X

ಮೋದಿ ಯೋಜನೆಯಿಂದಾಗಿ ಸೇನೆಗೆ ಬಂತು ಆನೆಬಲ!! ಭಾರತದಲ್ಲೇ ತಯಾರಾಗುತ್ತೆ ಯುದ್ದೋಪಕರಣಗಳು.!

ನರೇಂದ್ರ ಮೋದಿ ಏನೇ ನಿರ್ಧಾರ ಕೈಗೊಂಡರು ಅದರ ಹಿಂದೆ ನೂರಾರು ಉಪಯೋಗ ಇರುತ್ತದೆ ಎಂಬುದು ದೇಶದ ಜನತೆಗೆ ತಿಳಿದಿರುವ ವಿಚಾರ. ಒಂದು ಯೋಜನೆಯಿಂದ ದೇಶದ ಆರ್ಥಿಕ ವ್ಯವಸ್ಥೆ ಮತ್ತು ಉದ್ಯಮ ವಲಯವನ್ನು ವಲಯವನ್ನು ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಜಾರಿಗೊಳಿಸಿ ಅದರಿಂದ ದೇಶವನ್ನು ವಿಕಾಸದತ್ತ ಕೊಂಡೊಯ್ಯುತ್ತಿರುವ ಮೋದಿ , ಮೇಕ್ ಇನ್ ಇಂಡಿಯಾ ಯೋಜನೆಯಿಂದ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದ್ದರು. ಭಾರತೀಯರು ವಿದೇಶಿ ವಸ್ತುಗಳಿಗೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ದೇಶೀಯ ಮಾರುಕಟ್ಟೆಯೂ ಸುಧಾರಿಸಿ, ಯುವ ಜನತೆಗೆ ಉದ್ಯಮವೂ ಸಿಕ್ಕಂತಾಯಿತು. ಯೋಜನೆ ಒಂದೇ ಆಗಿರಬಹುದು, ಆದರೆ ಅದರ ಉಪಯೋಗ ಸಾವಿರ ಎಂಬುದು ಈ ಯೋಜನೆಯಿಂದಾಗಿ ತಿಳಿಯುತ್ತದೆ.!

ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿದ ಬಳಿಕ ವಿದೇಶದಿಂದ ಆಮದು ಮಾಡಿಕೊಳ್ಳವ ಸಾಮಾಗ್ರಿಗಳು ಕಡಿಮೆಯಾಗಿದೆ ಎಂಬುದು ಅಂಕಿಅಂಶಗಳ ಪ್ರಕಾರ ತಿಳಿಯುತ್ತದೆ. ದೇಶಿಯ ಉತ್ಪನ್ನಗಳ ಬೇಡಿಕೆ ಹೆಚ್ಚು ಮಾಡಲೆಂದೇ ಪ್ರಧಾನಿ ಮೋದಿ ಈ ಯೋಜನೆಯನ್ನು ಜಾರಿಗೊಳಿಸಿದರು. ಯಾಕೆಂದರೆ ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಅತೀ ಹೆಚ್ಚು ಕಾಡುತ್ತಿರುವುದರಿಂದ , ಸ್ವ ಉದ್ಯೋಗ ಪ್ರಾರಂಭಿಸಲು ಸಹಕಾರಿಯಾಗುವಂತೆ ಮೇಕ್ ಇನ್ ಇಂಡಿಯಾದಿಂದ ಉಪಯೋಗವಾಗುತ್ತಿದೆ.!

ಮೇಕ್ ಇನ್ ಇಂಡಿಯಾದಿಂದ ಮತ್ತೊಂದು ಕ್ರಾಂತಿ..!

