X

ಬಿಗ್ ಬ್ರೇಕಿಂಗ್! ಸಿಎಂ ಜನತಾ ದರ್ಶನಕ್ಕೆ ಇನ್ನಿಲ್ಲ ಅವಕಾಶ! ಮತದಾರರಿಗೆ ಕುಮಾರ ಸ್ವಾಮಿಯಿಂದ ಮಹಾ ಅವಮಾನ! ಶಾಲಾ ಶುಲ್ಕ ಕೇಳಿದ್ದೇ ತಪ್ಪಾಯಿತೇ..?

ಆರಂಭದಲ್ಲಿ ನಾನಿರುವುದೇ ನಿಮಗಾಗೀ ಎಂದು ರಾಗ ಹಾಡುತ್ತಾ ಮುಖ್ಯಮಂತ್ರಿ ಗಾದಿಗೆ ಏರಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಇದೀಗ ಉಲ್ಟಾ ಹೊಡೆದಿದ್ದಾರೆ. ಜನರೇ ಎಲ್ಲಾ, ಜನಸೇವೆಗೆ ನನ್ನ ಜೀವವನ್ನೇ ಮುಡಿಪಾಗಿಡುತ್ತೇನೆ ಎಂದು ಸಿನಿಮಾ ಡೈಲಾಗ್ ಹೇಳುತ್ತಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಇದೀಗ ಈ ಮತದಾರರ ಬಾಂಧವರಿಗೆ ಶಾಕ್ ನೀಡಿದ್ದಾರೆ.
ಮೊದಮೊದಲು ಪ್ರತಿದಿನವೂ ಜನತಾ ದರ್ಶನವನ್ನು ಮಾಡಿ ಜನರ ಕಷ್ಟಗಳನ್ನು ಪರಿಹರಿಸುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಇದೀಗ ಉಲ್ಟಾ ಹೊಡೆದಿದ್ದಾರೆ. ಅದೂ ತನ್ನ ಅಹಂಕಾರದ ಮಾತುಗಳಿಂದ. ಅಧಿಕಾರ ಹಿಡಿದು ಒಂದು ತಿಂಗಳು ಕೂಡಾ ಕಳೆದಿಲ್ಲ, ಅಷ್ಟರಲ್ಲೇ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಜನರು ಸಾಕು ಸಾಕಾಗಿ ಹೋಗಿದ್ದಾರಂತೆ.
“ಬೆಳಗ್ಗೆಯಿಂದ ತುಂಬಾ ಮಂದಿ ಜನತಾ ದರ್ಶನಕ್ಕೆ ಬರ್ತಾರೆ. ಎಲ್ಲರನ್ನು ಮಾತನಾಡಿಸಿದರೆ ಕೆಲಸ ಆಗೋದಿಲ್ಲ. ಹೆಚ್ಚಿನ ಜನರು ತಮ್ಮ ಮಕ್ಕಳ ಶಾಲೆಯ ಶುಲ್ಕಗಳ ಬಗ್ಗೆ ಮಾತನಾಡಲು ಬರ್ತಾರೆ. ಇದು ಆಗೋ ಕೆಲಸವಲ್ಲ. ಹೀಗಾಗಿ ನಾಳೆಯಿಂದ ಜನತಾ ದರ್ಶನ ಕ್ಯಾನ್ಸಲ್” ಎಂದು ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ.
ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರ ಕುಮಾರ ಸ್ವಾಮಿ ನೀಡಿದ್ದ ಯಾವುದೇ ಆಶ್ವಾಸನೆಯನ್ನು ಈಡೇರಿಸಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದು 24 ಗಂಟೆಯ ಒಳಗಾಗಿ ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಹೇಳಿದ್ದ ಕುಮಾರ ಸ್ವಾಮಿ ಅಧಿಕಾರ ಹಿಡಿದ ನಂತರ ಅದನ್ನು ಮರೆತೇ ಬಿಟ್ಟಿದ್ದಾರೆ.
ಭಾರತೀಯ ಜನತಾ ಪಕ್ಷ ಈ ಬಗ್ಗೆ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದರಿಂದ ದಯವಿಟ್ಟು 15 ದಿನಗಳ ಸಮಯ ಕೊಡಿ ಎಂದು ಕೇಳಿದ್ದರು. ಆದರೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಾಲ ಮನ್ನಾ ಮಾಡುವ ಯಾವ ಇಚ್ಛಾಶಕ್ತಿಯನ್ನೂ ತೋರುತ್ತಿಲ್ಲ. ಪ್ರಶ್ನಿಸಿದರೆ ನನಗೆ ಸಂಪೂರ್ಣ ಬಹುಮತ ಬಂದಿಲ್ಲ ಎಂದು ಹೇಳಿ ನುನುಚಿಕೊಳ್ಳುತ್ತಾರೆ.
ಇದೀಗ ಜನತಾ ದರ್ಶನವನ್ನೇ ರದ್ದು ಮಾಡಿ ಬೇಜವಬ್ಧಾರಿ ಹೇಳಿಕೆಗಳನ್ನು ನೀಡುವ ಮೂಲಕ ಮತ್ತೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾಲೆಯ ಮಕ್ಕಳ ಶುಲ್ಕ ಹೆಚ್ಚಾಗಿದೆಯೆಂದರೆ ಅದನ್ನು ನಿಯಂತ್ರಿಸುವುದು ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ಜನತಾ ದರ್ಶನವನ್ನೇ ರದ್ದು ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಸಿದ್ದಾರೆ.
– ಏಕಲವ್ಯ
Editor Postcard Kannada:
Related Post