X

ಸರಕಾರದ ಖಜಾನೆ ಕಾಂಗ್ರೆಸ್ ಕೈಯಲ್ಲಿ, ಅಧಿಕಾರ ಜೆಡಿಎಸ್‌ ಕೈಯಲ್ಲಿ..! ಹೆಸರಿಗಷ್ಟೇ ಸಿಎಂ ಆದರೇ ಕುಮಾರಣ್ಣ..?

ಕಾಂಗ್ರೆಸ್ ಎಂದರೆ ಸಾಕು ಉರಿದುಬೀಳುತ್ತಿದ್ದ ಜೆಡಿಎಸ್‌ ಇದೀಗ ಅಧಿಕಾರದ ಆಸೆಗೆ ಬಿದ್ದು ಕಾಂಗ್ರೆಸ್ ಜೊತೆ ಸೇರಿಕೊಂಡಿದೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ಬುದ್ದಿ ಬದಾಲಾಯಿಸುತ್ತದೆಯೇ? ಕಳ್ಳನ ಮನಸ್ಸು ನುಣ್ಣಗೆ ಅಂದ ಹಾಗೆ ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳಲು ಜೆಡಿಎಸ್‌ನ್ನು ಬಳಸಿಕೊಂಡಿದೆ ಅಷ್ಟೇ..! ರಾಜ್ಯದ ಜನರೇ ಈ ಎರಡೂ ಪಕ್ಷಗಳನ್ನು ಮೂಲೆಗುಂಪು ಮಾಡಿ , ಬಿಜೆಪಿಯನ್ನು ಅತೀ ದೊಡ್ಡ ಪಕ್ಷವಾಗಿ ಆಅರಿಸಿಕೊಂಡಿದ್ದರು. ಆದರೆ ಚುನಾವಣೆಗಿಂತ ಒಂದು ದಿನದ ಮೊದಲಿನವರೆಗೂ ಕಿತ್ತಾಡಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಚುನಾವಣೆ ಮುಗಿದು ಫಲಿತಾಂಶ ಬಂದ ದಿನದಂದೇ ಮೈತ್ರಿ ಮಾಡಿಕೊಂಡರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಒಂದಾದ ಕಾಂಗ್ರೆಸ್ ಮತ್ತು ಜೆಡಿಎಸ್‌ ಇದೀಗ ಮತ್ತೆ ದೂರ ಆಗುವ ಮುನ್ಸೂಚನೆ ದೊರಕಿದೆ..!

ಕುಮಾರಸ್ವಾಮಿ ಸಿಎಂ, ಆಳ್ವಿಕೆ ಮಾತ್ರ ಕಾಂಗ್ರೆಸ್..!

ಕೇವಲ ೩೮ ಶಾಸಕರನ್ನು ಮಾತ್ರ ಗೆದ್ದ ಜೆಡಿಎಸ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿತ್ತು. ಆದರೆ ಇತ್ತ ಆಳ್ವಿಕೆ ನಡೆಸುತ್ತಿದ್ದ ಕಾಂಗ್ರೆಸ್ ಕೂಡಾ ಈ ಬಾರಿ ಹೀನಾಯವಾಗಿ ಸೋಲನುಭವಿಸಿತ್ತು. ಆದರೆ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಇದೀಗ ಅಧಿಕಾರ ವಹಿಸಿಕೊಂಡಿದ್ದು, ಮೈತ್ರಿ ಮಾಡಿಕೊಂಡ ಕೇವಲ ಐದೇ ದಿನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿಕೊಂಡಿರುವುದಕ್ಕೆ ಪಶ್ಚಾತ್ತಾಪ ಪಡುವಂತಾಗಿದೆ.!

ಯಾಕೆಂದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಬೆಂಬಲ ಪಡೆದುಕೊಂಡ ಕಾಂಗ್ರೆಸ್ ಇದೀಗ ಕೇವಲ ಹೆಸರಿಗಷ್ಟೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದಾರೆ. ಹೌದು, ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಕಾಂಗ್ರೆಸ್, ಸರಕಾರದ ಮುಖ್ಯ ಖಾತೆಗಳ ಮೇಲೆ ಕಣ್ಣಿಟ್ಟಿತ್ತು. ಡಿಸಿಎಂ ಹುದ್ದೆಯನ್ನೂ ಕೂಡ ಕಾಂಗ್ರೆಸ್ ತನ್ನದಾಗಿಸಿಕೊಂಡಿದ್ದು ನೇರವಾಗಿ ಹೈಕಮಾಂಡ್ ಜೊತೆ ಸಂಪರ್ಕ ಇಟ್ಟುಕೊಂಡು ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದೆ.

