X

ರಾಹುಲ್ ಗಾಂಧಿಯಿಂದಲೂ ಅತೃಪ್ತ ಶಾಸಕರಿಗೆ ನಿರಾಸೆ..! ಪಕ್ಷ ತೊರೆಯಲು ರೆಡಿಯಾಗುತ್ತಾ ಶಾಸಕರ ಟೀಂ..?

ಭಾರೀ ಕುತೂಹಲ ಕೆರಳಿಸಿದ್ದ ರಾಜ್ಯ ಸರಕಾರದ ಸಚಿವ ಸಂಪುಟ ರಚೆನೆಯಾಗಿದ್ದರೂ ಕೂಡ ಇನ್ನೂ ಸರಕಾರಕ್ಕೆ ಕಂಟಕ ಮಾತ್ರ ತಪ್ಪಿಲ್ಲ. ಯಾಕೆಂದರೆ ಕುಮಾರಸ್ವಾಮಿ ಅವರು ರಾಜ್ಯಾಭಾರ ನಡೆಸುವ ಆಸೆಯಿಂದ ಮುಖ್ಯಮಂತ್ರಿಯಾದರೆ, ಇತ್ತ ಅತೃಪ್ತ ಶಾಸಕರ ಭಿನ್ನಾಭಿಪ್ರಾಯದಿಂದಾಗಿ ಕುಮಾರಸ್ವಾಮಿ ಅವರಿಗೆ ಭಾರೀ ತಲೆನೋವಾಗಿದೆ. ಒಂದೆಡೆ ಸಚಿವ ಸ್ಥಾನ ಕೊಟ್ಟರೂ ಕೂಡ ಅಸಮಧಾನಗೊಂಡು ಕೆಲ ಸಚಿವರು ಪಕ್ಷಕ್ಕೆ ಧಕ್ಕೆಯಾಗುವ ರೀತಿ ಪಡೆದುಕೊಳ್ಳಬಹುದು ಎಂಬ ಚಿಂತೆಯಿದ್ದರೆ, ಮತ್ತೊಂದೆಡೆ ಈಗಾಗಲೇ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ಹೇಳಿಕೊಂಡಂತೆ ಇಪ್ಪತ್ತು ಶಾಸಕರು ತನ್ನ ಬಳಿ ಇದ್ದಾರೆ ಎಂದಿದ್ದು, ಈ ಶಾಸಕರ ಮುಂದಿನ ನಡೆಯೂ ಭಾರೀ ಕುತೂಹಲ ಉಂಟು ಮಾಡಿದೆ.!

ಈಗಾಗಲೇ ಎಂಬಿ ಪಾಟೀಲ್ ಅವರು ರಾಜ್ಯ ನಾಯಕರಲ್ಲಿ ಮುನಿಸಿಕೊಂಡು ನೇರವಾಗಿ ದೆಹಲಿಗೆ ತೆರಳಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು, ಅಲ್ಲಿಯೂ ಎಂಬಿ ಪಾಟೀಲ್‌ಗೆ ಸೂಕ್ತ ನ್ಯಾಯ ದೊರಕಲಿಲ್ಲ. ಯಾಕೆಂದರೆ ರಾಹುಲ್ ಗಾಂಧಿಯವರು ಎಂಬಿ ಪಾಟೀಲ್‌ಗೆ ಬದಲಿ ಖಾತೆ ನೀಡುತ್ತೇವೆ ಎಂದು ಭರವಸೆ ನೀಡಿದರೂ ಕೂಡ ,ಪಾಟೀಲ್ ಅವರು ಅಸಮಧಾನದಿಂದಲೇ ಹೊರ ಬಂದಿದ್ದಾರೆ. ರಾಜ್ಯ ನಾಯಕರ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದ ಪಾಟೀಲ್‌ರನ್ನು ಇದೀಗ ಹೈಕಮಾಂಡ್ ಕೂಡ ಕೈಬಿಟ್ಟಿದ್ದು, ಈ ಇಪ್ಪತ್ತು ಶಾಸಕರು ಮೈತ್ರಿ ಸರಕಾರಕ್ಕೆ ಹೊಡೆತ ನೀಡುವುದು ಗ್ಯಾರಂಟಿ.!

ಡಿಸಿಎಮ್ಮೂ ಬೇಡ ಅಧ್ಯಕ್ಷ ಸ್ಥಾನನೂ ಬೇಡ..!

