X

ಸೈನಿಕರ ಸಮವಸ್ತ್ರ ಖರೀದಿಗೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಎಡವಟ್ ರಾಹುಲನಿಗಾಯ್ತು ಮುಖ ಭಂಗ!! ಬಯಲಾಯ್ತು ಸೈನಿಕರ ವೇತನ ಹೆಚ್ಚಾಗಿರುವ ಸತ್ಯ!!

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಯಾವಾಗಲೂ ಶ್ರಮಿಸುತ್ತಿರುತ್ತಾರೆ!! ಒಂದಲ್ಲ ಒಂದು ವಿಷಯಗಳಲ್ಲಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿರುತ್ತಾರೆ!! ಅದರ ಪ್ರತಿಫಲವಾಗಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ನಡೆಸುತ್ತಿದೆ!!

ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರಿಗೆ ಯಾವ ರೀತಿ ಬೆಂಬಲಿಸುತ್ತಿದ್ದಾರೆ ಎಂದು ನಮಗೆ ತಿಳಿದೇ ಇದೆ!! ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಯಾವ ರೀತಿ ಸೇನೆಯನ್ನು ನೋಡಿಕೊಳ್ಳುತ್ತಿತ್ತು ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ!! ಆದರೆ ಇದೀಗ ಸೇನೆಗೆ ಮೋದಿಜೀ ನೀಡುತ್ತಿರುವ ಸವಲತ್ತುಗಳ ಬಗ್ಗೆ ಈಗ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್‍ಗಾಂಧಿಗೆ ಉರಿಯಾಗಲು ಶುರುವಾಗಿದೆ!! ತಾವು ಏನೂ ಕೆಲಸ ಮಾಡದಿದ್ದರೂ ಪರವಾಗಿಲ್ಲ ಈ ರೀತಿ ದೇಶ ಅಭಿವೃದ್ಧಿ ಕೆಲಸ ಮಾಡಿದ ಮೋದೀಜೀಯನ್ನು ಮಾತ್ರ ತಮಗಿಷ್ಟ ಬಂದಂತೆ ಮಾತನಾಡುವುದು ಕಾಂಗ್ರೆಸ್ಸಿಗರಿಗೆ ತಮಗಂಟಿದ ರೋಗದಂತೆ ಮಾಡುತ್ತಿದ್ದಾರೆ!! ಒಬ್ಬರನ್ನು ಟೀಕಿಸಬೇಕಾದರೆ ಕಾಂಗ್ರೆಸ್ಸಿಗರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುವುದಕ್ಕೆ ರಾಹುಲ್ ಗಾಂಧಿಯೇ ಜ್ವಲಂತ ಸಾಕ್ಷಿ!!

ಸುಳ್ಳು ಸುದ್ಧಿ ಹಬ್ಬಿಸಿದ್ದ ರಾಹುಲ್ ಗಾಂಧಿ!!

ಇಂತಹ ರಾಹುಲ್ ಗಾಂಧಿ ಮಾಡಿದ ಪ್ರಮಾದವೊಂದು ಈಗ ದೇಶಾದ್ಯಂತ ಸುದ್ದಿಯಾಗಿದ್ದು, ರಾಹುಲ್ ಗಾಂಧಿ ಒಬ್ಬ ಸುಳ್ಳುಕೋರರಾಗಿ ಮಾರ್ಪಟ್ಟಿದ್ದಾರೆ. ಇತ್ತೀಚೆಗೆ ಸೈನಿಕರ ಸಮವಸ್ತ್ರ ಖರೀದಿಗೂ ಸರ್ಕಾರದ ಬಳಿ ದುಡ್ಡಿಲ್ಲ  ಸೈನಿಕರೇ ತನಗೆ ಬೇಕಾದಂತಹ ಸಮವಸ್ತ್ರ, ಶೂಗಳನ್ನು ಖರೀದಿಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಅದಲ್ಲದೆ   ಮೇಕ್ ಇನ್ ಇಂಡಿಯಾ ಎಂಬುವುದೆಲ್ಲಾ ಸುಳ್ಳು!! ಮೋದಿ ಸರಕಾರ ಯಾವುದೇ ಸೈನಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ!!  ನಮ್ಮ ದೇಶದ ಸೈನಿಕರು ತಮ್ಮ ಬಟ್ಟೆಯನ್ನು ತಾವೇ ಖರೀದಿಸಬೇಕಾ ಎಂದು ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ!!

