X

ನಾಲ್ಕು ವರ್ಷದಲ್ಲಿ ಮೋದಿ ಕಟ್ಟಿ ಗುಡ್ಡ ಹಾಕಿದ್ದೇನು ಎನ್ನುವವರಿಗೆ ಇಲ್ಲಿದೆ ನೋಡಿ ದಿಟ್ಟ ಉತ್ತರ!! ನಾಲ್ಕು ವರ್ಷದ ಮೋದಿ ಪಯಣ….

ಪ್ರಧಾನಿ ನರೇಂದ್ರ ಮೋದೀಜೀಯ ಹೆಸರು ಹೇಳೋಕೇನೇ ಒಂಥರಾ ಖುಷಿ!! ಮೋದಿಜೀ ಸರಕಾರ ಇಂದು 4 ವರ್ಷದ ತುಂಬಿದ ಖುಷಿಯ ಸಂದರ್ಭದಲ್ಲಿದೆ!! ಮಾಡಿರುವ ಸಾಧನೆಯೂ ಅಪಾರ!! ದೇಶದ ಅಭಿವೃದ್ಧಿಗಾಗಿ ಮಾಡಿದ ಸಾಧನೆ ಒಂದಾ ಎರಡಾ?! ಮೋದಿ ಪ್ರಧಾನಿಯಾದ ಬಳಿಕ ದೇಶದ ಅಭಿವೃದ್ಧಿಗಾಗಿ ತಂದ ಯೋಜನೆಗಳು ಎಲ್ಲಾ ರಾಷ್ಟ್ರಗಳನ್ನು ಭಾರತದತ್ತ ನೋಡುವತ್ತ ಮಾಡುತ್ತಿದೆ!! ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನಾಲ್ಕು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ವಿಶ್ವದ ದೃಷ್ಟಿಯಲ್ಲಿ ಭಾರತದ ಚಿತ್ರಣವೇ ಬದಲಾಗುತ್ತಿದ್ದರೇ, ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ!! ಮೋದಿ ಒಬ್ಬ ಚಾಯ್‍ವಾಲಾ ಅಂತಾ ಜರಿದವರಿಗೆ ಮೋದೀಜೀ ತನ್ನ ಕೆಲಸದ ಮೂಲಕ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ!! ಮೋದೀಜೀ ಇಡೀ ದೇಶವನ್ನೇ ಬದಲಿಸಿದ್ದಾರೆ ಎಂದು ಹೇಳೋಕೆ ಪ್ರತೀಯೊಬ್ಬ ಭಾರತೀಯನೂ ಹೆಮ್ಮೆಪಡಬೇಕು!! ನಾಲ್ಕು ವರ್ಷದಲ್ಲಿ ಮಾಡಿರುವ ಕೆಲವೊಂದು ಯೋಜನೆಗಳ ಬಗ್ಗೆ ಸಣ್ಣದಾಗಿ ಕಣ್ಣ ಹಾಯಿಸೋಣ!!

