X

ಹಿಂದೂಗಳನ್ನು ಸಾಲು ಹತ್ಯೆ ಮಾಡುತ್ತೇನೆಂದವನ ಕೈ ಹಿಡಿದ ಜೆಡಿಎಸ್! ಜಾತ್ಯಾತೀತ ಜನತಾದಳ ಅಂದ್ರೆ ಇದೇನಾ..?

ಜೆಡಿಎಸ್ ಪರ ಅಸಾಸುದ್ದೀನ್ ಓವೈಸಿ ಪ್ರಚಾರ ಅಖಾಡಕ್ಕೆ!! ಕರ್ನಾಟಕದ ವಿಧಾನ ಸಭಾ ಚುನಾವಣೆಗೆ ಎಐಎಂಐಎಂ ಪಕ್ಷದ ಬೆಂಬಲ!!

ಇದೊಂದು ಬಾಕಿ ಇತ್ತು ನೋಡಿ! ಕರ್ನಾಟಕದಲ್ಲಿ ಈಗ ಯಾರ ವಿರುದ್ಧ ಯಾರ್ಯಾರು ತಿರುಗಿ ಬೀಳುತ್ತಿದ್ದಾರೋ ನಾನಂತೂ ಕಾಣೆ! ಆದರೆ, ಪ್ರಸ್ತುತ ರಾಜಕೀಯದಲ್ಲಿ ಇವತ್ತಿಗೂ ಸಹ ಕೆಲವೊಂದು ಪ್ರಶ್ನೆಗಳು ಊಹೆ ಮಾಡಲೂ ಸಾಧ್ಯವಿಲ್ಲ ಎನ್ನುವಂತಾಗಿದೆ! ಅತ್ತ, ಕರ್ನಾಟಕ ಕಾಂಗ್ರೆಸ್ ಗೆ ಹೈದರಾಬಾದ್ ನ ಚಂದ್ರಬಾಬು ನಾಯ್ಡು ಸಹಾಯ ಮಾಡಲು ತುದಿಗಾಲಲ್ಲಿ ನಿಂತಿದ್ದರೆ, ಇತ್ತ, ಜೆಡಿಎಸ್ ಪಕ್ಷದ ಪರವಾಗಿ ಈಗ ಅಸಾಸುದ್ದೀನ್ ಓವೈಸಿ ನಿಂತಿದ್ದಾರೆ! ಅಷ್ಟರಲ್ಲಿಯೇ ಅರ್ಥ ಮಾಡಿಕೊಳ್ಳಬೇಕಿದೆ! ಜೆಡಿಎಸ್ ಪರ ನಿಲ್ಲುವಷ್ಟು ‘ ಹದಿನೈದು ನಿಮಿಷ ಕೊಡಿ, ಎಲ್ಲಾ ಹಿಂದೂಗಳನ್ನೂ ಕತ್ತರಿಸುತ್ತೇವೆ’ ಎಂದು ಬಾಯಿ ಬಡಿದುಕೊಂಡಿದ್ದ ಓವೈಸಿ ತಯಾರಾಗಿದ್ದಾರೆಂದರೆ, ಜೆಡಿಎಸ್ ನಿಜಕ್ಕೂ ಜಾತ್ಯಾತೀತ ಪಕ್ಷವೇ ಅಥವಾ ಮಾಜಿ ಪ್ರಧಾನಿಯವರ ಉವಾಚದಂತೆ, ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂಬ ಆಶಯದ ಪ್ರತಿಫಲವೋ, ಅಂತೂ ಓವೈಸಿ ಎನ್ನುವ ಹಿಂದೂ – ವಿರೋಧಿ ರಾಜಕೀಯ ನಾಯಕರೊಬ್ಬರು ಜೆಡಿಎಸ್ ನ ಪರ ನಿಂತಿದ್ದಾರೆ!!

ಜೆಡಿಎಸ್ ಪರ ಹೇಳಿಕೆ ನೀಡಿದ ಓವೈಸಿ ಮಾಡಿದ್ದು ಕುಮಾರಸ್ವಾಮಿಯವರ ಅದ್ಭುತ ಗುಣಗಾನ!!

