X

ಕಾಂಗ್ರೆಸ್ ಸಂವಿಧಾನದ ಗೌರವವನ್ನು ದುರ್ಬಲಗೊಳಿಸುತ್ತಿದೆ: ಪ್ರಧಾನಿ ಮೋದಿ

ಕಾಂಗ್ರೆಸ್ ಪಕ್ಷಕ್ಕೆ ಈ ದೇಶ, ನಮ್ಮ ದೇಶದ ಸಂವಿಧಾನದ ಮೇಲೆ ಕಿಂಚಿತ್ ಕಾಳಜಿ ಸಹ ಇಲ್ಲ. ಕಾಂಗ್ರೆಸ್ ನಾಯಕನೆನಿಸಿಕೊಂಡ ರಾಹುಲ್ ಗಾಂಧಿ ಹಲವಾರು ಸಂದರ್ಭಗಳಲ್ಲಿ ವಿದೇಶಿ ನೆಲದಲ್ಲಿ ನಿಂತು ಭಾರತಕ್ಕೆ, ಇಲ್ಲಿನ ಪ್ರಜಾಪ್ರಭುತ್ವಕ್ಕೆ, ಇಲ್ಲಿನ ಸಂವಿಧಾನಕ್ಕೆ ವಿರೋಧವಾದ ಹೇಳಿಕೆಗಳನ್ನು ನೀಡಿ ಅವಮಾನ ಮಾಡಿರುವ ಸಂಗತಿಗಳು ಭಾರತೀಯರ ಮನಸ್ಸಿನಿಂದ ಇನ್ನೂ ಮಾಸಿಲ್ಲ ಎನ್ನುವದು ಸ್ಪಷ್ಟ.

ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ‌ನಡೆಸಿದ್ದು, ಸಂವಿಧಾನದ ಮೇಲಿನ ಗೌರವವನ್ನು ಕಾಂಗ್ರೆಸ್ ಪಕ್ಷ ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಭಾರತೀಯ ಸಂವಿಧಾನದ ಪಾವಿತ್ರಯತೆಯನ್ನು ಕಾಂಗ್ರೆಸ್ ಪಕ್ಷ ಉಲ್ಲಂಘನೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ದೇಶದ ಸಂವಿಧಾನವನ್ನೇ ಬದಲಾವಣೆ ಮಾಡುತ್ತಾರೆ ಎನ್ನುವ ಸುಳ್ಳು ಸುದ್ದಿಯನ್ನು ಹರಡುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಈಗ ನಮಗೆ ಎಷ್ಟು ಸ್ಥಾನಗಳಿವೆ. ಎರಡನೇ ಅವಧಿಯ ಆಡಳಿತದ ಸಮಯದಲ್ಲೇ ಬಿಜೆಪಿಗೆ ‌ವೈಯಕ್ತಿಕವಾಗಿ 360 ಮತ್ತು ಒಟ್ಟಾರೆ ಎನ್‌ಡಿಎ ಗೆ 400 ಕ್ಕೂ ಅಧಿಕ ಸ್ಥಾನಗಳು ಇದ್ದವು. ನಮಗೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಶಕ್ತಿ ಇದ್ದರೂ ನಾವು ಹೊರಗಿನಿಂದ ಬಂದ ಬೆಂಬಲವನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತೇವೆ. ಈಗ ನಮ್ಮದೇ ಸರ್ಕಾರ ಇದ್ದರೂ ನಾವು ಏಕೆ ಸಂವಿಧಾನವನ್ನು ಬದಲಾವಣೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಸಂವಿಧಾನವನ್ನು ಬದಲಾಯಿಸುವ ಉದ್ದೇಶ ನಮಗೆ ಇದ್ದಿದ್ದರೆ ಅದನ್ನು ಎಂದೋ ಮಾಡಿ ಮುಗಿಸುತ್ತಿದ್ದೆವು ಒಂದು ಅವರು ನುಡಿದಿದ್ದಾರೆ‌. ಆ ಮೂಲಕ ಬಿಜೆಪಿ ಸಂವಿಧಾನವನ್ನು ಬದಲಾವಣೆ ಮಾಡಲಿದೆ ಎನ್ನುವವರಿಗೆ ಸರಿಯಾಗಿ ಟಾಂಗ್ ನೀಡಿದ್ದಾರೆ.

ಪ್ರತಿಪಕ್ಷಗಳು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ವಿರೋಧಿಗಳ ಈ ಆರೋಪ ಸಮರ್ಥನೀಯವಲ್ಲ. ಈಗ ಸಂವಿಧಾನವನ್ನು ಪವಿತ್ರ ಎಂದು ಗೌರವಿಸದ ಕಾಂಗ್ರೆಸ್ ಪಕ್ಷ ಈ ಆರೋಪವನ್ನು ಮಾಡುತ್ತಿದೆ. ಕೈ ಪಕ್ಷ ಹಲವಾರು ಬಾರಿ ದೇಶದ ಸಂವಿಧಾನವನ್ನು ಉಲ್ಲಂಘನೆ ಮಾಡಿ ಅವಮಾನಿಸಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.

ಒಟ್ಟಿನಲ್ಲಿ ಸಂವಿಧಾನವನ್ನು ಗೌರವಿಸದ ಕಾಂಗ್ರೆಸ್, ಸಂವಿಧಾನವನ್ನೇ ದೇವರೆಂದುಕೊಂಡ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಕ್ಕೆ ಹೊಡೆದಂತಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇದೇ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಪ್ರಣಾಳಿಕೆಯ ಬಗೆಗೂ ಮಾತನಾಡಿದ್ದು, ಅದರಲ್ಲಿ ಮುಸ್ಲಿಂ ಲೀಗ್‌ನ ಅಂಶಗಳನ್ನು ಕಾಣಬಹುದು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ತನೆಯೇ ಅವರ ಉದ್ದೇಶ ಏನು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಮಾವೋವಾದಿಗಳು ಕಾಂಗ್ರೆಸ್ ಪಕ್ಷವನ್ನು ಕಬಳಿಸಿದ್ದಾರೆ. ಅವರು ದೇಶದ ಪ್ರತಿ ವಿಷಯದಲ್ಲೂ ಲೈಸನ್ಸ್ ರಾಜ್ ತರಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Post Card Balaga:
Related Post