X

ಜಿನ್ನಾ ಭಾವಚಿತ್ರ ಸುಟ್ಟವರಿಗೆ 1 ಲಕ್ಷ ಬಹುಮಾನ!? ಉತ್ತರ ಪ್ರದೇಶದ ಮುಸ್ಲಿಂ ಮುಖಂಡನಿಂದಲೇ ಬಹುಮಾನ ಘೋಷಣೆ!!

ಭಾರತ-ಪಾಕಿಸ್ತಾನ ದೇಶ ವಿಭಜನೆ ಹಾಗೂ ಆ ಸಂದರ್ಭದಲ್ಲಿ ವಿಪ್ಲವ, ಹಿಂಸಾಚಾರ, ಸಾವು, ನೋವುಗಳ ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಟ್ಟಿತ್ತು. ಆ ನೋವು, ದ್ವೇಷ, ಅಸಹನೆಯ ನಡುವೆ ಅದೆಷ್ಟೋ ಜನ ಸಾವು ನೋವುಗಳನ್ನು ಅನುಭವಿಸಿದ್ದಾರೆ. ಇದಕ್ಕೆಲ್ಲಾ ಕಾರಣರಾದವರು ಯಾರೆಂದರೆ ಮೊಹಮ್ಮದ್ ಅಲಿ ಜಿನ್ನರಂತವರು!!

ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಜಿನ್ನಾ ಭಾವಚಿತ್ರ ತೆಗೆಯಬೇಕು ಎಂದು ರಾಷ್ಟ್ರಭಕ್ತ ಸಂಘಟನೆಗಳು ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದವು. ಇದನ್ನು ವಿರೋಧಿಸಿ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಿಂದ ವಿಶ್ವವಿದ್ಯಾಲಯದಲ್ಲಿ ಗಲಭೆಗಳು ನಡೆದಿದ್ದವು. ಜಿನ್ನಾ ಭಾವಚಿತ್ರ ಅಳವಡಿಸಿದಕ್ಕೆ ರಾಷ್ಟ್ರಾಧ್ಯಂತ ತೀವ್ರ ಆಕ್ರೋಶ ಕೂಡಾ ವ್ಯಕ್ತವಾಗಿತ್ತು.

ಜಿನ್ನಾ ಭಾವಚಿತ್ರ ಸುಟ್ಟವರಿಗೆ 1ಲಕ್ಷ ಬಹುಮಾನ!!

ಭಾರತವನ್ನು ಪಾಕಿಸ್ತಾನದ ಹೆಸರಲ್ಲಿ ಒಡೆದು, ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣನಾದ ಪಾಕಿಸ್ತಾನದ ಜನಕ ಮಹಮ್ಮದ್ ಅಲಿ ಜಿನ್ನಾ ಮತ್ತು ಅವರ ರೀತಿಯ ವ್ಯಕ್ತಿತ್ವವನ್ನು ಹೊಂದಿದವರ ಭಾವಚಿತ್ರಗಳನ್ನು ಸುಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸುವ ಮೂಲಕ ಅಖಂಡ ಭಾರತದ ಕಲ್ಪನೆಯನ್ನು ಉತ್ತರ ಪ್ರದೇಶದ ಅಖಿಲ ಭಾರತೀಯ ಮುಸ್ಲಿಂ ಮಹಾಸಂಘದ ಅಧ್ಯಕ್ಷ ಫರಾತ್ ಅಲಿ ಖಾನ್ ಬಿತ್ತಿದ್ದಾರೆ. ಈಗಾಗಲೇ ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭಾರತ ವಿಭಜಕ ಮಹಮ್ಮದ ಅಲಿ ಜಿನ್ನಾ ಭಾವಚಿತ್ರ ಅಳವಡಿಸಿರುವುದನ್ನು ತೆಗೆಯಬೇಕು ಎಂಬುದರ ಕುರಿತು ಉಂಟಾದ ಗಲಭೆಯ ಕುರಿತು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ಗಲಭೆ ಕುರಿತು ಫರಾತ್ ಅಲಿ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದು, ಜಿನ್ನಾ ಭಾವಚಿತ್ರವನ್ನು ಅಲಿಘಡಂ ಮುಸ್ಲಿಂ ವಿಶ್ವವಿದ್ಯಾಲಯದಿಂದ ತೆಗೆದು ಹಾಕಬೇಕು. ಪಾಕಿಸ್ತಾನದ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಲ್ಲ. ನಾವೇಕೆ ಭಾರತದಲ್ಲಿ ದೇಶವಿರೋಧಿಗಳ ಭಾವಚಿತ್ರವನ್ನು ಅಳವಡಿಸಬೇಕು. ಜಿನ್ನಾ ತರಹದ ವ್ಯಕ್ತಿಗಳ ಭಾವಚಿತ್ರವನ್ನು ತೆಗೆದು ಹಾಕಬೇಕು. ಯಾರಾದರೂ ಮಹಮ್ಮದ್ ಅಲಿ ಜಿನ್ನಾ ಮತ್ತು ಆತರದ ವ್ಯಕ್ತಿಗಳ ಭಾವ ಚಿತ್ರ ಮತ್ತು ಪೆÇೀಸ್ಟರ್ ಗಳನ್ನು ಬಹಿರಂಗವಾಗಿ ಸುಟ್ಟುಹಾಕಿದರೇ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ದೇಶವಿರೋಧಿ ಕೆಲ ಮುಸ್ಲಿಂ ಸಂಘಟನೆಗಳಿಗೆ ತಕ್ಕ ಉತ್ತರವನ್ನು ಫರಾತ್ ಅಲಿ ಖಾನ್ ನೀಡಿದ್ದಾರೆ.

