X

ಕಾಶ್ಮೀರದಲ್ಲಿ ಆಪರೇಷನ್ ಆಲೌಟ್ ಸ್ಟಾರ್ಟ್! 21 ಉಗ್ರರ ಲಿಸ್ಟ್ ರೆಡಿ ಮಾಡಿಕೊಂಡ ಸೈನಿಕರು..! 2 ದಿನದಲ್ಲಿ 11 ಉಗ್ರರು ಮಟ್ಯಾಶ್..!

ತಿಪ್ಪರಲಾಗ ಹಾಕಿದ್ರೂ ಈ ಬಾರಿ ಭಾರತೀಯ ಸೈನಿಕರ ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಭಾರತದ ಕಲಶ ಜಮ್ಮು ಕಾಶ್ಮೀರದಲ್ಲಿ ಉಗ್ರರ ನೆತ್ತರು ಹರಿಯಲು ಕ್ಷಣಗಣನೆ ಆರಂಭವಾಗಿದೆ. ಉಗ್ರರು ಪದೇ ಪದೇ ಭಾರತಕ್ಕೆ ಕಾಲಿಟ್ಟು ಅಮಾಯಕ ಜೀವಗಳ ನೆತ್ತರು ಹರಿಸಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಬೇಕೆಂಬ ನಿರ್ಧಾರವನ್ನು ಭಗ್ನ ಮಾಡಲು ಭಾರತದ ಮಿಲಿಟರಿ ಪಡೆಗಳು ಸರ್ವ ಸನ್ನದ್ಧವಾಗಿ ನಿಂತಿದೆ. 

21 ಉಗ್ರರ ಲಿಸ್ಟ್ ರೆಡಿ ಮಾಡಿದ ಕಮಾಂಡೋಸ್..!

ನೋ ಡೌಟ್. ಈ ಬಾರಿ ಸೈನಿಕರ ನರ್ತರ ಜಮ್ಮು ಕಾಶ್ಮೀರದಲ್ಲಿ ಮೊಳಗೋದು ಗ್ಯಾರಂಟಿ. ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಭಾರತೀಯ ಜನತಾ ಪಕ್ಷ ಹಿಂತೆಗೆದುಕೊಂಡ ಕೂಡಲೇ ಜಮ್ಮು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಚಟುವಟಿಕೆ ಗರಿಗೆದರಿದೆ. ಇದಕ್ಕಾಗಿ ರಾಷ್ಟ್ರೀಯ ಭದ್ರತಾ ಪಡೆಗಳು ಕೂಡಾ ಜಮ್ಮು ಕಾಶ್ಮೀರದ ಯುದ್ಧ ಅಖಾಡಕ್ಕೆ ಇಳಿದಿದ್ದು ಉಗ್ರರ ನೆತ್ತರು ಹರಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗುತ್ತಿದೆ.

ರಾಷ್ಟ್ರೀಯ ಭದ್ರತಾ ಪಡೆಗಳು ಜಮ್ಮು ಕಾಶ್ಮೀರಕ್ಕೆ ಉಗ್ರರನ್ನು ಮಟ್ಟಹಾಕಲು ಇಳಿದ ಕೂಡಲೇ ಇಡೀ ದೇಶವೇ ಸಂಭ್ರಮಿಸಿತ್ತು. ಈ ಬಾರಿ ಜಮ್ಮು ಕಾಶ್ಮೀರದಲ್ಲಿ ದೀಪಾವಳಿ ಸಂಭ್ರಮಾಚರಣೆ ಗ್ಯಾರಂಟಿ ಎಂಬಂತಿತ್ತು. ಈಗಾಗಲೇ ಪಾಕಿಸ್ಥಾನದಿಂದ ಒಳನುಸುಳುವ ಉಗ್ರರ ಹಿಟ್ ಲಿಸ್ಟ್‍ನ್ನು ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ಭದ್ರತಾ ಪಡೆಗಳು ಸಿದ್ಧಪಡಿಸಿಕೊಂಡಿವೆ.

