X

ಅಖಂಡ ಹಿಂದೂ ಧರ್ಮವನ್ನು ಒಡೆಯುವ ಕಾಂಗ್ರೆಸ್ ಸರಕಾರದ ತಂತ್ರದ ವಿರುದ್ದ ಹಿಂದೂಗಳನ್ನು ಬಡಿದೆಬ್ಬಿಸಿದ ಮೋಹನ್ ಭಾಗವತ್!!

ಹಿಂದೂಗಳಿಗೊಂದು ನ್ಯಾಯ, ಅಲ್ಪಸಂಖ್ಯಾತರಿಗೊಂದು ನ್ಯಾಯ ಎನ್ನುವ ಬೇಧ-ಭಾವಗಳನ್ನು ಸೃಷ್ಟಿಸಿರುವ  ಕಾಂಗ್ರೆಸ್ನವರು ಕರ್ನಾಟಕದಲ್ಲಿ ಮಾಡಿರುವ ಅವಾಂತರಗಳು ಅಷ್ಟಿಷ್ಟಲ್ಲ!! ಈಗಾಗಲೇ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿದ್ದ ಮುಖ್ಯಮಂತ್ರಿಗಳು ಅದ್ಯಾವ್ಯಾವ ಭಾಗ್ಯಗಳನ್ನು ಕರುಣಿಸಿದರು ಎಂದರೆ ಹಿಂದೂಗಳನ್ನು ಮೂಲೆಗುಂಪು ಮಾಡಿ ಮುಸಲ್ಮಾನರೇ ಈ ದೇಶದ ಆಸ್ತಿ ಎನ್ನುವಂತೆ ಹಿಂದೂ ಮತ್ತು ಮುಸಲ್ಮಾನರ ನಡುವೆ ತಾರತಮ್ಯಗಳನ್ನು ಸೃಷ್ಟಿಸಿ ಇದೀಗ ಅಣ್ಣ-ತಮ್ಮಂದಿರಂತಿದ್ದ ‘ಲಿಂಗಾಯತ ಮತ್ತು ವೀರಶೈವ’ ರನ್ನೇ ಬೇರ್ಪಡಿಸಿ, ಪ್ರತ್ಯೇಕ ಧರ್ಮವನ್ನು ಕಲ್ಪಿಸುವಲ್ಲಿ ಯಶಸ್ವಿಯಾದಂತೆ ಬೀಗುತ್ತಿರುವ ಸಿದ್ದರಾಮಯ್ಯನವರ ವಿರುದ್ಧ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ!!

ತನ್ನ ರಾಜಕೀಯ ಲಾಭಕ್ಕಾಗಿ ಶೇಕಡಾ 17 ರಷ್ಟಿದ್ದ ಲಿಂಗಾಯತ ಹಾಗೂ ವೀರಶೈವರನ್ನು ಒಡೆದು ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಮೂಲಕ ಅವರಿಗೆ ಸವಲತ್ತು ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್ ಹಾಗೂ ವಿನಯ ಕುಲಕರ್ಣಿ ಅವರ ರಾಜಕೀಯ ಷಡ್ಯಂತ್ರಕ್ಕೊಳಗಾಗಿ, ಲಿಂಗಾಯತ ಹಾಗೂ ವೀರಶೈವರನ್ನು ಒಡೆದು ಪ್ರತ್ಯೇಕ ಧರ್ಮ ಮಾಡಿ ಅದರ ಅನುಕೂಲವನ್ನು ತಾನು ಪಡೆಯಬೇಕೆಂಬ ಹಂಬಲವನ್ನು ಕಾಂಗ್ರೆಸ್ ನಾಯಕರು ಹೊತ್ತಿದ್ದಂತೂ ಅಕ್ಷರಶಃ ನಿಜ. ಅಷ್ಟೇ ಅಲ್ಲದೇ, ರಾಜಕೀಯ ಲಾಭಕ್ಕೋಸ್ಕರ ಹಿಂದೂಗಳಾಗಿದ್ದ ವೀರಶೈವ-ಲಿಂಗಾಯತರ ಮಧ್ಯೆ ಕಲಹವನ್ನು ಸೃಷ್ಟಿಸಿ, ಲಿಂಗಾಯಿತ ಮತ್ತು ವೀರಶೈವರನ್ನು ತನ್ನ ವೈಯಕ್ತಿಕ ಲಾಭಕ್ಕಾಗಿಯೇ ಬಳಸಿಕೊಂಡಿದ್ದಾರೆ ಎನ್ನುವ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿರುವ ವಿಚಾರ ಗೊತ್ತೇ ಇದೆ.

