X

ಚೀನಾದಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಟ್ರ್ಯಾಕಿಂಗ್ ಮಾರಾಟ! ಹೈ ಅಲರ್ಟ್ ಆಗಬೇಕಾ ಭಾರತ!? ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟ ಹಾಂಕಾಂಗ್‍ನ ಪತ್ರಿಕೆ!!

ಪ್ರತಿಬಾರಿಯೂ ಭಾರತದ ವಿರುದ್ಧ ಕಿಡಿಕಾರುತ್ತಲೇ ಬರುತ್ತಿರುವ ಚೀನಾ ಪದೇ ಪದೇ ಯುದ್ಧದ ವಿಚಾರವಾಗಿ ಕ್ಯಾತೆ ತೆಗೆಯುತ್ತಿದ್ದು, ಭಾರತದ ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಲೇ ಬರುತ್ತಿತ್ತು. ಅಷ್ಟೇ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಹಿಡಿದ ಕ್ಷಣದಿಂದಲೂ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಬರುತ್ತಿದ್ದಲ್ಲದೇ ನರೇಂದ್ರ ಮೋದಿ ವಿರುದ್ದ ಸಮರ ಸಾರಿತ್ತು ಕೂಡ!! ಆದರೆ ಈ ಬಾರಿ ಭಾರತಕ್ಕೆ ಸೆಡ್ಡು ಹೊಡೆಯಬೇಕು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಚೀನಾ ಮತ್ತೆ ಖ್ಯಾತೆ ತೆಗೆದಿದೆ!! ನಮ್ಮ ಶತ್ರು ರಾಷ್ಟ್ರಕ್ಕೆ ಒಳಗೊಳಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡುತ್ತಿದೆ!!

ಚೀನಾದಿಂದ ಪಾಕ್‍ಗೆ ಕ್ಷಿಪಣಿ ಟ್ರ್ಯಾಕಿಂಗ್!!

ಒನ್ ಬೆಲ್ಟ್ ಒನ್ ರೋಡ್ ಮತ್ತು ಆರ್ಥಿಕ ಕಾರಿಡಾರ್ ಯೋಜನೆಗಳಿಗೆ ಪಾಕಿಸ್ತಾನಕ್ಕೆ ಪಾಲುದಾರಿಕೆ ನೀಡಿ ಪೆÇೀಷಿಸುತ್ತಿರುವ ಚೀನಾ, ಈಗ ಪಾಕ್ ಸೇನೆಯ ಬಲ ಹೆಚ್ಚಿಸುವ ಕ್ರಮಕ್ಕೆ ಮುಂದಾಗಿದೆ. ಅತ್ಯಾಧುನಿಕ ಮತ್ತು ಶಕ್ತಿಶಾಲಿ ಕ್ಷಿಪಣಿ ಜಾಡು ಪತ್ತೆ ವ್ಯವಸ್ಥೆ (ಟ್ರ್ಯಾಕಿಂಗ್)ಯೊಂದನ್ನು ಪಾಕಿಸ್ತಾನಕ್ಕೆ ಚೀನಾ ಮಾರಾಟ ಮಾಡಿದೆ ಎಂದು ಹಾಂಗ್‍ಕಾಂಗ್‍ನ ದೈನಿಕವೊಂದು ವರದಿ ಮಾಡಿದೆ.

ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟ ಹಾಂಕಾಂಗ್ ಪತ್ರಿಕೆ!!