ದೇಶದಲ್ಲಿ ಮೋದೀಜೀ ಅಧಿಕಾರವಹಿಸಿಕೊಳ್ಳುವ ಮೊದಲು ರಕ್ಷಣಾ ಕ್ಷೇತ್ರದಲ್ಲಿ ಮಾಡಿದ್ದು ಏನೂ ಇಲ್ಲ!! ಆದರೆ ಮೋದಿಜೀ ಸರಕಾರ ಅಧಿಕಾರಕ್ಕೆ ಬಂದ ನಂತರ ರಕ್ಷಣಾ ಕ್ಷೇತ್ರದಲ್ಲಿ ವಿಚಲಿತ ಬದಲಾವಣೆಯೇ ಆಯಿತು!! ಶತ್ರು ರಾಷ್ಟ್ರಗಳು ಭಾರತದತ್ತ ಮುಖಮಾಡಲು ಇದೀಗ ಹೆದರುತ್ತಿರುವುದಕ್ಕೆ ಕಾರಣ ಮಾತ್ರ ಮೋದೀಜೀ ಸರಕಾರ!! ರಕ್ಷಣಾ ಕ್ಷೇತ್ರದಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಇಸ್ರೇಲ್ ಜತೆ ಬಾಹ್ಯಾಕಾಶ ವಿಜ್ಞಾನ, ರಕ್ಷಣಾ ಕ್ಷೇತ್ರ ಸೇರಿದಂತೆ ಒಟ್ಟು 9 ಮಹತ್ವದ ಒಪ್ಪಂದಗಳಿಗೆ ಸಹಿ ಮಾಡಿದ್ದು, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಅಮೆರಿಕದ ಜತೆಗೆ ಪರಮಾಣು ಒಪ್ಪಂದ. ರಾಫೆಲ್ ಯುದ್ಧವಿಮಾನ ಖರೀದಿಗೆ ಫ್ರಾನ್ಸ್ ಸರ್ಕಾರದೊಂದಿಗೆ ಒಪ್ಪಂದ, ಸೈನ್ಯದಲ್ಲಿ ಮಹಿಳಾ ಸಿಬ್ಬಂದಿಗೂ ಕಾರ್ಯ ಸ್ಥಾನಮಾನಗಳು ಹೀಗೆ ರಕ್ಷಣಾ ಕ್ಷೇತ್ರದಲ್ಲಿ ವಿಪರೀತ ಬದಲಾವಣೆಯೇ ಆಗುತ್ತಿದೆ!! ಮೆಟ್ರೋ ಎಂದರೆ ಏನು ಎಂದೇ ತಿಳಿಯದ ಭಾರತಕ್ಕೆ ಕೆನಡಾ, ಚೀನಾ, ಫ್ರಾನ್ಸ್, ರಷ್ಯಾ, ಜಪಾನ್, ಜರ್ಮನಿ ಮೂಲದ ಕಂಪನಿಗಳ ಸಹಭಾಗಿತ್ವದಲ್ಲಿ ದೇಶದ 50 ನಗರಗಳಲ್ಲಿ ಮೆಟ್ರೋ ರೈಲು ಅನುಷ್ಠಾನಕ್ಕೆ ಸಂಕಲ್ಪ ಮಾಡಿದ್ದು ಇದೇ ಮೋದೀಜೀ!! ಭಾರತ್‍ವಾಲಾ ಯೋಜನೆಯಲ್ಲಿ 5.35 ಲಕ್ಷ ಕೋಟಿ ರೂ.ಗಳಲ್ಲಿ 24,800 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು, ರಾಷ್ಟ್ರೀಯ ಜಲಸಾರಿಗೆ ನೀತಿಯಲ್ಲಿ 111 ಜಲಮಾರ್ಗಗಳನ್ನು ಗುರುತಿಸಲಾಗಿದ್ದು, ಈಗಾಗಲೇ 6 ಕಡೆ ಸಾರಿಗೆ ಆರಂಭವಾಗಿದೆ.!!

ಯುವಜನತೆಯನ್ನು ಉದ್ಯಮ ಶೀಲತೆಯತ್ತ ಸೆಳೆಯಲು, ಸಣ್ಣ ಮತ್ತು ಅತಿಸಣ್ಣ ಉದ್ದಿಮೆದಾರರಿಗೆ `ಪ್ರಧಾನಮಂತ್ರಿ ಮುದ್ರಾ ಯೋಜನೆ’ ಮೂಲಕ 4.70 ಲಕ್ಷ ಕೋಟಿ ರೂ. ಸಾಲ ವಿತರಣೆ. ಜಿಎಸ್‍ಟಿ, ದಿವಾಳಿತನ ಕಾಯ್ದೆ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಸ್ಟಾಂಡ್ ಅಪ್ ಇಂಡಿಯಾ ಮೂಲಕ ಕೈಗಾರಿಕೆ ಸ್ನೇಹಿ ವಾತಾವರಣ ನಿರ್ವಣ, ಇ-ವಾಹನಗಳ ಉತ್ಪಾದನೆ  ಪ್ರೋತ್ಸಾಹಕ್ಕೆ ವಿಶೇಷ ಕೈಗಾರಿಕೆ ನೀತಿ ಜಾರಿ. ಕೈಗಾರಿಕೆಯಲ್ಲಿ ಶೇಕಡ 7.5ರ ಬೆಳವಣಿಗೆ ದಾಖಲು ಮಾಡಿದೆ!!

