X

ಬ್ರೇಕಿಂಗ್! ಸಾಲಮನ್ನ ಮಾಡಿದ್ರೆ ಕಮಿಷನ್ ಬರಲ್ಲ ಎಂದ ಕುಮಾರಸ್ವಾಮಿ! ಸ್ಪೋಟಗೊಂಡ ಸಿದ್ದು-ಕುಮಾರಸ್ವಾಮಿ ಯುದ್ಧ!

ಕಾಂಗ್ರೆಸ್ ಹಾಗೂ ಜನತಾದಳ ಸೇರಿಕೊಂಡು ಈ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿದಾಗಿನಿಂದ ಈ ರಾಜ್ಯದಲ್ಲಿ ಎಲ್ಲವೂ ಅಲ್ಲೋ ಕಲ್ಲೋಲ. ಒಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತೃಪ್ತಿಯಾದರೆ ಮತ್ತೊಂದು ಕಡೆ ಸಚಿವ ಆಕಾಂಕ್ಷಿಗಳ ಅಸಮ್ಮತಿ. ಈ ಮಧ್ಯೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ತಲೆಗೆ ಕೈ ಇಟ್ಟುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

“ಮುಖ್ಯಮಂತ್ರಿ ಸ್ಥಾನ ಭಿಕ್ಷೆ ಬೇಡಿ ಸಿಕ್ಕಿದ್ದಲ್ಲ. ನನಗೆ ಎಲ್ಲವೂ ಗೊತ್ತು. ಬಜೆಟ್ ಮಂಡಿಸಬಾರದು ಎಂದರೆ ಅದನ್ನು ನಾನು ಕೇಳಿಕೊಂಡು ಕೂರಲು ಸಾಧ್ಯವಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಬಿಡುತ್ತೋ ಗೊತ್ತಿಲ್ಲ. ನಾನು ಎಲ್ಲಿವರೆಗೆ ಇರ್ತೀನಿ ಅನ್ನೋದು ಇಲ್ಲಿ ಮುಖ್ಯ ಅಲ್ಲ. ನಾನು ಯಾರ ಹಂಗಿನಲ್ಲೂ ಇಲ್ಲ. ಕೆಲವರು ಸರ್ಕಾರದ ನೆರವಿಗೆ ಬಾರದಂತೆ ಕಿವಿ ಊದುತ್ತಿದ್ದಾರೆ”…

ಇದು ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದ ಮಾತುಗಳು. ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಸರ್ಕಾರ ಕರ್ನಾಟಕದಲ್ಲಿ ಜಾರಿಗೆ ಬಂದಾಗಿನಿಂದ ಒಂದಲ್ಲಾ ಒಂದು ಕಾರಣದಿಂದ ಕಿರಿ ಕಿರಿ ಉಂಟು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಬಜೆಟ್ ವಿಚಾರದಲ್ಲೂ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಅಡ್ಡಿಯುಂಟುಮಾಡುತ್ತಿದ್ದಾರೆ.

“ನಮ್ಮ ಸರ್ಕಾರದಲ್ಲಿ ಮಂಡಿಸಿದ್ದ ಬಜೆಟ್‍ನ್ನು ಮುಂದುವರೆಸಲಿ. ಹೊಸದಾಗಿ ಬಜೆಟ್ ಮಂಡಿಸುವ ಅಗತ್ಯ ಇಲ್ಲ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದ ಬೆನ್ನಲ್ಲೇ ಈ ವಿವಾದಗಳು ಎದ್ದಿದ್ದವು. ಇದೀಗ ಮತ್ತೆ ಈ ವಿಚಾರದಲ್ಲಿ ಭೂಕಂಪವೇ ನಡೆಯುತ್ತಿದೆ.

ಕಮಿಷನ್ ಲೆಕ್ಕಾಚಾರ.!

ಈ ಮಧ್ಯೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಕಮಿಷನ್ ವಿಚಾರವನ್ನು ತೆಗೆದಿದ್ದಾರೆ. ಇದೀಗ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ. “ವಿರೋಧ ಪಕ್ಷದ ನಾಯಕರು ಪದೇ ಪದೇ ಸಾಲಮನ್ನಾ ಸಾಲಮನ್ನಾ ಎಂದು ಹೇಳುತ್ತಿದ್ದಾರೆ. ಸಾಲಮನ್ನಾ ಮಾಡುವ ಉದ್ಧೇಶ ನನಗೂ ಇದೆ. ಸಾಲ ಮನ್ನ ಮಾಡುವ ಬಗ್ಗೆ ನಾನೂ ಚಿಂತಿಸುತ್ತಿದ್ದೇನೆ. ಇದಕ್ಕೆ ಮೈತ್ರಿ ಪಕ್ಷದ ವಿರೋಧ ಇದ್ದರೂ ನಾನು ಸಾಲಮನ್ನಾ ಮಾಡಲು ಮುಂದಾಗುತ್ತೇನೆ. ಆದರೆ ಸಾಲ ಮನ್ನ ಮಾಡಿದ್ರೆ ನನಗೇನೂ ಕಮಿಷನ್ ಬರೋದಿಲ್ಲ” ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದೀಗ ಈ ಹೇಳಿಕೆಯನ್ನೇ ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಸದಾ ಒಂದಿಲ್ಲೊಂದು ಅನಾಹುತಗಳಿಗೆ ಕಾರಣವಾಗಿರುವ ಕಾಂಗ್ರೆಸ್ ಹಾಗೂ ಜನತಾ ದಳದ ಮೈತ್ರಿ ಸರ್ಕಾರದ ನಡೆಗಳು ಇದೀಗ ಮತ್ತೆ ಅತಂತ್ರ ಸ್ಥಿತಿಗೆ ತಲುಪಿದೆ. ಈ ಮೂಲಕ ಈ ಮೈತ್ರಿ ಸರ್ಕಾರ ಒಂದು ವರ್ಷವೂ ಪೂರ್ಣಗೊಳಿಸಲ್ಲ ಎನ್ನುವ ವಿರೋಧ ಪಕ್ಷಗಳ ಭವಿಷ್ಯ ನಿಜವಾಗುವಂತೆ ಕಾಣುತ್ತಿದೆ.

-ಏಕಲವ್ಯ

Editor Postcard Kannada:
Related Post