X

ಉಗ್ರರನ್ನು ಹೋರಾಟಗಾರರೆಂದು ಬಿಂಬಿಸಿ, ವಿಶ್ವದ ಎದುರು ಮಾನ ಕಳೆದುಕೊಂಡ ಪಾಕ್!! 

ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಭಾರತದ ವಿರುದ್ಧ ಷಡ್ಯಂತ್ರಗಳನ್ನು ಹೂಡುತ್ತಿರುವ ಪಾಕಿಸ್ತಾನವು ಇದೀಗ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಬಾರಿ ತನ್ನ ನರಿ ಬುದ್ದಿಯನ್ನು ತೋರಿಸುತ್ತಿರುವ ಹಿನ್ನಲೆಯಲ್ಲಿ, ಭಾರತವು ವಿಶ್ವಸಂಸ್ಥೆಯ ಎದುರು ಪಾಕಿಸ್ತಾನವನ್ನು ಏಕಾಂಗಿಯಾಗಿ ನಿಲ್ಲಿಸಿದೆ. ಅಷ್ಟೇ ಅಲ್ಲದೇ ಇಡೀ ವಿಶ್ವದ ಎದುರು ಪಾಕಿಸ್ತಾನಕ್ಕೆ ತೀವ್ರ ಮುಖಭಂಗ ಉಂಟಾಗುವಂತೆ ಮಾಡಿದೆ!!

ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಾರತದ ಸುಪರ್ದಿಯಲ್ಲಿರುವ ಕಾಶ್ಮೀರದ ಸ್ಥಿತಿಗತಿ ಕುರಿತು ಇದೇ ಮೊದಲ ಬಾರಿ ಎನ್ನುವಂತೆ ಬಿಡುಗಡೆ ಮಾಡಿರುವ ವರದಿಯಲ್ಲಿ ವಿಶ್ವಸಂಸ್ಥೆ ಅಂತದ್ದೊಂದು ಆಪಾದನೆಯ ಅಪದ್ಧ ಎಸಗಿತ್ತು!! ಸಾರ್ವಭೌಮತೆಗೆ ಧಕ್ಕೆ ತರುವ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಭಾರತ ತನ್ನದೇ ಧಾಟಿಯಲ್ಲಿ ದಿಟ್ಟ ಪ್ರತ್ಯುತ್ತರ ನೀಡಿದೆಯಲ್ಲದೇ ತಪ್ಪು ಮಾಹಿತಿ ಒಳಗೊಂಡ, ದುರುದ್ದೇಶ ಪೂರಿತ, ಪಕ್ಷಪಾತಿ ವರದಿ ಎಂದು ಪ್ರತಿಭಟಿಸಿತ್ತೂ ಕೂಡ!! ಅಷ್ಟೇ ಅಲ್ಲದೇ ಈ ವರದಿಯಲ್ಲಿ ಪೂರ್ವಾಗ್ರಹ ಪೀಡಿತ ವೈಯಕ್ತಿಕ ಭಾವನೆಗಳು ಕೆಲಸ ಮಾಡಿವೆ. ಇದಕ್ಕೆ ಮಣೆ ಹಾಕುವ ಮೂಲಕ ವಿಶ್ವಸಂಸ್ಥೆಯ ಘನತೆ ಕುಗ್ಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೇ, ಈ ವರದಿ ಮೂಲಕ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ವಿಶ್ವಸಂಸ್ಥೆ ಮರೆತಿದೆ. ಪಾಕಿಸ್ತಾನವು ಆಕ್ರಮಣಕಾರಿ ನಡೆಯ ಮೂಲಕ ಭಾರತದ ಕೆಲವು ಭಾಗಗಳನ್ನು ಅಕ್ರಮವಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಭಾರತ ವಿದೇಶಾಂಗ ಸಚಿವಾಲಯ ಮರು ಮನವರಿಕೆ ಮಾಡಿಕೊಟ್ಟಿತ್ತು!! ಆದರೆ ಇದಕ್ಕೆ ಕ್ಯಾರೆ ಅನ್ನದೇ, ಪಾಕಿಸ್ತಾನವು ಭಾರತದ ವಿರುದ್ಧ ಸಮರ ಸಾರಿತ್ತು!! ಹಾಗಾಗಿ ಇದೀಗ ಕಾಶ್ಮೀರದ ವಿಚಾರವಾಗಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನವನ್ನು ಕೊನೆಗೂ ಭಾರತ ಏಕಾಂಗಿಯಾಗಿ ಮಾಡುವಲ್ಲಿ ಸಫಲವಾಗಿದೆ.

