X

ಜೆಡಿಎಸ್ ಸಮಾವೇಶದಲ್ಲಿ ಮೋದಿ ಪ್ರತ್ಯಕ್ಷ! ರಾಹುಲ್ ನಂತರ ಕುಮಾರಸ್ವಾಮಿಗೂ ಭಾರೀ ಮುಖಭಂಗ! ಎಲ್ಲೆಲ್ಲೂ ನಮೋ ನಮಃ…

ಒಂದಂತೂ ಸತ್ಯ. ದೇಶದಲ್ಲಿ ಮೋದಿ ಮೇನಿಯಾ ಆರಂಭವಾದ ನಂತರ ವಿರೋಧ ಪಕ್ಷಗಳು ಮೋದಿಯ ವೈಭವವನ್ನು ವಿವಿಧ ರೀತಿಯಲ್ಲಿ ಎದುರಿಸುವಂತಾಗಿದೆ. ಈವರೆಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಹವಾವನ್ನು ವಿಪರೀತವಾಗಿ ಅನುಭವಿಸಿದ್ದಾರೆ. ರಾಹುಲ್ ಗಾಂಧಿ ಎಲ್ಲೇ ಹೋದರೂ ಮೋದಿ ಮೋದಿ ಘೋಷಣೆ ಮುಗಿಲು ಮುಟ್ಟುತ್ತಿರುತ್ತದೆ. ಇದು ಕೇವಲ ರಾಹುಲ್ ಗಾಂಧಿಗೆ ಮಾತ್ರವಲ್ಲ, ಈವರೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹಿತ ಅನೇಕ ನಾಯಕರಿಗೆ ಇದರ ಅನುಭವವಾಗಿತ್ತು. ಆದರೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜನತಾ ದಳಕ್ಕೆ ಇಂತಹಾ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ಕುಮಾರ ಸ್ವಾಮಿಗೆ ಮುಜುಗರ ತಂದ ಮೋದಿ ಚಿತ್ರ…!

ಇದೊಂದು ಬಾಕಿ ಇತ್ತು ನೋಡಿ. ಈವರೆಗೂ ಎಲ್ಲಾ ನಾಯಕರಿಗೂ ಮೋದಿ ಎಫೆಕ್ಟ್ ತಟ್ಟಿಯಾಗಿತ್ತು. ಈಗ ಕುಮಾರ ಸ್ವಾಮಿಯವರಿಗೂ ಇದು ತಟ್ಟಿದೆ. ಸ್ವತಃ ಕುಮಾರ ಸ್ವಾಮಿಯವರ ಜನತಾ ದಳದ ಸಮಾವೇಶದಲ್ಲಿ ಏಕಾಏಕಿ ಪ್ರಧಾನಿ ನರೇಂದ್ರ ಮೋದಿಯವರ ದರ್ಶನವಾಗಿದೆ. ಹೌದು… ಶುಕ್ರವಾರ ನಡೆದಿದ್ದ ಜಾತ್ಯಾತೀತ ಜನತಾ ದಳದ ಸಮಾವೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಅಳವಡಿಸಿದ್ದ ಜೆಡಿಎಸ್‍ನ ಪ್ರಚಾರದ ಎಲ್.ಇ.ಡಿ. ಪರದೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬಿತ್ತರವಾಗಿದ್ದು ಕೆಲ ಕಾಲ ದಳಪತಿಗಳಿಗೆ ಇರಿಸು ಮುರಿಸಾಗಿದೆ.

ಜಾತ್ಯಾತೀತ ಜನತಾದಳದ ಕುಮಾರ ಪರ್ವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋ ಕಂಡು ಜೆಡಿಎಸ್ ಅಭಿಮಾನಿಗಳು ತಬ್ಬಿಬ್ಬಾದ ಘಟನೆ ನಡೆದಿದೆ. ಮೈಸೂರಿನ ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ಕುಮಾರಪರ್ವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆಗೆ ಅಚಾನಕ್ ಆಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಬಿತ್ತರವಾಗಿದೆ!

