X

ಸ್ಫೋಟಕ ಹಗರಣ ಬಯಲು! ಚುನಾವಣೆಗೆ ಒಂದೂವರೆ ಕೋಟಿ ಕೊಡಿ! ಇಲ್ಲದಿದ್ದಲ್ಲಿ ಎತ್ತಂಗಡಿ!

ಕಾಂಗ್ರೆಸ್ ಚುನಾವಣೆಗಾಗಿ ಅದ್ಯಾವ ಮಟ್ಟಕ್ಕೆ ಇಳಿಯುತ್ತೆ ಎಂದರೆ ನಾವೂ – ನೀವೂ ಊಹಿಸಲೂ ಸಾಧ್ಯವಿಲ್ಲ. ಯಾಕೆಂದರೆ ಇಂತಹ ದುರಾಲೋಚನೆ ಬರುವುದು ಕೇವಲ ಕಾಂಗ್ರೆಸಿಗರಿಗೆ ಮಾತ್ರ. ಕೇವಲ ತಮ್ಮ ಲಾಭವನ್ನೇ ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರನ್ನು ಲೂಟಿ ಹೊಡೆದು ತಮ್ಮ ಖಜಾನೆ ತುಂಬಿಸಿಕೊಳ್ಳುವ ಕಾಂಗ್ರೆಸ್ ಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸ ಹೊಸ ಉಪಾಯಗಳು ತಲೆಗೇರುತ್ತಿದೆ. ಅಧಿಕಾರದ ಮದದಿಂದ ತಮಗೆ ಸಿಕ್ಕಲ್ಲೆಲ್ಲಾ ಹಗರಣ ನಡೆಸಿ ದೇಶದ ಸಂಪತ್ತನ್ನು ಲೂಟಿ ಮಾಡುವ ಈ ಕಾಂಗ್ರೆಸ್ ಇದೀಗ ಇನ್ನೊಂದು ಮಟ್ಟ ಕೆಳಗಡೆ ಹೋಗಿ ಸರಕಾರಿ ಇಲಾಖೆಗಳಿಂದಲೇ ದೋಚುವ ಪ್ರಯತ್ನಕ್ಕೆ ಇಳಿದಿದೆ.!

ಸರಕಾರಿ ಅಧಿಕಾರಿಗಳಿಂದ ಚುನಾವಣಾ ಫಂಡ್ ವಸೂಲಿ..!

ಈಗಾಗಲೇ ಹಗರಣಗಳ ಮೇಲೆ ಹಗರಣ ಮಾಡಿ ಸರಕಾರದ ಖಜಾನೆಯನ್ನು ಖಾಲಿ ಮಾಡಿರುವ ಕಾಂಗ್ರೆಸ್ ನಾಯಕರು ಚುನಾವಣೆಗಾಗಿ ಪರದಾಡುತ್ತಿದ್ದಾರೆ. ತಮ್ಮ ಪಕ್ಷದ ಪ್ರಚಾರ ಕಾರ್ಯಗಳನ್ನು ಸರಕಾರದ ಖರ್ಚಿನಿಂದಲೇ ಮಾಡಿ ಭಾರೀ ಟೀಕೆಗೆ ಒಳಗಾಗಿದ್ದರು. ಇದೀಗ
ಮತ್ತೆ ಸರಕಾರಿ ಅಧಿಕಾರಿಗಳ ಕೈಯಿಂದ ಚುನಾವಣೆಗಾಗಿ ಫಂಡ್ ವಸೂಲು ಮಾಡಲು ಮುಂದಾಗಿದ್ದಾರೆ ಕಾಂಗ್ರೆಸ್ ರಾಜ್ಯ ನಾಯಕರು.

