X

ಬ್ರೇಕಿಂಗ್! ಸಿಡಿದೆದ್ದ ದೇವೇಗೌಡರ ಮಾನಸ ಪುತ್ರ.! ನಿಮ್ಮ ಪಕ್ಷವೇ ಬೇಡವೆಂದು ಹೊರನಡೆದ ಮಾಜಿ ಶಾಸಕ..!

ಕಾಂಗ್ರೆಸ್ ಮತ್ತು ಜೆಡಿಎಸ್‌ ಒಂದೆಡೆ ಮೈತ್ರಿ ಮಾಡಿಕೊಂಡು ಆರಾಮವಾಗಿ ಆಡಳಿತ ನಡೆಸಿಕೊಂಡು ಹೋಗಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡು ಈಗಾಗಲೇ ಮೈತ್ರಿ ಮಾಡಿಕೊಂಡರೂ ಕೂಡ ಸರಕಾರ ನಡೆಸಲಾಗದೆ ಕಂಗೆಡುವಂತಾಗಿದೆ. ಯಾಕೆಂದರೆ ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಸರಕಾರದ ಮುಖ್ಯ ಸಚಿವ ಸ್ಥಾನ ತಮಗೇ ಸಿಗಬೇಕೆಂದು ಒತ್ತಡ ಹೇರುತ್ತಿದ್ದರೆ, ಇತ್ತ ಜೆಡಿಎಸ್‌ ಮುಖಂಡರೂ ಕೂಡ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ಕುಮಾರಸ್ವಾಮಿ ಅವರು ಅಕ್ಷರಶಃ ಕಂಗೆಟ್ಟಿದ್ದಾರೆ. ದಿನೇ ದಿನೇ ಒಂದೊಂದೇ ಶಾಸಕರು ಬಂಡೇಳುತ್ತಿದ್ದು, ಮೈತ್ರಿ ಸರಕಾರ ಉಳಿಯುವುದೇ ಅನುಮಾನ ಎಂಬಂತಾಗಿದೆ ಸದ್ಯದ ಪರಿಸ್ಥಿತಿ..!

ಸೋಲಿಗೆ ಕಾರಣವಾದವರಿಗೆ ಶಾಸಕ ಸ್ಥಾನ..!

ಜೆಡಿಎಸ್‌ ಮುಖಂಡ , ಮಾಜಿ ಶಾಸಕ ವೈ ಎಸ್ ವಿ ದತ್ತ ಅವರು ಇದೀಗ ಸ್ವತಃ ತಮ್ಮ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಸೋಲಿಗೆ ಕಾರಣವಾದವರಿಗೆ ಮಂತ್ರಿ ಸ್ಥಾನ ನೀಡಿ ಗೌರವಿಸಲಾಗುತ್ತದೆ ಎಂದಾದರೆ, ನನಗೂ ನಿಮ್ಮ ಪಕ್ಷದ ಅವಶ್ಯಕತೆ ಇಲ್ಲ ಎಂದು ಕೆಂಡಕಾರಿದ್ದಾರೆ. ಜೆಡಿಎಸ್‌ ನಲ್ಲಿ ಈಗಾಗಲೇ ಅನೇಕ ಮುಖಂಡರು ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ತಿರುಗಿಬಿದ್ದಿದ್ದು,ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ದಿನದಿಂದಲೇ ಅಸಮಧಾನ ತೋರುತ್ತಿದ್ದಾರೆ. ಆದರೆ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಅತ್ತ ಪಕ್ಷ ತೊರೆಯಲೂ ಆಗದೆ, ಇತ್ತ ಮರ್ಯಾದೆಯೂ ಸಿಗದೆ ಇರಬೇಕಾದ ಪರಿಸ್ಥಿತಿ ಉಂಟಾಗಿದೆ.

ಇದೀಗ ಆಕ್ರೋಶ ವ್ಯಕ್ತಪಡಿಸಿದ ವೈ ಎಸ್ ವಿ ದತ್ತ ಅವರು, ನಿಮ್ಮನ್ನು ನಂಬಿಕೊಂಡು ಬಂದಿದ್ದಕ್ಕೆ ಒಳ್ಳೆಯ ಮರ್ಯಾದೆ ಸಿಕ್ಕಿದೆ ನನಗೆ , ನಾನು ಪಕ್ಷಕ್ಕೆ ಮಾಡಿದ ಉಪಕಾರಕ್ಕೆ ನೀವು ಮಾಡಿದ ದ್ರೋಹ ಎಂದಿಗೂ ಮರೆಯುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು..!

ಪಕ್ಷ ತೊರೆಯುವುದಾಗಿ ದತ್ತ ಹೇಳಿಕೆ..!

ಈಗಾಗಲೇ ಮೈತ್ರಿ ಸರಕಾರದಲ್ಲಿ ಭಿನ್ನಾಭಿಪ್ರಾಯ ತಲೆದೋರುತ್ತಿದ್ದು, ಯಾವ ಕ್ಷಣದಲ್ಲಿ ಸರಕಾರ ಮುರಿದು ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬಂತಾಗಿದೆ. ಇದೇ ವೇಳೆ ಇದೀಗ ಜೆಡಿಎಸ್‌ ನ ಮೆದುಳು ಎಂದು ಕರೆಸಿಕೊಳ್ಳುತ್ತಿದ್ದ , ದೇವೇಗೌಡರ ಮಾನಸ ಪುತ್ರ ವೈ ಎಸ್ ವಿ ದತ್ತ ಅವರು ತಮ್ಮ ಪಕ್ಷದ ಮುಖಂಡರ ಮೇಲೆ ವಾಗ್ದಾಳಿ ನಡೆಸಿದ್ದು, ನನಗೆ ನೀವೂ ಬೇಡ , ನಿಮ್ಮ ಪಕ್ಷವೂ ಬೇಡ ಎಂದು ಹೇಳಿಕೊಂಡಿದ್ದಾರೆ. ಸ್ವತಃ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಿದವರಿಗೆ ಈಗ ಮಂತ್ರಿ ಸ್ಥಾನ ನೀಡಲಾಗುತ್ತಿದೆ. ಇಂತಹ ಪಕ್ಷದಲ್ಲಿ ಇರುವುದಕ್ಕಿಂತ, ಪಕ್ಷ ತೊರೆಯುವುದೇ ಲೇಸು ಎಂದಿದ್ದಾರೆ..!

ಒಟ್ಟಾರೆಯಾಗಿ ಮೈತ್ರಿ ಮಾಡಿಕೊಂಡು ಸರಕಾರ ನಡೆಸುವುದಕ್ಕೂ ಮೊದಲೇ ಎರಡೂ ಪಕ್ಷಗಳ ಮುಖಂಡರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಪರಸ್ಪರ ಕಿತ್ತಾಟ ಮತ್ತಷ್ಟು ಹೆಚ್ಚುತ್ತಿದೆ..!

–ಅರ್ಜುನ್

Editor Postcard Kannada:
Related Post