X

ಸಿಎಂಗೆ ಕೈಕೊಟ್ಟ ಇಬ್ಬರು ಸಚಿವರು.! ಯಾರ ಸಂಪರ್ಕಕ್ಕೂ ಸಿಗದ ಸಚಿವರಿಂದ ರಾಜೀನಾಮೆಗೆ ಸಿದ್ಧತೆ..?!

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ದಿನದಿಂದಲೂ ಒಂದಲ್ಲಾ ಒಂದು ಅಡೆತಡಗಳು ಉಂಟಾಗುತ್ತಲೇ ಇದೆ. ಒಂದೆಡೆ ಮೈತ್ರಿ ಸರಕಾರ ಮುಂದುವರಿಸಲು ಶಾಸಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮತ್ತೊಂದೆಡೆ ಸಚಿವ ಸ್ಥಾನ ನೀಡಿದರೂ ಕೂಡ ಅಸಮಧಾನಗೊಂಡ ಸಚಿವರು ಇದೀಗ ಮೈತ್ರಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಯಾಕೆಂದರೆ ಸಚಿಚ ಸ್ಥಾನ ಹಂಚಿಕೆ ವಿಚಾರದಲ್ಲಿ ಕೆಲವು ಶಾಸಕರು ಈಗಾಗಲೇ ಸರಕಾರದ ವಿರುದ್ಧ ಮುನಿಸಿಕೊಂಡಿದ್ದು, ಯಾರ ಸಂಪರ್ಕಕ್ಕೂ ಸಿಗದೆ ಸರಕಾರಕ್ಕೆ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ. ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಯತ್ನವೂ ವಿಫಲವಾಗಿದ್ದು, ಇದೀಗ ಅದರ ಬೆನ್ನಲ್ಲೇ ಸಚಿವ ಸಂಪುಟದ ಸಚಿವರುಗಳೂ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೀಗ ಭಾರೀ ಏಟು ನೀಡಲು ತಯಾರಿ ನಡೆಸಿದ್ದಾರೆ.!

ಕುಮಾರಸ್ವಾಮಿ ಅವರ ಕಣ್ಣು ತಪ್ಪಿಸಿದ ಇಬ್ಬರು ಸಚಿವರು..!

ಈಗಾಗಲೇ ಸಚಿವ ಸಂಪುಟ ರಚನೆಯಾಗಿದ್ದು, ಯಾರ್ಯಾರಿಗೆ ಯಾವ ಖಾತೆ ಎಂಬುದು ಫಿಕ್ಸ್ ಆಗಿದೆ. ಆದರೆ ಕೆಲವೊಂದು ಸಚಿವರಿಗೆ ತಾವು ಆಸೆ ಪಟ್ಟ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಅಸಮಧಾನಗೊಂಡಿದ್ದು, ನೇರವಾಗಿ ಸರಕಾರದ ವಿರುದ್ಧವೇ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಪುಟ್ಟರಾಜು ಅವರಿಗೆ ಈಗಾಗಲೇ ಸಚಿವ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವ ಸ್ಥಾನ ದೊರಕಿದ್ದು ಪುಟ್ಟರಾಜು ಅವರು ಭಾರೀ ಅಸಮಧಾನಗೊಂಡಿದ್ದಾರೆ. ಯಾರಿಗೂ ಬೇಡವಾದ ಸ್ಥಾನವನ್ನು ನಮಗೆ ನೀಡಲಾಗಿದೆ, ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ ಎಂದು ಸಚಿವ ಪುಟ್ಟರಾಜು ಅವರು ಹೇಳಿಕೊಂಡಿದ್ದು, ಪಕ್ಷದ ಯಾರ ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಂಡಿದ್ದಾರೆ.!

ಮತ್ತೊಂದೆಡೆ ಜಿಟಿ ದೇವೇಗೌಡ ಅವರಿಗೂ ತಮಗೆ ಸಿಕ್ಕಿರುವ ಸ್ಥಾನದ ಬಗ್ಗೆ ಅಸಮಧಾನವಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆಯೂ ಬೆಂಬಲಿಗರ ಜೊತೆ ಹೇಳಿಕೊಂಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭೇಟಿಗೂ ಒಪ್ಪದ ಈ ಇಬ್ಬರು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ.!

ಸ್ವಕ್ಷೇತ್ರದಿಂದಲೇ ಸಚಿವರು ಎಸ್ಕೇಪ್..!

ಸಣ್ಣ ನೀರಾವರಿ ಸಚಿವರಾಗಿ ಆಯ್ಕೆಯಾದ ಪುಟ್ಟರಾಜು ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರಕ್ಕೆ ಆಗಮಿಸುವ ಸುದ್ಧಿ ಕೇಳುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಜಿಡಿ ದೇವೇಗೌಡ ಮತ್ತು ಪುಟ್ಟರಾಜು ಅವರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಚಿತ್ರದ ಶೂಟಿಂಗ್ ನಡೆಯುತ್ತಿರುವುದರಿಂದ ಕುಮಾರಸ್ವಾಮಿ ಅವರು ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಕುಮಾರಸ್ವಾಮಿ ಅವರು ಬರುವ ವಿಚಾರ ಗೊತ್ತಾಗುತ್ತಿದ್ದಂತೆ ಈ ಇಬ್ಬರೂ ತಮ್ಮ ಕ್ಷೇತ್ರದಿಂದ ಪಲಾಯನಗೈದಿದ್ದಾರೆ.!

ಆದ್ದರಿಂದ ಸರಕಾರದ ವಿರುದ್ಧ ಅಸಮಧಾನಗೊಂಡ ಶಾಸಕರ ಮತ್ತು ಸಚಿವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೈತ್ರಿ ಸರಕಾರಕ್ಕೆ ಭಾರೀ ಕಂಟಕ ಎದುರಾಗಿದೆ..!

–ಅರ್ಜುನ್

Editor Postcard Kannada:
Related Post