ಆದರೆ ಇದೀಗ ಹಿಂದೂ ಧರ್ಮವನ್ನು ಒಡೆಯಲು ಯತ್ನಿಸುತ್ತಿರುವವರ ವಿರುದ್ದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಮೂಲಕ ಲಿಂಗಾಯತ ವಿವಾದವನ್ನು ಹುಟ್ಟುಹಾಕುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ದ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಣ್ಣ-ತಮ್ಮಂದಿರಂತಿದ್ದ ‘ಲಿಂಗಾಯತ ಮತ್ತು ವೀರಶೈವ’ ರನ್ನೇ ಬೇರ್ಪಡಿಸಿ ಪ್ರತ್ಯೇಕ ಧರ್ಮವನ್ನು ಕಲ್ಪಿಸುವಲ್ಲಿ ಯಶಸ್ವಿಯಾದಂತೆ ಬೀಗುತ್ತಿರುವ ಸಿದ್ದರಾಮಯ್ಯನವರು, ‘ಲಿಂಗಾಯತ ಮತ್ತು ವೀರಶೈವ ಲಿಂಗಾಯತ (ಬಸವ ತತ್ತ್ವದಲ್ಲಿ ನಂಬಿಕೆಯುಳ್ಳವರು)’ ಎಂಬ ಹೆಸರಿನಡಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿತ್ತು!!

ಹಾಗಾಗಿ ಲಿಂಗಾಯತ ಮತ್ತು ವೀರಶೈವ ಸಮುದಾಯವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕ್ರಮದ ವಿರುದ್ಧ ಗುಡುಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‍ಎಸ್‍ಎಸ್) ಸರಸಂಘಚಾಲಕರಾದ ಮೋಹನ್ ಭಾಗವತ್, ಇದು ಅಖಂಡ ಹಿಂದೂ ಧರ್ಮವನ್ನು ಒಡೆಯುವ ತಂತ್ರವಾಗಿದೆ ಎಂದು ಹರಿಹಾಯ್ದಿದ್ದಾರೆ.

ಈ ಹಿಂದೆ “ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಧರ್ಮ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವು ಕೇಂದ್ರದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ನಡೆಸಿದ ಷಡ್ಯಂತ್ರವಾಗಿದೆ” ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಮೋಹನ್ ಲಿಂಬಿಕಾಯಿ ಆರೋಪಿಸಿದ್ದರು.

ಅಷ್ಟೇ ಅಲ್ಲದೇ, ವೀರಶೈವ-ಲಿಂಗಾಯತರು ಆರಂಭದಿಂದಲೂ ಒಂದೇ ಸಮುದಾಯದವರಾಗಿದ್ದಾರೆ. ಈ ಸಮುದಾಯವು ಯಾವತ್ತೂ ಪ್ರತ್ಯೇಕವಾಗಿರಲಿಲ್ಲ. ಕಾಂಗ್ರೆಸ್ ಈ ಸಮುದಾಯವನ್ನು ವಿಭಜಿಸಿದೆ. ತಜ್ಞರ ಸಮಿತಿಯು ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ಕುರಿತು ನಿರ್ಧರಿಸಲು ಆರು ತಿಂಗಳ ಕಾಲಾವಕಾಶ ಕೇಳಿತ್ತು. ಆದರೆ ರಾಜ್ಯ ಸರ್ಕಾರವು ಸಮಿತಿಯ ಮೇಲೆ ಒತ್ತಡ ಹೇರಿ ಕೇವಲ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಮಾಡಿತು. ಇದರ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಲಾಭ ಮಾಡಿಕೊಡುವ ಉದ್ದೇಶವಿತ್ತು ಎಂದು ಪತ್ರಿಕಾ ಹೇಳಿಕೆ ಮೂಲಕ ದೂರಿದ್ದರು!!

