X

ಅಮೆರಿಕದ ಪ್ರಿಡೇಟರ್ ಡ್ರೋನ್ ಮಾದರಿಯಲ್ಲೇ ನಿರ್ಮಾಣವಾದ ಭಾರತದ ಈ ಡ್ರೋನ್’ನಿಂದಾಗಿ ಚೀನಾ-ಪಾಕ್ ಭಯಗೊಂಡಿರುವುದಾದರೂ ಯಾಕೆ ಗೊತ್ತೇ??

ಮತ್ತೊಮ್ಮೆ ಭಾರತದ ರಕ್ಷಣಾ ಪಡೆಯು ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕವನ್ನು ಸೃಷ್ಟಿಸಿದ್ದಲ್ಲದೇ, ಪ್ರಧಾನಿ ಮೋದಿ ಅವರ “ಮೇಕ್ ಇನ್ ಇಂಡಿಯಾ’ ದ ಪರಿಕಲ್ಪನೆಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಂತಾಗಿದೆ!! ನೆರೆ ದೇಶವಾದ ಚೀನಾ ದಿನೇ ದಿನೇ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಭಾರತದ ಮೇಲೆ ಕಿಡಿಕಾರುತ್ತಲೇ ಇದ್ದು, ಇದೀಗ ಭಾರತವು ಚೀನಾ ಮತ್ತು ಪಾಕ್ ಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಸಜ್ಜಾಗಿದೆ.

ಹೌದು… ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆಯ ಶಕೆ ಈಗಾಗಲೇ ಆರಂಭವಾಗಿದ್ದು, ಶತ್ರುಗಳ ಉಪಟಳದಿಂದ ಭಾರತವನ್ನು ರಕ್ಷಿಸಿ ಶತ್ರುಗಳ ಹೆಡೆಮುರಿ ಕಟ್ಟಲು ಭಾರತದ ರಕ್ಷಣಾ ಕ್ಷೇತ್ರವು ಯಶಸ್ವಿಯಾಗಿರುವುದರೊಂದಿಗೆ ವಿಶ್ವದಲ್ಲೆ ಪ್ರಬಲ ಸೇನೆ ಎನ್ನುವ ಖ್ಯಾತಿಗೆ ಪಾತ್ರವಾಗುತ್ತಿದೆ. ಈ ಹೊತ್ತಿನಲ್ಲಿಯೇ ಭಾರತವು ಹೊಸ ಯುದ್ದ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕವನ್ನು ಸೃಷ್ಟಿಸಿದೆ.

ಈಗಾಗಲೇ ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿರುವ ಚೀನಾವನ್ನು ಬಗ್ಗು ಬಡಿಯುವ ಹಿನ್ನೆಲೆಯಲ್ಲಿ ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದ್ದು, 6 ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿತ್ತು. ಆದರೆ ಇದೀಗ ಪ್ರಧಾನಿ ಮೋದಿ ಅವರ “ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಗೆ ಸಿಕ್ಕ ದೊಡ್ಡ ಯಶಸ್ಸು ಎಂಬಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್’ಡಿಒ) ರವಿವಾರ ಸ್ವದೇಶಿ ನಿರ್ಮಿತ ರುಸ್ತುಂ-2 ಡ್ರೋನ್‍ನ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ!!

ಅಮೆರಿಕದ ಪ್ರಿಡೇಟರ್ ಡ್ರೋನ್ ಮಾದರಿಯಲ್ಲೇ ಭಾರತದಲ್ಲಿ ಮಾನವ ರಹಿತ ಡ್ರೋನ್ ರುಸ್ತುಂ 2 ಅಥವಾ ತಪಸ್-ಬಿಎಚ್-201 ಅನ್ನು ಅಭಿವೃದ್ಧಿಪಡಿಸಲಾಗಿದೆ. 7 ವರ್ಷಗಳ ಹಿಂದೆ ಅಂದರೆ 2009ರ ನವೆಂಬರ್ 16ರಂದು ಹೊಸೂರಿನ ತನೇಜಾ ಏರೋಸ್ಪೇಸ್ ಏರ್‍ಫೀಲ್ಡ್ ನಲ್ಲಿ ರುಸ್ತುಂ-1ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ ಇದೀಗ ಏಳು ವರ್ಷ ನಂತರ ಸ್ವದೇಶಿ ನಿರ್ಮಿತ ರಕ್ಷಣಾ ವಿಮಾನಗಳ ಯಶಸ್ಸು ಹೊಸ ಭರವಸೆಯನ್ನು ಮೂಡಿಸಿದೆ.

