X

ನರೇಂದ್ರ ಮೋದಿಯ ವಿರುದ್ದ ಅವಹೇಳಕಾರಿಯಾಗಿ ಭಾಷಣ ಬೀಗಿದ್ದ ರಾಹುಲ್ ಗಾಂಧಿಗೆ ಎದುರಾಯಿತು ಮತ್ತೊಂದು ಸಂಕಷ್ಟ!!

ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನರೇಂದ್ರ ಮೋದಿಯವರ ಆಡಳಿತವನ್ನು ದೂಷಿಸುವ ಭರದಲ್ಲಿ ಸುಳ್ಳು ಪೊಳ್ಳು ಭರವಸೆಗಳನ್ನು ನೀಡುತ್ತಾ, ಹಿಂದೂಗಳನ್ನು ಮರಳು ಮಾಡಲು ಟೆಂಪಲ್ ರನ್ ಎನ್ನುವ ಅಸ್ತ್ರವನ್ನು ಪ್ರಯೋಗಿಸಿ ಕೊಂಚಮಟ್ಟಿಗೆ ಸಫಲರಾದ ಇವರು ಇದೀಗ ಮತ್ತೊಮ್ಮೆ ಸಂಕಷ್ಟಕ್ಕೀಡಾಗಿದ್ದಾರೆ!!

ನರೇಂದ್ರ ಮೋದಿಯವರನ್ನು ಒಂದಲ್ಲ ಒಂದು ವಿಚಾರದ ಬಗ್ಗೆ ದೂಪಿಸುತ್ತಾ, ನಾಲಗೆ ಹರಿಯ ಬಿಟ್ಟಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲು ಮಾಡಲಾಗಿದೆ!! ಹೌದು…. ಇತ್ತೀಚಿಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ, ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಒಬ್ಬ “ಖ್ಯಾತ ಜಾದೂಗಾರ”ರಾಗಿದ್ದು ಪ್ರಜಾಪ್ರಭುತ್ವವನ್ನೂ ಮಾಯ ಮಾಡಬಲ್ಲರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸುವ ಮೂಲಕ ಈ ಹಿಂದೆ ಸುದ್ದಿಯಾಗಿದ್ದರು!! ಶಿಲ್ಲಾಂಗ್ ನ ಜೊವಾಯಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿಯವರು ಕೇವಲ ಬೆರಳ ತುದಿಯಿಂದಲೇ ವಸ್ತುಗಳನ್ನು ಕಾಣುವಂತೆ ಮತ್ತು ಮಾಯ ಮಾಡಬಲ್ಲ ಖ್ಯಾತ ಜಾದೂಗಾರರಾಗಿದ್ದಾರೆ. ಹಾಗೆಯೇ ಯಾವುದೇ ಶ್ರಮವಿಲ್ಲದೆ ಅನೇಕ ವಸ್ತುಗಳು ಕಾಣುವಂತೆ ಮತ್ತು ಕಣ್ಮರೆಯಾಗುವಂತೆ ಅವರು ಮಾಡಿದ್ದಾರೆ” ಎಂದು ಹೇಳಿದ್ದರು.

ಅಷ್ಟೇ ಅಲ್ಲದೇ, “ಹಗರಣಗಳಲ್ಲಿ ಭಾಗಿಯಾದ ಉದ್ಯಮಿಗಳಾದ ವಿಜಯ್ ಮಲ್ಯ, ಲಲಿತ್ ಮೋದಿ ಮತ್ತು ನೀರವ್ ಮೋದಿಯಂಥವರು ಭಾರತದಿಂದ ಕಣ್ಮರೆಯಾಗಿದ್ದು, ಭಾರತದ ಕಾನೂನಿನ ಕೈಗೆ ಸಿಕ್ಕದೆ ವಿದೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋದೀಜಿ ಅವರ ಜಾದೂ ಶೀಘ್ರದಲ್ಲೇ ಪ್ರಜಾಪ್ರಭುತ್ವವನ್ನೂ ಭಾರತದಿಂದ ಮಾಯ ಮಾಡಲಿದೆ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರು!! ಆದರೆ ಇತ್ತೀಚೆಗೆ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ರಾಹುಲ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನೀರವ್ ಮೋದಿ(ಆರ್ಥಿಕ ಅಪರಾಧಿ) ಮತ್ತು ಲಲಿತ್ ಮೋದಿ(ಐಪಿಎಲ್ ಮಾಜಿ ಕಮಿಷನರ್) ನಡುವೆ ನಂಟಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದು, ತೀವ್ರ ಚರ್ಚೆಗೆ ಗುರಿಯಾಗಿತ್ತು!!

