X

ಬ್ರೇಕಿಂಗ್! ಸಿಎಂ ವಿರುದ್ಧ ತಿರುಗಿಬಿದ್ದ ರೈತರು..! ಮಾತು ಕೊಟ್ಟ ಕುಮಾರಣ್ಣನಿಗೆ ಬಿತ್ತು ಛೀಮಾರಿ..!

ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರು ಮೊದಲು ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ. ಯಾಕೆಂದರೆ ರೈತರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಿದರೆ ರಾಜ್ಯದಲ್ಲಿ ಮುಂದೆ ಆರಾಮವಾಗಿ ಆಡಳಿತ ನಡೆಸಬಹುದು ಎಂಬ ಆಲೋಚನೆ ಇದ್ದೇ ಇರುತ್ತದೆ. ಅದೇ ರೀತಿ ರೈತರ ಹೆಸರಿನಲ್ಲೇ ಅಧಿಕಾರ ಹಿಡಿದ ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ನಮ್ಮ ಕೈಗೆ ಅಧಿಕಾರ ಕೊಟ್ಟು ನೋಡಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದವರು ಉದೀಗ ಅಧಿಕಾರ ತಮ್ಮದೇ ಕೈಯಲ್ಲಿದ್ದರೂ ಕೂಡಾ ಸಾಲ ಮನ್ನಾದ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದರ ವಿರುದ್ಧ ರೊಚ್ಚಿಗೆದ್ದ ರಾಜ್ಯದ ರೈತರು ಇದೀಗ ಸಿಎಂ ಕುಮಾರಸ್ವಾಮಿ ಅವರಿಗೆ ಛೀಮಾರಿ ಹಾಕಿದ್ದು, ಸಾಲ ಮನ್ನಾ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ..!

ವಿಫಲವಾಯಿತು ಕುಮಾರಸ್ವಾಮಿ ಅವರ ಸಂಧಾನ ಸಭೆ..!

ಕುಮಾರಸ್ವಾಮಿ ಅವರಿಗೆ ಇದೀಗ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುವುದು ಕಷ್ಟ ಎಂಬುದು ಅರಿವಾಗಿದೆ. ಅದಕ್ಕಾಗಿಯೇ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತರಿಗೆ ಮನದಟ್ಟು ಮಾಡಲು ಇಂದು ರೈತರ ಜೊತೆ ಮಾತುಕತೆಗೆ ತಯಾರಿ ನಡೆಸಿದ್ದರು. ಆದರೆ ಮುಖ್ಯಮಂತ್ರಿಗಳ ಎದುರೇ ರೊಚ್ಚಿಗೆದ್ದ ರೈತ ಮುಖಂಡರು ಸಾಲ ಮನ್ನಾ ಮಾಡಲೇಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇತ್ತ ಕುಮಾರಸ್ವಾಮಿ ಅವರು ಸಾಲ ಮನ್ನಾ ಸದ್ಯಕ್ಕೆ ಸಾಧ್ಯವಿಲ್ಲ, ಈ ಹಿಂದಿನ ಸರಕಾರ ಮಾಡಿದ ಸಾಲಗಳೇ ಇನ್ನೂ ಬಾಕಿ ಇರುವುದರಿಂದ , ಇದೀಗ ನಮ್ಮ ಸರಕಾರ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದರು. ಆದರೆ ಕುಮಾರಸ್ವಾಮಿ ಅವರ ಯಾವ ಮಾತಿಗೂ ಬೆಲೆ ಕೊಡದ ರೈತ ಮುಖಂಡರು ಸಾಲ ಮನ್ನಾ   ವಿಚಾರ ಮಾತ್ರ ಮಾತನಾಡಿ , ಬೇರೆ ಯಾವುದೇ ವಿಚಾರ ನಮಗೆ ಅಗತ್ಯವಿಲ್ಲ ಎಂದು ವಾಗ್ವಾದ ನಡೆಸಿದರು..!

ರಾಜ್ಯದ ಜನರ ಆಶೀರ್ವಾದ ನಮಗಿಲ್ಲ..!

ಚುನಾವಣೆಯ ಮೊದಲು ರಾಜ್ಯದ ಜನರೇ ನನ್ನ ದೇವರು ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರು ಇದೀಗ ಅಧಿಕಾರ ಕೈಗೆ ಸಿಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ಈ ರಾಜ್ಯದ ಜನರು ನಮ್ಮನ್ನು ತಿರಸ್ಕರಿಸಿದ್ದಾರೆ. ನಮಗೆ ರಾಜ್ಯದ ಜನರ ಆಶೀರ್ವಾದ ಇಲ್ಲ, ಆದರೂ ನಮ್ಮ ಕೈಹಿಡಿದವರು ರಾಹುಲ್ ಗಾಂಧಿ ಎಂದು ಮತ್ತೆ ಹೇಳಿದ ಕುಮಾರಸ್ವಾಮಿ ಅವರು ರಾಜ್ಯದ ಜನರಿಗಿಂತ ಕಾಂಗ್ರೆಸ್ಸೇ ಮುಖ್ಯ ಎಂದು ಪರೋಕ್ಷವಾಗಿ ಹೇಳಿಕೊಂಡರು. ಆದರೆ ಕುಮಾರಸ್ವಾಮಿ ಅವರ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದ ರೈತ ಮುಖಂಡರು ತುಂಬಿದ ಸಭೆಯಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಛೀಮಾರಿ ಹಾಕಿದ ಘಟನೆ ಇಂದು ನಡೆಯಿತು..!

ಒಂದೆಡೆ ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ನಕಾರ ಮಾಡುತ್ತಿದ್ದರೆ, ಇತ್ತ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಕುಮಾರಸ್ವಾಮಿ ಅವರು ರೈತರ ಪಾಲಿಗೂ ವಿರೋಧಿಯಾಗುತ್ತಿದ್ದಾರೆ. ಒಟ್ಟಾರೆಯಾಗಿ ಮೈತ್ರಿ ಮಾಡಿಕೊಂಡ ತಪ್ಪಿಗೆ ಕುಮಾರಸ್ವಾಮಿ ಅವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ..!

–ಅರ್ಜುನ್

Editor Postcard Kannada:
Related Post