ಕೈಲಾಗದವನು ಮೈಯೆಲ್ಲಾ ಪರಚಿಕೊಂಡಂತೆ ಎಂಬ ಮಾತು ನಾವು ಕೇಳಿರಲೇ ಬೇಕು!! ಹಾಗಾಯಿತು ಚೀನಾದ ಕಥೆ ನೋಡಿ!! ಡೋಕ್ಲಾಮ್ ವಿಚಾರದಲ್ಲಿ ಈಗಾಗಲೇ ಸೋತು ಸುಣ್ಣವಾಗಿದ್ದ ಚೀನಾಗೆ ಹುಚ್ಚು ಹಿಡಿದಂತಾಗಿರಬೇಕು!! ಹೇಗಾದರೂ ಮಾಡಿ ಭಾರತಕ್ಕೆ ಸೆಡ್ಡುಹೊಡೆಯಬೇಕು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಪಾಕಿಸ್ತಾನಕ್ಕೆ ಕ್ಷಿಪಣಿ ಟ್ರ್ಯಾಕಿಂಗ್‍ಅನ್ನು ಮಾರಾಟ ಮಾಡಿದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ!! ಈಗಾಗಲೇ ಹೊಸ ಕ್ಷಿಪಣಿಗಳ ಪರೀಕ್ಷೆ ಮತ್ತು ಅಭಿವೃದ್ಧಿಯಲ್ಲಿ ಈ ವ್ಯವಸ್ಥೆಯನ್ನು ಪಾಕಿಸ್ತಾನ ಬಳಕೆ ಮಾಡಲು ಆರಂಭಿಸಿದ್ದು, ಎಷ್ಟು ಮೊತ್ತಕ್ಕೆ ಟ್ರ್ಯಾಕಿಂಗ್ ವ್ಯವಸ್ಥೆ ಮಾರಾಟವಾಗಿದೆ ಎಂಬ ವಿವರಗಳು ಲಭ್ಯವಿಲ್ಲ.

ಚೀನಾ ವಿಜ್ಞಾನ ಅಕಾಡೆಮಿಯಲ್ಲಿನ (ಸಿಎಎಸ್) ಆಪ್ಟಿಕ್ಸ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಸಂಶೋಧಕ ಝೆಂಗ್ ಮೆಂಗ್ವೆಯಿ ಕ್ಷಿಪಣಿ ವ್ಯವಸ್ಥೆ ಮಾರಾಟದ ವಿಚಾರವನ್ನು ತಿಳಿಸಿದ್ದಾಗಿ ದೈನಿಕ ಹೇಳಿಕೊಂಡಿದೆ. ಬೆಳಕಿನ ಮೂಲಕ ಕ್ಷಿಪಣಿ ಮಾರ್ಗ ಪತ್ತೆ ಮಾಡುವ ಅತಿ ಸೂಕ್ಷ್ಮ ತಂತ್ರಜ್ಞಾನದ ಸಾಧನವನ್ನು ಪಾಕಿಸ್ತಾನಕ್ಕೆ ರಫ್ತು ಮಾಡಿರುವ ಮೊದಲ ರಾಷ್ಟ್ರ ಚೀನಾ ಎಂದು ಸಿಎಎಸ್ ವೆಬ್‍ಸೈಟ್ ತಿಳಿಸಿದೆ!!

ಈ ವ್ಯವಸ್ಥೆ ಪಾಕಿಸ್ತಾನ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಮಾರ್ಗ ಪತ್ತೆ ಸಾಧನಗಳಿಗಿಂತ ಸಂಕೀರ್ಣವಾಗಿದ್ದು, ಇದರಿಂದಾಗಿ ಬಹು ಸಿಡಿತಲೆ ವ್ಯವಸ್ಥೆ ಹೊಂದಲು ಉತ್ಸುಕವಾಗಿರುವ ಪಾಕ್‍ಗೆ ಆನೆಬಲ ಬಂದಂತಾಗಿದೆ ಎಂದು ಸಿಎಎಸ್ ಹೇಳಿದೆ.

ಪಾಕಿಸ್ಥಾನಕ್ಕೆ ಚೀನ ಮಿಲಿಟರಿ ನೆರವು ನೀಡುತ್ತಿರುವುದನ್ನು ಅಂತಾರಾಷ್ಟ್ರೀಯ ಸಮುದಾಯ ಬಹಳ ಕಾಲದಿಂದಲೂ ಶಂಕಿಸುತ್ತಾ ಬಂದಿದೆ. ಇಸ್ಲಾಮಾಬಾದ್‍ಗೆ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮಾರಾಟ ಮಾಡುವ ಮೂಲಕ ದಕ್ಷಿಣ ಏಶ್ಯದಲ್ಲಿನ ಪ್ರಾಬಲ್ಯದ ಸಂತುಲನೆಯನ್ನು ಮಾರ್ಪಡಿಸುವ ಚೀನದ ಹುನ್ನಾರಕ್ಕೆ ಇದು ಬಲವಾದ ಸಾಕ್ಷ್ಯವನ್ನು ಒದಗಿಸಿದಂತಾಗಿದೆ.