ಪ್ರಯೋಗಿಕ ಪರೀಕ್ಷೆಗೆ ಸಾಕ್ಷಿಯಾದ ಕರ್ನಾಟಕದ ಈ ಜಿಲ್ಲೆ!!

ಶತ್ರುಗಳ ಮೇಲೆ 24 ಗಂಟೆ ನಿರಂತರವಾಗಿ ನಿಗಾ ಇಡಬಲ್ಲ, ಮಾನವರಹಿತ ವೈಮಾನಿಕ ವಾಹನ (ತಪಸ್) “ರುಸ್ತುಂ 2” ಡ್ರೋನ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು ಕರ್ನಾಟಕದಲ್ಲಿಯೇ ಅನ್ನೋದು ಹೆಮ್ಮೆಯ ವಿಚಾರ!! ಹೌದು…. ಸೇನಾ ಪಡೆಯ ಅಗತ್ಯಕ್ಕೆ ತಕ್ಕಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್’ಡಿಒ)ಯ ಏರೋನಾಟಿಕಲ್ ಆಂಡ್ ಡೆವಲಪ್’ಮೆಂಟ್ ಎಸ್ಟಾಬ್ಲಿಷ್’ಮೆಂಟ್ (ಎಡಿಇ) ವಿಭಾಗ “ರುಸ್ತುಂ 2” ಡ್ರೋನ್ ಅನ್ನು ಅಭಿವೃದ್ಧಿ ಪಡಿಸಿದೆ.

ಆದರೆ ಈ “ರುಸ್ತುಂ 2” ಡ್ರೋನ್ ನ ಪ್ರಯೋಗಿಕ ಪರೀಕ್ಷೆಗೆ ಸಾಕ್ಷಿಯಾದ ಜಿಲ್ಲೆ ಕರ್ನಾಟಕದ್ದೇ ಅನ್ನೋದೇ ಹೆಮ್ಮೆಯ ವಿಚಾರ!!! ಆ ಜಿಲ್ಲೆ ಬೇರಾವುದು ಅಲ್ಲ… ಅದು ಚಿತ್ರದುರ್ಗ ಜಿಲ್ಲೆ!! ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿನ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಡ್ರೋನ್ ಪ್ರಾಯೋಗಿಕ ಹಾರಾಟ ನಡೆದಿದ್ದು, ಅಮೆರಿಕದ ರಕ್ಷಣಾ ಕಣ್ಗಾವಲು ಮತ್ತು ವಿಚಕ್ಷಣ ತಂತ್ರಜ್ಞಾನ (ಐಎಸ್’ಆರ್) ಮಾದರಿಯಲ್ಲಿ ರುಸ್ತುಂ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸೇನೆಯ ಎಲ್ಲ ವಿಭಾಗಗಳಲ್ಲೂ ಕಾರ್ಯನಿರ್ವಹಿಸಲಿದೆ ಅನ್ನೋದೇ ಹೆಮ್ಮೆಯ ವಿಚಾರ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ವಿಜ್ಞಾನಿಗಳು, “ಸತತ 24 ಗಂಟೆಗಳವರೆಗೆ ಹಾರುವ ಸಾಮರ್ಥ್ಯವಿರುವ ಈ ಡ್ರೋನ್ ಅನ್ನು ಯುದ್ಧದ ಸಂದರ್ಭದಲ್ಲಿ ಬಳಸಬಹುದಾಗಿದೆ. ಇದು ಸುಸ್ಥಿರ ನಿಗಾ ವ್ಯವಸ್ಥೆಯಾಗಿಯೂ ಕಾರ್ಯನಿರ್ವಹಿಸಲಿದ್ದು, ನಿಗಾ ಸಲಕರಣೆಗಳ ಜೊತೆಗೆ ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನೂ ಹೊಂದಿದೆ. ಅಷ್ಟೇ ಅಲ್ಲದೇ, ಸಿಂಥೆಟಿಕ್ ಅಪರ್ಚರ್ ರೇಡಾರ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸಿಸ್ಟಮ್ಸ್, ಸಿಚುವೇಷನಲ್ ಅವೇರ್‍ನೆಸ್ ಪೇಲೋಡ್‍ಗಳನ್ನು ಈ ಡ್ರೋನ್ ಹೊತ್ತೂಯ್ಯಬಲ್ಲದ್ದಾಗಿದೆ” ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿರುವ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಡಿಆರ್’ಡಿಒ ಮುಖ್ಯಸ್ಥ ಕ್ರಿಸ್ಟರ್, ಡೈರಕ್ಟರ್ ಜನರಲ್ ಸಿಪಿ ರಾಮನಾರಾಯಣನ್, ಜೆ ಮಂಜುಳಾ, ಹಿರಿಯ ವಿಜ್ಞಾನಿಗಳು ಘಟನೆಗೆ ಸಾಕ್ಷಿಯಾಗಿದ್ದರು ಎಂದು ಡಿಆರ್ ಡಿಒ ಪ್ರಕಟಣೆ ತಿಳಿಸಿದೆ.