ಹಾಗಾಗಿ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೆಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಕಾಂಗ್ರೆಸ್‍ಸ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟು ಮೊಕದ್ದಮೆ ಹೂಡಲಾಗಿದೆ. ಈ ಕುರಿತಂತೆ, ಗಾಂಧಿ ವಂಶದ ಕುಡಿ ವಿರುದ್ಧ ದೇವೊರಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆಯ 499 ಹಾಗು 500 ಅನುಚ್ಛೇದಗಳ ಅಡಿ ಮಾನಹಾನಿ ದಾಖಲಿಸಲಾಗಿದೆ.

ಬಿಜೆಪಿ ನಾಯಕ ಶಲಭ್ ಮಣಿ ತ್ರಿಪಾಠಿ ಎಂಬುವವರು ದಿಯೋರಿಯಾ ಜಿಲ್ಲೆಯ ಫಾಸ್ಟ್ ಟ್ರಯಾಕ್ ನ್ಯಾಯಾಲಯದಲ್ಲಿ ಐಪಿಎಸಿ ಸೆಕ್ಷನ್ 499 ಮತ್ತು 500ರಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದು, ಈ ಬಗೆಗಿನ ವಿಚಾರಣೆಯನ್ನು ನ್ಯಾಯಾಲಯ ಎಪ್ರಿಲ್ 5 ರಂದು ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿಯವರನ್ನು ನೀರವ್ ಮೋದಿ ಮತ್ತು ಲಲಿತ್ ಮೋದಿಗೆ ಹೋಲಿಸಿದ್ದರು, ಮಾತ್ರವಲ್ಲದೇ ಮೋದಿ ಹೆಸರು ಭ್ರಷ್ಟಾಚಾರದ ಸಂಕೇತವಾಗಿದೆ ಎಂದಿದ್ದರು!!

ಹೀಗಾಗಿ ಈ ಮೂಲಕ ಭಾರತೀಯ ದಂಡ ಸಂಹಿತೆಯ 499 ಹಾಗು 500 ಅನುಚ್ಛೇದಗಳ ಅಡಿ ಮಾನಹಾನಿ ದಾಖಲಿಸಲಾಗಿದ್ದು, ಈ ಮೂಲಕ ಗಾಂಧಿ ವಂಶದ ಕುಡಿ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಲಿದ್ದಾರೆ!! ಅಂತೂ ಕಾಂಗ್ರೆಸ್ಸಿಗರಿಗೆ ಅವಹೇಳನಕಾರಿಯಾಗಿ ಮಾತಾನಾಡುವುದೇ ಒಂದು ಗೀಳು ಎಂದೆನಿಸಿದೆ ಯಾಕೆಂದರೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಮನುಷ್ಯ ಎಂದು ಟೀಕಿಸಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ 2014ರಲ್ಲಿ ನರೇಂದ್ರ ಮೋದಿ ಅವರನ್ನು ಚಾಯ್ ವಾಲಾನೆಂದೂ ಔರಂಗಜೇಬ್ ಎಂದು ಕರೆದು ವಿವಾದ ಸೃಷ್ಟಿಸಿದ್ದರು.