ಅಧಿಕಾರಿಗಳ ವರ್ಗಾವಣೆಯ ವಿಚಾರದಲ್ಲೂ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಅನುಮತಿ ನೀಡದೆ ತನ್ನದೇ ನಿರ್ಧಾರ ಅಂತಿಮ ಎಂಬಂತೆ ವರ್ತಿಸುತ್ತಿರುವುದು, ಸ್ವತಃ ಕುಮಾರಸ್ವಾಮಿ ಅವರೇ ಕಾಂಗ್ರೆಸ್ ನಡೆಯ ವಿರುದ್ಧ ಅಸಮಧಾನಗೊಂಡಿದ್ದಾರೆ. ಪದೇ ಪದೇ ಕಾಂಗ್ರೆಸ್ ಮುಖಂಡರು ಸರಕಾರದ ವಿಚಾರವಾಗಿ ಮೂಗು ತೂರಿಸುವ ಬಗ್ಗೆ ಅಸಮಧಾನಗೊಂಡ ಕುಮಾರಸ್ವಾಮಿ, ಮೈತ್ರಿ ಮಾಡಿಕೊಂಡು ಬಲೆಯಲ್ಲಿ ಸಿಲುಕಿದ ಮೀನಿನಂತೆ ಒದ್ದಾಡುತ್ತಿದ್ದಾರೆ..!

ಹಣಕಾಸು ಇಲಾಖೆ ಜೆಡಿಎಸ್‌‌ಗೆ ಬಿಟ್ಟುಕೊಡದ ಕಾಂಗ್ರೆಸ್..!

ರಾಜ್ಯ ಸರಕಾರದ ಪ್ರಮುಖ ಖಾತೆಗಳಲ್ಲಿ ಒಂದಾದ ಹಣಕಾಸು ಖಾತೆಗೆ ಸಂಬಂಧಿಸಿದಂತೆ ಇದೀಗ ಮೈತ್ರಿ ಮಾಡಿಕೊಂಡ ಎರಡೂ ಪಕ್ಷಗಳಲ್ಲಿ ಕಿತ್ತಾಟ ಆರಂಭವಾಗಿದೆ. ಯಾಕೆಂದರೆ ಸರಕಾರದ ವತಿಯಿಂದ ಯಾವುದೇ ಕೆಲಸ ಮಾಡಬೇಕಾಗಿದ್ದರೂ ಹಣಕಾಸಿನ ಖಾತೆ ಬಹಳ ಮುಖ್ಯ. ಆದರೆ ಈ ಖಾತೆಯ ಮೇಲೆಯೇ ಕಾಂಗ್ರೆಸ್ ಕಣ್ಣಿಟ್ಟಿದ್ದು ಯಾವುದೇ ಕಾರಣಕ್ಕೂ ಹಣಕಾಸಿನ ಖಾತೆಯನ್ನು ಜೆಡಿಎಸ್‌ ಗೆ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರೈತರ ಸಾಲ ಮನ್ನಾ ಸೇರಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಅದಕ್ಕೆ ಹಣಕಾಸು ಅಗತ್ಯ. ಆದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರೂ ಕೂಡ ಹಣಕಾಸು ಖಾತೆ ಕಾಂಗ್ರೆಸ್ ಕೈಗೆ ಸೇರಿದರೆ ಕುಮಾರಸ್ವಾಮಿ ಅವರು ಹೆಸರಿಗಷ್ಟೇ ಸಿಎಂ ಎಂಬುದು ಸಾಬೀತಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಕುಮಾರಣ್ಣ ಇದೀಗ ಚಿಂತೆ ಪಡುವಂತಾಗಿದೆ..!

–ಅರ್ಜುನ್

Editor Postcard Kannada:
Related Post