ವಿದೇಶಿ ನೇರ ಬಂಡವಾಳ ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸಿದರೆ, ಸಹಜವಾಗಿ ಬಂಡವಾಳ ಹರಿದು ಬರುತ್ತದೆಯಲ್ಲದೇ ಇದರಿಂದ ನಿರುದ್ಯೋಗದ ಸಮಸ್ಯೆಯ ನಿವಾರಣೆಯೂ ಸಾಧ್ಯವಾಗುತ್ತದೆ ಎನ್ನುವ ದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕೇಂದ್ರ ಸರಕಾರವು ಭಾವಿಸಿದಷ್ಟು ವೇಗದಲ್ಲಾಗಿಲ್ಲವಾದರೂ ಒಂದಿಷ್ಟು ನಿರೀಕ್ಷೆಗಳು ಗರಿಗೆದರಿದ್ದಂತೂ ಅಕ್ಷರಶಃ ನಿಜ. ದೇಶವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಿ, ಆ ಮೂಲಕ ಅಭಿವೃದ್ಧಿ ದರ(ಜಿಡಿಪಿ)ವನ್ನು ಹೆಚ್ಚಿಸುವ ನರೇಂದ್ರ ಮೋದಿ ಸರ್ಕಾರ ನಿಜಕ್ಕೂ ಯಶಸ್ಸನ್ನು ಕಂಡಿದೆ ಎಂದೇ ಹೇಳಬಹುದು!! ಮುದ್ರಾಯೋಜನೆಯ ಮೂಲಕ ಸುಮಾರು 70 ಲಕ್ಷ ಜನರಿಗೆ ಉದ್ಯೋಗ ಲಭಿಸಿದೆ!!

 

ಅದಲ್ಲದೆ ನರೇಂದ್ರ ಮೋದೀಜೀಯವರು ನೋಟು ನಿಷೇಧ 2016 ನವೆಂಬರ್ 8 ಈ ದಿನ ಮಾತ್ರ ಯಾರೂ ಮರೆಯುವಂತಿಲ್ಲ!! ನೋಟು ರದ್ದತಿ’ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ತಾಕತ್ತನ್ನು ಬೇರೆ ಯಾರೇ ಪ್ರಧಾನಿಯಾಗಿದ್ದಿದ್ದರೂ ಬಹುಷಃ ಮಾಡಲಿಕ್ಕಾಗುತ್ತಿರಲಿಲ್ಲ !!. ಡಿಮಾನಿಟೈಸೇಷನ್ ಎಂಬ ಅಸ್ತ್ರವೊಂದು ರಾಷ್ಟ್ರವಿರೋಧಿಗಳಿಗೆ, ಭ್ರಷ್ಟಾಚಾರಿಗಳಿಗೆ, ಉಗ್ರರಿಗೆ ಬೇರಾವ ರೀತಿಯಲ್ಲಿಯೂ ತಪ್ಪಿಸಿಕೊಳ್ಳಲಾಗದಂತಹ ಹೊಡೆತವನ್ನು ನೀಡಿದೆಯಷ್ಟೇ! ಅದೆಷ್ಟೋ ಮಿಲಿಯನ್ ಗಟ್ಟಲೇ ಕಪ್ಪು ಹಣದ ಲೆಕ್ಕ ಸಿಕ್ಕಿದ್ದಲ್ಲದೇ, ಅದೆಷ್ಟೋ ಕಡೆಗಳಲ್ಲಿ ತೆರಿಗೆ ಇಲಾಖೆಯವರು ದಾಳಿ ಕೂಡ ನಡೆಸಿದ್ದರು!! ಈ ನೋಟು ಅಮಾನ್ಯೀಕರಣ ಎಂಬುವುದು ಯಾವಾಗ ಜಾರಿಗೆ ಬಂತೋ ಅಂದು ಮಾತ್ರ ಕೆಲವರು ತಲ್ಲಣಿಸಿದ್ದು ಅಷ್ಟಿಷ್ಟಲ್ಲ!! 