ಅಷ್ಟೇ ಯಾಕೆ?? ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಪಾತ್ರವಿದೆ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ವಕೀಲ ಶನು ಶುಕ್ಲಾ ಅವರು ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಎಫ್ ಐ ಆರ್ ದಾಖಲಿಸುವಂತೆ ಆದೇಶಿಸಿ ಎಂದು ಕೋರಿ ಲಕೀಂಪುರ್ ಕೇಡಿರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು!! ಗಾಂಧಿ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಅನೇಕ ತನಿಖೆಗಳು ನಡೆದಿದ್ದು, ಆರ್ ಎಸ್ ಎಸ್ ನ ಯಾವುದೇ ಪಾತ್ರವಿಲ್ಲ ಎಂದು ದೃಢಪಟ್ಟಿದೆ. ಆದರೆ ರಾಹುಲ್ ಗಾಂಧಿ ಅವರು ಆರ್ ಎಸ್ ಎಸ್ ಮೇಲೆ ಸುಳ್ಳು ಆರೋಪ ಮಾಡಿದ್ದು, ಇದರಿಂದ ಆರ್ ಎಸ್ ಎಸ್‍ಗೆ ಧಕ್ಕೆಯುಂಟಾಗಿದ್ದಂತೂ ಅಕ್ಷರಶಃ ನಿಜ!!

ಆದರೆ ಇದೀಗ ಪಕ್ಷದ ರಾಷ್ಟ್ರ ಮಟ್ಟದ ಸಮಾವೇಶಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನೀರವ್ ಮೋದಿ ಹಾಗು ಲಲಿತ್ ಮೋದಿರೊಂದಿಗೆ ರಾಹುಲ್ ಗಾಂಧಿ ತುಲನೆ ಮಾಡಿದ್ದರು. ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೆಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಕಾಂಗ್ರೆಸ್ ನ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟು ಮೊಕದ್ದಮೆ ಹೂಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷನ ಮಾತುಗಳಿಂದಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗು ದೇಶವಾಸಿಗಳ ಭಾವನೆಗಳಿಗೆ ನೋವುಂಟಾಗಿದ್ದು ಮಾನಹಾನಿ ಪ್ರಕರಣ ದಾಖಲಿಸುತ್ತಿರುವುದಾಗಿ ಬಿಜೆಪಿ ನಾಯಕ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‍ನ ಜಿಲ್ಲಾ ಕಾರ್ಯದರ್ಶಿ ಅನ್ವರ್ ಹುಸೇನ್, “ನ್ಯಾಯಾಲಯದ ಪ್ರಕರಣಗಳನ್ನು ಎದುರಿಸಲು ಸಿದ್ಧರಿದ್ದೇವೆ. ದೇಶಕ್ಕಾಗಿ ಜೈಲು ಸೇರಲೂ ಸಿದ್ಧರಿದ್ದೇವೆ” ಎಂದಿದ್ದಾರೆ.

ಅಂತೂ … ಪದೇ ಪದೇ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಬೀಗುವ ಕಾಂಗ್ರೆಸ್ಸಿಗರಿಗೆ ಈಗಾಗಲೇ ಮೋದಿಯನ್ನು ದೂಷಿಸಲು ಯಾವುದೇ ವಿಷಯ ಇಲ್ಲ ಎಂಬುವುದೂ ಗೊತ್ತಿದೆ!! ಒಟ್ಟಾರೆಯಾಗಿ ನರೇಂದ್ರ ಮೋದಿ ಸರ್ಕಾರವನ್ನು ದೂಷಿಸುವ ಭರದಲ್ಲಿ ಇಲ್ಲ ಸಲ್ಲದ ಹೇಳಿಕೆಗಳ ಮೂಲಕ ಫೇಮಸ್ ಆಗುತ್ತಿರುವ ರಾಹುಲ್ ಗಾಂಧಿ ಇದೀಗ ಮತ್ತೊಂದು ಬಾರಿ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲಿದ್ದು, ಇದಕ್ಕೆ ಅದ್ಯಾವ ಪ್ರತಿತಂತ್ರವನ್ನು ಹೂಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ!!

source: http://news13.in/archives/99849

https://postcard.news/looks-like-the-congress-dynasty-shehzada-isnt-done-with-his-blunders-the-congress-president-is-now-trapped-in-a-defamation-case-against-pm-modi-himself/

– ಅಲೋಖಾ

Editor Postcard Kannada:
Related Post