X

ಪಾಕಿಸ್ತಾನದಲ್ಲೇ ನಿಂತು‌ ಪಾಕ್ ನಡೆಯನ್ನು ವಿರೋಧಿಸಿದ ಜಾವೇದ್: ಭಾರತಕ್ಕೆ ಇನ್ನೂ ಆಕ್ರೋಶವಿದೆ ಎಂದು ಹೇಳಿದ್ದೇಕೆ?

ಪಾಕಿಸ್ತಾನದ ನೆಲದಲ್ಲಿಯೇ ನಿಂತು ಉರ್ದು ಕವಿ ಜಾವೇದ್ ಅಖ್ತರ್ ಅವರು ಪಾಕಿಸ್ತಾನದ ಪಾಪಿಗಳಿಗೆಯೇ ಮಾತಿನ ಏಟು ನೀಡಿದ್ದಾರೆ.

ಪಾಕ್ ಬಗೆಗಿನ ಭಾರತೀಯರ ಆಕ್ರೋಶಕ್ಕೆ ಭಾರತವನ್ನು ಪಾಕಿಸ್ತಾನ ದೂಷಿಸಬೇಕಾಗಿಲ್ಲ. ಮುಂಬೈ ಮೇಲೆ ದಾಳಿ ಮಾಡಿದ ಪಾಕ್ ಪ್ರೇರಿತ ಭಯೋತ್ಪಾದಕರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಆ ಘಟನೆಯ ಕಹಿ, ನೋವು ಭಾರತೀಯರ ಮನದಲ್ಲಿ ಇನ್ನೂ ಉಳಿದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ ಸಮಾರಂಭವೊಂದರಲ್ಲಿ ಭಾಗವಹಿಸಲು ಲಾಹೋರ್‌ಗೆ ತೆರಳಿದ್ದ ಅವರು, ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ಞತೆಯನ್ನು ಬಗೆಹರಿಸುವುದರ ಸಂಬಂಧ ನಡೆದ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಪಾಕಿಸ್ತಾನಕ್ಕೆ ಮಾತಿನೇಟು ನೀಡಿದ್ದಾರೆ. ಈ ಸಂದರ್ಶನದಲ್ಲಿ ಓರ್ವ ಪ್ರೇಕ್ಷಕ ‘ನೀವು ಪಾಕ್ ಗೆ ಅನೇಕ ಹಾರಿ ಬೇಟಿ ನೀಡಿದ್ದೀರಿ. ನೀವು ಇಲ್ಲಿಂದ ಭಾರತಕ್ಕೆ ಹಿಂದಿರುಗಿದ ಬಳಿಕ, ಪಾಕ್ ಜನರು ಒಳ್ಳೆಯವರು. ಅವರು ನಮ್ಮ ಮೇಲೆ ಬಾಂಬ್ ಮಾತ್ರ ಹಾಕುತ್ತಿಲ್ಲ. ಹೂವಿನ ಹಾರ ಹಾಕಿ ಅಭಿನಂದಿಸುತ್ತಾರೆ ಎಂದು ನಿಮ್ಮ ಜನರಿಗೆ ಹೇಳುತ್ತೀರಾ? ಎಂದು ಪ್ರಶ್ನಿಸಿದ್ದು, ಇದಕ್ಕವರು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡುವುದಲ್ಲ. ಉದ್ವಿಗ್ನ ವಾತಾವರಣವನ್ನು ತಣ್ಣಗಾಗಿಸಬೇಕು. ನಾನು ಮುಂಬೈನವರು. ಅಲ್ಲಿ ನಡೆದ ದಾಳಿಯನ್ನು ಕಂಡವರು. ಆ ದಾಳಿಕೋರರು ನಾರ್ವೆ, ಈಜಿಪ್ಟ್‌ನಿಂದ ಬಂದವರಲ್ಲ. ಅವರೆಲ್ಲರೂ ಈಗಲೂ ಪಾಕ್‌ನಲ್ಲಿ ಓಡಾಡಿಕೊಂಡಿದ್ದಾರೆ. ಭಾರತೀಯರ ಹೃದಯದಲ್ಲಿ ಆಕ್ರೋಶ ಕುದಿಯುತ್ತಿದೆ. ಇದನ್ನು ನೀವು ದೂಷಿಸುವುದು ಸರಿಯಲ್ಲ ಎಂದಿದ್ದಾರೆ. ಹಾಗೆಯೇ ಪಾಕ್ ದಿಗ್ಗಜರಿಗೆ ಭಾರತ ಆತಿಥ್ಯ ನೀಡಿದಂತೆ ಭಾರತೀಯ ದಿಗ್ಗಜರನ್ನು ಪಾಕ್ ಎಂದಿಗೂ ಗೌರವಿಸಿಲ್ಲ ಎಂಬುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪಾಕ್ ನೆಲದಲ್ಲೇ ನಿಂತು ಪಾಕ್ ವಿರುದ್ಧ ಮಾತನಾಡಿದ ಜಾವೇದ್ ಅವರ ಗಟ್ಟಿತನಕ್ಕೆ ಸಾರ್ವಜನಿಕ ವಲಯದಿಂದಲೂ ಭಾರೀ ಮೆಚ್ಚುಗೆ ಕೇಳಿ ಬಂದಿದೆ.

Post Card Balaga:
Related Post