X

ಅಂದು ಮೀನು ತಿಂದು ಧರ್ಮಸ್ಥಳಕ್ಕೆ ಅಪಚಾರ ಮಾಡಿದ ಸಿದ್ದರಾಮಯ್ಯ ಇಂದು ಆರೋಗ್ಯಕ್ಕಾಗಿ ಧರ್ಮಸ್ಥಳದ ಮೊರೆ ಹೋಗಿದ್ದಾರೆ…!”ಕಾಲಾಯ ತಸ್ಮೈ ನಮಃ”…

ಸಿದ್ದರಾಮಯ್ಯ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು. ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು. ಈ ಹಿಂದೆ ತನ್ನ ನೇತೃತ್ವದ ಕರ್ನಾಟಕ ಸರ್ಕಾರವಿದ್ದ ಸಂದರ್ಭದಲ್ಲಿ ಮಾಡಬಾರದ ಅನ್ಯಾಯಗಳನ್ನು ಮಾಡಿ ಇದೀಗ ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಾ ಮನೆಯಲ್ಲೇ ಕುಳಿತಿರುವ ಸೋಗಲಾಡಿ ನಾಯಕ. ಇದೀಗ ಈ ಕಾಂಗ್ರೆಸ್ ನಾಯಕ ತನ್ನ ಬದುಕಿಗಾಗಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೀನು ಹಾಗೂ ಕೋಳಿ ಮಾಂಸ ತಿಂದು ಜಗತ್ತೇ ಪೂಜಿಸುವಂತಹ ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನವನ್ನು ಮಾಡಿದ್ದರು. ಈ ವಿಚಾರ ಇಡೀ ದೇಶದಾದ್ಯಂತ ಸುದ್ಧಿಯಾಗಿತ್ತು. ಓರ್ವ ಜವಬ್ಧಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಷ್ಟೊಂದು ಅಸಡ್ಡೆಯನ್ನು ಅನುಸರಿಸಿದ್ದು ಭಾರೀ ಖಂಡನೆಗೆ ಪಾತ್ರವಾಗಿತ್ತು. ಈ ಬಗ್ಗೆ ಸ್ವತಃ ಸಿದ್ದರಾಮಯ್ಯನವರ ಬಳಿ ಕೇಳಿದಾಗ “ಮೀನು ತಿಂದು ದೇವಸ್ಥಾನಕ್ಕೆ ತೆರಳಬಾರದು ಎಂದು ದೇವರು ಹೇಳಿದ್ದಾರಾ? ಬೇಡರ ಕಣ್ಣಪ್ಪನೇ ಮಾಂಸ ತಿಂದಿಲ್ವಾ?” ಎಂದು ಉಡಾಫೆ ಉತ್ತರವನ್ನು ನೀಡಿದ್ದರು. ಇದು ಧರ್ಮಸ್ಥಳ ಮಾತ್ರವಲ್ಲದೆ ಹಿಂದೂ ಸಮಾಜಕ್ಕೇ ಆಕ್ರೋಶವನ್ನು ಹುಟ್ಟುಹಾಕುವಂತೆ ಮಾಡಿತ್ತು.

ನಂತರ ನಡೆದಿದ್ದೇ ಇತಿಹಾಸ. ಕಳೆದ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕಾಂಗ್ರೆಸ್ ಪಕ್ಷ ಕಂಡು ಕೇಳರಿಯದಂತೆ ಹೀನಾಯ ಸ್ಥಿತಿಗೆ ತಲುಪಿ ಬಿಜೆಪಿಯವರ ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಕನಸಿಗೆ ಮುನ್ನುಡಿಯಿಟ್ಟಿತ್ತು. ಆರಂಭದಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ ಅಲ್ಲಿನ ಸೋಲಿನ ಭಯದಿಂದ ನಂತರ ಬಾದಾಮಿ ವಿಧಾನ ಸಭಾ ಕ್ಷೇತ್ರವನ್ನು ಹುಡುಕಿಕೊಂಡು ಹೋಗಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಕೇವಲ 1500 ಮತಗಳ ಅಂತರದಿಂದ ಗೆಲುವು ಕಂಡಿದ್ದರು.

