X

ಅಮರನಾಥ ಯಾತ್ರಿಕರಿಗೆ ಗುಡ್ ನ್ಯೂಸ್!! ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕಲು ಕೇಂದ್ರ ಸರಕಾರದ ಮಾಸ್ಟರ್ ಪ್ಲಾನ್!!

ಉಗ್ರರ ನಿರಂತರ ದಾಳಿಯಿಂದ ನಲುಗಿ ಹೋಗುತ್ತಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಸ್ಥಿತಿ ದಿನೇ ದಿನೇ ಶೋಚನೀಯವಾಗಿರುವುದಂತೂ ಅಕ್ಷರಶಃ ನಿಜ. ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಅಮರನಾಥ ಕ್ಷೇತ್ರಕ್ಕೆ ಅದೇಷ್ಟೋ ಭಕ್ತರು ಅಮರನಾಥನ ದರ್ಶನಕ್ಕೆ ಹಾತೊರೆದು ಕಾಯುತ್ತಿದ್ದರೆ, ಇತ್ತ ಉಗ್ರರ ಉಪಟಳದ ಗುಟ್ಟು ಹೊರಬಿದ್ದಿರುವ ಬೆನ್ನಲ್ಲೇ ಕೇಂದ್ರ ಸರಕಾರವು ಮಹತ್ತರವಾದ ಹೆಜ್ಜೆಯನ್ನು ಮುಂದಿಟ್ಟುಕೊಂಡು ಉಗ್ರರನ್ನು ಚೆಂಡಾಡಲು ಸಜ್ಜಾಗಿದೆ!!

ಹೌದು…. ಕಳೆದ ವರ್ಷ ಉಗ್ರರು ನಡೆಸಿದ್ದ ಬೀಭತ್ಸ ಕೃತ್ಯಕ್ಕೆ ಅದೆಷ್ಟೋ ಯಾತ್ರಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರೆ, ಇನ್ನು ಅದೆಷ್ಟೋ ಮಂದಿ ಯಾತ್ರಿಕರು ಉಗ್ರರ ದಾಳಿಯಿಂದಾಗಿ ಗಾಯಗೊಳಗಾಗಿರುವ ವಿಚಾರ ಗೊತ್ತೇ ಇದೆ!! ಉಗ್ರರು ನಡೆಸಿದ ಈ ದುಷ್ಕೃತ್ಯಕ್ಕೆ ಎಲ್ಲೆಡೆಯಿಂದ ತೀರ್ವ ಖಂಡನೆ ಕೇಳಿಬಂತು. ಆದರೆ, ಯಾತ್ರೆ ಸಂದರ್ಭದಲ್ಲಿ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಬಗ್ಗೆ ಗುಪ್ತದಳದ ವರದಿ ಇದ್ದಾಗಲೂ, ಇಂಥ ಘಟನೆಗೆ ಆಸ್ಪದ ಕೊಟ್ಟಿದ್ದು ಭದ್ರತಾ ವೈಫಲ್ಯ ಅಥವ ನಿರ್ಲಕ್ಷ್ಯ ಅಲ್ಲದೆ ಬೇರೆ ಏನೂ ಅಲ್ಲ, ಅನ್ನುವ ಮಾತುಗಳೂ ಕೇಳಿ ಬಂದವು.

ಆದರೆ ಈ ಬಾರಿಯೂ ಪಾಕಿಸ್ತಾನ ತನ್ನ ಹಳೇ ಛಾಳಿಯನ್ನು ಮುಂದುವರಿಸಿದ್ದು ಪಾಕಿಸ್ತಾನದ ಉಗ್ರರಿಂದ ಹಿಂದುಗಳ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಅಮರನಾಥ ಕ್ಷೇತ್ರಕ್ಕೆ ಬೇಟಿ ನೀಡಲಿರುವ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶವನ್ನು ಇಟ್ಟುಕೊಂಡಿರುವ ಬಗ್ಗೆ ಗುಪ್ತಚರ ದಳ ಮಾಹಿತಿಯನ್ನು ಈಗಾಗಲೇ ಬಯಲು ಮಾಡಿದೆ!! ಇದರ ಮಾಹಿತಿಯ ಪ್ರಕಾರ, ಸುಮಾರು 450 ಪಾಕ್ ಉಗ್ರರು ಎಲ್ ಓ ಸಿ ದಾಟಿ ಕಾಶ್ಮೀರದೊಳಗೆ ನುಸುಳಿ ಬರಲು ಸಿದ್ಧರಾಗಿದ್ದಾರೆ ಎನ್ನುವ ವಿಚಾರವೂ ತಿಳಿದು ಬಂದಿದೆ!!

ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಭಾರತೀಯ ಪಡೆಗಳು ಕಟ್ಟೆಚ್ಚರ ವಹಿಸಿದ್ದಲ್ಲದೆ ಗುಪ್ತಚರ ದಳ ತನ್ನ ಉಗ್ರರು ಭಾರತದ ಒಳನುಸುಳಲು ಉಪಾಯ ಮಾಡುತ್ತಿರುವ ಬಗ್ಗೆ ಕೇಂದ್ರ ಸರಕಾರಕ್ಕೂ ಮಾಹಿತಿಯನ್ನು ಕಳುಹಿಸಿದೆ. ಇದೇ ಜೂನ್ 28ರಿಂದ ಆರಂಭಗೊಳ್ಳುವ ಅಮರನಾಥ ಯಾತ್ರೆಯನ್ನು ಗುರಿ ಇರಿಸಿಕೊಂಡು ದಾಳಿ ನಡೆಸಲು ಪಾಕ್ ಬೆಂಬಲಿತ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಎ ತೊಯ್ಬ ಉಗ್ರ ಸಂಘಟನೆಯ ಸುಮಾರು 450 ಮಂದಿ ಉಗ್ರರು ಎಲ್‍ಓಸಿಯ ಆಚೆ ಸಿದ್ಧರಾಗಿ ನಿಂತಿರುವ ಬಗ್ಗೆ ಗುಪ್ತಚರ ದಳ ಮಾಹಿತಿ ಕಲೆ ಹಾಕಿದೆ.

ಯಾತ್ರೆಯ ಭದ್ರತೆಗಾಗಿ ಕೇಂದ್ರ ಸರಕಾರ ಮಾಡಿದ್ದೇನು ಗೊತ್ತೇ??

ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. 1994ರಲ್ಲಿ ಮೊದಲ ಬಾರಿ ಪಾಕ್ ಮೂಲದ ಹರ್ಕಟ್-ಉಲ್-ಅನ್ಸರ್ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯಾತ್ರಿಗಳು ಮೃತಪಟ್ಟಿದ್ದರು. ಆನಂತರ 95 ಮತ್ತು 96ರಲ್ಲೂ ದಾಳಿ ನಡೆಯಿತಾದರೂ ಯಾರಿಗೂ ಏನೂ ಆಗಲಿಲ್ಲ. ಆದರೆ, 2000 ಇಸವಿಯಲ್ಲಿ, ಪಹಲ್ಗಾಮ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 21 ಜನ ಯಾತ್ರಿಗಳು ಅಮರರಾದರು. ಬಳಿಕ 2001ರಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದರು. ಗುಹೆಯ ಹತ್ತಿರದಲ್ಲೇ ನಡೆದ ಈ ದಾಳಿಯಲ್ಲಿ ಇಬ್ಬರು ಪೊಲೀಸರೂ ಸೇರಿದಂತೆ 13 ಜನರು ಮೃತಪಟ್ಟಿದ್ದರು. ಅದರ ಮುಂದಿನ ವರ್ಷ 2002ರ ಜುಲೈ 30ರಂದು ನಡೆದ ದಾಳಿಯಲ್ಲಿ ಇಬ್ಬರು ಯಾತ್ರಿಗಳು ಸಾವನ್ನಪ್ಪಿದ್ದರು. ಇದಾದ ಒಂದು ವಾರದ ನಂತರ ನಡೆದ ಮತ್ತೊಂದು ದಾಳಿಯಲ್ಲಿ ಎಂಟು ಜನ ಯಾತ್ರಿಗಳು ಮೃತಪಟ್ಟಿದ್ದರು. ಹೀಗೆ ಪ್ರತಿ ವರ್ಷವೂ ಆತಂಕದಲ್ಲಿಯೇ ಭಕ್ತರು ಅಮರನಾಥ ಯಾತ್ರೆಯನ್ನು ಕೈಗೊಳ್ಳುತ್ತಿದ್ದು, ಇದೀಗ ಇದಕ್ಕೆಲ್ಲ ಬಂದೋಬಸ್ತ್ ಮಾಡಲು ಕೇಂದ್ರ ಸರಕಾರ ಮಾಸ್ಟರ್ ಪ್ಲಾನ್ ಮಾಡಿದೆ!!

