X

ಅಧಿಕಾರದ ಅವಧಿಯಲ್ಲಿ ಜನತೆಯನ್ನು ಕತ್ತಲಲ್ಲಿ ಇಟ್ಟವರಿಂದ ಉಚಿತ ಭಾಗ್ಯ: ಮರೆಯಲು ಸಾಧ್ಯವೇ ಅಂದಿನ‌ ಕತ್ತಲ ದಿನ!

ಅಂದ ಹಾಗೆ ಡಿ ಕೆ ಶಿವಕುಮಾರ್ ಮತ್ತು ತಂಡದ ಕಾಂಗ್ರೆಸ್ ಪಕ್ಷದ ಬಣ್ಣದ ಮಾತಿಗೆ ಎಲ್ಲಾದರೂ ಮರುಳಾದಿರೋ… ಉಚಿತ ಭಾಗ್ಯಗಳ ಜೊತೆಗೆ ಜೈಲೂಟದ ರುಚಿ ನೋಡುವ ಭಾಗ್ಯ ಕೂಡಾ ನಿಮ್ಮ ಪಾಲಿಗೆ ಬಂದೊದಗಬಹುದು‌. ಈ ಎಚ್ಚರ ನಿಮ್ಮೊಳಗಿರಲಿ ಕರ್ನಾಟಕದ ಜನರೆ.

ಕಾಂಗ್ರೆಸ್ ಪಕ್ಷ ನೀಡುವ ಉಚಿತ ಭಾಗ್ಯಕ್ಕೂ, ಜೈಲಿನಲ್ಲಿ ಮುದ್ದೆ ಮುರಿಯುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ..? ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ‌ಯನ್ನು ನೆನಪಿಸಿಕೊಳ್ಳಿ. ಇದು ಯಾಕೆ ಜೈಲೂಟ ಉಣ್ಣುವುದಕ್ಕೂ ಸಿದ್ಧರಿರಬೇಕು ಎನ್ನುವುದಕ್ಕೆ ಉತ್ತರ ನೀಡುತ್ತದೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದಕ್ಷಿಣ ಕನ್ನಡದಲ್ಲಿ ವಿಪರೀತ ವಿದ್ಯುತ್ ವ್ಯತ್ಯಯ ಸಮಸ್ಯೆ ಇದ್ದಿದ್ದನ್ನು ನೆನಪಿಸಿಕೊಳ್ಳಿ. ಆಗ ಪವರ್ ಮಿನಿಸ್ಟರ್ ಆಗಿದ್ದವರು ಕಾಂಗ್ರೆಸ್ ಪಕ್ಷದ ಡಿ ಕೆ ಶಿವಕುಮಾರ್. ಸುಳ್ಯ ಸಮೀಪದ ವ್ಯಕ್ತಿಯೊಬ್ಬರು ಡಿ ಕೆ ಶಿವಕುಮಾರ್ ಅವರಿಗೆ ತಮ್ಮೂರಿನಲ್ಲಾಗುತ್ತಿದ್ದ ವಿದ್ಯುತ್ ವ್ಯತ್ಯಯ ಸಮಸ್ಯೆಯನ್ನು ಪರಿಹರಿಸಿ ಕೊಡಿ ಎಂದು ಮನವಿ ಮಾಡುತ್ತಾರೆ. ಆದರೆ ಆ ವ್ಯಕ್ತಿಯ ದೂರನ್ನು ಆಲಿಸಿ, ಅವರ ಸಮಸ್ಯೆ ಬಗೆಹರಿಸಬೇಕಾಗಿದ್ದ ಡಿ ಕೆ ಶಿ ಅನ್ನೋ ಪವರ್ ಮಿನಿಸ್ಟರ್, ತಮ್ಮ ಪವರ್ ಅನ್ನು ಆ ಬಡಪಾಯಿ ವ್ಯಕ್ತಿಯ ಮೇಲೆ ತೀರಿಸ್ತಾರೆ. ಆ ನಿರಪರಾಧಿ ವ್ಯಕ್ತಿಯ ಮೇಲೆ ಪೊಲೀಸರನ್ನು ಛೂ ಬಿಟ್ಟು ದೌರ್ಜನ್ಯ ಮಾಡಿಸ್ತಾರೆ. ಇಲ್ಲ ಸಲ್ಲದ ಕೇಸ್ ಜಡಿದು ಆ ವ್ಯಕ್ತಿಗೆ ಶಾಕ್ ಮೇಲೆ ಶಾಕ್ ಕೊಡ್ತಾರೆ. ಒಟ್ಟಿನಲ್ಲಿ ಕರೆಂಟ್ ಶಾಕ್‌ನಲ್ಲಿದ್ದ ನಮ್ಮದೇ ರಾಜ್ಯದ ಒಬ್ಬ ಸಾಮಾನ್ಯ ವ್ಯಕ್ತಿ ತಮ್ಮ ಊರಿನ ಕರೆಂಟ್ ಸಮಸ್ಯೆ ಬಗೆಹರಿಸಿ ಅಂದಿದ್ದಕ್ಕೆ, ಅವರನ್ನು ಲಾಕಪ್ ವರೆಗೆ ಎಳೆದುಕೊಂಡು ಹೋಗುವ ಕೆಲಸವನ್ನು ಇದೇ ನಾಲಾಯಕು ಡಿಕೆಶಿ ಮಾಡಿದ ಘಟನೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ಈಗ ನಿಮಗೆ ಡಿಕೆಶಿಯ ಉಚಿತ ಭಾಗ್ಯ ಅದರಲ್ಲೂ ಉಚಿತ ವಿದ್ಯುತ್ ಭಾಗ್ಯವನ್ನು ನಂಬಬಹುದೇ? ಎಂದು. ಹಾಗೆಯೇ ಅಧಿಕಾರ ಇಲ್ಲದಾಗ ಉಚಿತ ಭಾಗ್ಯ ಘೋಷಿಸಿ, ಅಧಿಕಾರ ಸಿಕ್ರೆ ನಮ್ಮ ರಾಜ್ಯವನ್ನೇ ಕಾಂಗ್ರೆಸ್ ಪಕ್ಷದ ಕಳ್ಳರು ಮುಕ್ಕಿ ತಿನ್ನಲಿಕ್ಕಿಲ್ಲವೇ ಎಂದು.