ಭಾರತದ ವಿಭಜನೆಗೆ ಕಾರಣರಾದವರು ಎಂಬುವುದನ್ನು ಒಮ್ಮೆ ಅರಿತರೆ ಅವರ ಬಾವಚಿತ್ರ ಯಾತಕ್ಕಾಗಿ ಎಂಬುವುದು ಅರ್ಥವಾಗಬಹುದು!! ಒಂದು ಬಾರಿ ವಿಭಜನೆಯ ಕಡೆಗೆ ಮುಖ ಮಾಡಿದರೆ ಆ ಸಾವು ನೋವುಗಳು, ಕ್ರೌರ್ಯ, ಅಳಿಯದ ಗಾಯಗಳು ಅಪಾರ ಪ್ರಮಾಣದ ನೋವಿಗೆ ಕಾರಣವಾಗಿತ್ತು!! ದೇಶ ವಿಭಜನೆ ಸಾವು-ನೋವುಗಳಿಗೆ ಮಾತ್ರ ಕಾರಣವಾಗದೆ ಆಗ ನಡೆದ ದರೋಡೆ, ಅತ್ಯಾಚಾರದಂತಹ ಮನುಷ್ಯತ್ವದ ಮೇಲೆ ನಡೆದ ಹಲ್ಲೆಗಳು ಎಲ್ಲಾ ಕಾಲಕ್ಕೂ ಉಲ್ಲೇಖಿಸಬಹುದಾದ ಹಿಂಸೆಯ ಬಗೆಗಿನ ಉದಾಹರಣೆಯಾಗಿ ಉಳಿದುಕೊಂಡಿವೆ. ಮನುಷ್ಯ ಎಷ್ಟು ಕ್ರೂರಿಯಾಗಿರಬಹುದು ಎಂಬುವುದಕ್ಕೆ ಬೆರಳು ತೋರಬಹುದಾದ ಘಟನೆ ಈ ದೇಶ ವಿಭಜನೆಯಾಗಿತ್ತು!!

ಶತಮಾನಗಳಿಂದ ಇಲ್ಲಿನ ಜನರು ಭಾತೃತ್ವ, ಸಹೋದರತ್ವ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದರು!! ಅದ್ಯಾವಾಗ ಇಂತವರಿಗೆ ದೇಶ ವಿಭಜನೆಯ ಹುಚ್ಚು ಹಿಡಿದಿತ್ತೋ ಗೊತ್ತಿಲ್ಲ!! ಯಾರದೋ ಕುಮ್ಮಕ್ಕಿನಿಂದ ದೇಶ ವಿಭಜನೆ ಮಾಡುವುದಕ್ಕೆ ತಯಾರಾಗುತ್ತಾರೆ. ದೇಶ ವಿಭಜನೆಯಾಗುವುದು ಎಂಬ ವಿಷಯ ಅದೆಷ್ಟೋ ಜನರ ಮನಸ್ಸನ್ನು ಘಾಸಿಗೊಳಿಸಿತ್ತು!!. ಕೆಲವೊಂದು ನಾಯಕರ ಕುಮ್ಮಕ್ಕಿನಿಂದ ದೇಶ ವಿಭಜನೆಗೊಂಡಿತ್ತು.!! ಘಟನೆ ಕಳೆದು 70 ವರ್ಷಗಳಾದರೂ ವಿಭಜನೆಯ ಕರಾಳ ನೆನಪುಗಳು ಮಾತ್ರ ಇನ್ನೂ ಮಾಸಿಲ್ಲ!! ಇದೀಗ ಆ ದೇಶ ವಿಭಜನೆ ಮಾಡಿದ ಜಿನ್ನಾ ಭಾವಚಿತ್ರವನ್ನು ಸುಡಬೇಕು ಎಂದು ಸ್ವತಃ ಮುಸ್ಲಿಮನೇ ಹೇಳಬೇಕಾದರೆ ಜಿನ್ನಾರನ್ನು ಮುಸ್ಲಿಮರ ಮನಸ್ಸಿನಲ್ಲಿ ಯಾವ ರೀತಿ ಪೂಜಿಸುತ್ತಿದ್ದಾರೆ ಎಂಬುವುದಕ್ಕೆ ಬೇರೆ ಸಾಕ್ಷಿ ಬೇಕೇ?!

ಪವಿತ್ರ

Editor Postcard Kannada:
Related Post