X

ದಶಕಗಳ ನಿರ್ಲಕ್ಷ್ಯದಿಂದ ಭಾರತದ ಏಳು ಸಹೋದರಿಯರಿಗೆ ದೊರಕಿತು ಮುಕ್ತಿ!! ಮಣಿಪುರದಲ್ಲಿ ಸೌರ ಶೌಚಾಲಯ ಮತ್ತು ಗುವಾಹಟಿಯಲ್ಲಿ ಸೌರ ರೈಲು ನಿಲ್ದಾಣ ನಿರ್ಮಾಣ!!

“ದೆಹಲಿ ದರ್ಬಾರಿ”ಗಳಿಂದ ಘೋರ ನಿರ್ಲಕ್ಷ್ಯಕ್ಕೊಳಗಾಗಿದ್ದ ಭಾರತದ ಈಶಾನ್ಯ ರಾಜ್ಯಗಳಿಗೆ ಮೋದಿ ಸರಕಾರ ಬಂದ ಮೇಲೆ ಭರ್ಜರಿ ಬಹುಮಾನ ದೊರೆಯುತ್ತಿದೆ. ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲವಾಗಿದ್ದ ಈಶಾನ್ಯ ರಾಜ್ಯಗಳು ಸೌರ ಶೌಚಾಲಯ, ಸಂಪೂರ್ಣ ಸೌರ ರೈಲ್ವೆ ನಿಲ್ದಾಣಗಳನ್ನು, ವಿಮಾನ ನಿಲ್ದಾಣ, ಹೆದ್ದಾರಿ, ಹೆಲಿಪ್ಯಾಡ್ ಮುಂತಾದ ಸಕಲ ಸೌಕರ್ಯಗಳನ್ನು ಹೊಂದುತ್ತಿರುವ ರಾಜ್ಯಗಳಾಗುತ್ತಿವೆ. ಇವೆಲ್ಲವೂ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನ ಫಲ. ತಾನು ಈಶಾನ್ಯ ರಾಜ್ಯಗಳನ್ನು ಮಲತಾಯಿ ಮಕ್ಕಳಂತೆ ಕಾಣುವುದಿಲ್ಲ ಎಂದು ಅಭಯವಿತ್ತಿದ್ದ ಮೋದಿ ತಮ್ಮ ವಚನವನ್ನು ಪಾಲಿಸಿ ಈಶಾನ್ಯ ರಾಜ್ಯಗಳ ಬಾಳಿಗೆ ಬೆಳಕಾಗುತ್ತಿದ್ದಾರೆ.

ಈಶಾನ್ಯ ರಾಜ್ಯಗಳ ಭಾಗ್ಯದ ಬಾಗಿಲು ತೆರೆದಿದೆ. ಮೋದಿ ಸರಕಾರದ ಸ್ವಚ್ಚ ಭಾರತ್ ಮಿಶನ್ ಮತ್ತು ಕ್ಲೀನ್ ಎನರ್ಜಿ ಯೋಜನೆಯನ್ವಯ ಮಣಿಪುರದಲ್ಲಿ ಸೌರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಸೌರ ಶೌಚಾಲಯಗಳನ್ನು ಹೊಂದಿರುವ ಮೊತ್ತ ಮೊದಲ ಮತ್ತು ಇಡಿಯ ಭಾರತದಲ್ಲೇ ಮೂರನೇ ರಾಜ್ಯ ಮಣಿಪುರವಾಗಿದೆ. ಶೌಚಾಲಯದ ಮೇಲ್ಭಾಗಕ್ಕೆ ಜೋಡಿಸಲಾದ ಸೌರ ಫಲಕಗಳು ಸೂರ್ಯನ ಶಾಖವನ್ನು ಹೀರಿಕೊಂಡು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಶೌಚಾಲಯಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಪರಿವರ್ತಿಸುತ್ತದೆ. ಕಳೆದ ವಾರವಷ್ಟೆ ಪ್ರವಾಸೋದ್ಯಮ ನಿರ್ದೇಶಕ ವೈಖೋಮ್ ಇಬೊಹಾಲ್ ಅವರು ಮಣಿಪುರದ ಇಯಿದೌ ಮೌಂಕಿಂಗ್ ಹೆಂಗಂಗ್ ನಲ್ಲಿ ಶೌಚಾಲಯಗಳನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸೌರ ಶೌಚಾಲಯಗಳನ್ನು ಸ್ಥಾಪಿಸಲಾಗಿತ್ತು.