ಇನ್ನು, ನಾಗ್ಪುರದಲ್ಲಿ ನಡೆದ ಹಿಂದೂ ಧರ್ಮ ಸಂಸ್ಕøತಿ ಮಂದಿರ್ ಅನ್ನು ಉದ್ದೇಶಿಸಿ ಮಾತನಾಡಿದರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, “‘ರಾಕ್ಷಕ ಮನಸ್ಥಿತಿ’ ಹೊಂದಿರುವ ಜನರು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಕಟುವಾಗಿ ಖಂಡಿಸಬೇಕು, ಇಂತಹ ಕಾರ್ಯಗಳಿಗೆ ನಮ್ಮ ಧರ್ಮ ಬಲಿಯಾಗುವುದನ್ನು ತಪ್ಪಿಸಬೇಕು” ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

‘ರಿಲಿಜನ್ ಎಂಬುವುದು ಒಬ್ಬರು ಅನುಸರಿಸುವ ಪಥವಾಗಿದೆಯಲ್ಲದೇ ಮತ್ತೊಂದು ನಂಬಿಕೆಯನ್ನು ಅನುಸರಿಸುವವರು ಕೂಡ ಈ ಪಥವನ್ನು ಗೌರವಿಸಬೇಕು. ಆದರೆ ‘ಧರ್ಮ’ ಎಂಬುದು ಮಾನವೀಯತೆಯನ್ನು ಸಂಪೂರ್ಣವಾಗಿ ಬೆಸೆಯುವ ಬಂಧವಾಗಿದೆ’ ಎಂದಿದ್ದಾರೆ!! ಅಷ್ಟೇ ಅಲ್ಲದೇ ಕೆಟ್ಟ ಸ್ವಾರ್ಥ ಚಿಂತನೆ ಹೊಂದಿರುವ ಕೆಲವು ಜನರ ಗುಂಪು, ಹಿಂದೂ ಸಮುದಾಯವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖಿಸದೆ ಹೌಹಾರಿದರು!!

ಇನ್ನು, “ಪ್ರತಿಯೊಬ್ಬರು ಕೂಡ ಹಿಂದೂ ಧರ್ಮವನ್ನು ವಿಭಜಿಸಿರುವುದನ್ನೇ ವಿರೋಧಿಸಬೇಕು. ಯಾವುದೇ ಪರಿಸ್ಥಿತಿಯಲ್ಲೂ ಹಿಂದೂ ಧರ್ಮವನ್ನು ಒಡೆಯಲು ಬಿಡಬಾರದು” ಎಂದು ಮೋಹನ್ ಭಾಗವತ್ ಈ ಸಂದರ್ಭದಲ್ಲಿ ಹೇಳಿದ್ದಾರೆ!! ಅಷ್ಟೇ ಅಲ್ಲದೇ ಈ ಮೂಲಕ ಲಿಂಗಾಯತ ವಿವಾದವನ್ನು ಹುಟ್ಟುಹಾಕುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ದ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ವೀರಶೈವ-ಲಿಂಗಾಯತರನ್ನು ಬೇರ್ಪಡಿಸಿ ಪ್ರತ್ಯೇಕ ಧರ್ಮಕ್ಕೆ ಸೈ ಎಂದ ಸಿದ್ದರಾಮಯ್ಯ ಸರಕಾರದ ವಿರುದ್ದ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಮಾತಾನಾಡಿ, “ಬಸವಣ್ಣನವರ ಹೆಸರಿನಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಇಬ್ಭಾಗ ಮಾಡುತ್ತಿರುವುದು ಅವರಿಗೆ ಮಾಡುತ್ತಿರುವ ಅಪಚಾರ. ವೀರಶೈವ ಲಿಂಗಾಯತ ಎನ್ನುವ ಶಬ್ದಗಳು ಒಂದೇ ಧರ್ಮದ ಎರಡು ಹೆಸರು. ಬಸವಣ್ಣನವರು ವಚನಗಳಲ್ಲಿ ಲಿಂಗಾಯತ ಶಬ್ದವನ್ನು ಬಳಕೆ ಮಾಡಿಲ್ಲ. ವಚನ ಸಾಹಿತ್ಯದಲ್ಲಿ 13 ಶರಣರು ಮಾತ್ರ ಲಿಂಗಾಯತ ಶಬ್ದವನ್ನು ಬಳಕೆ ಮಾಡಿದ್ದು, 40 ಶರಣರು ವೀರಶೈವ ಹೆಸರನ್ನೇ ಬಳಕೆ ಮಾಡಿದ್ದಾರೆ. ಹೀಗಾಗಿ ಧರ್ಮದ ಇಬ್ಭಾಗ ಪ್ರಯತ್ನ ಸರಿಯಲ್ಲ” ಎಂದು ಹೇಳಿದ್ದರು.