 

ಕೇಂದ್ರ ಸರ್ಕಾರ ದೇಶದ ತೆರಿಗೆ ಸುಧಾರಣೆಗಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಕಳೆದ ವರ್ಷದ ಜುಲೈ 1ರಂದು ಜಾರಿಗೊಳಿಸಿದಾಗ ದೇಶದ ವಿತ್ತೀಯ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷಗಳು ಸೇರಿ ಹಲವರು ಬೊಬ್ಬೆ ಹಾಕಿದರು. ಆದರೆ ಮೋದಿ ಸರ್ಕಾರ ಜಾರಿಗೊಳಿಸಿದ ಜಿಎಸ್ಟಿ ಭಾರತದ ವಿತ್ತೀಯ ಸ್ಥಿತಿ ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಅಲ್ಲದೆ ಭಾರತದ ಜಿಡಿಪಿ ಏಳರ ಗಡಿ ದಾಟಿದೆ. ಅಕ್ಕಿ, ಬೇಳೆ ಸೇರಿ ಹಲವು ನಿತ್ಯ ಬಳಕೆಯ ವಸ್ತುಗಳ ಮೇಲೆ ಸರ್ಕಾರ ತೆರಿಗೆಯನ್ನೇ ವಿಧಿಸದೆ ಬಡವರಿಗೆ ಅನುಕೂಲ ಮಾಡಿಕೊಟ್ಟಿದೆ. ದಲ್ಲಾಳಿಗಳು ತೆರಿಗೆ ಹೆಸರಲ್ಲಿ ಜನರ ದುಡ್ಡು ತಿನ್ನುವುದು ನಿಂತಿದೆ. ಹೇಳಿ, ಒಂದು ಯೋಜನೆಯಿಂದ ಇಷ್ಟು ಲಾಭವಾದರೆ ಜಿಎಸ್ಟಿಯನ್ನೇಕೆ ವಿರೋಧಿಸಬೇಕು?

ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ನೀಡುವ ಯೋಜನೆಯನ್ನು ಯುಪಿಎ ಸರ್ಕಾರವೇ ಜಾರಿಗೊಳಿಸಿದ್ದರೂ, ಎಲ್ಲರಿಗೂ ಆಧಾರ್ ಕಾರ್ಡ್ ವಿತರಿಸುವಲ್ಲಿ ಕಾಂಗ್ರೆಸ್ ಎಡವಿತ್ತು. ಆದರೆ ನರೇಂದ್ರ ಮೋದಿ ಅವರು ಈ ಯೋಜನೆಗೆ ಹೊಸ ರೂಪ ಕೊಟ್ಟು, ಪ್ರತಿಯೊಬ್ಬರಿಗೂ ಆಧಾರ್ ಸಿಗುವಂತೆ ಮಾಡಿದರು. ಅಷ್ಟೇ ಅಲ್ಲ, ಮೊಬೈಲ್, ಬ್ಯಾಂಕ್ ಗಳಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವ ಮೂಲಕ ಭ್ರಷ್ಟಾಚಾರ ತಡೆಗೂ ಮೋದಿ ಮುಂದಾಗಿದ್ದಾರೆ. ಮೊದಲೆಲ್ಲ ಒಂದು ಸಿಮ್ ತೆಗೆದುಕೊಳ್ಳಲು ಚುನಾವಣೆ ಗುರುತಿನ ಚೀಟಿ ನೀಡಬೇಕಿತ್ತು. ಆದರೆ ಈಗ ಹಾಗಲ್ಲ, ಆಧಾರ್ ನಂಬರ್ ನೀಡಿದರೂ ಸಾಕು, ನಮ್ಮ ಸಿಮ್ ಆಕ್ಟಿವೇಟ್ ಆಗುತ್ತದೆ!!ಇದೆಲ್ಲಾ ಮೋದಿಜೀ ಸರಕರ ಅಧಿಕಾರಕ್ಕೆ ಬಂದ ನಂತರ ಮಾತ್ರ ಸಾಧ್ಯ!!

ಅಕ್ಟೋಬರ್ 2ರ ಗಾಂಧಿ ಜಯಂತಿ­ಯಂದು ದೇಶದ ಪ್ರಧಾನಿ ನರೇಂದ್ರ ಮೋದಿ­ಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛ ಭಾರತ ಅಭಿಯಾನ­ಕ್ಕೆ ಚಾಲನೆ­ ನೀಡುವ ಮೂಲಕ ದೇಶದ ಜನ­ರಲ್ಲಿ ರೋಮಾಂಚನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊಡೆದಿವೆ. ಮೋದಿಯವರು ಸಾರ್ವ­ಜನಿಕರಿಗೆ ತಮ್ಮ ಪ್ರದೇಶ­­ಗಳನ್ನು ಸ್ವಚ್ಛವಾಗಿ­ಟ್ಟುಕೊಳ್ಳಲು ಅಂಬಾನಿ, ಸಚಿನ್ ತೆಂಡೂಲ್ಕರ್­ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶ­ವನ್ನು ಸ್ವಚ್ಛ­ಗೊಳಿ­ಸುವುದು ಹಾಗೂ ಇನ್ನಿತ­ರ­ರಿಗೂ ಅದೇ ರೀತಿ ಮಾಡು­ವಂತೆ ಕರೆ ನೀಡುವ ಮೂಲಕ ಅಭಿ­ಯಾನಕ್ಕೆ ಕೈಜೋಡಿಸಲು ಆಹ್ವಾನಿ­ಸಿದ್ದರು!! ಇದಕ್ಕೆ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನವು ಇನ್ನಷ್ಟು ಚುರುಕುಗೊಂಡಿದೆ.

