X

ಕಾಂಗ್ರೆಸ್‌ನ ಲೂಟಿ ಹೊಡೆಯುವ ಕನಸು ನನಸಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ

ಸಮಾಜಕ್ಕೆ ಮಾರಕವಾಗುವಂತಹ ನಿರ್ಣಯಗಳನ್ನು ಸಾಧಿಸುವುದರಲ್ಲಿ ಕಾಂಗ್ರೆಸ್ ಪಕ್ಷ ಎತ್ತಿದ ಕೈ. ಕರ್ನಾಟಕದಲ್ಲಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಳೆದ ಕೆಲ ಸಮಯದಲ್ಲಿ ಉಂಟಾದ ಅರಾಜಕ ಪರಿಸ್ಥಿತಿಯೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಪಕ್ಷದ ಕರ್ಮ ಕಾಂಡ ಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರದಿಂದ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಾಗಿದೆ. ಬಾಂಬ್ ಸ್ಪೋಟದಂತಹ ಹಿಂಸಾತ್ಮಕ ಕೃತ್ಯಗಳು ಮೇಳೈಸುತ್ತಿವೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಯಿತು. ಚಿಕ್ಕೋಡಿಯಲ್ಲಿ ಜೈನ ಮುನಿಯೋರ್ವರ ಹತ್ಯೆಯಾಯಿತು. ಹುಬ್ಬಳ್ಳಿಯಲ್ಲಿ ನೇಹಾ ಎಂಬ ವಿದ್ಯಾರ್ಥಿನಿಯ ಹತ್ಯೆ ನಡೆಯಿತು. ಇಡೀ ದೇಶವೇ ಕರ್ನಾಟಕವನ್ನು ಆತಂಕದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ವೈಫಲ್ಯವಾಗಿದ್ದು, ಕಾಂಗ್ರೆಸ್ ಪಾಪಗಳಿಗೆ ಈ ಚುನಾವಣೆಯಲ್ಲಿ ಸರಿಯಾಗಿ ಪಾಠ ಕಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್‌ ನವರು ಅಯೋಧ್ಯೆಯ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆ ಆಹ್ವಾನವನ್ನು ತಿರಸ್ಕರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸದೆ ಬಹುಕೋಟಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಇಂತಹ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಕರುನಾಡ ಜನರು ತಿರಸ್ಕರಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

ಶ್ರೀರಾಮನ ಮಂದಿರವನ್ನು ಜನರು ತಮ್ಮ ಹಣದಲ್ಲಿ ನಿರ್ಮಾಣ ಮಾಡಿರುವುದಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಮನ ಮಂದಿರ ನಿರ್ಮಾಣ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದವು. ಅವರ ತಪ್ಪನ್ನು ಮರೆತು ಟ್ರಸ್ಟ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿತು. ಆದರೆ ಅವರು ಈ ಆಹ್ವಾನ ತಿರಸ್ಕರಿಸಿದರು. ಆದರೆ ಮುಸಲ್ಮಾನರು ಸಹ ಶ್ರೀರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ಪುರಸ್ಕರಿಸಿದ್ದರು ‌ಎಂದು ಅವರು ತಿಳಿಸಿದ್ದಾರೆ.

ಜನರ ಆಶೀರ್ವಾದ ದಿಂದ ನಮ್ಮ ಸರ್ಕಾರ ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಶಕ್ತಿಶಾಲಿ ಆಡಳಿತ ನಡೆಸಿದೆ. ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ. ಅಭಿವೃದ್ಧಿಯ ಆಶಯದ ಜೊತೆಗೆ ನಮ್ಮ ಕೆಲಸ ನಡೆಸಿದ್ದೇವೆ. ಬಹುಮತದ ಸರ್ಕಾರ ಇದ್ದಾಗ ವಿಶ್ವವು ದೇಶಕ್ಕೆ ಗೌರವ ನೀಡುತ್ತದೆ. ಅಂತಹ ಗೌರವ ಈಗ ಹಿಂದೂಸ್ತಾನಕ್ಕೆ ದಕ್ಕುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇವೆಲ್ಲವೂ ಸಾಧ್ಯವಾಗಿದ್ದು ನೀವು ನೀಡಿದ ಮತದ ಕಾರಣದಿಂದಾಗಿ. ದೇಶದ, ಜನರ ಸಮಗ್ರ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತೇವೆ. ಕಾಂಗ್ರೆಸ್ ನಿಮ್ಮ ಸಂಪತ್ತನ್ನು ಕೊಳ್ಳೆ ಹೊಡೆದು ಅವರ ಮತ ಬ್ಯಾಂಕ್‌ ಗೆ ಹಂಚಲು ಹುನ್ನಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಎಚ್ಚರ ಇರಲಿ ಎಂ ದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಹಾಗೆಯೇ ನಾನು ಇರುವವರೆಗೂ ಕಾಂಗ್ರೆಸ್ ಪಕ್ಷದ ಲೂಟಿ ಹೊಡೆಯುವ ಕನಸು ನನಸಾಗದು ಎಂದು ಅವರು ಹೇಳಿದ್ದಾರೆ.

Post Card Balaga:
Related Post