ದಕ್ಷಿಣ ಚೀನದ ಮಾರ್ನಿಂಗ್ ಪೆÇೀಸ್ಟ್ ಮಾಡಿರುವ ವರದಿಯಲ್ಲಿ ಸಹ ಪಾಕಿಸ್ಥಾನ ಈಗಾಗಲೇ ಚೀನ ಕೊಟ್ಟಿರುವ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಫೈರಿಂಗ್ ರೇಂಜ್‍ನಲ್ಲಿ ಬಳಕೆಗಾಗಿ ನಿಯೋಜಿಸಿದೆ ಮತ್ತು ಆ ಮೂಲಕ ತನ್ನದೇ ಹೊಸ ಕ್ಷಿಪಣಿಯ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲು ಉದ್ದೇಶಿಸಿದೆ ಎಂದು ಹೇಳಿದೆ. ಈ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಖರೀದಿಸಲು ಚೀನಕ್ಕೆ ಪಾಕಿಸ್ಥಾನ ಎಷ್ಟು ಹಣ ಪಾವತಿಸಿದೆ ಎಂಬುದು ಇನ್ನೂ ಮಾಹಿತಿ ಲಭ್ಯವಾಗಿಲ್ಲ!! ಆದರೆ ಚೈನೀಸ್ ಅಕಾಡೆಮಿ ಆಫ್ ಸೈನ್ಸ್ (ಸಿಎಎಸ್) ಹೇಳುವ ಪ್ರಕಾರ ಪಾಕಿಸ್ಥಾನಕ್ಕೆ ಈ ಅತ್ಯಾಧುನಿಕ ಹಾಗೂ ಸೂಕ್ಷ್ಮ ಸಂವೇದಿ ಉಪಕರಣವನ್ನು ಕೊಟ್ಟಿರುವ ಮೊದಲ ದೇಶ ಚೀನ ಆಗಿದೆ.

ವಿಶೇಷವೆಂದರೆ ಭಾರತ ಅಗ್ನಿ 5 ಐಸಿಬಿಎಂ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾಯಿಸಿದ ಕೇವಲ ಎರಡು ತಿಂಗಳ ಒಳಗಾಗಿ ಚೀನ, ಪಾಕಿಸ್ಥಾನಕ್ಕೆ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವವಸ್ಥೆಯನ್ನು ಮಾರಿರುವುದು ಗಮನಾರ್ಹವಾಗಿದೆ. ಭಾರತದ ಅಗ್ನಿ 5 ಐಸಿಬಿಎಂ ಕ್ಷಿಪಣಿಯು 5,000 ಕಿ.ಮೀ. ದೂರವನ್ನು ಕ್ರಮಿಸುವ ಸಾಮಥ್ರ್ಯ ಹೊಂದಿದ್ದು ಅದು ಬೀಜಿಂಗ್ ಮತ್ತು ಶಾಂಘೈಯನ್ನು ಗುರಿ ಇರಿಸಿಕೊಂಡು ದಾಳಿ ನಡೆಸಲು ಶಕ್ತವಾಗಿದೆ.

ಆದರೆ ಇತ್ತೀಚೆಗೆಯಷ್ಟೇ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಜಾಗತೀಕರಣ ಕುರಿತು ದಾವೋಸ್ ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಹೇಗೆ ಭವಿಷ್ಯದ ದೃಷ್ಟಿಯಿಂದ ಹೆಜ್ಜೆಯಿಡಬೇಕು ಎನ್ನುವುದನ್ನು ವಿಶ್ವದ ನಾಯಕರ ಎದುರು ಮಾಡಿದ ಭಾಷಣಕ್ಕೆ ಇದೇ ಮೊದಲು ಎನ್ನುವಂತೆ ಚೀನಾ ಪ್ರಶಂಸಿತ್ತಾದರೂ ಒಳಗೊಳಗೆ ಈ ರೀತಿ ಭಾರತವನ್ನು ಎತ್ತಿಕಟ್ಟುವಂತೆ ಪಾಕಿಸ್ತಾನಕ್ಕೆ ಚೀನಾ ಸಹಾಯ ಮಾಡುತ್ತಿದೆ!!