ಪ್ರಧಾನಮಂತ್ರಿ ಮೋದಿ, ದೇಶದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಿಸಲು ಉತ್ತೇಜನ ನೀಡುತ್ತಲೆ ಬಂದಿದ್ದಾರೆ. ಮೋದಿಯವರ ಈ ಪ್ರಯತ್ನಕ್ಕೆ ವಿಶ್ವದ ನಾನಾ ದೇಶಗಳು ಮೋದಿಯವರನ್ನು ಕೊಂಡಾಡುತ್ತಿವೆ. ಇದೇ ರೀತಿ ಮತ್ತೊಂದು ಈಶಾನ್ಯ ರಾಜ್ಯವಾದ ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳಲ್ಲೆ ಮೊತ್ತ ಮೊದಲ 100% ಸೌರ ಶಕ್ತಿಯಿಂದ ಕೆಲಸ ಮಾಡುವ ರೈಲ್ವೆ ನಿಲ್ದಾಣವನ್ನು ಸ್ಥಾಪಿಸಲಾಗಿದೆ. “ಮಿಷನ್ 41 ಕೆ” ಯೋಜನೆ ಅಡಿಯಲ್ಲಿ ನಿರ್ಮಾಣವಾಗುವ ಈ ರೈಲ್ವೆ ನಿಲ್ದಾಣಗಳಿಂದ 2015 ರಿಂದ 2025 ರವರೆಗೆ ಹತ್ತು ವರ್ಷಗಳ ಅವಧಿಯಲ್ಲಿ ವಿದ್ಯುತ್ ಬಿಲ್ ಗಳಲ್ಲಿ ಸುಮಾರು 4,100 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಲಾಗುತ್ತದೆ!! ಇದಲ್ಲವೆ ಅಚ್ಚೆ ದಿನ್? ಮೋದಿ ವಿದೇಶದಿಂದ ಎಷ್ಟು ತಂದರು? ಎಂದು ಕೇಳುವವರಿಗೆ ಮೋದಿ ದೇಶದಲ್ಲೆ ಎಷ್ಟು ಕೋಟಿ ಉಳಿಸಿದರು ಎನ್ನುವುದು ಕಾಣವುದಿಲ್ಲ. ಸೌರ ಶಕ್ತಿಯ ಬಳಕೆಯಿಂದ ಹಣದ ಉಳಿತಾಯವಾಗುವುದರ ಜೊತೆಗೆ ಪರಿಸರ ಮಾಲಿನ್ಯವೂ ಗಣನೀಯವಾಗಿ ಕಡಿಮೆ ಆಗುತ್ತದೆ. ಇದನ್ನು ಮನಗಂಡೆ ಮೋದಿ ಅವರು ಸೌರ ಶಕ್ತಿ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

ಈಗಾಗಲೆ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣವು 1000 ಕಿಲೋಮೀಟರ್ ಸೌರ ಫೋಟೋ-ವೋಲ್ಟಾಯಿಕ್ ಸಿಸ್ಟಮ್ ಗಳ ಅಳವಡಿಕೆಯೊಂದಿಗೆ ಸಂಪೂರ್ಣ ಸೌರ ಶಕ್ತಿಯಲ್ಲಿ ಕಾರ್ಯ ನಿರ್ವಹಿಸುವ ರೈಲ್ವೆ ನಿಲ್ದಾಣವಾಗಿ ಮಾರ್ಪಟ್ಟಿದೆ. ಅದೇ ರೀತಿ, ಭೋಪಾಲಿನ ತಾತ್ಯಾ ಟೋಪೆ ಕ್ರೀಡಾಂಗಣ ಮೊತ್ತ ಮೊದಲ ಸಂಪೂರ್ಣ ಸೌರ ವಿದ್ಯುತ್ ಕ್ರೀಡಾಂಗಣವಾಗಿ ಪರಿವರ್ತಿತವಾಗಿದೆ. ಸೌರ ಶಕ್ತಿಯನ್ನು ಪ್ರೋತ್ಸಾಹಿಸಲು ಭಾರತವು ಅಂತರಾಷ್ಟ್ರೀಯ ಸೌರ ಅಲೈಯನ್ಸ್ ನ ಫ್ರಾನ್ಸಿನಂತಹ ಸದಸ್ಯ ದೇಶಗಳೊಂದಿಗೆ ಕೈ ಜೋಡಿಸಿದೆ. ಇದೆಲ್ಲವೂ ಮೋದಿಯವರ ದೂರದರ್ಷಿ ನಾಯಕತ್ವದ ಪರಿಣಾಮ. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಇಷ್ಟೆಲ್ಲಾ ಸಾಧ್ಯವೆ ಎಂದು ಆಶ್ಚರ್ಯವಾಗುತ್ತದೆ!! ನಾಲ್ಕು ವರ್ಷಗಳಲ್ಲಿ ದೇಶ ಈ ರೀತಿ ಅಭಿವೃದ್ದಿ ಹೊಂದುತ್ತಿದ್ದರೆ ಇನ್ನು ಹದಿನಾಲ್ಕು ವರ್ಷ ದೊರೆತರೆ ಮೋದಿ ಭಾರತವನ್ನು ಸೂಪರ್ ಪವರ್ ಆಗಿಸುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ವಿಶ್ವಗುರುವಾಗುವತ್ತ ಸಾಗುತ್ತಿದೆ ಭಾರತ…. 2019 ಮತ್ತೊಮ್ಮೆ ನಮೋ ಗೆ ನಿಮ್ಮ ಮತ….

-ಶಾರ್ವರಿ

Editor Postcard Kannada:
Related Post