X

ಬ್ರೇಕಿಂಗ್! ಡಿಕೆಶಿ – ರೇವಣ್ಣಗೆ ಕುಮಾರಸ್ವಾಮಿ ಶಾಕ್..! ಒಂದೇ ಏಟಿಗೆ ಎರಡು ಹಕ್ಕಿ ಹೊಡೆದ ಸಿಎಂ..!

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈತ್ರಿ ಮಾಡಿಕೊಂಡು ಆರಾಮವಾಗಿ ಆಡಳಿತ ನಡಸಿಕೊಂಡು ಇರಬಹುದು ಎಂಬ ಲೆಕ್ಕಾಚಾರ ಹಾಕಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿಕೊಂಡಿದ್ದರು. ಆದರೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮುಖಂಡರು ಕುಮಾರಸ್ವಾಮಿ ಅವರ ಜೊತೆಗಿದ್ದರೆ, ಇತ್ತ ಶಾಸಕರು ಮಾತ್ರ ಕುಮಾರಸ್ವಾಮಿ ಅವರಿಗೆ ತಿರುಗಿ ಬಿದ್ದಿದ್ದಾರೆ. ಸಚಿವ ಸಂಪುಟ ರಚನೆಯಲ್ಲಿ ಮಂತ್ರಿ ಸ್ಥಾನ ಕೈತಪ್ಪಿದ ಶಾಸಕರೆಲ್ಲಾ ಒಟ್ಟಾಗಿ ಮೈತ್ರಿ ಸರಕಾರಕ್ಕೆ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ನಡುಕ ಹುಟ್ಟಿಸಿದ್ದಾರೆ. ಯಾವುದೇ ರೀತಿಯ ಮನವೊಲಿಕೆಯ ಪ್ರಯತ್ನಕ್ಕೂ ಬಗ್ಗದ ಶಾಸಕರು ಒಂದೆಡೆಯಾದರೆ, ಮತ್ತೊಂದೆಡೆ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ತಾವು ಇಚ್ಚೆ ಪಟ್ಟ ಸ್ಥಾನ ಸಿಗದೇ ಇರುವುದರಿಂದ ಇದೀಗ ಮತ್ತೊಮ್ಮೆ ಮನಸ್ಥಾಪ ಉಂಟಾಗುವ ಸಾಧ್ಯತೆ ಇದೆ.!

ಡಿಕೆಶಿ ಆಸೆಗೆ ತಣ್ಣೀರೆರಚಿದ ಕುಮಾರಸ್ವಾಮಿ..!

ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡ ನಂತರ ಶಾಸಕರ ರಕ್ಷಣೆಯ ಜವಾಬ್ದಾರಿ ಡಿಕೆಶಿಗೆ ವಹಿಸಲಾಗಿತ್ತು. ಪಕ್ಷ ವಹಿಸಿದ್ದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಿಕೆಶಿ ಮೈತ್ರಿ ಸರಕಾರದಲ್ಲೂ ಇಂಧನ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ಇತ್ತ ಕುಮಾರಸ್ವಾಮಿ ಸಹೋದರ ಎಚ್ ಡಿ ರೇವಣ್ಣ ಕೂಡ ಇಂಧನ ಖಾತೆಗಾಗಿ ಪಟ್ಟು ಹಿಡಿದಿದ್ದರಿಂದ ಡಿಕೆಶಿಗೆ ಇಂಧನ ಖಾತೆ ಸಿಕ್ಕಿರಲಿಲ್ಲ. ಆದ್ದರಿಂದ ಅಸಮಧಾನಗೊಂಡ ಡಿಕೆಶಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ನಂತರದಲ್ಲಿ ಎಲ್ಲಾ ಸ್ಥಾನಗಳನ್ನು ಅವರೇ ಇಟ್ಟುಕೊಳ್ಳಲಿ, ನನಗೆ ಯಾವುದೇ ಸ್ಥಾನ ಬೇಡ ಎಂದು ಹೇಳಿಕೊಂಡಿದ್ದರು.!

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಹೂಡಿದ ತಂತ್ರದ ಪ್ರಕಾರ ಡಿಕೆಶಿ ಹಾಗೂ ಎಚ್ ಡಿ ರೇವಣ್ಣ ಇಬ್ಬರಿಗೂ ಇಂಧನ ಖಾತೆ ನೀಡದೆ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಶಾಸಕ ರೇವಣ್ಣ ಜೆಡಿಎಸ್‌ ವರಿಷ್ಠ ದೇವೇಗೌಡರ ಜೊತೆ ಮಾತನಾಡಿ ಇಂಧನ ಮತ್ತು ಲೋಕೋಪಯೋಗಿ ಖಾತೆಗಳೆರಡೂ ಬೇಕೆಂದು ಒತ್ತಡ ಹೇರಿದ್ದರು. ಆದರೆ ದೇವೇಗೌಡರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಇದೀಗ ಉಲ್ಟಾ ಹೊಡೆದಿದ್ದಾರೆ.

ಯಾಕೆಂದರೆ ಇಂಧನ ಖಾತೆಯನ್ನು ಡಿಕೆ ಶಿವಕುಮಾರ್ ಮತ್ತು ಎಚ್ ಡಿ ರೇವಣ್ಣಗೆ ನೀಡದೇ ಇನ್ನೂ ಕುತೂಹಲ ಮೂಡಿಸಿದ್ದಾರೆ. ಯಾಕೆಂದರೆ ಈ ಇಬ್ಬರಲ್ಲಿ ಯಾರಿಗೆ ಇಂಧನ ಖಾತೆ ನೀಡಿದರೂ ಇನ್ನೊಬ್ಬರು ಮುನಿಸಿಕೊಳ್ಳುವುದು ಗ್ಯಾರಂಟಿ. ಆದ್ದರಿಂದ ಜಾಣ್ಮೆ ಮೆರೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಂತ್ರದ ಮೂಲಕ ಇಬ್ಬರನ್ನೂ ಸುಮ್ಮನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ..!

–ಅರ್ಜುನ್

Editor Postcard Kannada:
Related Post