X

ಮೈಸೂರು ಅರಮನೆಗೆ ಅವಮಾನ ಮಾಡಿದ ಕಾಂಗ್ರೆಸ್ ಅಧ್ಯಕ್ಷ!! ಮೋದಿಗಿರುವ ಕನಿಷ್ಟ ಜ್ಞಾನ ಗಾಂಧಿಗೆ ಬೇಡವೇ?

ಮೈಸೂರು ಅರಮನೆ ಎಂದರೆ ಅದು ವಿಶ್ವದ ಪ್ರಸಿದ್ಧ ತಾಣವಾಗಿದೆ. ಜಗತ್ತಿನ ಅತಿ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ನಮ್ಮ ಮೈಸೂರು ಅರಮನೆ ಅಗ್ರಗಣ್ಯ ಸ್ಥಾನದಲ್ಲಿದೆ. ಮೈಸೂರು ಅರಮನೆಯ ಅರಸರ ಇತಿಹಾಸವೂ ತುಂಬಾನೆ ಅದ್ಭುತವಾಗಿದೆ. ರಾಜ್ಯವನ್ನು ಆಳಿದ ಅವರ ಆಡಳಿತ ಇನ್ನೂ ಅಚ್ಚಳಿಯದೆ ಉಳಿದಿದೆ. ಮೈಸೂರು ರಾಜ್ಯವಿದ್ದ ಸಂದರ್ಭದಲ್ಲಿ ಮೈಸೂರು ಒಡೆಯರ ಆಡಳಿತವು ರಾಜ್ಯದಲ್ಲಿ ಶ್ರೀಮಂತಿಕೆಯನ್ನು ಬಿಂಬಿಸಿತ್ತು. ಇತಿಹಾಸ ಪ್ರಸಿದ್ದ ಕೃಷ್ಣರಾಜ ಸಾಗರ ಡ್ಯಾಂ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು ಮೈಸೂರು ಅರಸರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಿಗಳು ಕೂಡಾ ಮೈಸೂರು ಸಂಸ್ಥಾನದ ಸಾಧನೆಗಳನ್ನು ಹಾಡಿ ಹೊಗಳುತ್ತಾರೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದಿಂದ ಈ ಮನೆತನಕ್ಕೆ ಭಾರೀ ಅವಮಾನ ಉಂಟಾಗುತ್ತಿದೆ. ಅದು ಮುಖ್ಯಮಂತ್ರಿಗಳಿಂದ ಆರಂಭವಾಗಿ ಇದೀಗ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರೆಗೂ ತಲುಪಿದೆ.

ಮೈಸೂರು ಪೇಟವನ್ನು ತಳ್ಳಿದ ರಾಹುಲ್..!

ಇತ್ತೀಚೆಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣಾ ನಿಮಿತ್ತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಹಿಂದೂಗಳ ಓಲೈಕೆಗಾಗಿ ಟೆಂಪಲ್ ರನ್ ಬಹಳ ಜೋರಾಗಿಯೇ ನಡೆದಿತ್ತು. ಮೈಸೂರಿಗೆ ಕಾಂಗ್ರೆಸ್ ಮಹರಾಜ ಭೇಟಿ ನೀಡಿದ ವೇಳೆ ಅವರು ಪ್ರವೇಶಿಸುತ್ತಲೇ ಮೈಸೂರು ಪೇಟವನ್ನು ತೊಡಿಸಲು ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ಮುಂದಾಗುತ್ತಾರೆ. ಪ್ರತಿ ಬಾರಿಯೂ ಮೈಸೂರಿಗೆ ಗಣ್ಯರು ಭೇಟಿ ನೀಡಿದಾಗ ಮೈಸೂರು ಪೇಟವನ್ನು ತೊಡಿಸಿ ಸನ್ಮಾನ ಮಾಡುವುದು ಇಲ್ಲಿನ ವಾಡಿಕೆ.

ಆದರೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರು ಮಾಡಿದ್ದೇ ಬೇರೆ. ತನಗೆ ಮೈಸೂರಿನ ಪೇಟವನ್ನು ತೊಡಿಸಲು ಬಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಲ್ಲದೆ ಮೈಸೂರು ಒಡೆಯರ ಗೌರವಭರಿತ ಪೇಟವನ್ನೂ ತಳ್ಳಿ ಅವಮಾನ ಮಾಡಿದ್ದಾರೆ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಪೇಟ ತೊಡಸಲು ಬಂದಾವಾಗ ರಾಹುಲ್ ಗಾಂಧಿ ಆ ಪೇಟವನ್ನು ದೂರ ತಳ್ಳಿ ಕೇವಲ ಮೈಸೂರಿಗೆ ಮಾತ್ರವಲ್ಲದೆ ಇಡಿಯ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ.

