X

ಕರ್ನಾಟಕದಲ್ಲಿ ಗಂಭೀರಾವಸ್ಥೆಗೆ ತಲುಪಿದೆ ಕಾನೂನು ಸುವ್ಯವಸ್ಥೆ

ದೇಶದ ಭ್ರಷ್ಟ ಪಕ್ಷ ಕಾಂಗ್ರೆಸ್ ನೇತೃತ್ವದ ಇನ್ನಿತರ ಭ್ರಷ್ಟ ಪಕ್ಷಗಳು ಒಗ್ಗೂಡಿರುವ ಒಕ್ಕೂಟ ಇಂಡಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಸಮರ ಮುಂದುವರೆದಿದೆ. ದೇಶದಲ್ಲಿ ಎನ್‌ಡಿಎ, ಬಿಜೆಪಿ, ಪ್ರಧಾನಿ ಮೋದಿ ಅವರ ವಿರೋಧಿಗಳೆಲ್ಲಾ ಒಟ್ಟಾಗಿ ಇಂಡಿ ಒಕ್ಕೂಟ ರಚನೆ ಮಾಡಿದ್ದಾರೆ. ಈ ಒಕ್ಕೂಟದಲ್ಲಿ ತಮ್ಮ ನಾಯಕ ಯಾರು ಎನ್ನುವ ಸ್ಪಷ್ಟತೆ ಇನ್ನೂ ಇಲ್ಲ. ಒಕ್ಕೂಟದ ಎಲ್ಲರನ್ನೂ ಸಂತೋಷ ಪಡಿಸಲು ವರ್ಷಕ್ಕೊಂದರ ಹಾಗೆ ಪ್ರಧಾನಿ ಮಾಡುವ ಚಿಂತನೆಯಲ್ಲಿ ಇಂಡಿ ಒಕ್ಕೂಟ ಇದೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ‌.

ಇಂತಹ ಇಂಡಿ ಒಕ್ಕೂಟದ ಸದಸ್ಯ ಪಕ್ಷಗಳಿಗೆ ಮತ ನೀಡಿ ಜನರು ತಮ್ಮ ಮತಗಳನ್ನು ವ್ಯರ್ಥ ಮಾಡದಂತೆ ಮನವಿ ಮಾಡಿದ್ದಾರೆ. ನಿಮ್ಮ ಮತ ಮೌಲ್ಯಯುತವಾಗಿದ್ದು ಅದನ್ನು ಅಭಿವೃದ್ಧಿಯ ಪರ ನೀಡಿ ಎಂದು ಅವರು ಭಿನ್ನವಿಸಿಕೊಂಡಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಪಕ್ಷ ಎಸ್‌ಸಿ, ಎಸೇ‌ಟಿಗಳಿಗಾಗಿ ಮೀಸಲಿಡಲಾಗಿದ್ದ ಹಣವನ್ನು ಬೇರೆಡೆಗೆ ಬಳಕೆ ಮಾಡಿದೆ. ಈ ಹಿಂದೆ ಬಿಜೆಪಿ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಅಡಿಯಲ್ಲಿ ನಾಲ್ಕು ಸಾವಿರ ರೂ.ಗಳನ್ನು ನೀಡುತ್ತಿತ್ತು. ಇದನ್ನು ಕಾಂಗ್ರೆಸ್ ಸರ್ಕಾರ ಇಲ್ಲವಾಗಿಸಿತು. ಈಗ ಕೇಂದ್ರದ ಆರು ಸಾವಿರ ಮಾತ್ರ ಸಿಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ರೈತರ ಮೇಲೆ ದ್ವೇಷವೇ ಎಂದು ಪ್ರಧಾನಿ ಪ್ರಶ್ನೆ ಮಾಡಿದ್ದಾರೆ.

ಜನರು ತಮ್ಮ ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಕಟ್ಟುವ ಹಾಗೆ ಮಾಡುವ ಹುನ್ನಾರ ಕಾಂಗ್ರೆಸ್ ಪಕ್ಷದ್ದು. ಮಕ್ಕಳ ಭವಿಷ್ಯಕ್ಕಾಗಿ ಕೂಡಿಟ್ಟ ಹಣದ ಮೇಲೆ ತೆರಿಗೆ ಕಟ್ಟಲು ಸೂಚಿಸಿ ಲೂಟುವ ಯೋಜನೆ ಕಾಂಗ್ರೆಸ್ ಪಕ್ಷದ್ದು. ಅದನ್ನು ಸಹ ಬೇರೆಯವರಿಗೆ ಹಂಚುವ ಹೊಂಚು ಕಾಂಗ್ರೆಸ್ ಪಕ್ಷ ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಗಂಭೀರ ಸ್ಥಿತಿಗೆ ತಲುಪಿದೆ. ರಾಜ್ಯದ ಜನರಿಗೆ ಅಸುರಕ್ಷಿತತೆ ಕಾಡುತ್ತಿದೆ‌. ಕೆಫೆಯಲ್ಲಿ ಬಾಂಬ್ ಸ್ಪೋಟ ನಡೆದರೆ ಅದನ್ನು ಗ್ಯಾಸ್ ಸಿಲಿಂಡರ್ ಸ್ಪೋಟ ಎನ್ನುತ್ತಾರೆ. ಬಳಿಕ ಉದ್ಯಮ ವೈಷಮ್ಯ ಎನ್ನುತ್ತಾರೆ. ಹುಬ್ಬಳ್ಳಿ ಕಾಲೇಜಿನಲ್ಲಿ ನಡೆದ ಹತ್ಯೆಯನ್ನು ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್‌ ‌ಗೆ ಬಳಕೆ ಮಾಡಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಎಲ್ಲಾ ಕಡೆಯಿಂದಲೂ ಮತ್ತೆ ಮೋದಿ ಎನ್ನುವ ಮಾತು ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ಜೂನ್ ನಾಲ್ಕರಂದು ಸಂಭ್ರಮದ ವಿಜಯೋತ್ಸವ ನಡೆಯಲಿದೆ. ನಾನು ಜನತೆ ಗಾಗಿ ಸದಾ ಕಾರ್ಯ ನಿರ್ವಹಿಸುವ ಭರವಸೆಯನ್ನು ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಅದನ್ನು ಈಡೇರಿಸಿರುವುದಾಗಿಯೂ ಅವರು ಹೇಳಿದ್ದಾರೆ.

Post Card Balaga:
Related Post