X

ಬಿಗ್ ಬ್ರೇಕಿಂಗ್!! ಕರ್ನಾಟಕ ವಶಪಡಿಸಿಕೊಳ್ಳಲು ಮೋದಿ ಮಾಸ್ಟರ್ ಪ್ಲಾನ್!! ಏಕಕಾಲಕ್ಕೆ 224 ಅಭ್ಯರ್ಥಿಗಳ ಜೊತೆ ಮಾತುಕತೆಗೆ ಮುಂದಾದ ಪ್ರಧಾನಿ!!

ಚುನಾವಣೆ ನಡೆಯಲು ಇನ್ನೇನೂ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು ಇಡೀ ದೇಶದ ಜನರ ಚಿತ್ತ ಕರ್ನಾಟಕದತ್ತ ಇದೆ!! ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ . ಇದಕ್ಕಾಗಿ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಆಡಳಿತರೂಢಿ ಪಕ್ಷ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಇತ್ತ ಬಿಜೆಪಿ ದೇಶಾದ್ಯಂತ ಗೆದ್ದು , ಕರ್ನಾಟಕದಲ್ಲೂ ಗೆಲುವಿನ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ… ಇದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅನೇಕ ಬಾರಿ ಕರ್ನಾಟಕದ ಸ್ಥಿತಿ ಗತಿ ಅಳೆದಿದ್ದು, ಅಭ್ಯರ್ಥಿಗಳ ಆಯ್ಕೆಯೂ ಮುಗಿದಿದೆ. ಈಗಾಗಲೇ ಅನೇಕ ಚುನಾವಣಾ ಪೂರ್ವ ಸಮೀಕ್ಷೆಗಳೂ ನಡೆದಿದ್ದು, ಸಮೀಕ್ಷೆಯ ಪ್ರಕಾರ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.!! ಇದೀಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಚುನಾವಣೆಯನ್ನು ಮತ್ತಷ್ಟು ರಂಗುಗೊಳಿಸಲು 224 ಕ್ಷೇತ್ರಗಳ ಮೇಲೂ ಪ್ರಧಾನಿ ಮೋದಿ ಕಣ್ಣಿಟ್ಟಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮೋದಿಯಿಂದ ದೊಡ್ಡ ಮಟ್ಟದ ಮಾಸ್ಟರ್ ಪ್ಲಾನ್ ನಡೆದಿದೆ!!

224 ಕ್ಷೇತ್ರಗಳ ಮೇಲೆ ಮೋದಿ ಕಣ್ಣು!!

ಈಗಾಗಲೇ ಎಲ್ಲಾ ಕಡೆಗಳಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು ಅಭ್ಯರ್ಥಿಗಳ ಆಯ್ಕೆಯೂ ಕೊನೆಯ ಹಂತದಲ್ಲಿದೆ!! ಇದೀಗ ಮೋದೀಜೀ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಯನ್ನು ಗೆಲ್ಲಿಸಬೇಕು ಎಂಬ ಹಠದಿಂದ 224ಕ್ಷೇತ್ರಗಳ ಮೇಲೂ ಮೋದೀ ನಿಗಾವಹಿಸಿದ್ದು ಪ್ರತೀಯೊಬ್ಬ ಬಿಜೆಪಿ ಅಭ್ಯರ್ಥಿಯ ಜೊತೆಯೂ ಸಂಭಾಷಣೆಯನ್ನು ಮಾಡಲು ನಿರ್ಧಾರವನ್ನು ಕೈಗೊಂಡಿದ್ದಾರೆ!!

ಮೋದಿ ಆಪ್ ಮೂಲಕ ಅಭ್ಯರ್ಥಿಗಳ ಜೊತೆ ಮಾತುಕತೆ!!

ರಾಜ್ಯದ 224 ಕ್ಷೇತ್ರಗಳ ಅಭ್ಯರ್ಥಿಯ ಜೊತೆಯೂ ಏಪ್ರಿಲ್ ಟೆಲಿಕಾನ್ಫರೆನ್ಸ್ ಮೂಲಕ ಪ್ರತೀಯೊಬ್ಬ ಅಭ್ಯರ್ಥಿಯ ಜೊತೆಯೂ ಮೋದಿ ಸುಮಾರು 30 ನಿಮಿಷಗಳ ಕಾಲ ಸಂವಹನವನ್ನು ಮಾಡಲು ತಯಾರಿ ನಡೆಸಿದ್ದಾರೆ!! ಈಗಾಗಲೇ ಹಲವಾರು ಸಮೀಕ್ಷೆಗಳ ಮೂಲಕ ರಾಜ್ಯದಲ್ಲಿ ಬಿಜೆಪಿಯೇ ಮೊದಲ ಸ್ಥಾನದಲ್ಲಿದ್ದು, ಮುಂದಿನ ಚುನಾವಣೆಯನ್ನು ಗೆಲ್ಲಿಸುವುದಕ್ಕೋಸ್ಕರ ಮೋದಿ ದೊಡ್ಡ ಮಟ್ಟದ ಉಪಾಯ ಕಂಡುಹಿಡಿದಿದ್ದಾರೆ!!

