X

ವೈಷ್ಣೋದೇವಿ ಯಾತ್ರೆಗೆ ತೆರಳಿ ಭೂಕುಸಿತಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಯಾತ್ರಿಕರನ್ನು ರಕ್ಷಿಸುತ್ತಾ ಪ್ರಾಣಾರ್ಪಣೆ ಮಾಡಿದ ಸಿಆರ್‍ಪಿಎಫ್ ಯೋಧ!! ಗೌರವ ಸಲ್ಲಿಸುತ್ತಾ ಪ್ರಧಾನ ಮಂತ್ರಿ ಪೊಲೀಸ್ ಮೆಡಲ್ ನೀಡಿದ ಕೇಂದ್ರ ಸರ್ಕಾರ!!

ಇಂದು ನಾವು ಇಷ್ಟು ಚೆನ್ನಾಗಿ ಜೀವನ ನಡೆಸುತ್ತೀದ್ದೇವೆ ಎಂದರೆ ಅದಕ್ಕೆ ಕಾರಣ ಗಡಿಯಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಕಾಯುತ್ತಿರುವ ನಮ್ಮ ಯೋಧರೇ ಕಾರಣ!! ಭಾರತೀಯ ಸೈನಿಕರು ಯಾರನ್ನೂ ಕೆದಕಲು ಹೋಗೋರಲ್ಲ ಕೆದಕಿದರೆ ತನ್ನ ಪ್ರಾಣವನ್ನು ಲೆಕ್ಕಿಸದೆ ದೇಶ ರಕ್ಷಣೆಗೆ ಧಾವಿಸಿ ಬರುತ್ತಾರೆ!! ಹೀಗೆ ಈ ದೇಶಕ್ಕಾಗಿ ಪ್ರಣಾತ್ಯಾಗ ಮಾಡಿದವರ ಒಬ್ಬೊಬ್ಬರ ಕಥೆಯೂ ಕಣ್ಣೀರು ತರುತ್ತದೆ!! ಅಂತಹ ಶೌರ್ಯ ಹಾಗೂ ತ್ಯಾಗವನ್ನು ನಮ್ಮ ಸರಕಾರ ಸ್ಮರಿಸುತ್ತದೆ ಮತ್ತು ಆ ಸೈನಿಕರಿಗೆ ಗೌರವ ಕೊಡುತ್ತದೆ!!

ಹರ್ವಿಂದ್ ಸಿಂಗ್‍ಗೆ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಪೊಲೀಸ್ ಪದಕ!!

2016ರ ವೈಷ್ಣೋದೇವಿ ಯಾತ್ರೆ ವೇಳೆ ಸಂಭವಿಸಿದ ಭೂಕುಸಿತ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಯಾತ್ರಿಕರನ್ನು ರಕ್ಷಣೆ ಮಾಡಿದ್ದ ಯೋಧ ಹರ್ವಿಂದರ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಪ್ರಧಾನಮಂತ್ರಿ ಪದಕ ಪ್ರದಾನ ಮಾಡುವ ಮೂಲಕ ಗೌರವಿಸಿದೆ.  ಯೋಧ ಹರ್ವಿಂದರ್ ಸಿಂಗ್ ಅವರಿಗೆ ಮರಣೋತ್ತರ ಪ್ರಧಾನಮಂತ್ರಿ ಪದಕ ಪ್ರದಾನ ಮಾಡಿರುವ ಕುರಿತಂತೆ ಅರೆಸೇನಾ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸೈನಿಕರ ತ್ಯಾಗ ಹಾಗೂ ಅವರ ಶೌರ್ಯ ಪ್ರಶಂಸಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು ಕಳೆದ ವರ್ಷ ವೈಷ್ಣವಿದೇವಿ ಯಾತ್ರೆಗೆ ತೆರಳಿ ಭೂಕುಸಿತಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಯಾತ್ರಿಕರನ್ನು  ರಕ್ಷಿಸಿ ತನ್ನ ಪ್ರಣಾವನ್ನೇ ಬಿಟ್ಟ ಸಿಆರ್‍ಪಿಎಫ್ ಯೋಧನಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಪೊಲೀಸ್ ಪದಕ ಪ್ರಧಾನ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದೆ!!

ಜನರ ರಕ್ಷಣೆಗೆ ಧಾವಿಸಿ ಹುತಾತ್ಮನಾದ ಹರ್ವಿಂದ್ ಸಿಂಗ್!!