21 ಪ್ರಮುಖ ಉಗ್ರರ ಹಿಟ್ ಲಿಸ್ಟ್‍ನ್ನು ರಾಷ್ಟ್ರೀಯ ಭದ್ರತಾ ಪಡೆಗಳು ಸಿದ್ಧಪಡಿಸಿಕೊಂಡಿದ್ದು ಯಥಾ ಶೀಘ್ರ ಈ ಉಗ್ರರನ್ನು ರಾಷ್ಟ್ರೀಯ ಭದ್ರತಾ ಪಡೆಗಳು ಉಡೀಸ್ ಮಾಡಲಿದೆ. ರಾಷ್ಟ್ರೀಯ ಭದ್ರತ ಪಡೆಗಳ ಕಮಾಂಡರ್‍ಗೆ ಬಿಎಸ್‍ಎಫ್ ಹಾಗೂ ಸಿಆರ್‍ಪಿಎಫ್ ಕಮಾಂಡರ್‍ಗಳು ಸಹಕಾರ ನೀಡುತ್ತಿರೋದು ಉಗ್ರರ ರುಂಡ ಚೆಂಡಾಡಲು ಭರ್ಜರಿ ರಣತಂತ್ರವನ್ನು ನಡೆಸುತ್ತಿವೆ.

ಈ 21 ಉಗ್ರರ ಪಟ್ಟಿ ಕೇವಲ ಉಗ್ರರ ಕಮಾಂಡರ್‍ಗಳದ್ದು ಮಾತ್ರವೇ ಆಗಿದೆ. ಉಳಿದಂತೆ ಇದರ ಹಿಂದಿರುವ ಉಗ್ರರ ಸಂತಾನಗಳನ್ನೇ ಬುಡಮೇಲು ಮಾಡಲು ರಾಷ್ಟ್ರೀಯ ಭದ್ರತಾ ಪಡೆಗಳು ಹಾಗೂ ಭಾರತೀಯ ಸೇನೆಗಳು ಜಂಟಿಯಾಗಿ ಕಾರ್ಯಾಚರಣೆ ಗೈದು ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಸೂಕ್ತ ಭದ್ರತೆಯನ್ನು ನೀಡಲಿದೆ.

ಒಟ್ಟಾರೆ ಈ ಬಾರಿಯ ಉಗ್ರ ನಿಗ್ರಹ ಕಾರ್ಯಾಚರಣೆ ಮಿಸ್ ಆಗೋದಕ್ಕೆ ಚಾನ್ಸೇ ಇಲ್ಲ. ಕೇವಲ ಉಗ್ರರು ಮಾತ್ರವಲ್ಲದೆ ಸೈನಿಕರ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡುವ ಪ್ರತ್ಯೇಕವಾದಿ ನಾಯಕರು ಹಾಗೂ ಅವರ ಪ್ರೇರಣೆಯಿಂದ ಕಲ್ಲೆಸೆಯುವ ದೇಶದ್ರೋಹಿಗಳನ್ನು ಕೂಡಾ ಮಟ್ಯಾಶ್ ಮಾಡಲಿವೆ. ಈ ಅದ್ಭುತ ಕ್ಷಣಗಳಿಗಾಗಿ ಭಾರತಕ್ಕೆ ಭಾರತವೇ ಛಾತಕ ಪಕ್ಷಿಗಳಂತೆ ಕಾಯುತ್ತ ಕುಳಿತಿವೆ. ಈಗಾಗಲೇ ಕೇವಲ ಎರಡು ದಿನದಲ್ಲಿ 11 ಪಾಕಿಸ್ಥಾನಿ ರಕ್ಕಸರನ್ನು ಹತ್ಯೆ ಮಾಡಿದ್ದ ಸೈನಿಕರು ಕೆಲವೇದಿನಗಳಲ್ಲಿ ಈ ಕೆಲಸಗಳನ್ನು ಪೂರ್ಣಗೊಳಿಸಲಿವೆ.

-ಸುನಿಲ್ ಪಣಪಿಲ

Editor Postcard Kannada:
Related Post