ನಮೋ ಆಪ್ ಮೂಲಕ ದೆಹಲಿ ಕೇಂದ್ರ ಬಿಜೆಪಿ ಕಚೇರಿಯಿಂದ 30 ನಿಮಿಷ ಟೆಲಿ ಕಾನ್ಫರೆನ್ಸ್ ಮಾಡಲಿರುವ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಚುನಾವಣೆ ಅಂಗವಾಗಿ ಪ್ರತಿಯೊಂದು ಕ್ಷೇತ್ರದ ಚುನಾವಣೆ ಸಿದ್ಧತೆ, ಬೂತ್ ಸಶಕ್ತೀಕರಣ, ಅಭ್ಯರ್ಥಿಗಳ ಪ್ರಚಾರ ವೈಖರಿ ಕುರಿತು ಸ್ವತಃ ಪ್ರಧಾನಿ ಮೋದಿ ಸಂವಾದ ನಡೆಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯೇ ನೇರವಾಗಿ ಅಭ್ಯರ್ಥಿಗಳ ಜತೆಗೆ ಸಂಪರ್ಕ ಸಾಧಿಸುವ ಮೂಲಕ ಪ್ರಸಕ್ತ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಮುಂದಿನ ಚುನಾವಣೆ ಕಾರ್ಯವೈಖರಿ ಬಗ್ಗೆಯೂ ಸ್ವತಃ ಮೋದಿಯೇ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.

ಅದಲ್ಲದೆ ಈಗಾಗಲೇ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿದಿದ್ದು, ಎಪ್ರಿಲ್ 29ರಿಂದ 12 ದಿನಗಳ ಕಾಲ ರಾಜ್ಯ ಪ್ರವಾಸ ಕೂಡಾ ಮಾಡಲಿದ್ದಾರೆ. ಮೊದಲ ಪ್ರಚಾರ ಸಮಾವೇಶ ಹೈದರಾಬಾದ್ ಕರ್ನಾಟಕದಿಂದ ಆರಂಭಿಸಲಿರುವ ಪ್ರಧಾನಿ ಮೋದಿ, ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಎಪ್ರಿಲ್ 29ರಂದು ರಾಯಚೂರಿನಲ್ಲಿ ಮೋದಿ ಪ್ರಚಾರ ಸಭೆ ಆರಂಭಿಸಲಿದ್ದಾರೆ. ಮೇ 1ರಂದು ಬಳ್ಳಾರಿ ಹಾಗೂ ಬೆಳಗಾವಿಯ ಎರಡು ಕಡೆ ಸಭೆ ನಡೆಸಲಿದ್ದಾರೆ. ಅದೇ ರೀತಿ ಮೇ 3ರಂದು ಚಾಮರಾಜನಗರ ಹಾಗೂ ಉಡುಪಿಯಲ್ಲಿ ಮತಭೇಟೆ ನಡೆಸಲಿದ್ದಾರೆ. ಕರಾವಳಿಯಲ್ಲಿ ಈ ಬಾರಿ ಹಿಂದುತ್ವದ ವಿಚಾರವೇ ಚುನಾವಣಾ ಅಸ್ತ್ರವಾಗಿದ್ದು, ಮೋದಿ ಮಾತು ಹೆಚ್ಚಿನ ಪ್ರಭಾವ ಬೀರುತ್ತದೆ. ಮೇ 5ರಂದು ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ , ಅದೇ ರೀತಿ ಮೇ 6ರಂದು ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಮೇ 7ರಂದು ಕೊನೆಯ ಪ್ರಚಾರ ಕಾರ್ಯ ಮಂಗಳೂರಿನಲ್ಲಿ ನಡೆಯಲಿದೆ. ಆದ್ದರಿಂದ ಈ ಬಾರಿಯ ಪ್ರಚಾರ ಕಾರ್ಯವೂ ಹೊಸ ಕುತೂಹಲ ಕೆರಳಿಸಲಿದೆ.

ಏಪ್ರಿಲ್ 26ರಂದು ಬಿಜೆಪಿಯ ಎಲ್ಲಾ ಅಭ್ಯರ್ಥಿಗಳ ಜೊತೆ ಟೆಲಿಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದು ಈ ಬಾರಿ ಮೋದಿ ಪ್ಲಾನ್ ಚೆನ್ನಾಗಿಯೇ ವರ್ಕೌಟ್ ಆಗಲಿದೆ!! ಬಿಜೆಪಿಗೆ ರಾಷ್ಟ್ರೀಯ ನಾಯಕರ ಸಾಥ್ ದೊರಕಿದ್ದು, ಜೊತೆಗೆ ರಾಜ್ಯ ನಾಯಕರಲ್ಲೂ ಒಗ್ಗಟ್ಟಿನ ಮಂತ್ರ ಕೇಳಿಬಂದಿದೆ!! ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಮೋದಿ-ಷಾ ಜೋಡಿ ಕರ್ನಾಟಕದಲ್ಲಿ ಬಿಜೆಪಿ ಗೆಲುವು ಖಂಡಿತ!! ಅದಲ್ಲದೆ ಸಿದ್ದರಾಮಯ್ಯನವರಿಗೆ ಈಗಾಗಲೇ ತಮ್ಮ ಪಕ್ಷದಲ್ಲೇ ಬಿರುಕು ಮೂಡಿ ಕಾಂಗ್ರೆಸ್‍ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ!! ಈ ಬಾರಿ ಸಿದ್ದರಾಮಯ್ಯ ಸರಕಾರ ಗೆಲುವು ಕನಸಿನ ಮಾತು ಎಂದು ಅನಿಸುತ್ತಿದೆ!!

  • ಪವಿತ್ರ
Editor Postcard Kannada:
Related Post