X

ಕಾಂಗ್ರೆಸ್, ಉಗ್ರರ ಬಗ್ಗೆ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ಭಾರತದ ಸಂಪತ್ತನ್ನು ದೋಚುವುದು, ಭಾರತದ ಸಾಧನೆಗಳನ್ನು ಬೇರೆ ರಾಷ್ಟ್ರಗಳ ಎದುರು ಕೀಳಾಗಿ ಕಾಣುವುದು, ನಮ್ಮ ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದು ಕಾಂಗ್ರೆಸ್ ಪಕ್ಷದ ದೈನಂದಿನ ದಿನಚರಿಯೇ ಹೌದು. ಕಂಡವರೆದುರು ದೇಶದ ಗೌರವವನ್ನು ಹರಾಜು ಹಾಕಿ, ತುಷ್ಟೀಕರಣ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

ಅವರು ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಹಿಂದೆ ನಮ್ಮ ಸರ್ಕಾರ ನೆರೆಯ ಉಗ್ರ ರಾಷ್ಟ್ರ ಪಾಕಿಸ್ತಾನದ ವಿರುದ್ಧ ವೈಮಾನಿಕ ದಾಳಿ, ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ಘಟನೆ ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದ್ದು, ಆ ರಾಷ್ಟ್ರದ ನಾಯಕರು ಕೈ ಪಕ್ಷದ ಶೆಹಜಾದಾ ಭಾರತದ ಪ್ರಧಾನಿ ಆಗಬೇಕು ಎಂದು ಬಯಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆವರ ಹೆಸರು ಹೇಳದೆಯೇ, ಅವರನ್ನು ಪರೋಕ್ಷವಾಗಿ ತಿವಿದಿದ್ದಾರೆ.

ಈ ಹಿಂದೆ ಭಾರತದ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದ ಸಮಯದಲ್ಲಿ ವಿಶ್ವ ವೇದಿಕೆಯಲ್ಲಿ ನಿಂತು ಕಾಂಗ್ರೆಸ್ ಅಳುತ್ತಿತ್ತು. ಆದರೆ ಜಾಗತಿಕ ವೇದಿಕೆಯಲ್ಲಿ ನಮ್ಮ ಸಮಸ್ಯೆಗಳನ್ನು ಮುಂದಿಟ್ಟು ಅಳುವ ಪರಿಸ್ಥಿತಿಯಿಂದ ಭಾರತ ಹೊರಬಂದಿದೆ ಎಂದು ಪಿ ಎಂ ಹೇಳಿದ್ದಾರೆ.

ಪ್ರಸ್ತುತ ಪಾಕಿಸ್ಥಾನ ಬೊಬ್ಬಿಡುತ್ತಿದೆ, ನೆರವು ನೀಡುವಂತೆ ಬೇಡಿಕೆೊಳ್ಳುತ್ತಿದೆ ಎಂದಿದ್ದಾರೆ.

ಭಾರತ ಮಾತೆಗೆ ಅವಮಾನ ಮಾಡುವವರನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಹೊಸ ದೃಷ್ಟಿಕೋನದ ನಮ್ಮ ದೇಶದ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಗೆ ಪಾಕಿಸ್ತಾನ ಸಂಪೂರ್ಣ ನಲುಗಿ ಹೋಗಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದನೆಯನ್ನು ಹಿಂದಿನಿಂದಲೂ ಬೆಂಬಲಿಸಿಕೊಂಡೇ ಬಂದಿದೆ ಎಂದು ಅವರು ನುಡಿದಿದ್ದಾರೆ.

ಕಾಂಗ್ರೆಸ್ ಪಕ್ಷ ಉಗ್ರರ ಪರ ಇರುವ ಕಾರಣದಿಂದಲೇ ಅವರು ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬಯಸುತ್ತಿದ್ದಾರೆ‌. ಆದರೆ ಭಾರತೀಯರಿಗೆ ಸದೃಢ ರಾಷ್ಟ್ರಕ್ಕಾಗಿ, ಸದೃಢ ವ್ಯಕ್ತಿಯೇ ಪ್ರಧಾನಿ ಆಗಬೇಕು. ದೇಶ ಬಲಿಷ್ಠ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಅವರು ನುಡಿದಿದ್ದಾರೆ.

ಮುಸ್ಲಿಂ ಮೀಸಲಾತಿ ನೀಡುವ ಕಾಂಗ್ರೆಸ್ ಪರಿಕಲ್ಪನೆಗೆ ಸಂಬಂಧಿಸಿದ ಹಾಗೆಯೂ ಅವರು ಮಾತನಾಡಿದ್ದು, ಮುಸಲ್ಮಾನರಿಗೆ ಮೀಸಲಾತಿ ನೀಡಲು ಅನುಕೂಲವಾಗುವಂತೆ ಕಾಂಗ್ರೆಸ್ ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದು, ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದಿದ್ದಾರೆ.

ಬಿಜೆಪಿ ದೇಶಕ್ಕೆ ಐನೂರು ವರ್ಷಗಳ ಹೋರಾಟದ ಫಲವಾದ ಶ್ರೀರಾಮ ಮಂದಿರವನ್ನು ನೀಡಿದೆ, ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿದ್ದ ಆರ್ಟಿಕಲ್ 370 ನ್ನು ರದ್ದು ಮಾಡಿದೆ. ಇಂತಹ ಗಮನಾರ್ಹ ಸಾಧನೆಗಳನ್ನು ಯಾವುದೇ ಗೊಂದಲ ಇಲ್ಲದೆ ಮಾಡಿರುವ ನಮಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗೆಗೂ ಮಾತನಾಡಿರುವ ಅವರು, ನಾನು ಸಿ ಎಂ ಆಗಿದ್ದಾಗಲೂ, ಪಿ ಎಂ ಆಗಿದ್ದಾಗಲೂ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಆದರೆ ಕಾಂಗ್ರೆಸ್ ನಾಯಕರು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ತಮ್ಮ ಮಕ್ಕಳಿಗಾಗಿ ಅಪಾರ ಸಂಪತ್ತು ಮಾಡಿ, ಜೈಲು ಸೇರಿದ್ದಾರೆ. ಅಂತಹವರ ಪರ ಇಂಡಿ ಒಕ್ಕೂಟ ರ್ಯಾಲಿ ನಡೆಸುತ್ತಿದೆ. ಮುಂದಿನ ಅವಧಿಯ ನಮ್ಮ ಸರ್ಕಾರ ಇನ್ನಷ್ಟು ಭ್ರಷ್ಟರ ವಿರುದ್ಧ ಕ್ರಮ ಜರುಗಿಸುತ್ತದೆ ಎಂದು ಅವರು ನುಡಿದಿದ್ದಾರೆ.

Post Card Balaga:
Related Post