ಜಮ್ಮು ಕಾಶ್ಮೀರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಆರಂಭಗೊಳ್ಳಲಿದ್ದು, ಮಂಜಿನಿಂದ ರೂಪಿತಗೊಳ್ಳುವ ಶಿವಲಿಂಗದ ದರ್ಶನಕ್ಕಾಗಿ ಅಪಾರ ಭಕ್ತರು ಅಲ್ಲಿಗೆ ತೆರಳುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಯಾತ್ರೆಗೆ ಉಗ್ರರ ಬೆದರಿಕೆಯಿದ್ದು, ಈ ಹಿನ್ನಲೆಯಲ್ಲಿ ಯಾತ್ರೆಯ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೇ, ಯಾತ್ರೆಯ ಭದ್ರತೆಗಾಗಿ ಈ ವರ್ಷ ಹೆಚ್ಚುವರಿಯಾಗಿ 5 ಸಾವಿರ ಪ್ಯಾರಮಿಲಿಟರಿ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲು ಸರಕಾರ ನಿರ್ಧರಿಸಿದೆ.

ಗೃಹ ಸಚಿವಾಲಯ ಬಿಚ್ಚಿಟ್ಟ ಮಾಹಿತಿಯಿಂದ ಅಮರನಾಥ ಯಾತ್ರಿಕರು ನಿರಾಳ!!

ಈಗಾಗಲೇ ಉಗ್ರರು ಭಾರತದೊಳಗೆ ಬರುತ್ತಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ದಳ (ಐಬಿ) ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿದ್ದು, ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದರು!!

ಆದರೆ ಇದೀಗ ಯಾತ್ರೆಯ ಭದ್ರತೆಗಾಗಿ ಈ ವರ್ಷ ಹೆಚ್ಚುವರಿಯಾಗಿ 5 ಸಾವಿರ ಪ್ಯಾರಮಿಲಿಟರಿ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲು ಸರಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೇ, ಜೂನ್ 28ರಿಂದ ಆರಂಭಗೊಳ್ಳಲಿರುವ ಅಮರನಾಥ ಯಾತ್ರೆಗೆ ಈಗಾಗಲೇ 45 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ. ಆದರೆ ಇದೀಗ “ಅಮರನಾಥ ಯಾತ್ರೆಯ ವೇಳೆ ಕೇಂದ್ರ 225 ತುಕಡಿಗಳನ್ನು ಅಂದರೆ ಸುಮಾರು 22500 ಸಿಬ್ಬಂದಿಗಳನ್ನು ಯಾತ್ರೆಯ ಮಾರ್ಗದುದ್ದಕ್ಕೂ ನಿಯೋಜಿಸುತ್ತದೆ. ಕಳೆದ ವರ್ಷ ಹೆಚ್ಚುವರಿಯಾಗಿ 175ರಿಂದ 180 ತುಕುಡಿಗಳನ್ನು ನಿಯೋಜಿಸಲಾಗಿತ್ತು. ಈ ವರ್ಷ 5 ಸಾವಿರ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜನೆಗೊಳಿಸಲಾಗುತ್ತಿದೆ” ಎಂದು ಗೃಹಸಚಿವಾಲಯ ತಿಳಿಸಿದೆ.

ಉಗ್ರರನ್ನು ಚೆಂಡಾಡಲು ಕೇಂದ್ರ ಸರಕಾರವು ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದಲ್ಲದೇ, ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಅಮರನಾಥನ ದರ್ಶನಕ್ಕೆ ತೆರಳುವ ಭಕ್ತರಿಗೆ ಹೆಚ್ಚಿನ ಭದ್ರತೆಯನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿರುವ ವಿಚಾರ ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ.

ಮೂಲ:
http://news13.in/archives/103851
– ಅಲೋಖಾ

Editor Postcard Kannada:
Related Post