ಮೂಲಗಳ ಪ್ರಕಾರ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಎಂಬಿ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಅಥವಾ ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಡಿಸಿಎಂ ಸ್ಥಾನ ಈಗಾಗಲೇ ಜಿ ಪರಮೇಶ್ವರ್ ಅವರಿಗೆ ಲಭಿಸಿದ್ದು, ಅವರನ್ನು ಕೆಳಗಿಳಿಸಿ ಆ ಸ್ಥಾನವನ್ನು ತಮಗೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದರು. ಆದ್ದರಿಂದಲೇ ತಮ್ಮ ಆಕ್ರೋಶ ಈಗಾಗಲೇ ಹೊರಹಾಕಿದ್ದು, ಇಂದು ಹೈಕಮಾಂಡ್ ಜೊತೆ ಮಾತುಕತೆಗಾಗಿ ದೆಹಲಿಗೆ ತೆರಳಿದ್ದರು. ಆದರೆ ರಾಹುಲ್ ಗಾಂಧಿಯ ಜೊತೆ ಮಾತುಕತೆ ನಡಸಿದ ನಂತರ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಎಂಬಿ ಪಾಟೀಲ್, ನನಗೆ ಹೈಕಮಾಂಡ್‌ನಿಂದಲೂ ಸೂಕ್ತ ಉತ್ತರ ಸಿಕ್ಕಿಲ್ಲ, ನಾನೇನೂ ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಆದ್ದರಿಂದ ನನಗೆ ಯಾವ ಹುದ್ದೆಯೂ ಬೇಡ, ನಾನೀಗ ಒಬ್ಬಂಟಿಯಾಗಿಲ್ಲ ನನ್ನ ಜೊತೆ ಇಪ್ಪತ್ತು ಅತೃಪ್ತ ಶಾಸಕರ ತಂಡವೇ ಇದೆ ಎಂದು ಮತ್ತೊಮ್ಮೆ ಮೈತ್ರಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.!

ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮುಂದಿನ ನಿರ್ಧಾರ ಸ್ಪಷ್ಟಪಡಿಸುತ್ತೇನೆ ಎಂದಿದ್ದ ಎಂಬಿ ಪಾಟೀಲ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನಿಂದಲೂ ನಿರಾಸೆ ಉಂಟಾಗಿದ್ದು, ತಮ್ಮ ಬೆಂಬಲಿಗರು ಸೂಚಿಸಿದಂತೆ ಒಂದಾ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ ಅಥವಾ ಪಕ್ಷದ ವಿರುದ್ಧ ದಂಗೆ ಏಳುವ ಸಾಧ್ಯತೆಯೂ ಹೆಚ್ಚಿದೆ.!

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಹೈಕಮಾಂಡ್‌ನಿಂದ ಭಾರೀ ನಿರಾಸೆ..!

ಸಚಿವ ಸ್ಥಾನ ವಂಚಿತ ಶಾಸಕರು ಈಗಾಗಲೇ ರಾಜ್ಯ ನಾಯಕರಿಗೆ ಮತ್ತು ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದು, ಯಾರ ಮಾತಿಗೂ ಬಗ್ಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಇತ್ತ ಹೈಕಮಾಂಡ್ ಕೂಡ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದ್ದು, ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಹೀಗೆ ಅನೇಕ ಪ್ರಭಾವಿ ಶಾಸಕರನ್ನು ಕಡೆಗಣಿಸಿದೆ. ಯಾಕೆಂದರೆ ಡಿಕೆಶಿ ಇಂಧನ ಖಾತೆಯ ಮೇಲೆ ಕಣ್ಣಿಟ್ಟಿದ್ದು ಕೊನೆಯ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈತಪ್ಪುವಂತಾಯಿತು. ಆದ್ದರಿಂದಲೇ ಇದೀಗ ಎಂಬಿ ಪಾಟೀಲ್ ಅವರಿಗೂ ಸಚಿವ ಸ್ಥಾನ ನೀಡದೆ ವಂಚಿಸಿದ ಹೈಕಮಾಂಡ್ ವಿರುದ್ಧ ಅತೃಪ್ತ ಶಾಸಕರು ಒಟ್ಟಾಗಿ ರೊಚ್ಚಿಗೇಳುವ ಸಾಧ್ಯತೆಯೂ ಇದೆ.!

ಆದ್ದರಿಂದ ಮೈತ್ರಿ ಸರಕಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕುಮಾರಸ್ವಾಮಿ ಅವರಿಗೆ ತಮ್ಮ ಕುರ್ಚಿಗೆ ಕುತ್ತು ಬೀಳುವ ಸಾಧ್ಯತೆಯೂ ಉಂಟಾಗಿದೆ. ಇತ್ತ ಅತೃಪ್ತ ಶಾಸಕರ ಒಗ್ಗಟ್ಟು ನೋಡಿ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಕೂಡ ದಂಗಾಗಿದ್ದು, ಯಾವ ಪ್ರಯತ್ನಕ್ಕೂ ಮಣಿಯದ ಶಾಸಕರ ಮುಂದಿನ ನಡೆ ಬಹಳ ಕುತೂಹಲ ಉಂಟು ಮಾಡಿದೆ..!

–ಅರ್ಜುನ್

Editor Postcard Kannada:
Related Post