ಕುಮಾರಸ್ವಾಮಿ ಹಾಗು ದೇವೇಗೌಡರ ಗುಣಗಾನ ವೇ ಕಾರ್ಯಕ್ರಮದಲ್ಲಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆಯೇ ನರೇಂದ್ರ ಮೋದಿಯವರ ಫೋಟೋ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿದೆ! ಅದೂ ಕೂಡ ಮುಖ್ಯ ವೇದಿಕೆಯಲ್ಲಿಯೇ! ವೇದಿಕೆಯಲ್ಲಿ ಅಳವಡಿಸಿದ್ದ ದೊಡ್ಡ ಎಲ್.ಇ.ಡಿ.ಪರದೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋ ಕಂಡು ಬಂದ ತಕ್ಷಣ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು ಒಂದು ಕ್ಷಣ ದಂಗಾಗಿದ್ದಂತೂ ಸತ್ಯ. ತಕ್ಷಣವೇ ತಪ್ಪನ್ನ ಸರಿಪಡಿಸಿಕೊಂಡ ತಂತ್ರಜ್ಞರು ಮೋದಿಯವರ ಫೋಟೋವನ್ನ ಎಲ್.ಇ‌.ಡಿ. ಪರದೆಯಿಂದ ತೆಗೆದಿದ್ದಾರೆ.

ದಳಪತಿಗಳೂ ಇದ್ದರು..!

ಘಟನೆ ನಡೆದ ಈ ಸಂದರ್ಭದಲ್ಲಿ ಸ್ವತಃ ಜಾತ್ಯಾತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿತ್ತು. ಎಲ್ಲಿ ಕುಮಾರಣ್ಣನಿಗೆ ಪಿತ್ತ ನೆತ್ತಿಗೇರುತ್ತೋ ಎನ್ನುವ ಭಯದಿಂದ ಬೇಗ ಬೇಗ ಮೋದಿಯ ಫೋಟೋವನ್ನು ತಮ್ಮ ಫೋಲ್ಡರ್‍ನಿಂದ ಡಿಲಿಟ್ ಮಾಡಿದ್ದಾರೆ. ಇದು ಕೆಲ ಕಾಲ ಗೊಂದಲವನ್ನು ಉಂಟು ಮಾಡಿದ್ದಂತು ಸುಳ್ಳಲ್ಲ.

ಈ ಹಿಂದೆ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಸಮಾವೇಶದಲ್ಲಿ ಮೋದಿ ಮೋದಿ ಘೋಷಣೆ ಕೇಳಿ ಬರುತ್ತಿತ್ತು. ರಾಹುಲ್ ಗಾಂಧಿ ಎಲ್ಲೇ ಹೋದರೂ ಅಲ್ಲಿ ಮೋದಿ ಮೋದಿ ಘೋಷಣೆ ಕೇಳಿ ಬರುತ್ತಿತ್ತು. ರಾಹುಲ್ ಗಾಂಧಿ ತೆರಳುವ ದಾರಿಯುದ್ದಕ್ಕೂ ಮೋದಿ ಮೇನಿಯಾ ಭಾರೀ ಸದ್ದು ಮಾಡುತ್ತಿತ್ತು. ಸ್ವತಃ ರಾಹುಲ್ ಗಾಂಧಿ ಭಾಷಣ ಮಾಡುವಾಗಲೂ ಮೋದಿ ಮೋದಿ ಎಂಬ ಧ್ವನಿಯೇ ಮಾರ್ಧನಿಸುತ್ತಿತ್ತು. ಕಾಂಗ್ರೆಸ್ ಸಮಾವೇಶದ ಪ್ರತಿ ಭಾಷಣದಲ್ಲೂ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ಮೋದಿಯ ಭಯವನ್ನು ಎದುರಿಸುತ್ತಲೇ ಭಾಷಣ ಮಾಡಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗಿತ್ತು.

ಒಟ್ಟಾರೆ ಈವರೆಗೂ ಕೇವಲ ಕಾಂಗ್ರೆಸ್ ನಾಯಕರಿಗೆ ತಟ್ಟುತ್ತಿದ್ದ ಮೋದಿಯ ಬಿಸಿ ಈಗ ಜನತಾ ದಳದ ನಾಯಕರಿಗೂ ತಟ್ಟಿದೆ. ಕುಮಾರ ಸ್ವಾಮಿಯ ಕಾರ್ಯಕ್ರಮದಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೇಳಿ ಬರದಿದ್ದರೂ ಕೂಡಾ ಸ್ವತಃ ಮೋದಿಯ ಭಾವಚಿತ್ರವೇ ಸಮಾವೇಶದಲ್ಲಿ ತುಂಬಿದ್ದ ಜನತೆಗೆ ದರ್ಶನವನ್ನು ನೀಡಿದ್ದು, ಜನತಾ ದಳದಲ್ಲಿಯೂ ಮೋದಿ ಮೇನಿಯಾ ಎಂಬುವುದು ನಿಜವಾಗಿದೆ.

-ಸುನಿಲ್ ಪಣಪಿಲ

Editor Postcard Kannada:
Related Post