ಹಾಗೆಯೇ ಉಗ್ರರನ್ನೆಲ್ಲಾ ಸಹೋದರರು ಎನ್ನುವ ಕಾಂಗ್ರೆಸ್ ನಾಯಕರಿಗೆ ಅಧಿಕಾರ ಸಿಕ್ಕರೆ ನಮ್ಮಂತಹ ಸಾಮಾನ್ಯ ಜನರು ನೆಮ್ಮದಿಯಿಂದ ಜೀವನ ನಡೆಸುವುದು ಸಾಧ್ಯವೇ..? ಹಿಂದೂ ವಿರೋಧಿ ನಡೆ ಗಳ ಮೂಲಕವೇ ಮನೆ ಮಾತಾ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಹಿಂದೂಗಳಿಗೆ ನ್ಯಾಯ ಮರೀಚಿಕೆಯಾಗದೆ? ಹಿಂದೂಗಳು ತಲೆ ಎತ್ತಿಕೊಂಡು ಓಡಾಡುವುದು ಸಾಧ್ಯವೇ ಎಂಬುದನ್ನೊಮ್ಮೆ ಯೋಚಿಸಿ.

ಇಂತಹ ಕಟುಕರಿಗೆ ರಾಜ್ಯದ ಆಡಳಿತ ಚುಕ್ಕಾಣಿ ದೊಕೆಯದಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಮನಗಂಡು, ಕಾಂಗ್ರೆಸ್ ಪಕ್ಷವನ್ನು ಹೇಳ ಹೆಸರಿಲ್ಲದಂತೆ ಮಾಯವಾಗಿಸುವತ್ತ ಪಣ ತೊಡೋಣ. ಕರ್ನಾಟಕದ ಜೊತೆಗೆ ಭಾರತ ಬಿಕರಿಯಾಗುವುದನ್ನು ತಡೆಯೋಣ.

Post Card Balaga:
Related Post