ ಸಂಪುಟ ವಿಸ್ತರಣೆ ಬಳಿಕ ಎಲ್ಲವೂ ಶಮನವಾಗುತ್ತೆ ಎಂದೇ ಹೇಳಿಕೊಂಡು ಬರುತ್ತಿದ್ದರು. ಆದರೆ ಇದೀಗ ನಡೆದದ್ದೇ ಬೇರೆ. ಸಚಿವ ಸ್ಥಾನ ಕೈ ತಪ್ಪಿದ ಆಕ್ರೋಶದಲ್ಲಿ 20ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಇದೀಗ ಭಿನ್ನರಾಗವನ್ನು ಹಾಡುತ್ತಿದ್ದಾರೆ.

ಮಾಜಿ ನೀರಾವರಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ಸಹಿತ ಅನೇಕ ಶಾಸಕರು ಪ್ರತ್ಯೇಕ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಭಿನ್ನಮತವನ್ನು ಭುಗಿಲೇಳುವಂತೆ ಮಾಡುತ್ತಿದ್ದಾರೆ. ನನ್ನ ಬಳಿ 20 ಶಾಸಕರಿದ್ದಾರೆ ಎನ್ನುವ ಮೂಲಕ ಸರ್ಕಾರವನ್ನು ಪತನಗೊಳಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದು ಕಾಂಗ್ರೆಸ್ ಹೈಕಮಾಂಡ್‍ಗೆ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಅದೆಷ್ಟೇ ಬಾರಿ ಕೈಕಮಾಂಡ್‍ನಿಂದ ಕಠಿಣ ಸೂಚನೆ ಬಂದರೂ ಜಗ್ಗದ ಕೈ ಶಾಸಕರು ಇದೀಗ ಮತ್ತೆ ಮತ್ತೆ ಭಿನ್ನರಾಗವನ್ನು ಹಾಡುತ್ತಿದ್ದಾರೆ.

ಈ ಮಧ್ಯೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗೂಂಡೂರಾವ್ ಸ್ಪೋಟಕ ಮಾಹಿತಿಯೊಂದನ್ನು ಹೈಕಮಾಂಡ್ ಅಂಗಳದಿಂದ ಹೊರ ಹಾಕಿದ್ದಾರೆ. ಇದು ಸದ್ಯ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ಶಾಸಕರು ಗೂಂಡೂರಾವ್ ಅವರ ಹೇಳಿಕೆಯಿಂದ ಬೆಕ್ಕಸ ಬೆರಗಾಗಿದ್ದಾರೆ. ಈವರೆಗೂ ಇದ್ದ ಸಚಿವ ಸ್ಥಾನ ವಂಚಿತರ ಭಿನ್ನಮತದ ಗುಂಪು ಇದೀಗ ಸಚಿವ ಸ್ಥಾನ ಪಡೆದವರಲ್ಲೇ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.

“ಈ ಬಾರಿ ಸಚಿವ ಸ್ಥಾನ ಪಡೆದವರು ಕೇವಲ 2 ವರ್ಷ ಮಾತ್ರ ಆ ಸ್ಥಾನದಲ್ಲಿರಲು ಸಾಧ್ಯ. 2 ವರ್ಷದ ನಂತರ ಈ ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡುವ ಈ ಹುದ್ದೆಗಳನ್ನು ಇದೀಗ ಸಚಿವ ಸ್ಥಾನ ವಂಚಿತಗೊಂಡ ಶಾಸಕರಿಗೆ ನೀಡಲಾಗುವುದು. ಇದು ಕಾಂಗ್ರೆಸ್ ಹೈಕಮಾಂಡ್ ಆದೇಶ” ಎಂದು ಹೇಳಿದ್ದಾರೆ. ಈ ಮೂಲಕ ಸಚಿವ ಸ್ಥಾನ ವಂಚಿತ ಭಿನ್ನಮತೀಯ ಶಾಸಕರಿಗೆ ಹೈಕಮಾಂಡ್ ಹೊಸ ಫಾರ್ಮುಲಾವನ್ನು ರೂಪಿಸಿದೆ.

ಆದರೆ ಈ ಹಿಂದೆಯೇ “ಎರಡನೇ ರೌಂಡ್‍ನಲ್ಲಿ ಸಚಿವ ಸ್ಥಾನ ನೀಡಲು 2ನೇ ಸ್ಥಾನದ ನಾಗರಿಕ ನಾನಲ್ಲ” ಎಂದು ಹೇಳಿರುವ ಎಂಬಿ ಪಾಟೀಲ್ ಕೈಕಮಾಂಡ್‍ನ ಈ ಫಾರ್ಮುಲಾವನ್ನು ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನವನ್ನೇ ಮೂಡಿಸಿದೆ. ಈ ಸರ್ಕಾರ ಒಂದು ವರ್ಷ ಇರೋದೇ ಗ್ಯಾರಂಟಿ ಇಲ್ಲ, ಇನ್ನು 2 ವರ್ಷದ ಮಾತು ಎಲ್ಲಿಂದ ಬಂತು ಎಂದು ಕೆಲ ಶಾಸಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದೆಡೆ ಮಂತ್ರಿ ಸ್ಥಾನ ವಂಚಿತ ಶಾಸಕರ ಆಕ್ರೋಶವಾದರೆ ಮತ್ತೊಂದೆಡೆ ತಮ್ಮನ್ನು 2 ವರ್ಷಗಳ ನಂತರ ರಾಜೀನಾಮೆ ನೀಡಲು ಆದೇಶ ನೀಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಹೊಸ ಸಚಿವರ ಅಸಮಧಾನ. ಇವೆಲ್ಲವೂ ಒಟ್ಟಾಗಿ ಇದೀಗ ಕಾಂಗ್ರೆಸ್ ಪಕ್ಷವನ್ನು ಪತನ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

-ಸುನಿಲ್ ಪಣಪಿಲ

Editor Postcard Kannada:
Related Post