“ರುಸ್ತುಂ 2” ಡ್ರೋನ್ ನ ವಿಶೇಷತೆಗಳು ಏನು ಗೊತ್ತೇ??

ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗೆ ಅನುಕೂಲವಾಗುವಂತೆ 1,500 ಕೋಟಿ ರೂಪಾಯಿ ವೆಚ್ಚದಲ್ಲಿ ಮಾನವರಹಿತ ಡ್ರೋನ್ ಗಳ ಅಭಿವೃದ್ಧಿಗೆ ಸೇನಾಪಡೆ ಡಿಆರ್’ಡಿಒ ಸಹಯೋಗದಲ್ಲಿ ಯೋಜನೆ ಕೈಗೊಂಡಿದ್ದು, ಹಿಂದುಸ್ಥಾನ್ ಏರೊನಾಟಿಕಲ್ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಡ್ರೋನ್ ಯೋಜನೆಗೆ ತಾಂತ್ರಿಕ ಸಹಯೋಗ ಮತ್ತು ಉತ್ಪನ್ನಗಳ ಪೂರೈಕೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಇನ್ನು, ಚೀನಾ ಮತ್ತು ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿರುವ ಈ ಡ್ರೋನ್ 35 ಸಾವಿರ ಅಡಿ ಎತ್ತರವಿದ್ದು, 250 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ ಇದು ಗಂಟೆಗೆ ಗರಿಷ್ಠ 225 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು, 1000 ಕಿಲೋ ಮೀಟರ್ ಗಳಷ್ಟು ಗರಿಷ್ಠ ದೂರವನ್ನು ತಲುಪಲಿದೆ. ಇನ್ನು, 25ಕ್ಕೂ ಅಧಿಕ ತಾಸು ನಿರಂತರ ಹಾರಾಟ ನಡೆಸುವ ಸಾಮರ್ಥ್ಯ ವನ್ನು ಹೊಂದಿರುವ ಈ ಡ್ರೋನ್ ಕಣ್ಗಾವಲು ಇಡುವ, ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯಲು ಶಕ್ತವಾಗಿರುವ ಮಾನವರಹಿತ ಯುದ್ದ ವಿಮಾನ!!

ಹಾಗಾಗಿ…. ಪರೀಕ್ಷಾರ್ಥ ಹಾರಾಟದ ಸಂದರ್ಭದಲ್ಲಿ ರುಸ್ತುಂ -2 ನಿಗದಿತ ಎಲ್ಲ ಹಂತದಲ್ಲೂ ಸಮರ್ಥ ಪ್ರಾತ್ಯಕ್ಷಿಕೆ ನೀಡಿದ್ದು, ಅತ್ಯಧಿಕ ಸಾಮರ್ಥ್ಯದ ಇಂಜಿನ್ ಹೊಂದಿರುವ ಮೂಲಕ ನಿರ್ದಿಷ್ಟ ಫಲಿತಾಂಶವನ್ನು ನೀಡಿರುವುದು ಸಂತಸ ವಿಚಾರವಾಗಿದೆ. ಅಷ್ಟೇ ಅಲ್ಲದೇ, ರುಸ್ತುಂ-2 ಡ್ರೋನ್ ಸಿಂಥೆಟಿಕ್ ಅಪರ್ಚರ್ ರಡಾರ್, ಎಲೆಕ್ಟ್ರಾನಿಕ್ ಇಂಟಲಿಜೆನ್ಸ್ ಸಿಸ್ಟಂ ಮತ್ತು ವಿವಿಧ ಸಂದರ್ಭಕ್ಕೆ ಅನುಗುಣವಾಗಿ ಬೇಕಾಗುವ ಪೇಲೋಡ್ ಹೊತ್ತೊಯ್ಯಬಲ್ಲ ಸಾಮಥ್ರ್ಯವನ್ನೂ ಹೊಂದಿದೆ ಎಂದು ತಿಳಿದು ಬಂದಿದೆ!!

– ಅಲೋಖಾ

Editor Postcard Kannada:
Related Post