ಹೆಚ್ಚಿನವರು ಸಾರ್ವ­ಜನಿಕ­­ವಾಗಿಯೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತ­ಪಡಿ­ಸುತ್ತಿದ್ದಾರೆ. ಸ್ವತಃ ಪ್ರಧಾನಿ­ಯವರ ಒತ್ತಾಸೆ, ಇತರ ಪ್ರಮುಖರ ಹಾಗೂ ಸರ್ಕಾ­ರೇತರ ಸಂಸ್ಥೆ­ಗಳ ಬೆಂಬಲ, ಸಾರ್ವಜನಿಕರ ಸಹ­ಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛ­ತೆಯ ವಿಷಯದ ಕುರಿತ ಪ್ರಚಾರ ಮಾಡುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ದೊಡ್ಡ ಸಕ್ಸಸ್ ಸಿಕ್ಕಿದೆ!! ಇದೀಗ ನರೇಂದ್ರ ಮೋದಿ ಸರಕಾರದ ಈ ಸ್ವಚ್ಛ ಭಾರತ ಯೋಜನೆಯು ಯಾವ ರೀತಿ ಎಫೆಕ್ಟ್ ಆಗಿದೆ ಎಂದರೆ ಪ್ರತೀ ಗಲ್ಲಿಗಲ್ಲಿಗಳಲ್ಲಿಯೂ ಪೊರಕೆ ಹಿಡಿದುಕೊಂಡು ಬಿಡುವು ಸಿಕ್ಕಾಗೆಲ್ಲಾ ಸ್ವಚ್ಛತಾ ಕಾರ್ಯದಲ್ಲಿ ಜನರು ತೊಡಗಿಕೊಂಡಿದ್ದಾರೆ!!