ಮೇಕ್ ಇನ್ ಇಂಡಿಯಾ ಯೋಜನೆಯಿಂದ ದೇಶದ ರಕ್ಷಣಾ ವ್ಯವಸ್ಥೆಗೂ ಇದೀಗ ಬಲ ಬಂದಂತಾಗಿದೆ. ಯಾಕೆಂದರೆ ಅಮೆರಿಕ, ಬ್ರಿಟನ್, ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಮಿಲಿಟರಿಗೆ ಬಳಸುತ್ತಿರುವ ಅಸಾಲ್ಟ್ ರೈಫಲ್ ಗಳು ಇದೀಗ ಭಾರತದ ಮೇಕ್ ಇನ್ ಇಂಡಿಯಾ ಉತ್ಪಾದನಾ ಪಟ್ಟಿಯಲ್ಲಿ ಸೇರಿಕೊಂಡಿದೆ. ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಯುದ್ದ ಸಾಮಾಗ್ರಿಗಳು ವಿದೇಶದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಪ್ರಧಾನಿ ಮೋದಿಯವರ ಈ ಯೋಜನೆಯಿಂದಾಗಿ ಭಾರತಕ್ಕೆ ಬೇಕಾದ ಮಿಲಿಟರಿ ಸಾಮಗ್ರಿಗಳನ್ನು ಭಾರತದಲ್ಲೇ ತಯಾರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಯಾರಿಕಾ ಘಟಕವನ್ನು ಆರಂಭಿಸಿ, ಅಸಾಲ್ಟ್ ರೈಫಲ್ ಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಸಣ್ಣ ಆಯುಧಗಳು, ಅಸಾಲ್ಟ್ ರೈಫಲ್ ಗಳು ಹಾಗೂ ಸ್ನೈಪರ್ ರೈಫಲ್ ಗಳನ್ನು ತಯಾರಿಸಲು ಜಾಗತಿಕ ದಿಗ್ಗಜರಾದ ಅಮೆರಿಕ ಡೆಸರ್ಟ್ ಟೆಕ್,ಲೆವಿಸ್ ಮಶಿನ್ ಆಂಡ್ ಟೂಲ್ಸ್ ಸಂಸ್ಥೆ ಹಾಗೂ ಆಸ್ಟ್ರಿಯಾದ ಸ್ಟೈರ್ ಮಾನ್ ಲಿಶರ್ ತಮ್ಮ ಭಾರತೀಯ ಪಲುದಾರರೊಂದಿಗೆ ಭಾರತದಲ್ಲೇ ಯುದ್ದ ಆಯುಧಗಳನ್ನು ತಯಾರಿಸಲು ಮಾತುಕತೆ ನಡೆಸಿವೆ. ಸದ್ಯ ಭಾರತೀಯ ಸೇನೆಯಲ್ಲಿ ಯುದ್ದ ಉಪಕರಣಗಳು ಇದ್ದರೂ ಕೂಡ, ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳು ವಿದೇಶಗಳಿಂದಲೇ ಆಮದಾಗುತ್ತಿದೆ. ಆದರೆ ಇದೀಗ ಪ್ರಧಾನಿ ಮೋದಿಯವರ ಈ ನಿರ್ಧಾರದಿಂದ ದೇಶದಲ್ಲೇ ಉತ್ಪಾದನೆಯಾಗಿ , ಭಾರತೀಯ ಆರ್ಥಿಕ ವ್ಯವಸ್ಥೆಗೂ ಸಹಕಾರಿಯಾಗಲಿದೆ.

ಭಾರತೀಯ ಸೇನೆಗಿಲ್ಲ ಸರಿಸಾಟಿ..!

ನರೇಂದ್ರ ಮೋದಿ ಪ್ರಧಾನಿಯಾಗುತ್ತಲೇ ದೇಶದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದವರು. ಸೈನಿಕರ ಮೇಲೆ ವಿಶೇಷ ಪ್ರೀತಿ, ಗೌರವ, ಕಾಳಜಿ ಹೊಂದಿರುವ ಮೋದಿ , ಪ್ರತೀ ವರ್ಷ ದೀಪಾವಳಿ ಹಬ್ಬವನ್ನು ಗಡಿಯಲ್ಲಿ ಸೈನಿಕರ ಜೊತೆಗೆ ಆಚರಿಸುತ್ತಿರುವ ಮೋದಿ ಇದೀಗ ಸೈನ್ಯಕ್ಕೆ ಹೊಸ ಬಲ ತುಂಬಿದ್ದಾರೆ. ಜಗತ್ತಿನಲ್ಲೇ ಭಾರತೀಯ ಸೇನೆಗೆ ವಿಶೇಷ ಗೌರವ ದೊರಕುತ್ತದೆ ಎಂದರೆ ಭಾರತೀಯ ಸೇನೆ ಎಷ್ಟು ಬಲಿಷ್ಠವಾಗಿದೆ ಎಂಬುದು ತಿಳಿಯುತ್ತದೆ. ಆದ್ದರಿಂದಲೇ ಮೋದಿ ಕೈಗೊಂಡಿರುವ ಈ ನಿರ್ಧಾರದಿಂದ ಭಾರತೀಯ ಸೇನೆ ಮತ್ತಷ್ಟು ಬಲಿಷ್ಠವಾಗಲಿದೆ.

ಅದೇನೇ ಆಗಲಿ, ನರೇಂದ್ರ ಮೋದಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆಯೂ ಭಾರತದ ಭವಿಷ್ಯ ರೂಪಿಸಿಕೊಂಡು ಯೋಜನೆ ಹಾಕುತ್ತಾರೆ ಎಂದರೆ ತಪ್ಪಾಗದು‌. ಯಾಕೆಂದರೆ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಪಣತೊಟ್ಟಿರುವ ಪ್ರಧಾನಿ ಮೋದಿ, ರಕ್ಷಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಲು ಹೊರಟಿದ್ದಾರೆ.!

source: https://m.dailyhunt.in/news/india/kannada/vishwavani-epaper-vishvani/mek+in+indiya+prabhaava+deshadalle+tayaaraagalive+vishva+darjeya+raifalgalu-newsid-85693223?ss=pd&s=a

–ಅರ್ಜುನ್

 

Editor Postcard Kannada:
Related Post