ಅಬ್ಬಾ! ಏನ್ ಹೊಗಳಿಕೆ ಅಂತೀರಿ ಸಾರ್?! ಕರ್ನಾಟಕದಲ್ಲಿ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಲೇಬೇಕು! ಇಲ್ಲವಾದರೆ, ಕರ್ಅಟಕಕ್ಕೆ ನ್ಯಾಯ ದೊರಕಿಸಿ ಕೊಟ್ಟಂತಾಗುವುದಿಲ್ಲ!! ಜೆಡಿಎಸ್ ಅನ್ನು ಈ ಸಲ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಿಸುವುದೇ ನಮ್ಮ ಗುರಿ! ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಜೆಡಿಎಸ್ ಗೆ ಸಹಕರಿಸುತ್ತೇವೆ!! ದೇವೇ ಗೌಡರ ಆಶಯಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸಬೇಕಿದೆ! ಕಾಂಗ್ರೆಸ್ ಗಂತೂ ಭಾರತೀಯ ಜನತಾ ಪಕ್ಷವನ್ನುಸೋಲಿಸಲು ಸಾಧ್ಯವೇ ಇಲ್ಲ ಎಂಬುದು ಗೊತ್ತಾಗಿದೆ! ಅದಕ್ಕೋಸ್ಕರ, ಜೆಡಿಎಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲೇ ಬೇಕಿದೆ!”

ವ್ಹಾ!! ಎಂತಹ ಸಹಕಾರ! ಎಂತಹ ಹೊಗಳಿಕೆ!! ಇನ್ನಾದರೂ ಜೆಡಿಎಸ್ ಕಾರ್ಯಕರ್ತರು ತಮ್ಮ ಬದುಕು ಮುಂದೆ ಯಾವ ರೀತಿಯಲ್ಲಿ ಹದಗೆಡಲಿದೆ ಎಂಬುದನ್ನು ಅರಿಯಬೇಕಿದೆ! ಏನೇ ಹೇಳಿ!! ಹಿಂದೂಗಳನ್ನು ಕಂಡರೆ ಕಣ್ಣಿನಲ್ಲೂ ವಿಷ ಕಾರುವ ಓವೈಸಿ ಈಗ ಜೆಡಿಎಸ್ ಪಕ್ಷದ ಬೆಂಬಲಕ್ಕೆ ನಿಂತಿರುವಾಗ, ಯಾವ ಹಿಂದೂವೇ ಆದರೂ ಸಹ ಸ್ವಾಭಿಮಾನವಿದ್ದರೆ ಮತ್ತೆ ಜೆಡಿಎಸ್ ಗೆ ಬೆಂಬಲ ನೀಡಲಾರ! ಯಾಕೆಂದು ಮತ್ತೊಮ್ಮೆ ಯೋಚಿಸಬೇಕಿದೆ! ಯಾವ ಉದ್ದೇಶಕ್ಕಾಗಿ ಓವೈಸಿ ಇವತ್ತು, ಕರ್ನಾಟಕದ ಜೆಡಿಎಸ್ ಪರವಾಗಿ ನಿಲ್ಲುವ ನಿರ್ಧಾರ ತೋರಿದ್ದಾರೆ ಎಂಬುದನ್ನು ಮೇಲ್ನೋಟಕ್ಕೇ ಅರ್ಥೈಸಬೇಕಿದೆ! ಇಲ್ಲವಾದರೆ, ಮುಂದೊಂದು ದಿನ ತುಘಲಕ್ ಸರಕಾರದ ಇನ್ನೂ ಮುಂದುವರೆದ ಅಡ್ವಾನ್ಸ್ಡ್ ವರ್ಷನ್ನಿನ ಆಡಳಿತ ಬಹುಷಃ ಕರ್ನಾಟಕಕ್ಕೆ ಕಾಲಿಡಬಹುದೇನೋ!

