X

ನೇಗಿಲು ಹಿಡಿದ ಮೋದಿಯಿಂದ ರೈತರಿಗೆ ಬಂಪರ್ ಟಿಪ್ಸ್..! ರಾಜ್ಯದಲ್ಲಿ ನಡೆಯಲಿದೆ ಹೊಸ ರೈತ ಕ್ರಾಂತಿ..!

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ ನಿನ್ನೆ ಭರ್ಜರಿ ಎಂಟ್ರಿ ಕೊಟ್ಟು ಕರ್ನಾಟಕದಲ್ಲಿ ಧೂಳೆಬ್ಬಿಸಿರುವ ಪ್ರಧಾನಿ ಮೋದಿ , ಒಂದೇ ದಿನಕ್ಕೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಇಡೀ ಕರ್ನಾಟಕ ಬಿಜೆಪಿಗೆ ಹೊಸ ಚೈತನ್ಯ ತುಂಬಿದರು. ಇದೀಗ ಇಂದು ಬೆಳಿಗ್ಗೆಯೇ ಮಾಧ್ಯಮಗಳಲ್ಲಿ ಕಂಡು ಬಂದ ಮೋದಿ ರಾಜ್ಯದ ರೈತರ ಜೊತೆ ಮಾತನಾಡಲು ಆರಂಭಿಸಿದ್ದಾರೆ. ರಾಜ್ಯ ಸರಕಾರದ ಮೃದು ಧೋರಣೆಯಿಂದಾಗಿ ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಕಾಂಗ್ರೆಸ್ ಸರಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ರೈತರ ವಿಚಾರ ದಲ್ಲಿ ಉಡಾಫೆ ತೋರುತ್ತಲೇ ಬಂದಿದೆ. ಆದರೆ ಇದೀಗ ಅವೆಲ್ಲವನ್ನೂ ನೆನಪಿಸಿಕೊಂಡ ಮೋದಿ ನೇರವಾಗಿ ರೈತರ ಜೊತೆ ಸಂವಾದ ನಡೆಸಿದರು..!