ಸಾರಿಗೆ ಇಲಾಖೆ ಸಚಿವರಾದ ಎಚ್ ಎಮ್ ರೇವಣ್ಣ , ಸಾರಿಗೆ ಇಲಾಖೆಯ ಹಿರಿಯ ಅಧಿಕಾರಗಳನ್ನು ಬಳಸಿಕೊಂಡು ಇತರೆ ಅಧಿಕಾರಿಗಳಿಂದ ಹಣ ವಸೂಲು ಮಾಡಲು ಸೂಚಿಸಿದ್ದಾರೆ. ಚುನಾವಣೆಗೆ ಫಂಢ್ ನೀಡಬೇಕೆಂದು ಪದೇ ಪದೇ ಪೀಡಿಸುತ್ತಿದ್ದ ಹಿರಿಯ ಅಧಿಕಾರಿಗಳ ವಿರುದ್ಧ ಕಿರಿಯ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.!

ಹಣ ನೀಡದ ಅಧಿಕಾರಿಗಳ ಎತ್ತಂಗಡಿ..!

ಈಗಾಗಲೇ ಕಾಂಗ್ರೆಸ್ ತನ್ನ ಎಲ್ಲಾ ಅಸ್ತಿತ್ವವನ್ನು ಕಳೆದುಕೊಂಡು ಬಿಕಾರಿಯಾಗಿರುವ ರಾಜ್ಯ ನಾಯಕರು ಇದೀಗ ಸರಕಾರಿ ಕೆಲಸಗಾರರ ಕೈಯಿಂದಲೇ ಹಣ ವಸೂಲಿಗೆ ಮುಂದಾಗಿದೆ. ಚುನಾವಣೆಯ ಫಂಡ್ ನ ಹೆಸರಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ಸಚಿವರು , ಹಣ ನೀಡದೇ ಇರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸಚಿವರು ಈ ರೀತಿಯ ಕೀಳು ಮಟ್ಟಕ್ಕೆ ಇಳಿದಿದ್ದು , ರಾಜ್ಯದ ಆಡಳಿತ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬೂದೇ ಪ್ರಶ್ನೆ.!

ಹಿರಿಯ ಅಧಿಕಾರಿಯ ವಿರುದ್ಧ ದೂರು..!

ಎಲೆಕ್ಷನ್ ಗಾಗಿ ಸುಮಾರು ಒಂದೂವರೆ ಕೋಟಿ ಹಣವನ್ನು ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ವಸೂಲು ಮಾಡಲು ಸಚಿವ ರೇವಣ್ಣ ಮುಂದಾಗಿದ್ದು ಇದೀಗ ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸರಕಾರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಕೈಯಿಂದ ಈ ರೀತಿ ವಸೂಲು ಮಾಡುತ್ತಿದ್ದು , ಅಧಿಕಾರಿಗಳು ನೇರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯಾದಂತಹ ಗಾಯತ್ರೀದೇವಿ ವಿರುದ್ಧ ದೂರು ನೀಡಿದ ಅಧಿಕಾರಿಗಳು ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ. ಚುನಾವಣಾ ಆಯೋಗವೂ ಈ ವಿಚಾರವನ್ನು ಗಂಭಿರವಾಗಿ ಪರಗಣಿಸಿ ಸಚಿವರ ಮತ್ತು ಗಾಯತ್ರೀದೇವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕಾಂಗ್ರೆಸ್ ಗೆ ಕಾಂಗ್ರೆಸ್ಸೇ ಸಾಟಿ ಎಂಬ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ.‌ ಯಾವ ಯಾವ ರೀತಿಯಲ್ಲಿ ಹಣ ಗಳಿಸಲಾಗುತ್ತದೆ ಎಂದೇ ಕಾಯುತ್ತಿರುವ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿ ಎಲ್ಲಾ ರೀತಿಯ ಹಗರಣಗಳನ್ನು ಮಾಡಿ ಮುಗಿಸಿಬಿಟ್ಟರು. ಅದೇ ಕಾರಣಕ್ಕಾಗಿ ಇದೀಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಸರಕಾರಿ ಅಧಿಕಾರಿಗಳ ಮೇಲೆ ಈ ರೀತಿಯ ದಬ್ಬಾಳಿಕೆ ನಡೆಸುತ್ತಿದ್ದಾರೆ.!

-ಅರ್ಜುನ್

Editor Postcard Kannada:
Related Post