X

ಕಣಿವೆ ರಾಜ್ಯದ ಹಕ್ಕನ್ನು ಭಾರತ ಬಿಟ್ಟು ಕೊಡುವುದಿಲ್ಲ: ರಾಜನಾಥ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದ ನಂತರ ಭಾರತ ಸಾಕಷ್ಟು ಧನಾತ್ಮಕ ಪ್ರಗತಿ ಸಾಧಿಸಿದೆ ಎನ್ನುವುದರಲ್ಲಿ ಎರಡು ಮಾಡಿಲ್ಲ. ಭಯೋತ್ಪದಕರ ಕೈಮುಷ್ಠಿಗೆ ಸಿಲುಕಿ ನಲುಗುತ್ತಿದ್ದ ಜಮ್ಮು ಕಾಶ್ಮೀರ ಸಹ ಸಾಕಷ್ಟು ಬದಲಾವಣೆಗಳಿಗೆ ತೆರೆದುಕೊಂಡಿದೆ.

ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿದ್ದು, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆ ಯೋ ಮೇಲಿನ ಹಕ್ಕನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಶ್ಮೀರದ ಅಭಿವೃದ್ಧಿಯನ್ನು ನೋಡಿದ ಅಲ್ಲಿನ ಜನರು ಭಾರತದ ಭಾಗವಾಗಿಯೇ ಮುಂದುವರೆಯಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಆವರು ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಈ ಅಂಶದ ಬಗ್ಗೆ ಮಾತನಾಡಿದ್ದು, ಸದ್ಯ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಣೆ ಕಂಡಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಎಎಫ್ಎಸ್ಪಿಎ ಕಾಯ್ದೆ ಜಾರಿ ಮಾಡುವ ಅಗತ್ಯ ಇಲ್ಲದೇ ಇರುವ ಸಂದರ್ಭ ಸಹ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಪ್ರಸ್ತಾವನೆ ಕೇಂದ್ರ ಗೃಹ ಸಚಿವಾಲಯದ ಮುಂದಿದ್ದು, ಇದಕ್ಕೆ ಸಂಬಂಧಿಸಿದ ಹಾಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಜಮ್ಮು ಕಾಶ್ಮೀರದಲ್ಲಿ ಚುನಾವಣೆಗಳು ಖಂಡಿತವಾಗಿಯೂ ನಡೆಯಲಿವೆ. ಆದರೆ ನಿಗದಿತ ಸಮಯವನ್ನು ಈಗಲೇ ತಿಳಿಸುವುದು ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ಅವರು ಪಾಕಿಸ್ತಾನದ ಬಗೆಗೂ ವಾಗ್ದಾಳಿ ನಡೆಸಿದ್ದು, ಆ ದೇಶ ನಡೆಸುವ ಪರೋಕ್ಷ ಯುದ್ಧದ ವಿರುದ್ಧ ಕೆಂ ಕಾರಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಇಸ್ಲಾಮಾಬಾದ್ ನಿಲ್ಲಿಸಬೇಕು. ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಪಾಕಿಸ್ತಾನ ಇದ್ದು,‌ ಇದಕ್ಕೆ ಭಾರತ ಆಸ್ಪದ ಕೊಡುವುದಿಲ್ಲ ಎಂದು ಅವರು ನುಡಿದಿದ್ದಾರೆ.

Post Card Balaga:
Related Post