ನೇಗಿಲು ಹೊತ್ತ ಪ್ರಧಾನಿಯಿಂದ ರಾಜ್ಯ ರೈತರ ಸಮಸ್ಯೆಗಳ ಆಲಿಕೆ..!
ನಿನ್ನೆ ತಾನೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ , ಸತತ ಮೂರು ಸಮಾವೇಶಗಳಲ್ಲಿ ಪಾಲ್ಗೊಂಡು ರಾಜ್ಯದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದರು. ಚಾಮರಾಜನಗರ, ಉಡುಪಿ ಮತ್ತು ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿಗೆ ಆಯಾ ಪ್ರದೇಶದ ಒಂದು ಸಂಪ್ರದಾಯಿಕ ಕೊಡುಗೆ ನೀಡಿ ಗೌರವಿಸಲಾಯಿತು. ಅದೇ ರೀತಿ ಚಿಕ್ಕೋಡಿಯಲ್ಲಿ ಪ್ರಧಾನಿಗೆ ವೇದಿಕೆಯಲ್ಲಿ ಹಸಿರು ಶಾಲು ಹೊದಿಸಿ, ನೇಗಿಲು ನೀಡಿ  ರಾಜ್ಯ ನಾಯಕರು ಭರ್ಜರಿಯಾಗಿ ಸ್ವಾಗತಿಸಿದರು ‌.
ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪ್ರಧಾನಿ ಮೋದಿ , ಇಂದು ರಾಜ್ಯದ ರೈತರ ಜೊತೆ ವಿಶೇಷ ಸಂವಾದ ನಡೆಸಿದರು. ರಾಜ್ಯ ಬಿಜೆಪಿ ಕಿಸಾನ್ ಮೋರ್ಚಾದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ಮೋದಿ ರೈತರಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಬೇಕಾದ ಸೂಕ್ತ ಪರಿಹಾರದ ಮಾಹಿತಿಯನ್ನೂ ನೀಡಿದರು..!
ಕಾರ್ಯಕರ್ತರ ಪ್ರಶ್ನೆಗೆ ಮೋದಿಯಿಂದ ಉತ್ತರ..!
 ನರೇಂದ್ರ ಮೋದಿ ಆಪ್ ಮೂಲಕ ರಾಜ್ಯ ಬಿಜೆಪಿ ಕಿಸಾನ್ ಮೋರ್ಚಾದ ಕಾರ್ಯಕರ್ತರ ಜೊತೆ ಸಂವಾದ ನಡೆಸಿದ ಮೋದಿ,  ರೈತರಿಗಾಗಿ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕೇಂದ್ರ ಸರಕಾರ ರೈತರ ಪರವಾಗಿ ಯಾವಗಲೂ ಇದ್ದೇ ಇರುತ್ತದೆ, ಆದರೆ ನಾವು ಜಾರಿಗೊಳಿಸುವ ಯೋಜನೆಗಳನ್ನು ರಾಜ್ಯ ಸರಕಾರ ರೈತರಿಗೆ ಸರಿಯಾಗಿ ತಲುಪಿಸುತ್ತಿಲ್ಲ. ರೈತರ ವಿಚಾರದಲ್ಲೂ ಈ ಕಾಂಗ್ರೆಸ್ ರಾಜಕೀಯ ನಡೆಸುತ್ತಿದೆ. ಸರಕಾರ ಉಡಾಫೆ ತೋರುತ್ತಲೇ ಇರಲಿ, ಆದರೆ ನಮ್ಮ ಕಿಸಾನ್ ಮೋರ್ಚಾದ ಕಾರ್ಯಕರ್ತರು ಈ ಕೆಲಸ ಮಾಡಬೇಕು. ಈಗಾಗಲೇ ನೀವು ಪ್ರಧಾನಿ ಭೀಮಾ ಫಸಲ್ ಯೋಜನೆಯ ಬಗ್ಗೆ ರೈತರಿಗೆ ನೀವು ಜಾಗ್ರತಿ ಮೂಡಿಸಿದ್ದೀರಿ , ಇದನ್ನು ನಾನು ಶ್ಲಾಘಿಸುತ್ತೇನೆ ಎಂದು ಕಾರ್ಯಕರ್ತರಿಗೆ ಮತ್ತಷ್ಟು ಹುರುಪು ತುಂಬಿದರು.
ಇದೇ ವೇಳೆ ಬೀದರ್ ಕಿಸಾನ್ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಭಿಮನ್ಯು ಅವರು ಪ್ರಧಾನಿ ಮೋದಿಯವರಿಗೆ ರೈತರ ವಿಚಾರವಾಗಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಮೋದಿ, ಕೇಂದ್ರ ಸರಕಾರ ಕರ್ನಾಟಕದ ಒಂದು ಕೋಟಿ ರೈತರಿಗೆ ಸಾಯಿಲ್ ಕಾರ್ಡ್ ವಿತರಣೆ ಮಾಡಿದೆ.ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದನ್ನು ಇನ್ನಷ್ಟು ಹೆಚ್ಚು ವಿತರಣೆ ಮಾಡಿ , ರಾಜ್ಯದ ರೈತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.!
ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಈಗಾಗಲೇ ನೀಡಲಾಗಿದೆ‌.ಈ ಕಾರ್ಡ್ ನಿಂದಾಗಿ ರೈತರು ತಮ್ಮ ಜಾಗದಲ್ಲಿ ಯಾವ ರೀತಿಯ ಬೆಳೆ ಬೆಳೆಯಬೇಕೆಂಬ ಸಂಪೂರ್ಣ ಮಾಹಿತಿ ದೊರಕುತ್ತದೆ , ಇದರಿಂದಾಗಿ ರೈತರಿಗೆ ಸೂಕ್ತ ಬೆಳೆ ಬೆಳೆಯಲು ಅವಕಾಶವಾಗುತ್ತದೆ ಎಂದರು.!
ರಾಜ್ಯದ ರೈತರ ಜೊತೆ ಕೇಂದ್ರ ಸರಕಾರ ಇದೆ..!
   ರಾಜ್ಯ ಕಾಂಗ್ರೆಸ್ ಸರಕಾರ ನಿಜವಾಗಿಯೂ ರೈತರನ್ನು ನಿರ್ಲಕ್ಷಿಸುತ್ತಿದೆ ಎಂಬುದಕ್ಕೆ ಸಾವಿರಾರು ರೈತರ ಆತ್ಮಹತ್ಯೆಯೇ ಸಾಕ್ಷಿ ಎಂದ ಪ್ರಧಾನಿ ಮೋದಿ, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ತನ್ನಿ, ಕೇಂದ್ರದ ಜೊತೆಗೆ ರಾಜ್ಯ ಸರಕಾರವೂ ನಮ್ಮದೇ ಆದಲ್ಲಿ, ಯಾವುದೇ ಸಮಸ್ಯೆ ಆದರೂ ಅದಕ್ಕೆ ಬೇಕಾದ ಸೂಕ್ತ ಪರಿಹಾರ ಒದಗಿಸಲಾಗುತ್ತದೆ. ಆದ್ದರಿಂದ ಈ ಬಾರಿ ರೈತ ನಾಯಕ ಬಿ‌ಎಸ್‌ ಯಡಿಯೂರಪ್ಪನವರನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿಕೊಂಡರು.
ತಮ್ಮ ಮಾತಿನ ಮೂಲಕವೇ ರೈತರಿಗೆ ಬೇಕಾದ ಮಾಹಿತಿ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿಕೊಂಡ ಪ್ರಧಾನಿ ಹಲವಾರು ಬಿಜೆಪಿಯ ಕಿಸಾನ್ ಮೋರ್ಚಾದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು.!!
–ಅರ್ಜುನ್
Editor Postcard Kannada:
Related Post