ಈ ಹಿಂದೆಯಷ್ಟೇ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯುಕ್ತ ಜಿದ್ ರಾದ್ ಅಲ್ ಹುಸೇನ್ 49 ಪುಟಗಳ ವರದಿಯನ್ನು ಸಲ್ಲಿಸಿದ್ದರು. ವರದಿಯಲ್ಲಿ, ” ಜಮ್ಮು ಕಾಶ್ಮೀರದಲ್ಲಿ ಅಮಾಯಕರ ಮೇಲೆ ದಾಳಿ ನಡೆಸಲಾಗುತ್ತಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದರು. ಈ ಕುರಿತು ವರದಿ ಪ್ರಕಟಿಸಿದ ದಿನವೇ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಭಾರತದ ನಿಲುವಿಗೆ ಆರು ರಾಷ್ಟ್ರಗಳು ಬೆಂಬಲಕ್ಕೆ ನಿಂತಿರುವ ಮೂಲಕ ಹೊಸ ಬಲ ನೀಡಿವೆ. ಅಷ್ಟೇ ಅಲ್ಲದೇ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ರಾಯಭಾರಿ ಫಾರೂಖ್ ಅಮಿಲ್ ವರದಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರಾದರೂ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ.

ಈಗಾಗಲೇ, “ವಿಶ್ವಸಂಸ್ಥೆ ಮಾನವ ಹಕ್ಕುಗಳ ಕುರಿತ ರಾಯಭಾರ ಕಚೇರಿ ಸಲ್ಲಿಸಿರುವ ಪ್ರಮಾದಪೂರಿತ ವರದಿಯಲ್ಲಿ ಉಗ್ರರನ್ನು ಹೋರಾಟಗಾರರೆಂದು ಬಣ್ಣಿಸಲಾಗಿದೆ. ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುವ ಕಾರ್ಯಕರ್ತರನ್ನು ಮಟ್ಟಹಾಕಲು ಹಾಗೂ ಪ್ರಶ್ನಿಸುವವರನ್ನು ನಾಶ ಮಾಡಲು ಭಾರತ ಸರಕಾರ ಪ್ರಯತ್ನಿಸುತ್ತಿದೆ. ಭಯೋತ್ಪಾದನೆ ವಿರೋಧಿ ಕಾಯಿದೆ ಮೂಲಕ ಅಂತಹದ್ದೊಂದು ಪ್ರಯತ್ನ ನಡೆದಿದೆ. ಇದು ಕೊನೆಗೊಳ್ಳಬೇಕಾದ ಅಗತ್ಯ ಇದೆ” ಎಂದು ವರದಿಯಲ್ಲಿ ಹೇಳಿತ್ತು!! ಅಲ್ಲದೇ, ಕಾಶ್ಮೀರದಲ್ಲಿ ಹಿಂದಿನಿಂದಲೂ ಸಾಗಿ ಬಂದಿರುವ ಹಿಂಸಾಚಾರಕ್ಕೆ ತಡೆ ಹಾಕುವ ಜರೂರತ್ತಿದೆ. ಹಿಂದೆ ಆಗಿರುವ, ಈಗ ಆಗುತ್ತಿರುವ ಮಾನವ ಹಕ್ಕುಗಳ ಹರಣಕ್ಕೆ ಹೊಣೆಗಾರರನ್ನು ಗುರುತಿಸುವ ಮೂಲಕ ಹಿಂಸೆಯ ಪುನರಾವರ್ತನೆಗೆ ತಡೆ ಹಾಕಬೇಕಿದೆ ಎಂದು ವಿಶ್ವಸಂಸ್ಥೆ ವರದಿ ಪ್ರತಿಪಾದಿಸಿದೆ. ಗಡಿ ನಿಯಂತ್ರಣ ರೇಖೆಯ ಎರಡೂ ಕಡೆಗಳಲ್ಲಿನ ಜನರ ನಿತ್ಯ ಬದುಕು ನರಕವಾಗಿದೆ. ಅಲ್ಲಿ ಮಾನವನ ಹಕ್ಕುಗಳ ವ್ಯಾಪ್ತಿ ಸಂಕುಚಿತಗೊಂಡಿದೆ. ಬಹುತೇಕ ಅಂತಹದ್ದೊಂದು ಹಕ್ಕಿನ ನಿರಾಕರಣೆಯಾಗಿದೆ ಎಂದು ದೂರಲಾಗಿದೆ.