ರಾಹುಲ್ ಗಾಂಧಿಯವರನ್ನು ನೋಡಿ ದಿಗ್ವಿಜಯ್ ಸಿಂಗ್ ಅವರು ಸಹ ಮೋದಿ ವಿರೋಧಿಸಿ ಟ್ವೀಟ್ ಮಾಡಿದರು. ಆದರೆ ಇವರಿಬ್ಬರ ಟ್ವೀಟ್ ಸುಳ್ಳು ಎಂಬುವುದು ಇಂಡಿಯಾ ಟುಡೇ ನಡೆಸಿದ ಸತ್ಯ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಹೌದು, ಸರ್ಕಾರಕ್ಕೆ ದೇಶದ ಸೈನಿಕರಿಗೆ ಸಮವಸ್ತ್ರ ಖರೀದಿ ಮಾಡಲು ದುಡ್ಡಿಲ್ಲವೇ ಎಂದು ಸತ್ಯದರ್ಶನ ಮಾಡಲು ಹೊರಟಿದೆ. ಆಗ ರಾಹುಲ್ ಗಾಂಧಿಯವರು ಹೇಳಿದ ವಿಚಾರ ಸುಳ್ಳು ಎಂಬುವುದು ಸ್ಪಷ್ಟವಾಗಿದೆ!! ಇದಕ್ಕಾಗಿ ಇಂಡಿಯಾ ಟುಡೇ 2017ರಲ್ಲಿ ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿನಂತೆ ಸೈನಿಕರಿಗೆ ವೇತನ ಹೆಚ್ಚಿಸಿದೆ. ಬಜೆಟ್ಟಿನಲ್ಲೂ ಹಣ ಮೀಸಲಿಟ್ಟಿದೆ, ಅಷ್ಟೇ ಅಲ್ಲ, ಸೈನಿಕರ ಸಮವಸ್ತ್ರಕ್ಕೂ ಹಣ ಮೀಸಲಿಟ್ಟಿದೆ. ಅದೂ ಅಧಿಕಾರಿಗಳ ಹಂತದ ಸೈನಿಕರಿಗೆ ವಾರ್ಷಿಕ 20 ಸಾವಿರ ರೂಪಾಯಿ, ಹಾಗೂ ಇದಕ್ಕಿಂತ ಕೆಳಹಂತದ 10 ಸಾವಿರ ರೂಪಾಯಿ ವಾರ್ಷಿಕ ಹಣ ಸಮವಸ್ತ್ರಕ್ಕಾಗಿಯೇ ಬಿಡುಗಡೆ ಮಾಡಿದೆ ಎಂಬುದು ಬಹಿರಂಗವಾಗಿದೆ. ಆ ಮೂಲಕ ರಾಹುಲ್ ಗಾಂಧಿಯವರ ಸುಳ್ಳು ಟ್ವೀಟ್‍ಗೆ ತೆರೆ ಬಿದ್ದತಾಂಗಿದೆ!!

ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಿಂದ ಭಾರತೀಯ ಸೇನೆ ನಾನಾ ರೀತಿಯಲ್ಲಿ ಮುಂದುವರೆದಿದೆ!! ಈಗಾಗಲೇ ಮೋದಿ ಸರಕಾರ ಭಾರತೀಯ ಸೈನಿಕರಿಗೆ ಬುಲೆಟ್ ಫ್ರೂಫ್ ಜಾಕೆಟ್, ಬುಲೆಟ್ ಫ್ರೂಫ್ ಹೆಲ್ಮೆಟ್, ಸಿಆರ್ಫಿಎಫ್ ಸೈನ್ಯಕ್ಕೆ 100 ನೂತನ ಬುಲೆಟ್ ಫ್ರೂಫ್ ವಾಹನಗಳನ್ನು ನೀಡಿದ್ದು, ಆದರೆ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಮಾತ್ರ ಸೈನಿಕರಿಕೆ ಯಾವುದೇ ಸ್ವಾತಂತ್ರ್ಯವನ್ನು ನೀಡಿಲ್ಲ ಅದಲ್ಲದೆ ಶತ್ರುಗಳು ದಾಳಿ ನಡೆಸಿದರೂ ಅದಕ್ಕೆ ಸರ್ಕಾರದ ಅನುಮತಿ ಪಡೆದ ನಂತರವಷ್ಟೇ ಶತ್ರುಗಳ ವಿರುದ್ಧ ದಾಳಿ ಮಾಡಬೇಕಿತ್ತು.. ಆದರೆ ಈಗ ಕಾಲ ಬದಲಾಗಿದೆ!! ಮೋದಿಜೀ ಸರಕಾರ ಸೈನ್ಯಕ್ಕೆ ಅತ್ಯಂತ ಮಹತ್ವ ನೀಡಿ ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಿದೆ!!

ಪವಿತ್ರ

Editor Postcard Kannada:
Related Post