X

ಗುಡ್ ನ್ಯೂಸ್! ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಗೆ ಮುಂದಾದ ಮೋದಿ ಸರಕಾರ.! ವಿರೋಧಿಗಳ ಬಾಯಿ ಮುಚ್ಚಿಸಿದ ಕೇಂದ್ರದ ಹೊಸ ಯೋಜನೆ.!

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದರೆ ಒಂದೊಂದು ಯೋಜನೆಗಳೂ ಕೂಡ ಮೋದಿ ಸರಕಾರವನ್ನು ವಿರೋಧಿಸುವವರಿಗೆ ಕಪಾಳಮೋಕ್ಷ ಮಾಡಿದಂತಿದೆ. ಯಾಕೆಂದರೆ ಮೋದಿ ಸರಕಾರ ಜಾರಿಗೊಳಿಸುವ ಪ್ರತಿಯೊಂದು ಯೋಜನೆಗಳನ್ನೂ ಕೂಡ ವಿರೋಧಿ ಬಣಗಳು ವಿರೋಧಿಸುತ್ತಲೇ ಬಂದಿದ್ದರೂ ಕೂಡ ಕ್ಯಾರೇ ಅನ್ನದ ಮೋದಿ ಸರಕಾರ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುಂದಾಗಿದ್ದಾರೆ.

ಈವರೆಗೆ ಇದ್ದ ಶಿಕ್ಷಣ ಪದ್ಧತಿಯಲ್ಲಿ ಈಗಾಗಲೇ ಕೆಲವೊಂದು ಬದಲಾವಣೆ ತಂದಿರುವ ಮೋದಿ ಸರಕಾರ, ಇದೀಗ ಬಹುಮಖ್ಯ ವಿಶ್ವವಿದ್ಯಾಲಯ ಅನುದಾನಗಳ ಆಯೋಗ (ಯುಜಿಸಿ) ಪದ್ಧತಿಯನ್ನು ಕಿತ್ತು ಹಾಕಿ ಉನ್ನತ ಶಿಕ್ಷಣ ಆಯೋಗವನ್ನು ರಚಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಪಂಚವಾರ್ಷಿಕ ಯೋಜನೆಯನ್ನು ರದ್ದುಗೊಳಿಸಿ ಇಡೀ ದೇಶವೇ ಅಚ್ಚರಿ ಪಡುವಂತೆ ಮಾಡಿದ್ದ ಪ್ರಧಾನಿ ಮೋದಿ ನೇತ್ರತ್ವದ ಕೇಂದ್ರ ಸರಕಾರ ಇದೀಗ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದೆ.!

 

ಯುಜಿಸಿ ರದ್ದುಗೊಳಿಸಲು ಕೇಂದ್ರದ ನಿರ್ಧಾರ..!

ಕೇಂದ್ರ ಸರಕಾರದ ಕನಿಷ್ಠ ಸರಕಾರ – ಗರಿಷ್ಠ ಆಡಳಿತ ಎಂಬ ಆಶಯದಡಿಯಲ್ಲಿ ಈ ಹೊಸ ಯೋಜನೆಯ ರೂಪುರೇಷೆ ತಯಾರಿಸಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗಾಗಲೇ ಇದಕ್ಕೆ ಸಂಬಂಧಿಸಿದ ಕರಡು ಮಸೂದೆಯನ್ನು ರಚಿಸಿದೆ. ಜುಲೈ ೭ರೊಳಗೆ ಈ ಮಸೂದೆಯ ವಿವರಗಳನ್ನು ಸಾರ್ವಜನಿಕರಿಗೆ ಅರ್ಥೈಸುವ ಕೆಲಸ ನಡೆಯುತ್ತದೆ ಎಂದು ಹೇಳಲಾಗಿದೆ. ಯುಜಿಸಿ ರದ್ದುಗೊಳಿಸಿ ಉನ್ನತ ಶಿಕ್ಷಣ ಮಸೂದೆ ಜಾರಿಯಾದರೆ ದೇಶದ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿರುವ ಕೇಂದ್ರ ಸರಕಾರ,ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚ ಭಾರೀ ಇಳಿಕೆಯಾಗುತ್ತದೆ ಎಂದು ಹೇಳಿಕೊಂಡಿದೆ. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಈ ಹೊಸ ಯೋಜನೆ ಸಹಕಾರಿಯಾಗಲಿರುವುದರಿಂದ , ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಅಳೆಯಲು ಈಗಿರುವ ಪದ್ಧತಿಯನ್ನು ರದ್ದುಗೊಳಿಸಿ ಹೊಸ ಮೆರಿಟ್ ಆಧಾರದ ಮೇಲೆ ಅನುಮೋದನೆ ನೀಡುವ ಪದ್ಧತಿ ಜಾರಿಗೆ ತರುವ ಸಾಧ್ಯತೆಯೂ ಹೆಚ್ಚಿದೆ.

ಈಗಾಗಲೇ ಮೋದಿ ಸರಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ವಿರೋಧಿಗಳು , ನರೇಂದ್ರ ಮೋದಿ ಅವರ ಈ ಹೊಸ ನಿರ್ಧಾರಕ್ಕೆ ಮಂಕಾಗಿದ್ದಾರೆ. ಯಾಕೆಂದರೆ ಯುಜಿಸಿ ಶಿಕ್ಷಣ ಪದ್ದತಿ ರದ್ದುಗೊಳಿಸಿದರೆ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳು ಕೂಡ ಹೊಸ ರೂಪ ಪಡೆದುಕೊಳ್ಳಲಿದೆ. ಯಾಕೆಂದರೆ ಯಾವುದೇ ವಂಚನೆಗಳು ನಡೆಯದಂತೆ ಉನ್ನತ ಶಿಕ್ಷಣ ಮಸೂದೆ ಜಾರಿಗೊಳಿಸುವುದರಿಂದ ಪ್ರತಿಯೊಂದು ಲೆಕ್ಕವೂ ಕೇಂದ್ರದ ಕೈಸೇರಲಿದೆ. ಆದ್ದರಿಂದ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವೂ ಕಡಿಮೆಯಾಗಲಿದ್ದು, ಶಿಕ್ಷಣ ಸಂಸ್ಥೆಗಳು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ನರೇಂದ್ರ ಮೋದಿಯವರ ಎಲ್ಲಾ ಯೋಜನೆಗಳನ್ನು ವಿರೋಧಿಸುವ ವಿರೋಧಿಗಳು ಇದೀಗ ಬಾಯಿ ಮುಚ್ಚಿ ಕೂರುವಂತಾಗಿದೆ. ಉನ್ನತ ಶಿಕ್ಷಣ ಆಯೋಗ ರಚನೆ ಶೀಘ್ರದಲ್ಲೇ ಆಗುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಮುಂದೆ ಯಾವುದೇ ಅಕ್ರಮಗಳು ನಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಶಿಕ್ಷಣ ಕ್ಷೇತ್ರದ ಉನ್ನತ ಅಧಿಕಾರಿಗಳು.!

– ಅರ್ಜುನ್

Editor Postcard Kannada:
Related Post