ನೋಡಿ! ವಿಚಾರಗಳಿಷ್ಟೇ! ಓವೈಸಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಭಾರತೀಯ ಜನತಾ ಪಕ್ಷಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ನಿಂತಿರುವುದಾ?! ಅಥವಾ ಕಾಂಗ್ರೆಸ್ ಕೈಲಾಗದು ಎಂಬ ಉದ್ದೇಶಕ್ಕೆ ಮಾತ್ರವೇ ನಿಂತಿರುವುದಾ!? ಅಥವಾ, ಪ್ರಾದೇಶಿಕ ಪಕ್ಷದ ಬೆಂಬಲದ ಮುಖಾಂತರವೇ ಮುಂದೊಂದು ದಿನ ಕರ್ನಾಟಕದಲ್ಲಿಯೂ ತಮ್ಮ ಪಕ್ಷ ಪಸರಿಸುವ ಉದ್ದೇಶವೋ?! ಯಾಕೆಂದರೆ, ಜೆಡಿಎಸ್ ಮೊದಲು ಮೈತ್ರಿ ಮಾಡಿಕೊಳ್ಳಲು ತಯಾರಿಲ್ಲದೇ ಹೋದದ್ದು ಗೊತ್ತೇ ಇದೆ! ದೇವೇ ಗೌಡರು ಮತ್ತು ಕುಮಾರ ಸ್ವಾಮಿಯವರು ಪ್ರತಿದಿನ ಒಂದಲ್ಲ ಒಂದು ರೀತಿ ಹೇಳಿಕೆ ನೀಡುತ್ತ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದ್ದಲ್ಲದೇ ಇದ್ದಕ್ಕಿದ್ದಂತೆ ದೆಹಲಿಯಲ್ಲಿ ಬಿಎಸ್ ಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರು! ಪ್ರಾದೇಶಿಕ ಪಕ್ಷಗಳ ಜೊತೆ ಮತ್ತು ಸ್ವತಂತ್ರ್ಯ ಅಭ್ಯರ್ಥಿಗಳ ಜೊತೆ ಮೈತ್ರಿ ಪ್ರಯತ್ನಕ್ಕಿಳಿದ ಜೆಡಿಎಸ್ ಮಾತ್ರ ಕೊನೆಗೂ ತಮ್ಮ ನಿಲುವು ಏನು ಎನ್ನುವುದನ್ನು ಇವತ್ತಿಗೂ ಬಹಿರಂಗಪಡಿಸಲೇ ಇಲ್ಲ! ಬದಲಾಗಿ, ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಮೈಕು ಹಿಡಿದು ಕೂತರು! ಅಷ್ಟೇ!

ಆದರೆ, ಈಗ ಇದ್ದಕ್ಕಿದ್ದ ಹಾಗೆ ಓವೈಸಿ ಜೆಡಿಎಸ್ ನ ಪರ ಪ್ರಚಾರಕ್ಕಿಳಿದಿರುವುದು ನೋಡಿದರೆ, ಇನ್ನಾದರೂ ಸಹ ಜಾತ್ಯಾತೀತ ಪಕ್ಷವೆಂದು ಹೇಳುತ್ತಲೇ ಮುಸ್ಲಿಂರ ತುಷ್ಟೀಕರಣಕ್ಕಿಳಿದ ಜೆಡಿಎಸ್ ನ ನಿಜಬಣ್ಣ ಅರಿತು ಕಾರ್ಯಕರ್ತರು ಸರಿಯಾದ ಮಾರ್ಗ ಅನುಸರಿಸಬೇಕಿದೆಯಷ್ಟೇ! ಬೇಕಾದರೆ ನೀವೇ ಗಮನಿಸಿ! ಹದಿಯಾಳ ಪ್ರಕರಣದಲ್ಲಿ, ಇದೇ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಅಲಿ ಹೇಳಿದ್ದೇನು?! ಹದಿಯಾಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದೆಂಬಂತೆ ಬಿಂಬಿಸಿ, ಹದಿಯಾಳ ನಿರ್ಧಾರವನ್ನು ಸ್ವಾಗತಿಸಿದ ದಿನೇಶ್ ಅಲಿಯವರಿಗೆ ಹಿಂದೂಗಳು ಮುಸಲ್ಮಾನರಾಗಿ ಮತಾಂತರವಾದರೆ ಯಾವ ಅಭ್ಯಂತರವೂ ಇಲ್ಲ?! ಇದು, ಜೆಡಿಎಸ್ ಪಕ್ಷವನ್ನು ನಂಬಿ ಬದುಕುತ್ತಿರುವ ಕಾರ್ಯಕರ್ತರಿಗೆ ಸ್ವಾಗತಾರ್ಹವೇ?!

ಇಲ್ಲವಲ್ಲ?! ಮುಂದಿನ ಜನ್ಮದಲ್ಲಿಯಾದರೂ ನಾನು ಮುಸಲ್ಮಾನನಾಗುತ್ತೇನೆ ಎಂದ ದೇವೇಗೌಡರು ತಮ್ಮ ಸಮುದಾಯಕ್ಕೇ ಸ್ವತಃ ಅವಮಾನ ಎಸಗಿರುವಾಗ ಇನ್ಯಾವ ಉನ್ನತ ಬದುಕು ಹಿಂದೂಗಳದ್ದಾದೀತು?! ಹಾಗಾದರೆ, ಜೆಡಿಎಸ್ ಸರಕಾರ ನಿಜಕ್ಕೂ ಜಾತ್ಯಾತೀತವೇ ಅಥವಾ?! ಮುಸಲ್ಮಾನ ತುಷ್ಟೀಕರಣದ ಇನ್ನೊಂದು ಭಾಗವೇ?! ಕಾರ್ಯಕರ್ತರು ಅಥವಾ ಬೆಂಬಲಿಗರು ಯೋಚಿಸಬೇಕಿದೆ!! ಇನ್ನಾದರೂ!

