X

ಕಾಂಗ್ರೆಸ್‌ಗೆ ಮುಖಭಂಗ: ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ಡಿಜಿಟಲೈಸ್ಡ್ ಇಂಡಿಯಾದ ಬಗ್ಗೆ ಆಪನಂಬಿಕೆ ಹೊಂದಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಭಾರತೀಯ ಜನತಾ ಪಕ್ಷ, ಪ್ರಧಾನಿ ಮೋದಿ ಅವರ ವಿರುದ್ಧ ಮಸಲತ್ತು ಮಾಡುತ್ತಲೇ ಇರುತ್ತವೆ. ಇವಿಎಂ ಬಗೆಗೂ ಅಪನಂಬಿಕೆ ಹೊಂದಿದ ಕಾಂಗ್ರೆಸ್ ಅದನ್ನು ಬದಲಾಯಿಸಿ ಮೊದಲಿನಂತೆಯೇ ಬ್ಯಾಲೆಟ್ ಪೇಪರ್ ಬಳಸುವಂತೆ ಮಾಡಲು ಸರ್ಕಸ್ ಮಾಡಿತ್ತು.

ಇವಿಎಂ ನಲ್ಲಿ ಕಾಂಗ್ರೆಸ್ ಸೋಲುವ ಭೀತಿಯಿಂದ ಬ್ಯಾಲೆಟ್ ಪೇಪರ್ ಬಳಸಿ, ಆ ಬಳಿಕ ಮೋಸದಿಂದಲಾದರೂ ಗೆಲ್ಲುವ ಹುನ್ನಾರಕ್ಕೆ ಸುಪ್ರೀಂ ಕೋರ್ಟ್ ಗುದ್ದು ನೀಡಿದೆ.

ಈ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಿದ್ದು, ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಕಾಂಗ್ರೆಸ್ ಸಾರ್ವಜನಿಕ ವಲಯದಲ್ಲಿ ಅಪಪ್ರಚಾರ ಮಾಡಲು ಮುಂದಾಗಿತ್ತು. ಈ ಬಗ್ಗೆ ಸುಪ್ರೀಂ ಇವಿಎಂ ಪರ ನೀಡಿರುವ ತೀರ್ಪು ವಿರೋಧ ಪಕ್ಷಗಳಿಗೆ ಕೆನ್ನೆಗೆ ಹೊಡೆದಂತಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಇವಿಎಂ ಹೆಸರಿನಲ್ಲಿ ತಮ್ಮ ವಿರುದ್ಧ ಅಪನಂಬಿಕೆ ಸೃಷ್ಟಿಸಲು ಹೊರಟ ವಿಪಕ್ಷಗಳು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ದೇಶದಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗಾಗಿ ಇರುವ ಮೀಸಲಾತಿಯನ್ನು ಕುಸಿದು ಅದನ್ನು ತಮ್ಮ ವೋಟ್‌ಬ್ಯಾಂಕ್ ಆಗಿರುವ ಮುಸಲ್ಮಾನರಿಗೆ ನೀಡಲು ಕಾಂಗ್ರೆಸ್ ಹುನ್ನಾರ ಮಾಡುತ್ತಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ಕಾಂಗ್ರೆಸ್, ಆರ್ ಜೆ ಡಿ ಮತ್ತು ಇತರ ಮಿತ್ರ ಪಕ್ಷಗಳು ತಮ್ಮ ಆಡಳಿತಾವಧಿಯ ಕಾಲದಲ್ಲಿ ದೇಶದ ಬಡವರು, ಹಿಂದುಳಿದವರು, ದಲಿತರ ಮತಗಟ್ಟೆಗಳನ್ನು ವಶಕ್ಕೆ ಪಡೆದು ಜನರಿಗೆ ವಂಚನೆ ಮಾಡಿದ್ದವು. ಈಗ ಇವಿಎಂ ಬಂದಿದ್ದು, ಇದು ಅವರಿಗೆ ಮೋಸದಿಂದ ಮತ‌ಪಡೆಯುವ ದಾರಿಯನ್ನು ಮುಚ್ಚಿದಂತಾಗಿದೆ. ಅವರಿಗೆ ತಮ್ಮ ಹಳೆಯ ಆಟ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಲೇ ಅವರು ಇವಿಎಂ ಬಗ್ಗೆ ಸುಳ್ಳು ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ಇವಿಎಂ ಪರ ತೀರ್ಪು ಬಂದ ದಿನ ನಮ್ಮ ಪ್ರಜಾಪ್ರಭುತ್ವಕ್ಕೆ ಮಂಗಳಕರ ದಿನವಾಗಿದೆ. ಇವಿಎಂ ವಿಷಯದಲ್ಲಿ ಅಳಿತ್ತಿದ್ದ ಪಕ್ಷಗಳ ಮುಖಕ್ಕೆ ಸುಪ್ರೀಂ ಕೋರ್ಟ್ ಕಪಾಳ‌ಮೋಕ್ಷ ಮಾಡಿದೆ. ಅವರು ರಾಷ್ಟ್ರದ ಕ್ಷಮೆ ಕೇಳಬೇಕು ಎಂದು ಅವರು ತಿಳಿಸಿದ್ದಾರೆ.

Post Card Balaga:
Related Post