ಇಂದು ಮೈಸೂರು ಪೇಟವನ್ನು ಕೇವಲ ಮೈಸೂರು ಭಾಗದ ಜನತೆ ಮಾತ್ರವೇ ಉಪಯೋಗಿಸದೆ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಈ ಪೇಟವನ್ನು ಉಪಯೋಗಿಸುತ್ತಾರೆ. ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ಮೈಸೂರು ಪೇಟವೆಂದರೆ ಭಾರೀ ಫೇಮಸ್. ಆದರೆ ನಮ್ಮ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಲ್ಲಿರುವ ರಾಹುಲ್ ಗಾಂಧಿಗೆ ಮಾತ್ರ ಇದರ ಪರಿವೇ ಇಲ್ಲ. ಹೋದಲ್ಲೆಲ್ಲಾ ಕರ್ನಾಟಕದ ಜನತೆಯನ್ನು ಮೋಸಗೊಳಿಸಲು ಕನ್ನಡ ಭಾಷೆ ಮಾತನಾಡಲು ಹೋಗಿ ಕನ್ನಡಕ್ಕೇ ಅವಮಾನ ಮಾಡುವ ಈ ರಾಹುಲ್ ಗಾಂಧಿ ಇದೀಗ ಕರುನಾಡಿನ ಹೆಮ್ಮೆಯ ಮನೆತನ ಮೈಸೂರು ಒಡೆಯರ ಪೇಟವನ್ನೇ ಕಡೆಗಣಿಸಿ ಅವಮಾನ ಮಡಿದ್ದಾರೆ.

ವಿಶೇಷ ಸ್ಥಾನಮಾನ ಅರಮನೆ ಚಾಮುಂಡಿ ಬೆಟ್ಟ ದಸರಾ ಇಂತಹ ಹತ್ತು ಹಲವು ಖ್ಯಾತಿ ಗಳೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಪೇಟದ ಮಹತ್ವವೂ ಇದೆ . ಮೈಸೂರು ಸಂಸ್ಥಾನದಲ್ಲಿ ಮಹಾರಾಜ ರಾಜಿಯಾಗಿ ಎಲ್ಲರೂ ಪೇಟಾ ಧರಿಸುತ್ತಿದ್ದ ದ್ದು ಗೊತ್ತೇ ಇದೆ . ಹೊರಗಿನಿಂದ ಸಾಂಸ್ಕೃತಿಕ ಮೈಸೂರಿಗೆ ಯಾರೇ ಆಗಮಿಸಲು ಅವರಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಗೌರವಿಸುವುದು ಪ್ರತೀತಿ.

ಅತಿಥಿಗಳ ಸನ್ಮಾನ ಸಂದರ್ಭದಲ್ಲಿಯೂ ಈ ಪೇಟವನ್ನು ತರಿಸುವುದು ಹೆಚ್ಚು ಗೌರವ ಸಲ್ಲಿಸಿದಂತೆ ಮೈಸೂರಿನಲ್ಲಿ ಮಾತ್ರ ಇದ್ದ ಈ ನಂಬಿಕೆ ಈಗ ರಾಜ್ಯ ಸರ್ಕಾರಕ್ಕೂ ವಿಸ್ತರಣೆಗೊಂಡಿದೆ ರಾಜ್ಯ ಸರ್ಕಾರ ಕೂಡ ಪ್ರಶಸ್ತಿ ಗೌರವವನ್ನು ನೀಡುವ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸುತ್ತಾರೆ, ಇದು ಮೈಸೂರು ಪೇಟಕ್ಕೆ ನೀಡುವ ಗೌರವ. ಈ ಭಾಗದಲ್ಲಿ ಮದುವೆ ನಡೆಯುವ ಸಂದರ್ಭದಲ್ಲಿಯೂ ಮೈಸೂರು ಪೇಟವನ್ನು ಮಧು ಮಗನಿಗೆ ತೊಡಿಸುವುದು ವಾಡಿಕೆಯಾಗಿದೆ . ಇನ್ನು ನಮ್ಮ ಮೈಸೂರಿನ ಪೇಟ ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲಿಯೂ ಸಹ ರಾರಾಜಿಸುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.