ಹಾಗೆಯೇ “ಕಳೆದ ಮೂರು ವರ್ಷಗಳಿಂದ ಭಾರತದ ರಾಜತಾಂತ್ರಿಕತೆ, ಸ್ಪಂದನಶೀಲ ಮತ್ತು ಸಮರ್ಥವಾಗಿದೆ. ನೂತನ ಸನ್ನಿವೇಶದಲ್ಲಿ ಭಾರತವನ್ನು ಒಂದು ಶ್ರೇಷ್ಠ ಶಕ್ತಿಯಾಗಿ ರೂಪಿಸುವಲ್ಲಿನ ಕಾರ್ಯ ತಂತ್ರ- ಮೋದಿ ಸಿದ್ಧಾಂತ ಮತ್ತು ವೈಶಿಷ್ಟ್ಯತೆಯನ್ನು ವಿದೇಶಾಂಗ ನೀತಿಯಲ್ಲಿ ಕಾಣಬಹುದಾಗಿದೆ” ಎಂದು ಚೀನಾ ವಿದೇಶಾಂಗ ಸಚಿವಾಲಯದೊಂದಿಗೆ ಗುರುತಿಸಿಕೊಂಡಿರುವ ಚೀನಾ ಇನ್ಸ್‍ಟಿಟ್ಯೂಟ್ ಆಫ್ ಇಂಟನ್ರ್ಯಾಷನಲ್ ಸ್ಟಡೀಸ್ (ಸಿಐಐಎಸ್) ಉಪಾಧ್ಯಕ್ಷ ರೊಂಗ್ ಯಿಂಗ್ ಹೇಳಿದ್ದರು.

ಆದರೆ ಮೇಲ್ನೋಟಕ್ಕೆ ಚೀನಾ ಭಾರತವನ್ನು ಹೊಗಳಿದರೂ ಕೂಡ ತನ್ನ ಕುತಂತ್ರ ಬುದ್ದಿಯನ್ನು ತೋರಿಸುತ್ತಲೇ ಇದ್ದು, ದೋಕ್ಲಾಮ್ ವಿಚಾರದಲ್ಲಿ ಭಾರತದ ರಾಜತಾಂತ್ರಿಕತೆಗೆ ಹೆದರಿ ಹಿಂದೆ ಸರಿದಿದ್ದರೂ ಕೂಡ ಮತ್ತೆ ಗಡಿಯಲ್ಲಿ ತನ್ನ ಶಸ್ತ್ರಾಸ್ತ್ರಗಳ ನಿಯೋಜನೆಯ ನಂತರ ಚೀನಾ ಭಾರತಕ್ಕೆ ಪರೋಕ್ಷವಾಗಿ ತನ್ನ ಸಾಮಥ್ರ್ಯವನ್ನು ತಿಳಿಸುತ್ತಲೇ ಇದೆ. ಆದರೆ ಇದರ ಪ್ರತಿತಂತ್ರವಾಗಿ ಚೀನಾದ ಯಾವುದೇ ಮೂಲೆಗೂ ತಲುಪಬಲ್ಲ ಪರಮಾಣು ಸಾಮಥ್ರ್ಯದ ಅಗ್ನಿ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿ ಚೀನಾವನ್ನು ಪತರುಗಟ್ಟುವಂತೆ ಮಾಡಿತ್ತು ಭಾರತ!!

ಒಟ್ಟಾರೆಯಾಗಿ ಚೀನಾ ಯಾವ ರೀತಿಯೂ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಸಹಾಯ ಮಾಡಿದರೂ ಭಾರತ ಹೆದರುವುದಿಲ್ಲ!! ಯಾಕೆಂದರೆ ಇದು ಮೋದಿ ಯುಗ!! ಯಾವ ಕಷ್ಟ ಬಂದರೂ ಎದೆಯೊಡ್ಡಿ ನಿಲ್ಲವ ಸಾಮಥ್ರ್ಯ ಭಾರತಕ್ಕಿದೆ ಎಂಬುವುದನ್ನು ಯಾವತ್ತೂ ಚೀನಾ ಪಾಕ್ ಮರೆಯುವುದಿಲ್ಲ!!

source:
https://timesofindia.indiatimes.com/world/pakistan/in-unprecedented-deal-pakistan-acquires-powerful-missile-tracking-system-from-china-report/articleshow/63412887.cms
ಪವಿತ್ರ

Editor Postcard Kannada:
Related Post