ಅದಲ್ಲದೆ ಇದೀಗ ಪ್ರಧಾನಿ ನೇತೃತ್ವದ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರಗಳು ದೇಶದಲ್ಲಿ ಹೊಸ ಶಕೆ ಆರಂಭಿಸಿವೆ ಅಂತಾನೇ ಹೇಳಬಹುದು!! ಹಲವು ಜನಪರ ಯೋಜನೆಗಳು ಜನರ ಮನಸ್ಸು ಗೆದ್ದಿವೆ. ಇನ್ನು ಹಲವು ಜನರಿಗೆ ಸರ್ಕಾರದ ಯೋಜನೆಗಳ ಮನದಟ್ಟು ಮಾಡಬೇಕು, ಬಿಜೆಪಿಯ ಕಾರ್ಯಶೈಲಿಯನ್ನು ಜನರ ಮನೆ ಮನಗಳಿಗೆ ತಲುಪಿಸಬೇಕು ಎಂಬ ದೂರದೃಷ್ಟಿಯ ಯೋಜನೆಯೊಂದನ್ನು ಕೂಡಾ ಇದೀಗ ಬಿಜೆಪಿ ಕೈಗೊಂಡಿದೆ!! ಕೇಂದ್ರ ಸರ್ಕಾರದ ನಾಲ್ಕು ವರ್ಷದ ಯಶಸ್ವಿ ಯೋಜನೆಗಳನ್ನು ಜನರ ಮನ ಮನೆಗಳಿಗೆ ತಲುಪಲಿಸಲು ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು, ಬಿಜೆಪಿ ಮೇಯರ್ ಗಳು ಸೇರಿ ಎಲ್ಲ ಹಂತದ ಮುಖಂಡರು. ದೇಶಾದ್ಯಂತ ಸುಮಾರು ಒಂದು ಲಕ್ಷ ಪ್ರಮುಖ ಸಾಧಕರನ್ನು, ಗಣ್ಯರನ್ನು ಭೇಟಿ ಮಾಡಲಿದ್ದಾರೆ. ಈ ಕಾರ್ಯಕ್ರಮ ಮೇ 27ರಿಂದಲೇ ಆರಂಭವಾಗಲಿದ್ದು, ಎಲ್ಲ ಹಂತದ ಮುಖಂಡರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಅಭಿಯಾನದಲ್ಲಿ ವಿಶೇಷವಾಗಿ ಎಸ್ಸಿ ಎಸ್ಟಿ ವರ್ಗದವರ ಬಗ್ಗೆ ವಿಶೇಷ ಕಾಳಜಿ ತೋರಲಿದ್ದು, ಬಿಜೆಪಿ ಮುಖಂಡರು ಬೇರೆ ಬೇರೆ ವರ್ಗದ ಸುಮಾರು 25 ಜನರನ್ನು ಭೇಟಿ ಮಾಡಿ, ಸಂವಾದ ನಡೆಸಲಿದ್ದಾರೆ. , ನಿವೃತ್ತ ನ್ಯಾಯಾಧೀಶರು, ನಿವೃತ್ತ ಸೈನ್ಯಾಧಿಕಾರಿಗಳು, ಸೈನಿಕರು, ಖ್ಯಾತ ಕ್ರೀಡಾಪಟುಗಳು, ಸಾಹಿತಿಗಳು ಸೇರಿ ಪ್ರಮುಖರನ್ನು ಭೇಟಿ ಮಾಡಿ, ಚರ್ಚೆ ಸಂವಾದ ನಡೆಸಲಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಹೀಗೆ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ ಮಾಡಿದ ಹಲವು ಸುಧಾರಣೆಗಳಿಂದ 2019ರ ಚುನಾವಣೆಯಲ್ಲೂ ಮೋದಿ ಅವರನ್ನೇ ಗೆಲ್ಲಿಸಬೇಕು ಎಂಬ ಮನೋಭಾವ ದೇಶದ ಜನರಲ್ಲಿ ಮೂಡಿದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲೂ ಮೋದಿಜೀ ಗೆದ್ದು ಬರಲಿ ಎಂಬುವುದೇ ನಮ್ಮೆಲ್ಲರ ಆಶಯ!! ಈಗಾಗಲೇ ಹಲವಾರು ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ 2019ರಲ್ಲಿ ಕೂಡ ಮೋದೀಜೀಯೇ ಅಧಿಕಾರದ ಗದ್ದುಗೆಯನ್ನು ಏರುತ್ತಾರೆ ಎಂಬುವುದೇ ತಿಳಿದಿದೆ!! ಈಗಾಗಲೇ  ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಸಹ 2019ರ ಲೋಕಸಭೆ ಚುನಾವಣೆಗೆ ಸಜ್ಜಾಗಿದೆ.!! 2014ರಲ್ಲಿ ಹೊರಡಿಸಿದ ಜನಪ್ರಿಯ ಸ್ಲೋಗನ್ ಹಾಗೆ, 2019ರ ಚುನಾವಣೆಗೂ ಒಂದು ಸ್ಲೋಗನ್ ಹೊರಡಿಸಿದೆ. `2019 ಮೇ ಫಿರ್ ಮೋದಿ ಸರ್ಕಾರ್’ (2019ರಲ್ಲೂ ಮತ್ತೆ ಮೋದಿ ಸರ್ಕಾರ್) ಎಂಬ ಘೋಷಣೆ ಹೊರಡಿಸಿದೆ!! ಆ ಸ್ಲೋಗನ್ ಪ್ರಕಾರ ಮತ್ತೆ ಮತ್ತೆ ಮೋದಿ ಸರಕಾರ ಅಧಿಕಾರಕ್ಕೆ ಬರಲಿ ಎಂಬುವುದು ನಮ್ಮೆಲ್ಲರ ಆಶಯ!! ಮುಂದೆ ಕೂಡಾ ಇಂತಹ ಹಲವಾರು ಯೋಜನೆಗಳನ್ನು ಜಾರಿ ತರಲಿ ಎಂಬುದೇ ದೇಶದ ಜನತೆಯ ಆಶಯ!! ಜೈ ಮೋದೀಜೀ!!

  • ಪವಿತ್ರ
Editor Postcard Kannada:
Related Post