ಇಂತಹ ಪ್ರಮಾದಪೂರಿತ ವರದಿಗೆ ಇದೀಗ ಭಾರತ ಸೇರಿ ವಿಶ್ವಸಂಸ್ಥೆಯ ಆರು ರಾಷ್ಟ್ರಗಳು ವಿಶ್ವಸಂಸ್ಥೆಯ ಸಭೆಯಲ್ಲೇ ನಿರಾಕರಿಸುವ ಮೂಲಕ ವಿಶ್ವಸಂಸ್ಥೆ ಮತ್ತು ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಹೌದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವರದಿಯ ಬಗ್ಗೆ ಭಾರತ ಸೇರಿ ಅಫ್ಘಾನಿಸ್ತಾನ, ಮಾರಿಷಸ್, ಬೆಲಾರಸ್, ಕ್ಯೂಬಾ, ಭೂತಾನ್ ಮತ್ತು ವೆನೆಜುವೆಲಾ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೂ ಇದರಿಂದ ವಿಶ್ವಮಟ್ಟದಲ್ಲಿ ಭಾರಿ ಹಿನ್ನಡೆಯುಂಟಾಗಿದೆ.

ವಿಶ್ವಸಂಸ್ಥೆ ವರದಿ ಪೂರ್ವಾಗ್ರಹ ಪೀಡಿತವಾಗಿದ್ದು, ವರದಿ ಆದರಿಸಿ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಭೂತಾನ್, ವಿಶ್ವಸಂಸ್ಥೆಗೆ ಆಗ್ರಹಿಸಿದೆ. ಇನ್ನು ವಿಶ್ವಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ಕಾಯಂ ಸದಸ್ಯ ಫಾರುಕ್ ಆಮಿಲ್ “ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರತ್ಯೇಕ ತನಿಖಾ ಸಮಿತಿ ರಚಿಸಬೇಕು” ಎಂದು ಆಗ್ರಹಿಸಿದ್ದರು. ಇದಕ್ಕೆ ಯಾವುದೇ ರಾಷ್ಟ್ರಗಳು ಬೆಂಬಲ ನೀಡದಿರುವುದರಿಂದ ಪಾಕಿಸ್ತಾನ ಏಕಾಂಗಿಯಾಗಿ, ತೀವ್ರ ಮುಖಭಂಗ ಎದುರಿಸಿದ್ದಂತೂ ಅಕ್ಷರಶಃ ನಿಜ.

ಮೂಲ:
http://www.kannadaprabha.com/world/countries-across-continents-support-india-on-kashmir-issue-at-un-pakistan-isolated/318634.html

– ಅಲೋಖಾ

Editor Postcard Kannada:
Related Post