X

ಬಜರಂಗದಳದ ವಿರುದ್ಧ ಪಿಎಫ್‌ಐ ರಹಸ್ಯ ಕಾರ್ಯಾಚರಣೆ: ಸಿಕ್ಕಿಬಿದ್ದಳು ಚಾಲಾಕಿ!

ಹಣ ಕಂಡ್ರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವ ಮಾತಿದೆ. ಇದು ಕೆಲವು ಮುಸ್ಲಿಂ ತೀವ್ರವಾದಿ, ದೇಶ ವಿರೋಧಿ ಸಂಘಟನೆಗಳಿಗೆ ಹೇಳಿ ಮಾಡಿದ ಗಾದೆಯಂತಿದೆ. ಕಾರಣ ಇಷ್ಟೇ, ವಿದೇಶಗಳಿಂದ, ಉಗ್ರ ಸಂಘಟನೆಗಳಿಂದ ಬರುವ ಹಣಕ್ಕಾಗಿ ಆ ಸಂಘಟನೆಗಳಲ್ಲಿ ಗುರುತಿಸಿಕೊಂಡ ಕೆಲ ಜಿಹಾದಿಗಳು ಎಂತಹ ಕೃತ್ಯಕ್ಕೂ ಸಿದ್ಧರಾಗಿರುತ್ತಾರೆ. ಕೊಲೆ, ಸುಲಿಗೆ ಸೇರಿದಂತೆ ಇನ್ನಿತರ ಹರಾಮಿ ಕೆಲಸದ ಮೂಲಕ ದುಡ್ಡು ಮಾಡುವವರಿಂದ ದೇಶಕ್ಕೆ ಅಪಾಯ ಅಷ್ಟಿಷ್ಟಲ್ಲ.

ಅಂತದ್ದೇ ಒಂದು ಪ್ರಕರಣ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ನ್ಯಾಯಾಲಯದ ಕಲಾಪವನ್ನು ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದ ಜಿಹಾದಿ ಮಹಿಳೆಯೊಬ್ಬಳು ಮೊಬೈಲ್ ಫೋನ್ ಮೂಲಕ ಚಿತ್ರೀಕರಣ ಮಾಡುತ್ತಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ನ್ಯಾಯ ದೇಗುಲದಲ್ಲೇ ಕಾನೂನು ಬಾಹಿರ ಕೆಲಸ ಮಾಡಿದ ಈಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಅಶಾಂತಿದೂತೆಯ ಹೆಸರು ಸೋನು ಮನ್ಸೂರಿ ಎಂದು. ನ್ಯಾಯಾಲಯದಲ್ಲಿ ಬಜರಂಗದಳಕ್ಕೆ ಸಂಬಂಧಿಸಿದ ಪ್ರಕರಣ ವೊಂದರ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿಷೇಧಿತ ಸಂಘಟನೆ ಪಿಎಫ್‍ಐ‌ಗೆ ಸಂಬಂಧಿಸಿದ ಈಕೆ ತನ್ನ ಮೊಬೈಲ್ ಫೋನ್ ಮೂಲಕ ಕೋರ್ಟ್ ಕಲಾಪಗಳನ್ನು ಚಿತ್ರೀಕರಣ ಮಾಡುತ್ತಿದ್ದಳು. ಇವಳ ಈ ಕಾನೂನು ಬಾಹಿರ ಕೆಲಸವನ್ನು ಗಮನಿಸಿದ ಬಜರಂಗದಳದ ಪರ ವಾದ ಮಂಡಿಸುತ್ತಿದ್ದ ವಕೀಲರು, ಮಹಿಳಾ ವಕೀಲರುಗಳ ಸಹಾಯದಿಂದ ಈ ಸಮಾಜ ವಿದ್ರೋಹಿಯನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಆಕೆಯನ್ನು ವಿಚಾರಣೆ ನಡೆಸುವ ವೇಳೆ, ಹಿರಿಯ ನ್ಯಾಯವಾದಿ ನೂರ್ ಜಹಾನ್ ಖಾನ್ ಎಂಬವರು ಚಿತ್ರೀಕರಣ ನಡೆಸುವಂತೆ ಸೂಚಿಸಿದ್ದಾಗಿ ತಿಳಿಸಿದ್ದಾಳೆ‌. ಈ ವಿಡಿಯೋವನ್ನು ಪಿಎಫ್‌ಐಗೆ ಕಳುಹಿಸಿದಲ್ಲಿ ೩ ಲಕ್ಷ ರೂ. ನೀಡುವ ಆಮ್ಲ ಒಡ್ಡಿದ್ದಾಗಿಯೂ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾಳೆ.

ಕಾನೂನು ಪಾಲಿಸಬೇಕಾದವರೇ, ನಿಷೇಧಿತ ದೇಶದ್ರೋಹಿಗಳಿಗೆ ಸಹಾಯ ಮಾಡುತ್ತಿರುವವುದು, ಈ ದೇಶದ ಭದ್ರತೆಗೆ ಮಾರಕವೂ ಹೌದು. ಹಣಕ್ಕಾಗಿ ದೇಶದ ಶಾಂತಿ ಭಂಗಗೊಳಿಸುತ್ತಿರುವ ಇಂತಹವರಿಗೆ ದೊಡ್ಡ ಮಟ್ಟದ ಶಿಕ್ಷೆಯಾಗಲಿ ಎಂಬುದು ನಮ್ಮ ಆಶಯ.

Post Card Balaga:
Related Post