X

ಉತ್ತಮ ಜೀವನ‌ ನಡೆಸಲು ಹಿಂದೂ ಧರ್ಮವೊಂದೇ ದಾರಿ: ಒಪ್ಪಿಕೊಂಡ ಅಮೇರಿಕಾದ ಪ್ರೊಫೆಸರ್!


ಹಿಂದೂ ಧರ್ಮದಲ್ಲಿ ಹುಟ್ಟಿ, ಮಾತೃ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡೋ ಅದೆಷ್ಟೋ ನಾಲಾಯಕ್ ಲದ್ದಿ ಜೀವಿಗಳು ನಮ್ಮ ನಡುವೆ ಇದ್ದಾರೆ. ಆದರೆ ವಿದೇಶದಲ್ಲಿ ಹುಟ್ಟಿ ಹಿಂದೂ ಧರ್ಮವೇ ಜಗತ್ತಿನ ಶ್ರೇಷ್ಠ ಧರ್ಮ ಎನ್ನುವ ಯಾವುದೇ ಆಮಿಷ, ಬಲವಂತ ಇಲ್ಲದೆಯೇ ಸ್ವ ಇಚ್ಚೆಯಿಂದ ಹಿಂದೂ ಧರ್ಮವನ್ನು ಒಪ್ಪಿಕೊಂಡು, ಹಿಂದೂ ಧರ್ಮವನ್ನು ಸ್ವೀಕರಿಸುವ, ಹಿಂದೂ ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳುವವರೂ ಅನೇಕರಿದ್ದಾರೆ.

ಖ್ಯಾತ ಅಮೆರಿಕನ್ ಪ್ರೊಫೆಸರ್ ಬ್ರೈನ್ ಕೆ. ಪೆನಿಂಗ್ಟನ್ ಅವರು ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದು, ‘ಜಗತ್ತಿನಲ್ಲಿ ಹಿಂದೂ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಯಾವುದೂ ಇಲ್ಲ. ಕಳೆದ ಎರಡೂವರೆ ದಶಕಗಳಿಂದ ನಾನು ಹಿಂದೂ ಧರ್ಮವನ್ನು ಓದಿದ್ದೇನೆ ಮತ್ತು ತಿಳಿದುಕೊಂಡಿದ್ದೇನೆ. ಜೀವನ ನಡೆಸಲು ಹಿಂದುತ್ವಕ್ಕಿಂತ ಉತ್ತಮ ವ್ಯವಸ್ಥೆ ಬೇರೊಂದಿಲ್ಲ ಎಂಬುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದಾರೆ. ಮಾನವನ ನಾಗರೀಕತೆಯ ಅಭಿವೃದ್ಧಿ ಕ್ರಮವಿರುವುದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಎಂದು ಅವರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.

ಹಿಂದುತ್ವ ಜೀವನ ಮಾರ್ಗ ಎಂಬ ತತ್ವವನ್ನು ತಾವು ಒರ್ರುವುದಾಗಿಯೂ ಅವರು ತಿಳಿಸಿದ್ದಾರೆ. ನನಗೆ ಹಿಂದುತ್ವ ಮುಖ್ಯ. ನಾನು ಹಿಂದೂ ಧರ್ಮದ ಬಗ್ಗೆ ಸಂಶೋಧನೆ ನಡೆಸುತ್ತಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ. ೫೬ ವರ್ಷದ ಬ್ರೈನ್ ಅವರು ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಈ ವರೆಗೆ ೩ ಪುಸ್ತಕಗಳನ್ನು ಬರೆದಿದ್ದಾರೆ. ಹಿಂದೂ ಧರ್ಮದ ಬಗ್ಗೆ ಸಂಶೋಧನೆ ನಡೆಸುವ ಸಲುವಾಗಿ ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ೧೮೮೩ ರಿಂದ ಹಿಂದುತ್ವದ ಬಗೆಗಿನ ಸಂಶೋಧನೆಗಾಗಿ ಅವರು ಭಾರತಕ್ಕೆ ಬಂದಿದ್ದಾರೆ. ‘ವಾಸ್ ಹಿಂದೂಯಿಸಂ ಈಸ್ ಇನ್ವೆಂಟೆಡ್, ರೀಡಿಂಗ್ ರಿಲೀಜನ್ ಆ್ಯಂಡ್ ವಾಯ್ಲೇಷನ್, ರಿಚ್ ಇನ್ನೋವೇಷನ್’ ಅವರ ಮೂರು ಪುಸ್ತಕಗಳಾಗಿವೆ.

