X

ಉಗ್ರ ಕಸಬ್‌ಗೆ ಅಮಾಯಕ ಪಟ್ಟ: ಇದು ಕಾಂಗ್ರೆಸ್ ಪಕ್ಷದ ದುಶ್ಚಟ

ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ, ದೇಶಕ್ಕೆ ಅವಮಾನ ಎಸಗುವ ಮೂಲಕವೇ ಸಾಕಷ್ಟು ಸಂದರ್ಭಗಳಲ್ಲಿ ತನ್ನ ಮರ್ಯಾದೆಯನ್ನು ತಾನೇ ಹರಾಜು ಹಾಕಿಕೊಂಡ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ದೇಶಕ್ಕೆ ಹಾನಿಯಾಗುವಂತ ವಿಚಾರಗಳನ್ನು ನಡೆಸುವುದರಲ್ಲಿ ಕಾಂಗ್ರೆಸ್ ನವರದ್ದು ಎತ್ತಿದ ಕೈ. ಅವರಿಗೆ ಭಯೋತ್ಪಾದಕರು ಮನೆ ಮಕ್ಕಳಿದ್ದ ಹಾಗೆ. ಉಗ್ರರ ಪರ ಹೇಳಿಕೆಗಳನ್ನು ನೀಡುವ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್‌ನ ಸೋ ಕಾಲ್ಡ್ ನಾಯಕ ವಿಜಯ್ ವಾಡೆತ್ತಿವಾರ್ ಸದ್ಯ ವಿವಾದಿತ ಹೇಳಿಕೆ ನೀಡಿ, ಸುದ್ದಿಯಾಗಿರುವ ವ್ಯಕ್ತಿ.

ಮುಂಬೈ ದಾಳಿಯ ಸಂದರ್ಭದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಕೊಂದದ್ದು ಪಾಕಿಸ್ತಾನಿ ಉಗ್ರ ಕಸಬ್ ಅಲ್ಲ. ಪೊಲೀಸ್ ಬಂದೂಕಿನಿಂದ ಹಾರಿದ ಬುಲೆಟ್ ಅವರ ಸಾವಿಗೆ ಕಾರಣ. ಅವರನ್ನು ಹತ್ಯೆ ಮಾಡಿದ ಬುಲೆಟ್ ಉಗ್ರ ಕಸಬ್‌ನ ಬಂದೂಕಿನದ್ದು ಅಲ್ಲ ಎನ್ನುವ ಮೂಲಕ ವಾಡೆತ್ತಿವಾರ್ ‌ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ವಿಚಾರವನ್ನು ಇರಿಸಿಕೊಂಡು ಅವರು ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿದಿರುವ ಉಜ್ವಲ್ ನಿಕಮ್ ವಿರುದ್ಧ ನಾಲಿಗೆ ಹರಿಯ ಬಿಟ್ಟಿರುವುದಾಗಿದೆ.