ಈಗ ಇದ್ದಕ್ಕಿದ್ದ ಹಾಗೆ, ಜೆಡಿಎಸ್ ಅನ್ನು ಬೆಂಬಲಿಸುತ್ತ ನಿಂತಿರುವ ಓವೈಸಿಯ ವ್ಯಕ್ತಿತ್ವ ಎಂತಹದ್ದು ಎಂಬುವುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ! ಇನ್ನಾದರೂ, ಜೆಡಿಎಸ್ ಕಾರ್ಯಕರ್ತರು ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕಿದೆ!

ಈ ಹಿಂದೆಯೂ ಸಹ ತುಮಕೂರಿನಲ್ಲಿ ನಡೆದ ಪಕ್ಷದ ಸಭೆಗೆ ರಾಷ್ಟ್ರದ್ರೋಹಿಯನ್ನು ಕರೆಸಿದ್ದ ಜೆಡಿಎಸ್ ಏನನ್ನು ಸಾಧಿಸಿ ತೋರಿಸಲು ಹೊರಟಿದೆ?!

ಅರೇ ವ್ಹಾ! ಮಾತೆತ್ತಿದರೆ ಜೆಡಿಎಸ್ ನ ಕಾರ್ಯಕರ್ತರು ರೈತ, ಜಾತ್ಯಾತೀತತೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವಾಗ ‘ರಾಷ್ಟ್ರಭಕ್ತಿ’ ಎಂಬುದರ ನೆರಳು ಕಾಣುವುದಿಲ್ಲ ಎಂಬ ಸತ್ಯದಡಿಯಲ್ಲಿಯೇ, ಜೆಡಿಎಸ್ ನ ಅಲ್ಪಸಂಖ್ಯಾತರ ಸಮಾವೇಶಕ್ಕೆ ಖ್ಯಾತ ರಾಷ್ಟ್ರದ್ರೋಹಿಯಾದ, ಜಮ್ಮು – ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾದ ಫಾರೂಕ್ ಅಬ್ದುಲ್ಲಾನನ್ನು ಕರೆಸಿದ್ದರಲ್ಲ?! ಅದರ ಬಗ್ಗೆ ಯಾವುದೇ ವಿರೋಧಗಳೂ ಕಾರ್ಯಕರ್ತರಿಂದ ಆಗುತ್ತಲೇ ಇಲ್ಲವೆಂಬುದರ ಅರ್ಥವೇನು ?! ಅಲ್ಲಾ ಸ್ವಾಮೀ!! ಕೇವಲ ಪರರಿಗೆ ಪ್ರಶ್ನೆ ಮಾಡುವುದರಲ್ಲಿಯೇ ನಿರತರಾಗಿರುವ ಕುಮಾರಸ್ವಾಮಿಯವರು ನಿಜಕ್ಕೂ ಚಾಣಾಕ್ಷರೇ! ಅಲ್ಪಸಂಖ್ಯಾತರ ಓಲೈಕೆಗೆ, ಮತ್ತದೇ ಮತಬ್ಯಾಂಕಿನಡಿ ಫಾರೂಕ್ ಅಬ್ದುಲ್ಲಾನನ್ನು ಕರೆಸಿದ್ದ ಕುಮಾರ ಸ್ವಾಮಿಯವರಿಗೆ, ಕಿಂಚಿತ್ತೂ ರಾಷ್ಟ್ರಾಭಿಮಾನ ಎಂಬುದು ಇದೆಯೇ?! ಅಥವಾ, ತಮ್ಮ ಕುಲದ ಬಗ್ಗೆ, ಧರ್ಮದ ಬಗೆಗೆ ಅಭಿಮಾನ ವೆಂಬುದಿದೆಯೇ?! ಎಂಬುದೂ ಸಹ ಇಲ್ಲಿ ಪ್ರಶ್ನೆಯಾಗ ಬೇಕಿತ್ತು! ಆದರೆ, ದುರಾದೃಷ್ಟ! ಆಗಲೇ ಇಲ್ಲ!

ಮೂಲ : ದಿಗ್ವಿಜಯ ಟಿವಿ


ಪೃಥು ಅಗ್ನಿಹೋತ್ರಿ

Editor Postcard Kannada:
Related Post