X

ನಕ್ಸಲರಿಗೆ ಛತ್ತೀಸ್‍ಗಢ ಸರಕಾರ ನೀಡಿದೆ ಸುವರ್ಣಾವಕಾಶ!! ಸಮಾಜದಲ್ಲಿ ಹೊಸ ಬದುಕನ್ನು ಪ್ರಾರಂಭಿಸಲು ನಕ್ಸಲರು ಮಾಡಿದ್ದಾದರೂ ಏನು ಗೊತ್ತೇ??

ನಕ್ಸಲರ ಹಾವಳಿ ದೇಶಾದ್ಯಂತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ನರೇಂದ್ರ ಮೋದಿ ಸರಕಾರವು ಈಗಾಗಲೇ ನಕ್ಸಲರ ನಿಗ್ರಹಕ್ಕೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ, 16 ಮಹಿಳೆಯರು ಸೇರಿದಂತೆ 59 ಜನ ನಕ್ಸಲರು ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ತಮ್ಮ ಚಟುವಟಿಕೆಯನ್ನು ತ್ಯಜಿಸಿ ಶರಣಾಗಿದ್ದಲ್ಲದೇ, ಮಹಿಳಾ ನಕ್ಸಲರು  ಪೊಲೀಸರಿಗೆ ಶಸ್ತ್ರಾಸ್ತ್ರ ಸಮರ್ಪಿಸಿ ಶರಣಾಗಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ಪೊಲೀಸರಿಗೆ ಶರಣಾಗಿದ್ದಂತಹ 100ಕ್ಕೂ ಹೆಚ್ಚು ನಕ್ಸಲರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಶುರು ಮಾಡಿದ್ದಾರೆ!!

ಹೌದು…. ಬಹುತೇಕ ನಕ್ಸಲರು ಕಾಡಿನಲ್ಲಿ ವಾಸಿಸಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗೀದಾರರಾದರೆ ಇನ್ನು ಕೆಲವು ನಕ್ಸಲರು ನೂತನ ಬದುಕನ್ನು ಪ್ರಾರಂಭಿಸಬೇಕೆಂಬ ನಿಟ್ಟಿನಲ್ಲಿ ಪೊಲೀಸರಿಗೆ ಶರಣಾಗಿ ಸಮಾಜದಲ್ಲಿ ಹೊಸ ಬದುಕನ್ನು ಪ್ರಾರಂಭಿಸಲು ಶುರು ಮಾಡಿದ್ದಾರೆ!! ಹಾಗಾಗಿ ಇದೀಗ ಪೊಲೀಸರಿಗೆ ಶರಣಾಗಿದ್ದ 100ಕ್ಕೂ ಹೆಚ್ಚು ನಕ್ಸಲರು ನೂತನ ಬದುಕನ್ನು ಆರಂಭಿಸುವ ಸಲುವಾಗಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇಬೇಕು!!

ಪೊಲೀಸರಿಗೆ ಶರಣಾಗಿದ್ದ 100 ಕ್ಕೂ ಹೆಚ್ಚು ನಕ್ಸಲರು ಹೊಸ ಜೀವನ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಇಂದಿರಾಗಾಂಧಿ ಮುಕ್ತ ವಿವಿಯಿಂದ ನಡೆಸಲಾಗುವ (ಬಿಪಿಪಿ) ಪರೀಕ್ಷೆಗೆ ಹಾಜರಾಗಿದ್ದಾರೆ. ಈಗಾಗಲೇ ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ 16 ಮಹಿಳೆಯರು ಸೇರಿದಂತೆ 59 ಜನ ನಕ್ಸಲರು ಶರಣಾಗಿದ್ದರಲ್ಲದೇ, ಒಟ್ಟು 59 ಮಂದಿ ನಕ್ಸಲರು ತಮ್ಮ ಚಟುವಟಿಕಯನ್ನು ತ್ಯಜಿಸಿ ಶರಣಾಗಿದ್ದರೆ, ಮಹಿಳಾ ನಕ್ಸಲರು ಪೊಲೀಸರಿಗೆ ಮೊದಲೇ ಶಸ್ತ್ರಾಸ್ತ್ರ ಸಮರ್ಪಿಸಿ ಶರಣಾಗಿದ್ದರು ಅಂತ ಸುಕ್ಮಾ ಜಿಲ್ಲೆ ಪೊಲೀಸ್ ಸೂಪರಿಂಟೆಂಡೆಂಟ್ ಅಭಿಷೇಕ್ ಮೀನಾ ಮಾಹಿತಿ ನೀಡಿದ್ದರು!!