ಮತ್ತೆ ನಾನೇ ಮುಖ್ಯಮಂತ್ರಿ ಎಂದು ಹೋದಲ್ಲಿ ಬಂದಲ್ಲಿ ಕೊಚ್ಚಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಕಂಡು ಕೇಳರಿಯದ ಸ್ಥಿತಿಗೆ ತಲುಪಿದ್ದರು. ಅತಂತ್ರ ವಿಧಾನ ಸಭೆ ನಿರ್ಮಾಣವಾದ ಕಾರಣ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಲು ಆರಂಭಿಸಿದ್ದವು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಸರ್ಕಾರ ಮಾತ್ರವಲ್ಲದೆ ಸ್ವತಃ ಕಾಂಗ್ರೆಸ್ ಪಕ್ಷದಲ್ಲೇ ನಯಾ ಪೈಸೆಯೂ ಬೆಲೆನೇ ಇಲ್ಲದ ನಾಯಕನಾಗಿ ಬಿಟ್ಟಿದ್ದರು.

ಮತ್ತೆ ನಮೋ ಮಂಜುನಾಥ..!

ಇದೀಗ ಎಲ್ಲವನ್ನೂ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 1500 ಅಂತರದಲ್ಲಿ ಗೆದ್ದ ಬದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ ಅಷ್ಟೆ. ಈ ಎಲ್ಲಾ ಗೋಳಾಟಗಳನ್ನು ಮನಗಂಡ ಮಾಜಿ ಮುಖ್ಯಮಂತ್ರಿ ಹಾಗೂ ಬದಾಮಿ ಶಾಸಕ ಸಿದ್ದರಾಮಯ್ಯ ಮತ್ತೆ ಧರ್ಮಸ್ಥಳದ ಮೊರೆ ಹೋಗಿದ್ದಾರೆ. ಒಂದೊಮ್ಮೆ ಮಾಂಸ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಅತಿದೊಡ್ಡ ಅಪಮಾನ ಮಾಡಿದ್ದ ಸಿದ್ದರಾಮಯ್ಯ ಇದೀಗ ಅದೇ ಧರ್ಮಸ್ಥಳಕ್ಕೆ ತಮ್ಮ ಆರೋಗ್ಯ ಕಾಪಾಡಲು ಆಗಮಿಸಿದ್ದಾರೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ರಾಂತಿಗಾಗಿ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಚುನಾವಣೆ, ಸರ್ಕಾರ ಅಂತ ಓಡಾಟ ನಡೆಸಿ ಆರೋಗ್ಯ ಹಾಳುಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಪ್ರಕೃತಿ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಈ ಮೂಲಕ ದಹಿಸಿ ಹೋಗಿದ್ದ ಆರೋಗ್ಯವನ್ನು ಮತ್ತೆ ಪಡೆಯಲು ಯಾವ ಪುಣ್ಯ ಕ್ಷೇತ್ರಕ್ಕೆ ಸವಮಾನ ಮಾಡಿದ್ದರೋ ಅದೇ ಕ್ಷೇತ್ರಕ್ಕೆ ಆಗಮಿಸಿದ್ದಾರೆ.

ಸಿದ್ದರಾಮಯ್ಯನವರ ಹಿನ್ನೆಡೆಯನ್ನು ರಾಜ್ಯದ ಜನತೆ ಇದು ಮಂಜುನಾಥನಿಗೆ ಮಾಡಿದ ಅವಮಾನದ ಫಲ ಎಂದೇ ವ್ಯಾಖ್ಯಾನಿಸಲಾಗಿತ್ತು. ಇದೀಗ ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರ ಬಗ್ಗೆ ಜನತೆ ಟ್ರೋಲ್‍ನಲ್ಲಿ ತೊಡಗಿಕೊಂಡಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post