X

ಕೈ ಪಕ್ಷದಿಂದ ಸನಾತನ ಧರ್ಮಕ್ಕೆ ಅವಮಾನ: ಯೋಗೀಜಿ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?

ಕಾಂಗ್ರೆಸ್ ಪಕ್ಷ ಭಾರತದ ಸನಾತನ ಸಂಸ್ಕೃತಿ, ಹಿಂದೂ ಧರ್ಮವನ್ನು ಅವಮಾನ ಮಾಡುವುದು, ಹಿಂದೂ ದೇವರುಗಳನ್ನು ಅವಹೇಳನ ಮಾಡುವುದನ್ನು ತನ್ನ ಮುಖ್ಯ ಗುರಿ ಮತ್ತು ಉದ್ದೇಶವನ್ನಾಗಿಸಿಕೊಂಡಿದೆ. ಹಿಂದೂಗಳ ಭಾವನೆಗಳನ್ನು ಕೆಣಕಿ, ಮುಸ್ಲಿಂ ಓಲೈಕೆ ರಾಜಕಾರಣ ಮಾಡಿ ಮತ ಗಿಟ್ಟಿಸಿಕೊಳ್ಳುವ ಕೈ‌ ನಾಯಕರ ಹುನ್ನಾರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ‌ ವ್ಯಕ್ತವಾಗುತ್ತಲೇ ಬಂದಿದೆ ಎನ್ನುವುದು ನಿರ್ವಿವಾದ.

ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಪ್ರಚಾರ ಭರದಲ್ಲಿ ಪ್ರಭು ಶ್ರೀರಾಮನ ವಿರುದ್ಧ ಹೇಳಿಕೆ ನೀಡಿದ್ದರು. ಶ್ರೀರಾಮನ ವಿರುದ್ಧ ಅಂದರೆ ಬಿಜೆಪಿ ವಿರುದ್ಧ ಶಿವ ಸ್ಪರ್ಧೆ ಮಾಡಬಹುದು ಎನ್ನುವ ಮೂಲಕ ಕೈ ಪಕ್ಷ ಶ್ರೀರಾಮ ವಿರೋಧಿ ಎನ್ನುವ ಅಂಶ ಮತ್ತೊಮ್ಮೆ ಹಿಂದೂಗಳಿಗೆ ಸ್ಪಷ್ಟವಾಗಿದ್ದು, ಇದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ ಎನ್ನುವುದು ಸತ್ಯ.

ಮಲ್ಲಿಕಾರ್ಜುನ ಖರ್ಗೆ ಅವರ ಈ ಹೇಳಿಕೆಗೆ ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯ ನಾಥ್ ಅವರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಭಾರತದ ಸನಾತನ ಸಂಪ್ರದಾಯವನ್ನು ಅವಮಾನ ಮಾಡುತ್ತಿದೆ. ಶ್ರೀರಾಮ ಮತ್ತು ಶಿವ ಬೇರೆ ಬೇರೆಯಲ್ಲ. ಇಬ್ಬರೂ ಪರಸ್ಪರ ಪೂರಕರು. ಶ್ರೀರಾಮ ಶಿವನನ್ನು ಪೂಜೆ ಮಾಡುತ್ತಿದ್ದ.ಸನಾತನ ಧರ್ಮ, ಹಿಂದೂ ಧಾರ್ಮಿಕತೆ, ದೇವರುಗಳನ್ನು ಅವಹೇಳನ ಮಾಡುವ ಮೂಲಕ ಈಗ ಕಾಂಗ್ರೆಸ್ ಪಕ್ಷದ ನೈಜ ಮುಖ ಮುನ್ನೆಲೆಗೆ ಬರುತ್ತಿದೆ. ನಮ್ಮ ದೇಶದ ಸನಾತನ ಸಂಸ್ಕೃತಿಯನ್ನು ದ್ವೇಷ ಮಾಡುವುದು, ಭಾರತದ ನಂಬಿಕೆಯ ಜೊತೆಗೆ ಚೆಲ್ಲಾಟವಾಡುವುದು ಕಾಂಗ್ರೆಸ್ ಪಕ್ಷದ ಪ್ರವೃತ್ತಿಯಾಗಿದ್ದು, ಇಂತಹ ಮನಸ್ಥಿತಿ ಕಾಂಗ್ರೆಸ್ ಅಧ್ಯಕ್ಷರ ಭಾಷಣದಲ್ಲೂ ವ್ಯಕ್ತವಾಗಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಕೈ ನಾಯಕರು ತಮ್ಮ ಹತಾಶೆಯನ್ನು ಸನಾತನ ಧರ್ಮವನ್ನು ಅಪಹಾಸ್ಯ ಮಾಡುವ ಮೂಲಕ ಹೊರಗೆ ಹಾಕುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಷಯಗಳನ್ನು ಬಳಕೆ ಮಾಡಿಕೊಂಡು ನಮ್ಮ ದೇಶದ ನಂಬಿಕೆಗಳಿಗೆ ಧಕ್ಕೆ ಮಾಡುವ, ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

Post Card Balaga:
Related Post