X

ಪ್ರಣಬ್ ಮುಖರ್ಜಿ ಆರ್‍ಎಸ್‍ಎಸ್‍ನ್ನು ಅಪ್ಪಿಕೊಂಡಿದ್ದಕ್ಕೆ ಆಕ್ಷೇಪವೆತ್ತಿದ ಕಾಂಗ್ರೆಸ್ಸಿಗರು..! ಬಯಲಾಯ್ತು ದೇಶದ್ರೋಹದ ಮತ್ತೊಂದು ಮುಖ..!

ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಶತಕದ ಸಂಭ್ರಮಕ್ಕೆ ಹತ್ತಿರವಾಗುತ್ತಿರುವ ಅಪ್ರತಿಮ ದೇಶಭಕ್ತ ಸಂಘಟನೆ. ರಾಷ್ಟ್ರೀಯ ವಿಚಾರಧಾರೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಮಸ್ತೇ ಸದಾ ವತ್ಸಲೇ ಎಂದು ಭಾರತ ಮಾತೆಯನ್ನು ಸ್ತುತಿಸಿ ದೇಶದಾದ್ಯಂತ ರಾಷ್ಟ್ರ ಭಕ್ತಿಯ ಜಾಗೃತಿಯನ್ನು ಮೂಡಿಸುತ್ತಿರುವಂತಹಾ ಸ್ವಯಂ ಸೇವಾ ಸಂಘಟನೆ. ಭಾರತ-ಚೀನಾ ಯುದ್ಧದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡಿದ್ದ ಜಗತ್ತೇ ಮೆಚ್ಚುವ ಕೆಲಸವನ್ನು ಪರಿಗಣಿಸಿ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು  ಗಣರಾಜ್ಯೋತ್ಸವದಂದು ನಡೆದಿದ್ದ ಪಥಸಂಚಲನಕ್ಕೆ ಸಂಘಕ್ಕೆ ಅವಕಾಶ ನೀಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಸಂಘಪರಿವಾರವನ್ನು ಕಟುವಾಗಿ ಟೀಕಿಸುತ್ತಿದ್ದ ನೆಹರೂರವರೇ ಅಂದು ಸಂಘಕ್ಕೆ ಗೌರವ ಸಲ್ಲಿಸಿದ್ದರು. 

ಆದರೆ ಅವರದ್ದೇ ಕಾಂಗ್ರೆಸ್ ಪಕ್ಷ ನಂತರದ ಕಾಲದಲ್ಲೂ ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ವಿರೋಧಿಸುತ್ತಲೇ ಬಂದಿದೆ. ಅದು ಇಂದಿನವರೆಗೂ ಮುಂದುವರೆದಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್‍ನ ಎಲ್ಲಾ ನಾಯಕರು ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ದೂರುತ್ತಲೇ ಕಾಲ ಕಳೆಯುತ್ತಿದ್ದಾರೆ. ಆದರೆ ಸಂಘ ಮಾತ್ರ ತೆಗಳಿದಷ್ಟು ಸಧೃಢವಾಗುತ್ತಲೇ ಬರುತ್ತಿದೆ.

ಪ್ರಣಬ್ ಮುಖರ್ಜಿಗೆ ಸಂಘದ ಆಹ್ವಾನ…

ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್ ಅವಧಿಯಲ್ಲಿ  ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಪ್ರಣಬ್ ಮುಖರ್ಜಿಯವರಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ ತಮ್ಮ ಕಾರ್ಯಕ್ರಮವೊಂದಕ್ಕೆ ಆಹ್ವಾನವನ್ನು ನೀಡಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೀಡಿರುವ ಆಹ್ವಾನವನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪ್ರೀತಿಯಿಂದಲೇ ಸ್ವೀಕರಿಸಿ ಒಪ್ಪಿಗೆಯನ್ನು ನೀಡಿದ್ದಾರೆ.

ಹೊಸದಾಗಿ ಸೇರ್ಪಡೆಗೊಂಡಿರುವ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರ ಪದವಿ ಸಮಾರಂಭಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಸಂಘ ಆಹ್ವಾನಿಸಿತ್ತು. ನಾಗ್ಪುರದಲ್ಲಿ ಜೂನ್ 7ರಂದು ನಡೆಯಲಿರುವ ಈ ಸಮಾರಂಭದಲ್ಲಿ ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಬೇಕೆಂದು ಆಹ್ವಾನವನ್ನು ಮಾಜಿ ರಾಷ್ಟ್ರಪತಿಯವರನ್ನು ಆಹ್ವಾನಿಸಿದ್ದಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಅವರು ತಿಳಿಸಿದ್ದರು.

ಕಾಂಗ್ರೆಸ್ ಆಕ್ಷೇಪ..!

ಈಗ ಏನೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕಾಂಗ್ರೆಸ್ ಹಂಗಿನಲ್ಲಿಲ್ಲ. ಆದರೂ ಕಾಂಗ್ರೆಸ್ ಪಕ್ಷ ಮುಖರ್ಜಿಯವರ ಈ ನಿಲುವಿಗೆ ಆಕ್ಷೇಪವನ್ನು ಎತ್ತಿದೆ. ಪ್ರಣಬ್ ಮುಖರ್ಜಿಯವರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕ್ರಮಕ್ಕೆ ಹೋಗುವುದನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿದೆ. ಈ ಮೂಲಕ ದೇಶಭಕ್ತಿಯನ್ನೇ ಕಾಂಗ್ರೆಸ್ ಮತ್ತೆ ಪ್ರಶ್ನೆ ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಅಂತಿಮ ವರ್ಷದ ಶಿಬಿರವನ್ನು ಮುಕ್ತಾಯಗೊಳಿಸುತ್ತಿರುವ ಅಂಗವಾಗಿ ಸಂಘ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ರಾಷ್ಟ್ರಪತಿ ಭಾಗಿಯಾಗಿ ಮಾತನಾಡಲಿದ್ದಾರೆ.ತೃತೀಯ ಸಂಘ ಶಿಕ್ಷಾ ವರ್ಗವನ್ನು ಪೂರ್ಣಗೊಳಿಸುವ ಕಾರ್ಯಕರ್ತರು ಪೂರ್ಣಾವಧಿಯ ಸ್ವಯಂ ಸೇವಕರಾಗಿ ಕಾರ್ಯನಿರ್ವಹಣೆ ಮಾಡಿಲಿದ್ದಾರೆ.

ತಮ್ಮ ರಕ್ತದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂಷಿಸುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಮಾಜಿ ರಾಷ್ಟ್ರಪತಿಯೋರ್ವರು ಸಂಘದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ ಎನ್ನುವಾಗಲೇ ಕೆಂಡ ಕಾರುತ್ತಿದ್ದಾರೆ. ಏನೇ ಇರಲಿ ಇದೀಗ ವಿಶ್ವವೇ ಸಂಘದತ್ತ ಮುಖಮಾಡಿ ನೋಡುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

 

Editor Postcard Kannada:
Related Post