ಮೋದಿಯೂ ತೊಟ್ಟಿದ್ದರು ಮೈಸೂರು ಪೇಟಾ.!

ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡಾ ಕರ್ನಾಟಕಕ್ಕೆ ಬಂದಾವಾಗ ಮೈಸೂರು ಪೇಟವನ್ನು ಧರಿಸುತ್ತಾರೆ. ಮಾತ್ರವಲ್ಲದೆ ಈ ಹಿಂದೆ ಮೈಸೂರಿಗೆ ಬಂದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರು ಪೇಟದ ಬಗ್ಗೆ ಭಾರೀ ಪ್ರಸಂಶೆಯನ್ನು ವ್ಯಕ್ತಪಡಿಸಿದ್ದರು. ಕರುನಾಡಿನ ಹೆಮ್ಮೆಯ ಪ್ರತೀಕ ಮೈಸೂರು ಪೇಟ ಎಂದು ಬಣ್ಣಿಸಿದ್ದರು.

ಮಾತ್ರವಲ್ಲದೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹಿತ ಗಣ್ಯಾತಿ ಗಣ್ಯರು ಮೈಸೂರು ಪೇಟವನ್ನು ತೊಡಿಸಿಕೊಳ್ಳುತ್ತಾರೆ. ಈ ಮೂಲಕ ಕರ್ನಾಟಕದ ಗೌರವದ ಪ್ರತೀಕವಾದ ಮೈಸೂರು ಪೇಟವನ್ನು ತೊಟ್ಟುಕೊಂಡು ಗೌರವಿಸಿದ್ದರು.

ಸಿದ್ದುವಿಂದಲೂ ಭಾರೀ ಅವಮಾನ?

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಮೈಸೂರು ಅರಮನೆಗೆ ಅವಮಾನ ಈಗ ಹಳೆಯ ವಿಚಾರ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಅರಸರನ್ನು ಏಕವಚನದಲ್ಲಿ ನಿಂದಿಸಿ ಅವಮಾನ ಮಾಡಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಕಾಂಗ್ರೆಸ್‍ನ ಜನಾಶಿರ್ವಾದ ಯಾತ್ರೆಯಲ್ಲಿ ಮೈಸೂರು ಅರಸರು ಏನೂ ಮಾಡಿಲ್ಲ, ನಮ್ಮ ಸರ್ಕಾರ ಅವರಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಿದೆ ಎಂದು ಅಬ್ಬರಿಸಿದ್ದರು. ಇದು ಸ್ವತಃ ಮೈಸೂರು ಅರಮನೆಯ ಅರಸ ಯದುವೀರ್ ದತ್ತ ಒಡೆಯರ್ ಹಾಗೂ ಅವರ ಮಾತೆ ಪ್ರಮೋದಾ ದೇವಿಯ ಕೆಂಗಣ್ಣಿಗೂ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ರಾಜ ಮನೆತನದವರು ತೀವ್ರ ವಾಗ್ದಾಳಿ ನಡೆಸಿದ್ದರು.

ಒಟ್ಟಾರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರ ನಂತರ ಇದೀಗ ಅವರದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೈಸೂರು ಅರಮನೆಗೆ ಅವಮಾನ ಮಾಡಿದ್ದು ರಾಜ್ಯದ ಜನತೆಯ ಅದರಲ್ಲೂ ಮೈಸೂರಿನ ಜನತೆಯ ಕೆಂಗಣ್ಣಿಗೆ ಕಾರಣವಾಗಿದ್ದಾರೆ. ಮೈಸೂರು ಪೇಟವೆಂಬ ಕಿಂಚಿತ್ತೂ ಜ್ಞಾನವಿಲ್ಲದೆ ಅದನ್ನು ತಳ್ಳಿಬಿಟ್ಟಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿನ ಸೋಲಿನ ಸೂಚನೆ ಅಲ್ಲದೆ ಮತ್ತೇನೂ ಅಲ್ಲ ಎಂದು ಮೈಸೂರಿನ ಜನತೆ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು ಕಾಂಗ್ರೆಸ್‍ಗೆ ಭಾರೀ ಮುಜುಗರವುಂಟಾಗಿದೆ.

-ಸುನಿಲ್ ಪಣಪಿಲ

Editor Postcard Kannada:
Related Post