ಸಿಆರ್‍ಪಿಎಫ್ ಮುಖ್ಯ ಪೇದೆಯಾಗಿದ್ದ ಹರ್ವಿಂದರ್ ಸಿಂಗ್ ಅವರು ಪ್ರಾಣದ ಹಂಗು ತೊರೆದು 2016ರಲ್ಲಿ ವೈಷ್ಣೋದೇವಿ ಪ್ರದೇಶದಲ್ಲಿ ಸಂಭವಿಸಿದ್ದ ಭೂಕುಸಿತ ಸಂದರ್ಭದಲ್ಲಿ ಹಲವಾರು ಯಾತ್ರಿಕರ ಜೀವವನ್ನು ರಕ್ಷಣೆ ಮಾಡಿದ್ದರು.  ಪ್ರತಿ ನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುವ ವೈಷ್ಣೇ ದೇವಿ ದೇಗುಲದಲ್ಲಿ ಭದ್ರತೆಗಾಗಿ ಸಿಆರ್‍ಪಿಎಫ್ ಹರ್ವಿಂದರ್ ಸಿಂಗ್ ಅವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಕೆಲ ಮಹಿಳೆ ಮತ್ತು ಮಕ್ಕಳು ಭೂಕುಸಿತದಿಂದ ಕಲ್ಲು ಮಣ್ಣುಗಳಲ್ಲಿ ಸಿಲುಕಿರುವುದನ್ನು ಕಂಡ ಸಿಂಗ್ ಅವರು ರಕ್ಷಣೆಗೆ ಧಾವಿಸಿದ್ದರು. ಕಾರ್ಯಾಚರಣೆ ವೇಳೆ ಬಂಡೆಯೊಂದು ಸಿಂಗ್ ಅವರ ತಲೆಗೆ ಅಪ್ಪಳಿಸಿ ಸಿಂಗ್ ಅವರು ಹುತಾತ್ಮರಾಗಿದ್ದರು. ಘಟನೆಯಲ್ಲಿ ವೀರ ಹಾಗೂ ಸ್ವತ್ಯಾಗ ಮೆರೆದ ಯೋಧನಿಗೆ ಇದೀಗ ಸರ್ಕಾರ ಗೌರವಿಸಿದೆ. ಇಲ್ಲಿ ಜಮ್ಮುವಿನ ರೇಸಿ ಜಿಲ್ಲೆಯ ಟ್ರಿಕುಟಾ ಬೆಟ್ಟಗಳಲ್ಲಿ ಉಗ್ರರು ಮತ್ತು ವಿಧ್ವಸಂಕ ಬೆದರಿಕೆಗಳ ವಿರುದ್ಧ ಗುಹೆ ದೇವಾಲಗಳನ್ನು ರಕ್ಷಣೆ ಮಾಡಲು ಸಿಆರ್‍ಪಿಎಫ್ ಪಡೆಗಳು ಕಾರ್ಯನಿರ್ವಹಿಸುತ್ತವೆ.

ಹೀಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಭಾರತದ ದೇಶ ಮತ್ತು ಜನರ ರಕ್ಷಣೆಗಾಗಿ ಧಾವಿಸುವ ಸೈನಿಕರಿಗೆ ಮೋದೀಜೀ ಸರಕಾರ ಹಲವಾರು ಸವಲತ್ತುಗಳನ್ನು ಕೂಡಾ ನೀಡುತ್ತಾ ಬಂದಿದ್ದಾರೆ!! ಈಗಾಗಲೇ ಕೇಂದ್ರ ಸರಕಾರವು ಸೈನಿಕರ ಕುಟುಂಬಗಳಿಗೆ ಪೂರ್ಣ ಪಿಂಚಣಿ ಸೌಲಭ್ಯ ನೀಡುತ್ತದೆಯಲ್ಲದೇ ಈ ಮೂಲಕ ಭಾರತ ಚೀನಾ ಗಡಿಯಲ್ಲಿ ಭದ್ರತೆ ಹೆಚ್ಚಳದ ಜತೆಗೆ, ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಈ ಯೋಜನೆಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ ಈ ಹಿಂದೆ ಸೈನಿಕರ ಕುಟುಂಬಗಳಿಗೆ ಶೇಕಡಾ 30 ರಷ್ಟು ಪಿಂಚಣಿ ಸೌಲಭ್ಯ ಮಾತ್ರ ನೀಡಲಾಗುತ್ತಿದ್ದು, ಆದರೆ ಇದೀಗ ಶೇಕಡಾ 100 ರಷ್ಟು ಏರಿಸಿದ್ದೇ ಸೈನಿಕರಲ್ಲಿ ಸಂತಸ ಮೂಡಲು ಕಾರಣವಾಗಿದೆ!!

ಅದಲ್ಲದೆ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದರೆ, ತೀವ್ರ ಗಾಯಗೊಂಡ, ನಾಪತ್ತೆಯಾಗಿರುವ ಯೋಧರ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವ ಹೊಣೆಯನ್ನು ಕೂಡಾ ಕೇಂದ್ರ ಸರಕಾರ ಹೊತ್ತುಕೊಂಡಿದೆ!! ಅಷ್ಟೇ ಅಲ್ಲದೇ ಈ ಹಿಂದೆ ನಿಗದಿ ಪಡಿಸಲಾಗಿದ್ದ ಮಾಸಿಕ 10 ಸಾವಿರ ರೂಪಾಯಿ ಶೈಕ್ಷಣಿಕ ವಿನಾಯಿತಿ ಮಿತಿಯನ್ನು ತೆರವುಗೊಳಿಸಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿ ಸೈನಿಕರಿಗೆ ಹಾಗೂ ಸೈನಿಕರ ಕುಟುಂಬಕ್ಕೆ ಸಂತಸ ಮನೆ ಮಾಡುವಂತೆ ಮಾಡಿದೆ!! ಹೀಗೆ ಮೋದೀಜೀ ಸರಕಾರ ದೇಶ ರಕ್ಷಣೆ ಮಾಡುವ ಯೋಧರಿಗೆ ಅನೇಕ ಸೌಲಭ್ಯಗಳನ್ನು ನೀಡುವುದಲ್ಲದೆ ಹುತಾತ್ಮರಾದ ಸೈನಕರಿಗೆ ಗೌರವವನ್ನೂ ಸಲ್ಲಿಸುತ್ತಾರೆ!!

  • ಪವಿತ್ರ

 

Editor Postcard Kannada:
Related Post