ಬಿರಿಯಾಣಿ ವಿಷಯ ಪ್ರಸ್ತಾಪಿಸಿ ನಿಕಮ್ ಅವರು ಕಾಂಗ್ರೆಸ್ ಪಕ್ಷದ ಮಾನ ಹಾನಿ ಮಾಡಿದ್ದಾರೆ. ಕಸಬ್‌ಗೆ ಯಾರಾದರೂ ಬಿರಿಯಾನಿ ಕೊಡುತ್ತಾರಾ? ನಿಕಮ್ ನ್ಯಾಯಾಲಯಕ್ಕೆ ಸಾಕ್ಷಿ ಹೇಳುವುದಕ್ಕೂ ಬಂದಿಲ್ಲ. ಅವರು ಎಂತಹ ವಕೀಲರು. ದೇಶದ್ರೋಹಿ ಎಂದೂ ಕಾಂಗಿ ನಾಲಾಯಕ ಹೇಳಿದ್ದಾರೆ. ಹಾಗೆಯೇ ಮುಂಬೈ ಪೊಲೀಸ್‌ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನು ಕೊಂದ ಬುಲೆಟ್ ಕಸಬ್ ಬಂದೂಕಿನಿಂದ ಹಾರಿದ್ದಲ್ಲ. ಕರ್ಕರೆ ಅವರಿಗೆ ಜೊತೆಯಿದ್ದ ಆಪ್ತರೇ ಗುಂಡಿಟ್ಚಿದ್ದಾರೆ. ಆರ್.ಎಸ್.ಎಸ್. ಸಂಪರ್ಕಿತ ಪೊಲೀಸ್ ಕರ್ಕರೆ ಹತ್ಯೆಗೆ ಕಾರಣ ಎಂದು ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. ವಿಚಾರಣೆಯಲ್ಲಿ ‌ಸಾಕ್ಷ್ಯಗಳನ್ನು ವ್ಯವಸ್ಥಿತವಾಗಿ ನಿಕಮ್ ಮುಚ್ಚಿ ಹಾಕಿದ್ದಾರೆ ಎಂದೂ ವಾಡತ್ತಿವಾರ್ ತಿಳಿಸಿರುವುದಾಗಿದೆ.

ನಿಕಮ್ ‌ಅವರು‌ ಮುಂಬೈ ಪ್ರಕರಣದ ಆರೋಪಿ ಉಗ್ರ ಕಸಬ್‌ನಿಗೆ ಗಲ್ಲು ಶಿಕ್ಷೆ ಆಗುವಲ್ಲಿ, ಈ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಇರುವುದನ್ನು ಕೋರ್ಟ್‌ನಲ್ಲಿ ಬೀಟಾ ಬಯಲು ಮಾಡಿದ ಧೀಮಂತ. ಇಂತಹವರನ್ನು ದೇಶದ್ರೋಹಿ, ಉಗ್ರ ಕಸಬ್‌ನನ್ನು ಅಮಾಯಕ ಎಂದಿರುವ ಇವರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದು, ಜನರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ತಮ್ಮ ವಿರುದ್ಧ ಜನರು ಸಿಡಿದೆದ್ದಿರುವುದನ್ನು ಗಮನಿಸಿದ ವಾಡೆತ್ತಿವಾರ್, ತಾನು ಇದನ್ನು ಎಸ್. ಎಂ. ಮುಶ್ರೀಫ್ ಅವರ ಪುಸ್ತಕದ ಮಾಹಿತಿಯನ್ನು ತಾನು ಹೇಳಿದ್ದು, ಇದು ನನ್ನ ಮಾತುಗಳಲ್ಲಿ ಎಂದು ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಈ ಸಂಬಂಧ ಬಿಜೆಪಿ ಸಹ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ರಾಜಕೀಯ ಏನೇ ಇರಲಿ. ಬಿಜೆಪಿ ವಿರುದ್ಧ ಇರುವ ಬೇರೆ ವಿಚಾರಗಳನ್ನು ಹೇಳಿ ಮತ ಕೇಳಬಹುದಿತ್ತು. ಆದರೆ ಉಗ್ರರಿಗೆ ಬೆಂಬಲ ನೀಡುವುದು, ಉಗ್ರರಿಗೆ ಅಮಾಯಕ ಹಣೆಪಟ್ಟಿ‌ ಕಟ್ಟುವುದು ಕಾಂಗ್ರೆಸ್ ‌ನ ಚಾಳಿ.ಕಾಂಗ್ರೆಸ್ ಏನು ಪಾಕಿಸ್ತಾನದಲ್ಲಿ ಮತ ಕೇಳುತ್ತಿದೆಯಾ ಎಂದು ವ್ಯಂಗ್ಯವಾಡಿದೆ.

ಒಟ್ಟಾರೆ ಇರಲಾರದೆ ಇರುವೆ ಬಿಟ್ಟು ಕೊಂಡ ಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಿದೆ ಎವ್ನುವುದು ಸತ್ಯ.

Post Card Balaga:
Related Post