ಛತ್ತೀಸ್‍ಗಢ ಹಾಗೂ ಒಡಿಶಾ ರಾಜ್ಯಗಳಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಾಗಿದ್ದು, ಇತ್ತೀಚಿಗೆ ಹಲವರು ಪೊಲೀಸರಿಗೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದರು. ಸದ್ಯ ಇವರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ ಸರಕಾರವು ಮುಂದಾಗಿದ್ದು, ಪೂರಕ ಯೋಜನೆಗಳನ್ನು ರೂಪಿಸಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್ ಪಿಎಫ್ ಯೋಧರ ವಾಹನವನ್ನು ನಕ್ಸಲರು ಬಾಂಬ್ ಇಟ್ಟು ಸ್ಫೋಟಿಸಿದ್ದರು. ಈ ವೇಳೆ 9 ಯೋಧರು ಮೃತಪಟ್ಟಿದ್ದರು. ಈ ಘಟನೆ ಬಳಿಕ ಕೇಂದ್ರ ಸರಕಾರವು ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

ಹಾಗಾಗಿ, ನಕ್ಸಲರ ವಿರುದ್ಧ ಕಾರ್ಯಾಚರಣೆ ಜೋರಾಗಿ ನಡೆದಿರುವ ಹಿನ್ನೆಲೆಯಲ್ಲಿ ನಕ್ಸಲರು ಶರಣಾಗಿದ್ದಾರಲ್ಲದೇ, ಹೊಸ ಜೀವನ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಇಂದಿರಾಗಾಂಧಿ ಮುಕ್ತ ವಿವಿಯಿಂದ ನಡೆಸಲಾಗುವ (ಬಿಪಿಪಿ) ಪರೀಕ್ಷೆಗೆ ಹಾಜರಾಗಿದ್ದಾರೆ.

ಇಂದಿರಾಗಾಂಧಿ ವಿಶ್ವವಿದ್ಯಾಲಯವು ನಡೆಸಿದ್ದ ಈ ಪರೀಕ್ಷೆಯಲ್ಲಿ ಒಟ್ಟು 120 ಮಂದಿ ನಕ್ಸಲರು ನೋಂದಣಿ ಮಾಡಿಸಿದ್ದರು. ಆದರೆ 120 ಮಂದಿಯಲ್ಲಿ 107 ಮಂದಿ ಮಾತ್ರ  ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ!! ಇನ್ನು, ಈ ಪರೀಕ್ಷೆಯು ಜೂನ್ 21 ರಂದು ನಡೆದಿದ್ದು, ಬ್ಯಾಚುಲರ್ ಪ್ರಿಪರೇಟರಿ ಯೋಜನೆ (ಬಿಬಿಪಿ) ಅಡಿಯಲ್ಲಿ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾದರೆ ಪದವಿಗೆ ಸೇರಲು ಅರ್ಹತೆ ಪಡೆಯುತ್ತಾರೆ ಎಂದು ಪರೀಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾದ ಮಾಲ್ಕಂಗಿರಿ ಜಿಲ್ಲಾಡಳಿತ ಪೊಲೀಸರಿಗೆ ಶರಣಾಗಿರುವ ನಕ್ಸಲರಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದು, ಶರಣಾಗಿರುವ ನಕ್ಸಲರಿಗೆ ತಮ್ಮ ಜೀವನವನ್ನು ಪ್ರಾರಂಭಗೊಳಿಸುವುದಕ್ಕೆ ಸಹಕರಿಸುತ್ತಿದೆ. ನಾವು ಈ ಸಮಾಜದ ಭಾಗವಾಗಿರಲು ಬಯಸುತ್ತಿದ್ದೇವೆ, ಆದ್ದರಿಂದ ಪರೀಕ್ಷೆ ಬರೆದಿದ್ದೇವೆ ಎಂದು ಓರ್ವ ವಿದ್ಯಾರ್ಥಿ ಹೇಳಿದ್ದಾರೆ. ಯುವ ಜನತೆ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶಕ್ಕಾಗಿ ಜಿಲ್ಲಾ ಆಡಳಿತವೇ ಅಭ್ಯರ್ಥಿಗಳ ಪರೀಕ್ಷಾ ವೆಚ್ಚವನ್ನು ಪಾವತಿಸಿತ್ತು. ಪರೀಕ್ಷೆ ಎದುರಿಸಿದ ಯುವಕ ಈ ವೇಳೆ ಪ್ರತಿಕ್ರಿಯೆ ನೀಡಿದ್ದು, ತಾವು ಸಮಾಜದ ಒಂದು ಭಾಗವಾಗಿರಲು ಇಚ್ಛಿಸುತ್ತೇವೆ. ಅದ್ದರಿಂದಲೇ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ತಿಳಿಸಿದರು.

ಒಟ್ಟಿನಲ್ಲಿ, ದೇಶದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಛತ್ತೀಸ್ ಗಢ ಹಾಗೂ ಒಡಿಶಾ ರಾಜ್ಯಗಳಲ್ಲಿ ರಾಜ್ಯ ಸರಕಾರವು ತೆಗೆದುಕೊಂಡಿರುವ ದಿಟ್ಟನಿರ್ಧಾರದಿಂದ ನಕ್ಸಲರು ಪೊಲೀಸರಿಗೆ ಶರಣಾಗಿ, ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದರು!! ಅಷ್ಟೇ ಅಲ್ಲದೇ, ತಮ್ಮ ಹೊಸ ಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!! ಇನ್ನು, ಇಂತಹ ದಿಟ್ಟ ನಿರ್ಧಾರಗಳು ಕರ್ಣಾಟಕದಲ್ಲಿ ಯಾವಾಗ ಜಾರಿ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ!!

ಮೂಲ:
https://www.aninews.in/news/national/general-news/over-100-naxals-appeared-for-ignou-exam-in-odisha201806231956460001/

– ಅಲೋಖಾ

Editor Postcard Kannada:
Related Post