ಇವರಷ್ಟೇ ಅಲ್ಲದೇ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಈ ಬಗ್ಗೆ, “ಸಕಲ ಜೀವಗಳಿಗೆ ಲೇಸನ್ನೇ ಬಯಸುವ ವೀರಶೈವ ಧರ್ಮದಲ್ಲಿ ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಸತ್ಯ-ಸೈದ್ಧಾಂತಿಕ ಸಂಗತಿಗಳ ಅರಿವಿಲ್ಲದ ಕೆಲವರು ವೀರಶೈವ-ಲಿಂಗಾಯತ; ಇವೆರಡರಲ್ಲಿ ಭೇದ ಕಲ್ಪಿಸುತ್ತಿರುವುದು ಸರಿಯಲ್ಲ. ವೀರಶೈವ ಧರ್ಮವಾಚಕವಾಗಿದ್ದು ಲಿಂಗಾಯತ ರೂಢಿಯಿಂದ ಬಂದುದಾಗಿದೆ. ವೀರಶೈವ ಪದದಲ್ಲಿ ಇರುವ ತೂಕವನ್ನು ಇನ್ನೊಂದರಲ್ಲಿ ಕಾಣಲಾಗದು. ಅಖಂಡವಾದ ಸಮಾಜವನ್ನು ರಾಜಕೀಯವಾಗಿ ಒಡೆಯುವ ತಂತ್ರಗಾರಿಕೆ ಆಗಿದೆಯೇ ಹೊರತು ಬೇರೇನೂ ಅಲ್ಲ. ಒಡಕಿನ ಧ್ವನಿ ಎತ್ತುವವರ ಬಗ್ಗೆ ವೀರಶೈವ ಸಮಾಜ ಸದಾ ಜಾಗೃತಗೊಂಡು ವೀರಶೈವ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ರಾಜ್ಯ ಸರ್ಕಾರವು ಚುನಾವಣೆಯನ್ನು ಎದುರಿಗಿಟ್ಟುಕೊಂಡು ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ನಿರ್ಣಯವು, ಕಾಂಗ್ರೆಸ್‍ನ ಒಡೆದು ಆಳುವ ನೀತಿ ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ವಿಚಾರ ತಿಳಿದೇ ಇದೆ!! ವಾಸ್ತವದಲ್ಲಿ ಶೈವರು ಮತ್ತು ವೈಷ್ಣವರು ಹಿಂದೂ ಧರ್ಮದ ಮೂಲಭೂತ ಅಂಗಗಳಾಗಿದ್ದಾರೆ. ಅವತಾರಿ ಕಾರ್ಯ ಮಾಡುವ ಮತ್ತು ಆಧ್ಯಾತ್ಮಿಕ ಉನ್ನತ ಸಂತರೇ ಧರ್ಮ ಸಂಸ್ಥಾಪನೆಯ ಕಾರ್ಯ ಮಾಡ ಬಲ್ಲರು. ಹೀಗಾಗಿ ಆ ರೀತಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವೇ ರಾಜಕಾರಣಿಗಳಿಗಿಲ್ಲ. ಹೀಗಿರಬೇಕಾದರೆ ಧರ್ಮವನ್ನು ಒಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವ ಕನಿಷ್ಠ ಜ್ಞಾನವೂ ಇಲ್ಲವೇ ಎನ್ನುವ ಪ್ರಶ್ನೆಯೂ ಮೂಡುವುದು ಸಹಜ!!

ಮೂಲ: ವಿಜಯಕರ್ನಾಟಕ

– ಅಲೋಖಾ

Editor Postcard Kannada:
Related Post