ಇವರು ತಮ್ಮ ೧೬ ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಭಗವದ್ಗೀತಾ ಓದಿದ್ದು, ಆ ಬಳಿಕ ಇವರಲ್ಲಿ ಹಿಂದೂ ಧರ್ಮದ ಬಗೆಗಿನ ಆಸಕ್ತಿ ಜಾಗೃತವಾಗುತ್ತದೆ. ಆ ಬಳಿಕ ಹಿಂದೂ ಧಾರ್ಮಿಕ ಕೃತಿಗಳು, ಮಹಾನ್ ವ್ಯಕ್ತಿ ಶಕ್ತಿಗಳ ಬಗೆಗೂ ಇವರು ತಿಳಿಯುವ ಪ್ರಯತ್ನ ನಡೆಸಿದ್ದಾರೆ. ಮಹಾಭಾರತದ ಪಾತ್ರಗಳಿಂದ ತಾವು ಪ್ಭಾವಿತರಾಗಿರುವುದಾಗಿಯೂ ಅವರು ತಿಳಿಸಿದ್ದಾರೆ. ರಾಮಾಯಣವನ್ನು ಅರಿತುಕೊಳ್ಳುವುದು ಬಹಳ ಸುಲಭ ಎಂಬುದು ಶ್ರೀಯುತರು ಮಾತು. ಸಕಾರಾತ್ಮಕ ಬದುಕನ್ನು ರೂಪಿಸುವಲ್ಲಿಯೂ ಹಿಂದೂ ಧರ್ಮ ಶ್ರೇಷ್ಠ ಎಂಬುದು ಅವರ ಅಭಿಪ್ರಾಯ.

ನಮ್ಮಲ್ಲೇ ಹುಟ್ಟಿದ ಕೆಲವು ಕಲಬೆರಕೆಗಳಿಗೆ ಹಿಂದೂ ಧರ್ಮದ ಮಹತ್ವ ಇನ್ನೂ ಅರಿವಾಗಿಲ್ಲ. ಹಿಂದೂಗಳಾಗಿ ಹುಟ್ಟಿದ ಕೆಲವು ಜನರಿಗೂ ಹಿಂದೂ ಧರ್ಮವನ್ನು ಹೀಗಳೆಯುವುದೇ ಕಾಯಕವಾಗಿದೆ. ಹಿಂದುತ್ವವನ್ನು ದೂಷಿಸುವುದರಲ್ಲೇ ಗಂಜಿ ಹುಟ್ಟಿಸಿಕೊಂಡು, ಬದುಕುವ ಗಿರಾಕಿಗಳಿಗೂ ನಮ್ಮಲ್ಲೇನೂ ಕಡಿಮೆ ಇಲ್ಲ. ಅಂತಹ ನಾಮರ್ಧರು ವಿದೇಶದಲ್ಲಿ ಹುಟ್ಟಿದರೂ ಹಿಂದೂ ಧರ್ಮವನ್ನು ಪೂಜಿಸುವ ಇಂತಹ ಮಹಾತ್ಮರ ಕಾಲ ಧೂಳಿಗೂ ಸಮರಲ್ಲ ಎನ್ನುವುದು ನಿರ್ವಿವಾದ.

Post Card Balaga:
Related Post