X

ಬಾದಾಮಿಗೆ ಎಂಟ್ರಿ ಕೊಟ್ಟ ರೆಡ್ಡಿ ಸೈನ್ಯ.! ಸಿಎಂ ವಿರುದ್ಧ ಅಖಾಡಕ್ಕಿಳಿದ ಬಳ್ಳಾರಿ ದೊರೆ.!

ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲಾ ರೀತಿಯಲ್ಲೂ ಕುತೂಹಲ ಕೆರಳಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ದೇಶಾದ್ಯಂತ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ಗೆದ್ದಿರುವ ಬಿಜೆಪಿ, ಕರ್ನಾಟಕದಲ್ಲೂ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.‌ ಇತ್ತ ಆಡಳಿತದಲ್ಲಿ ಇರುವ ಕಾಂಗ್ರೆಸ್ ಗೆ ರಾಜ್ಯದ ಜನತೆಯಿಂದ ಛೀಮಾರಿ ಬಿದ್ದಿರುವುದರಿಂದ ಸೋಲಿನ ಭೀತಿ ಹೆಚ್ಚಾಗಿದೆ. ಕಾಂಗ್ರೆಸ್, ಬಿಜೆಪಿ‌ ಸೇರಿದಂತೆ ಎಲ್ಲಾ ಪಕ್ಷಗಳ ಪೈಪೋಟಿಯೂ ಹೆಚ್ಚಾಗುತ್ತಿದ್ದು ಕರ್ನಾಟಕವನ್ನು ತಮ್ಮ ತೆಕ್ಕೆಗೆ ತಂದುಕೊಳ್ಳಲು ತಂತ್ರ ರೂಪಿಸಿದೆ.!

ಒಂದೆಡೆ ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಸೋಲಿನ ಮುನ್ಸೂಚನೆ ಇರುವುದರಿಂದ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೂ ಕಣಕ್ಕಿಳಿಯಲಿದ್ದಾರೆ. ರಾಜ್ಯದಿಂದ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತು ಹಾಕುವ ಸಲುವಾಗಿ ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ , ಸ್ವತಃ ಸಿದ್ದರಾಮಯ್ಯನವರನ್ನೇ ಮಣಿಸಲು ಬೃಹತ್ ತಂತ್ರವೊಂದನ್ನು ರೂಪಿಸಿದೆ.

ಬಾದಾಮಿಗೆ ಬಂತು ರೆಡ್ಡಿ ಸೈನ್ಯ..!

ಸಿಎಂ ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸುವ ವಿಚಾರವಾಗಿ ಭಾರೀ ಚರ್ಚೆಗಳು ನಡೆದವು. ಅದರ ಹೊರತಾಗಿಯೂ ಸಿದ್ದರಾಮಯ್ಯನವರು ಇಂದು ನಾಮಪತ್ರ ಸಲ್ಲಿಸಿಯೇ ಬಿಟ್ಟರು. ಆದರೆ ಸಿದ್ದರಾಮಯ್ಯನವರನ್ನು ತಮ್ಮ ಕ್ಷೇತ್ರದಲ್ಲೇ ಸೋಲಿಸಲು ಬಳ್ಳಾರಿ ಗಣಿ ದೊರೆ ಜನಾರ್ಧನ ರೆಡ್ಡಿಯ ಸೈನ್ಯವೇ ಬಾದಾಮಿಗೆ ಎಂಟ್ರಿ ಕೊಡಲಿದೆ.

ಬಾದಾಮಿಯಲ್ಲಿ ಬಿಜೆಪಿಯಿಂದ ಶ್ರೀ ರಾಮುಲು ಕಣಕ್ಕಿಳಿಯಲಿದ್ದು, ರಾಮುಲು ಪರವಾಗಿ ಬಳ್ಳಾರಿ ದೊರೆ ಜನಾರ್ಧನ ರೆಡ್ಡಿ ಕ್ಯಾಂಪೇನ್ ಮಾಡಲಿದ್ದಾರೆ. ಬಿಜೆಪಿಯಲ್ಲಿ ರೆಡ್ಡಿಗೆ ವಿಶೇಷ ಗೌರವ ನೀಡಲಾಗುತ್ತದೆ ಎಂದರೆ ರೆಡ್ಡಿ‌ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅದೇ ಕಾರಣದಿಂದ ಬಾದಾಮಿಯಲ್ಲಿ ಸಿದ್ದರಾಮಯ್ಯನವರನ್ನು ಮಕಾಡೆ ಮಲಗಿಸಲು ಸಜ್ಜಾಗಿರುವ ರೆಡ್ಡಿ ಸೈನ್ಯ ಭರ್ಜರಿಯಾಗಿ ಬಾದಾಮಿಯಲ್ಲಿ ಸಂಚರಿಸಲಿದೆ.!

ಸಿಎಂ ವಿರುದ್ಧ ತೊಡೆತಟ್ಟಿದ ಶ್ರೀ ರಾಮುಲು..!

ಇತ್ತ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯನವರು ತಾನು ಬಾದಾಮಿಯಲ್ಲಿ ಪ್ರಚಾರ ಮಾಡದೇನೆ ಗೆದ್ದು ಬರವುದಾಗಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಆದರೆ ಬಿಜೆಪಿ ಯಾವುದೇ ಕಾರಣಕ್ಕೂ ಸಿಎಂ ವಿರುದ್ಧ ಸೋಲು ಒಪ್ಪಿಕೊಳ್ಳಲು ತಯಾರಿಲ್ಲ. ಅದೇ ಕಾರಣಕ್ಕೆ ಸಿದ್ದರಾಮಯ್ಯನವರ ವಿರುದ್ಧ ರೆಡ್ಡಿಗಾರು ಶ್ರೀ ರಾಮುಲು ಅವರನ್ನು ಅಖಾಡಕ್ಕೆ ಇಳಿಸಲಿದ್ದು, ಸಿದ್ದರಾಮಯ್ಯನವರ ವಿರುದ್ಧ ಶ್ರೀ ರಾಮುಲು ತೊಡೆತಟ್ಟಲಿದ್ದಾರೆ.‌!

ಅದೇನೇ ಆದರೂ ಸಿದ್ದರಾಮಯ್ಯನವರ ಸೋಲು ಖಚಿತ ಎಂದು ಈಗಾಗಲೇ ಹೇಳಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಹೇಳಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಬಾದಾಮಿಗೆ ಆಗಮಿಸಲಿರುವ ರೆಡ್ಡಿ ಸೈನ್ಯಕ್ಕೆ ಕಾಂಗ್ರೆಸ್ ಬಲಿಯಾಗುವುದು ಖಚಿತ..!

–ಅರ್ಜುನ್

Editor Postcard Kannada:
Related Post